Thursday, September 21, 2023
HomeFilm Reviewಮದಗಜ ಚಿತ್ರ ವಿಮರ್ಶೆ : Heggaddesamachar

ಮದಗಜ ಚಿತ್ರ ವಿಮರ್ಶೆ : Heggaddesamachar

                –    ಸಂದೀಪ್ ಶೆಟ್ಟಿ ಹೆಗ್ಗದ್ದೆ

ಅದ್ದೂರಿ ಎಂಟ್ರಿ ಮೂಲಕ ತೆರೆಗಪ್ಪಳಿಸಿರುವ ‘ಮದಗಜ’ ಮಾಸ್ ಎಂಟರ್ ಟೈನ್‌ಮೆಂಟ್‌ಗಳ ಸಿನಿಮಾ ಪಟ್ಟಿ ಸೇರುತ್ತೆ. ಕ್ರೌರ್ಯ, ದ್ವೇಷ ಮತ್ತು ತಾಯಿ ಸೆಂಟಿಮೆ0ಟ್‌ಗಳ ನಡುವೆ ಸಿಡಿಲೆರೆಯುವಂತೆ ಗರ್ಜಿಸಿ ನಿಲ್ಲುತ್ತೆ. ಚಿತ್ರದಲ್ಲಿ ಮೈನ್ ಟೈಟಲ್ ಹೇಗೆ ಒಮ್ಮೆ ಬರುತ್ತೋ ‘ಮದಗಜ’ ಎನ್ನುವ ವರ್ಡ್ ಕೂಡ ಇಡೀ ಸಿನಿಮಾದಲ್ಲಿ ಒಮ್ಮೆ ಮಾತ್ರಾ ಬರುತ್ತೆ.


ಫಸ್ಟ್ ಹಾಫ್‌ನಲ್ಲಿ ಎರಡು ಫೈಟ್ ದೃಶ್ಯಾವಳಿಗಳಿವೆ. ಅದರಲ್ಲಿ ಎರಡನೇ ಫೈಟ್ ಅಂತೂ ಅಲ್ಟಿಮೇಟ್. ವಾವ್ ಅನ್ನಿಸದೆ ಇರದು. ಬಿಜಿಎಂ ಅಂತೂ ಚಿಂದಿ ಎನ್ನಬಹುದು. ಕೆಲವೊಬ್ಬರಿಗೆ ಅತಿಯಾಯ್ತು ಸರ್!! ಇರಿಟೇಟ್ ಅಂತಾನೂ ಅನಿಸಬಹುದು. ಆದರೂ ಈ ವಿಚಾರದಲ್ಲಿ ರವಿ ಬಸ್ರೂರ್ ಕೆಲಸವಂತೂ ಇಡೀ ಚಿತ್ರಕ್ಕೆ ಹೈಲೆಟ್ಸ್ ಅಂತಾನೇ ಹೇಳಬಹುದು.


ಇನ್ನೂ ಚಿತ್ರದಲ್ಲಿ ಎನಿದೆ ಅಂತ ನೀವ್ ಕೇಳೋದಾದ್ರೆ, ವಾರಣಾಸಿಯಿಂದ ಕರ್ನಾಟಕದತ್ತ ಸಾಗುವ ಕಥೆಯಿದೆ. ಕಿರು ಲವ್ ಸ್ಟೋರಿಯಿದೆ, ತಾಯಿ ಮಗನ ಸೆಂಟಿಮೆoಟ್ ಅಂತೂ ಆರಂಭದಿoದ ಅಂತ್ಯದವರೆಗೂ ಬಗೆ ಬಗೆಯಲ್ಲಿ ಮನಸಿಗೆ ಮುಟ್ಟುವಂತೆ ಕಟ್ಟಿ ಕೊಟ್ಟಿದ್ದಾರೆ ನಿರ್ದೇಶಕ ಮಹೇಶ್.


ಶಿವಗಢ ಮತ್ತು ಗಜೇಂದ್ರಗಢ ಈ ಎರಡು ಊರಿನ ನಡುವೆ ನದಿಯೊಂದು ಹರಿಯುತ್ತಿರುತ್ತದೆ. ಈ ನದಿಯ ನೀರನ್ನು ಬಿಡದೆ ಶಿವಗಢದವರಿಗೆ ಗಜೇಂದ್ರಗಢದವರು ತೊಂದರೆ ಕೊಡುತ್ತಿರುತ್ತಾರೆ. ಶಿವಗಢದ ಭೈರವ (ಜಗಪತಿ ಬಾಬು) ಊರಿಗೆ ನೀರನ್ನು ಬಿಡಿಸಿಕೊಳ್ಳೋಕೆ ಎಲ್ಲಿಲ್ಲದ ಪ್ರಯತ್ನ ಮಾಡುತ್ತಿರುತ್ತಾನೆ. ಅದೆಷ್ಟರ ಮಟ್ಟಿಗೆ ಎಂದರೆ, ಊರಿಗಾಗಿ ಹೋರಾಡುತ್ತಾ ಮಗ ಸೂರ್ಯನನ್ನೇ (ಶ್ರೀಮುರಳಿ) ತ್ಯಾಗ ಮಾಡಿರುತ್ತಾನೆ.

ಅಷ್ಟಕ್ಕೂ ಭೈರವನ ಮಗ ಸೂರ್ಯ ವಾರಾಣಸಿ ಸೇರೋದು ಹೇಗೆ? ಎರಡೂ ಊರಿನ ದ್ವೇಷ ಕಡಿಮೆ ಆಗೋದು ಹೇಗೆ? ತಾಯಿ (ದೇವಯಾನಿ) ಮತ್ತು ಊರನ್ನು ಉಳಿಸೋಕೆ ಸೂರ್ಯ ಹೇಗೆ ಅಲ್ಲಿಗೆ ಬರುತ್ತಾನೆ ಎಂಬುದನ್ನು ಸಿನಿಮಾದಲ್ಲಿಯೇ ನೀವು ನೋಡಬೇಕು. ಇವೇ ಇಡೀ ಕಥೆಯ ಹೈಲೆಟ್ಸ್.


ರೋರಿಂಗ್ ಸ್ಟಾರ್ ಶ್ರೀ ಮುರಳಿ ಮತ್ತು ಜಗಪತಿ ಬಾಬು ಮತ್ತು ಅಮ್ಮನ ಪಾತ್ರದಲ್ಲಿ ಕಾಣಿಸಿಕೊಂಡ ದೇವಯಾನಿ, ನಾಯಕಿಯಾಗಿ ಆಶಿಕಾ ರಂಗನಾಥ್ ಇವರೆಲ್ಲರೂ ಇಡೀ ಸಿನಿಮಾಗೆ ಶಕ್ಯ ಮೀರಿ ಪೂರ್ಣ ಪ್ರಮಾಣದ ಅಭಿನಯ ತೋರಿದ್ದಾರೆ ಎನ್ನಬಹುದು.


ಇನ್ನೂ ಈ ಸಿನಿಮಾದ ಕಥೆ ಶ್ರೀ ಮುರಳಿಯವರ ಕರಿಯರ್‌ಗೆ ಹೊಸತು ಅನಿಸಿದರೂ ಕೂಡ, ಇಂಡಸ್ಟಿಗೆ ಇದೇನು ಹೊಸ ಕಥೆಯಲ್ಲ ಅನಿಸುತ್ತೆ. ಸಿನಿಮಾದ ಕಥೆ ಸಾಗುವ ದಾರಿಯನ್ನು ಪ್ರೇಕ್ಷಕ ಸುಲಭವಾಗಿ ಊಹಿಸಿ ಬಿಡುತ್ತಾನೆ ಎನ್ನುವಂತೆ ಕಥೆ ಅಲ್ಲಲ್ಲಿ ಊಹೆಗೆ ನಿಲುಕುವಂತೆ ತನ್ನ ಗಟ್ಟಿತನವನ್ನ ಬಿಟ್ಟುಕೊಟ್ಟಿದೆ ಅನ್ನುವ ಅಂಶಗಳು ಸಿಗುತ್ತವೆ.


ಚಿತ್ರದ ಮೇಕಿಂಗ್ ವಿಚಾರದಲ್ಲಿ ಅತ್ಯದ್ಬುತ ಕೆಲಸ ಇಡೀ ತಂಡ ಮಾಡಿದೆ ಎನ್ನಬಹುದು, ಮತ್ತು ಕೆಲವೊಂದು ವಿಚಾರಗಳಲ್ಲಿ ಚಿತ್ರತಂಡ ಒಳ್ಳೆಯ ಶ್ರಮವನ್ನೇ ಹಾಕಿ ‘ಮದಗಜ’ದ ಅಬ್ಬರಕ್ಕೆ ಕಾರಣವಾಗಿದೆ ಎನ್ನುವುದನ್ನೂ ಕೂಡ ನಾವು ಇಲ್ಲಿ ಅಲ್ಲಗಳೆಯುವ ಹಾಗಿಲ್ಲ.


ಮನರಂಜನೆಯ ದೃಷ್ಟಿಯಿಂದ ಒಂದೆರಡು ಗಂಟೆ ಎಂಜಾಯ್ ಮಾಡೋಕೆ ಪ್ಲಸ್ ತಾಯಿ ಮಗನ ಪ್ರೀತಿ ಜೊತೆಗಿಲ್ಲದ ಬದುಕಿನ ಆಚೆಗೂ ಹೇಗಿರುತ್ತೆ ಎಂದು ನೋಡೋಕೆ, ಕಮರ್ಷಿಯಲ್ ಎಲಿಮೆಂಟ್ ಚಿತ್ರವೊಂದು ಮಾಸ್ ಆ್ಯಂಡ್ ಕ್ಲಾಸ್ ಆಗಿ ಇದ್ದರೆ ನೋಡಬಹುದಿತ್ತು ಎನ್ನುವವರು ಈ ಸಿನಿಮಾನ ತಪ್ಪದೇ ಹೋಗಿ ನೋಡಬನ್ನಿ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments