Sunday, June 26, 2022
HomeKannada Articleಮಕ್ಕಳ ದಿನಾಚರಣೆ ಆಚರಿಸಿಕೊಂಡರೆ ಸಾಲದು ತಂದೆ ತಾಯಿ ಆದರ್ಶ ಪ್ರಾಯವಾಗಿರಬೇಕು : heggaddesamachar

ಮಕ್ಕಳ ದಿನಾಚರಣೆ ಆಚರಿಸಿಕೊಂಡರೆ ಸಾಲದು ತಂದೆ ತಾಯಿ ಆದರ್ಶ ಪ್ರಾಯವಾಗಿರಬೇಕು : heggaddesamachar

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ

ಇಂದಿನ ‌ಮಕ್ಕಳೆ ಮುಂದಿನ ಜನಾಂಗ ಭವ್ಯ ಭಾರತ ಕಟ್ಟುವ  ಸರದಾರರು ಇವರು. "ಬೆಳೆವ‌ ಸಿರಿ ಮೊಳಕೆಯಲ್ಲಿ ನೋಡು" ಎಂಬಂತೆ ಶಿಸ್ತು, ಸರಳತೆ, ಶ್ರದ್ಧೆ, ಪ್ರಾಮಾಣಿಕತೆ, ಶೌರ್ಯ, ಧೈರ್ಯ, ವಿನಯ, ವಿಧೇಯತೆ ಯಂತಹ ಉತ್ತಮ ಗುಣಗಳು ಬಾಲ್ಯದಲ್ಲೇ‌ ಮಕ್ಕಳಿಗೆ ‌ಕಲಿಸಿದರೆ ಅವರ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದಂತೆ. ಪಾಲಕರು ಕೆಲಸದ ಒತ್ತಡದಲ್ಲಿ ಮಕ್ಕಳ ‌ಲಾಲನೆಪಾಲನೆಗೆ ಹೆಚ್ಚಿನ ಗಮನ ಕೊಡಲು ಅಸಮರ್ಥರಾಗುತ್ತಿದ್ದಾರೆ. ಚಿಕ್ಕ ಮಕ್ಕಳು ಮೃದು ಹಾಗೂ ಅನುಕರಣೆಯ ಸ್ವಭಾವ ಹೊಂದಿದ್ದು ಹೆತ್ತವರ ‌ನಡೆ -ನುಡಿ  ಆಚಾರ- ವಿಚಾರ ಉಡುಗೆ - ತೊಡುಗೆಯನ್ನು ಅನುಸರಿಸುವುದರಿಂದ ತಂದೆ ತಾಯಿಗಳು ಮೊದಲು ಆದರ್ಶ ಪ್ರಾಯವಾಗಿರಬೇಕು. ಕೇವಲ ಮಕ್ಕಳ ದಿನಾಚರಣೆ ಆಚರಿಸಿಕೊಂಡರೆ ಸಾಲದು. ವಿದ್ಯೆ ವಿನಯ ನೀಡಿ  ಮಕ್ಕಳನ್ನು‌ ಉತ್ತಮ ‌ನಾಗರಿಕರನ್ನಾಗಿಸುವ ಜವಾಬ್ದಾರಿಯು ಬೇಕು. ಮಕ್ಕಳ ಮನೋವಿಕಾಸವು ಆಯಾ ಮನೆ ಮತ್ತು ಪರಿಸರವನ್ನು ಅವಲಂಬಿಸಿರುತ್ತದೆ. ಅತಿ ಹೆಚ್ಚು ನಿರ್ಬಂಧವಾಗಲಿ, ಶಿಸ್ತಾಗಲಿ, ಶಿಕ್ಷೆಯಾಗಲಿ, ಪ್ರೀತಿಯಾಗಲಿ, ನಿರ್ಲಕ್ಷ್ಯ ಇರಿಸಬಾರದು. ಮಕ್ಕಳ ಮನಸ್ಸು ಗೆಲ್ಲುವುದು ಅನಿವಾರ್ಯ. 

ಹರೆಯದ ವಯಸ್ಸಿಗೆ ಬೇಕು ಬೇಡಗಳ ಪರಿವೆ ಇಲ್ಲದೆ ಒಳ್ಳೆಯದು ಕೆಟ್ಟದರ ಕುರಿತು ಚಿಂತಿಸಿ ವಿವೇಚಿಸದೆ ಜೀವನ ಶೈಲಿ ಬದಲಾಯಿಸಿಕೊಂಡಿರುವ ಮಕ್ಕಳನ್ನು ‌ಸ್ನೇಹಿತರಂತೆ‌ ಕಂಡು ಆತ್ಮೀಯತೆಯಿಂದ ತಿಳಿ ಹೇಳಿ. ಹೆತ್ತವರು ಶಿಸ್ತಿನ ಹೆಸರಿನಲ್ಲಿ ‌ಮಕ್ಕಳನ್ನು ಬ್ಯೆದು ಗದರಿಸಿ, ಭಯಪಡಿಸಿದರೆ ನೀವೆಂದುಕೊಂಡ‌ ಹಾಗೆ ಒಳ್ಳೆಯ ಫಲಿತಾಂಶ ಸಿಗದು. ಚೈತನ್ಯ ದಾಯಕ ಬಾಲ್ಯದ ಮೇಲೆ ದೌರ್ಜನ್ಯ ಎಸಗುವುದು ಸರಿ ಅಲ್ಲ. ಮಕ್ಕಳು ಪ್ರೀತಿಯ, ಮಮತೆಯ ಮಡಿಲಲ್ಲಿ ಸುಖ ಕಂಡು ಸರಿಮಾರ್ಗದಲ್ಲಿ ನಡೆಯುತ್ತಾರೆ. ನಿಮ್ಮ ಕೋಪ ತಾಪ, ಬೇಸರ, ಹೊಡೆತ ಕ್ಷಣಿಕ ಬದಲಾವಣೆಯಿರಬಹುದಷ್ಟೆ.

ಇಂದಿನ ಶಿಕ್ಷಣ ಪದ್ದತಿ ಕೇವಲ ಪದವೀಧರರನ್ನಾಗಿ ಸಲು ಸಹಾಯಕವಾಗಿದೆಯೇ ಹೊರತು ಮಾನಸಿಕ ದೃಢತೆಯೊಂದಿಗೆ ಓರ್ವ ಪ್ರಾಮಾಣಿಕ, ಸ್ವಾಭಿಮಾನಿ, ದೇಶಾಭಿಮಾನಿಯಾಗಿ ಮಕ್ಕಳನ್ನು ರೂಪಿಸಲು ಪೂರ್ಣಪ್ರಮಾಣದಲ್ಲಿ ಸಮರ್ಥವಾಗಿಲ್ಲ. ಈಗ ಪಾಲಕರಿಗೆ‌ ಒಂದೊ ಎರಡು ಮಕ್ಕಳು ಅವರಿಂದ ನಿರೀಕ್ಷೆಗಳು ಬಹಳ. ತಾನು ಓದದೆ, ಓದಲಾಗದ ತನಗೆ ಅವಕಾಶ ಸಿಗದ ಕ್ಷೇತ್ರಕ್ಕೆ ತಮ್ಮ ಮಕ್ಕಳನ್ನು ತಳ್ಳುವುದಲ್ಲದೆ ಅಂಕ ಆಧಾರಿತ ವ್ಯವಸ್ಥೆಯಲ್ಲಿ ಮಕ್ಕಳನ್ನು ಬಂದಿಸಿಡುವುದ ರೊಂದಿಗೆ ಶಿಕ್ಷಣ ವೆಂಬುದು ಶಿಕ್ಷೆ ಎಂಬತಾಗಿದೆ. ಆಡಿಸಿ, ಬಿಳಿಸಿ, ಏಳಿಸಿ, ಅಪಾಯಗಳನ್ನು ಎದುರಿಸುವ ಅಭ್ಯಾಸ ಮಾಡಿಸಿ. ಮಕ್ಕಳನ್ನು ಮಕ್ಕಳಾಗಿ ಉಳಿಯಲು ಬಿಡಿ. ಇಂದು ಮಕ್ಕಳು ‌ಮಕ್ಕಳಾಗಿ ಉಳಿದಿಲ್ಲ. ಅವರ ಮುಗ್ದತೆ ಹಾರಿ ಹೋಗಿ ಬಾಲ್ಯಕ್ಕೆ ಸ್ಪರ್ಧೆ,ಪೈಪೋಟಿ, ಪ್ರತಿಷ್ಠೆಗಳ ಗೋಡೆ ಕಟ್ಟಲಾಗಿದೆ.

‌ ‌

ಯಾವುದನ್ನು ಮಕ್ಕಳು ಇಷ್ಟ ಪಡುತ್ತಾರೊ ಅದನ್ನು ಕಲಿಸಿ. ಎಲ್ಲಾ ಕ್ಷೇತ್ರದಲ್ಲೂ ಗೋಲ್ಡ್ ಮೆಡಲ್ ನಿರೀಕ್ಷೆಯು ಬೇಡಾ. ಹವ್ಯಾಸ ಹೊರೆಯಾಗದೆ ವಯಸ್ಸಿಗೆ, ಮನಸ್ಸಿಗೆ ಹಿತವಾದರೆ ಆತ್ಮವಿಶ್ವಾಸವೂ ಬೆಳೆಯುತ್ತದೆ. ಮಕ್ಕಳ ತಕರಾರು ಗೊಂದಲಗಳನ್ನು ಆಲಿಸಿ ಪ್ರೋತ್ಸಾಹಿಸಿ ಬೇಡಿಕೆ ಯೋಗ್ಯವಾಗಿದ್ದರೆ ಪೂರೈಸಿ ಬದುಕಿನಲ್ಲಿ ‌ಒತ್ತಡ, ಸಂಘರ್ಷಗಳ ಸರಿಯಾಗಿ ನಿಭಾಯಿಸಲಾಗದೆ ಖಿನ್ನತೆ, ಆತಂಕ, ನಿದ್ರಾಹೀನತೆ, ಧೂಮಪಾನ ಮಧ್ಯಪಾನ ಹಾಗೂ ಮಾದಕ‌ ಸೇವನೆಗೆ ಶರಣಾಗುವಿಕೆಯಂತ ಅಭ್ಯಾಸ ತಗುಲಿರುವುದು ಗಮನಕ್ಕೆ ಬಂದರೆ‌ ಸೂಕ್ತಚಿಕಿತ್ಸೆ‌ ನೀಡಲು ತಡಮಾಡಬಾರದು. ಮಕ್ಕಳಿಗೆ ಜವಾಬ್ದಾರಿ ಕಲಿಸುವ ವಿಚಾರದಲ್ಲಿ ಪಾಲಕರು ಎಡವುತ್ತಿದ್ದಾರೆ. ಮಕ್ಕಳೊಂದಿಗೆ ಮಕ್ಕಳಾಗಿ ಇರಿ. ಪ್ರೀತಿಯಿಂದ ‌ಇಡಿ ಜಗತ್ತನ್ನೇ ‌ಗೆಲ್ಲ‌ಬಹುದು‌ ನಮ್ಮ ಮಕ್ಕಳ ಮನಸ್ಸು ಗೆಲ್ಲಲಾರದೆ.

  ಕೆಲದಶಕಗಳ ಹಿಂದೆ ಕಳೆದ ಬಾಲ್ಯದಲ್ಲಿ ಈಗಿನಂತೆ ಅಂಕಗಳ ಚಿಂತೆ ಇರಲಿಲ್ಲ. ಪಾಸು- ನಪಾಸುಗಳಷ್ಟೆ ಇರುತ್ತಿದ್ದವು. ಶಾಲಾ ಪರೀಕ್ಷೆ ‌ಮುಗಿಯುತ್ತಲೆ ಪುಸ್ತಕಗಳನ್ನೆಲ್ಲ‌ ನಮಗಿಂತ ಕಿರಿಯರಿಗೆ ಕೊಟ್ಟು ರಜೆಗೆ ಅಜ್ಜಿ ಮನೆಗೆ ಹೋಗೊದು. ಬಿಸಿಲ ತಾಪ‌ಲೆಕ್ಕಿಸದೆ ಬೆಟ್ಟ, ಗುಡ್ಡ ,ಕಾಡುಗಳಲ್ಲಿ ಅಲೆದಾಡಿ ಕೈಗೆ ಸಿಕ್ಕ ಕಾಡುಹಣ್ಣು ತಿಂದು ಕೇಕೆ ಹಾಕುತ್ತಿದ್ದೆವು. ನಮ್ಮ ಬಾಲ್ಯಕ್ಕೆ ಹೊರಳಿದರೆ ಮಕ್ಕಳಾಟದ ಗಮ್ಮತ್ತೆ‌ಬೇರೆ. ಅಕ್ಕ ಪಕ್ಕದ ಮನೆಯ ಮಕ್ಕಳೊಂದಿಗೆ ಸೇರಿ ಕಲ್ಲು, ಕಡ್ಡಿ,‌ ಮಣ್ಣು ಇಟ್ಟು ಆಡಿದ ಅಡುಗೆ ಆಟ, ಕೋಲು ಹಿಡಿದು ಟೀಚರ್ ಆಟ, ಬುದ್ದಿ ಭಾವಕ್ಕೆ ತೆರೆದುಕೊಳ್ಳುವ ‌ಮೊದಲೆ ಆಡಿದ ಮದುವೆ ಆಟ, ರೈಲು ಬಂಡಿ,  ಕಣ್ಣಾಮುಚ್ಚಾಲೆ,ಈಜು ಬಾರದವರಿಗೆ ಈಜು ಕಲಿಸುವಾಗ  ನೀರು ಕುಡಿಸಿದ್ದು, ಭತ್ತ ಕುಟ್ಟುವ‌ ಬರದಲ್ಲಿ ಯಾರದ್ದೊ‌ಕಾಲ ಮೇಲೆ ಒನಕೆ‌ ಬೀಳಿಸಿದ್ದು, ತೆಂಗಿನ ಓಲೆ‌ವಾಚು, ಹಲಸಿನ ಎಲೆಯ ಗಾಳಿಪಟ, ಅಡಿಕೆ ಅಥವಾ ತೆಂಗಿನ ‌ಹೆಡೆ ಮೇಲೆ ಕುಳಿತು ಇನ್ನಿಬ್ಬರು ಎಳೆದು ಓಡುವುದು ಅದು ನಮ್ಮ ಎಕ್ಸ್ಪ್ರೆಸ್ ಬಸ್. ಆ ಬಸ್ ಗೊಂದು ಹೆಸರು ‌ಅದೂ ನಮ್ಮ ಊರಿಗೆ ‌ಬರುವ‌ ಬಸ್ಸಿನ ‌ಹೆಸರೆ ಆಗಬೇಕು. ಒಟ್ಟಿನಲ್ಲಿ ಸಂಪ್ರದಾಯಿಕ ಆಟದಲ್ಲಿ ಕಳೆದ‌ ಬಾಲ್ಯಸಾಗಿ ಬಂದ ದಾರಿಯನ್ನು ತಿರುಗಿ‌ ನೋಡಿದರೆ‌ ವಿವರಿಸಬಹುದಾದ  ಹಲವು ಪುಳಕದ ನೆನಪುಗಳಿವೆ.  

ಇಂದಿನ ‌ಮಕ್ಕಳ‌ ಬಾಲ್ಯದ ದಿನಗಳನ್ನು ನೋಡುವಾಗ ಹಳ್ಳಿಯಲ್ಲಿ ಹುಟ್ಟಿ ಬೆಳೆದರು ‌ಸ್ವಚಂದವಾಗಿ ಹಾರಾಡಿದ್ದೆ.ಬಾಲ್ಯದ ಒಂದಿಂಚ್ಚು‌ ಬಿಡದೆ ಅನುಭವಿಸಿದ್ದೆ, ಇಂದಿನ ಕೆಲ‌ ಮಕ್ಕಳಿಗೆ ಹಣದ ಬೆಲೆ, ತಾಯ್ತಂದೆಯರ‌ ಬೆಲೆಯು ಗೊತ್ತಾಗುತ್ತಿಲ್ಲ, ಕೇವಲ ಅಂಕ ಗಳಿಸಲು ಉತ್ತಮ ಸಂಬಳದ ನೌಕರಿಗಳಿಗಷ್ಟೆ ಅವರ ಬದುಕು ಸೀಮಿತ. ನಾಲ್ಕು ಮಾತು ಬೈದರೆ ಮನೆ ಬಿಟ್ಟು ಹೋದಾರೆಂಬ ಭಯ ಪಾಲಕರಿಗೆ. ಅವರೇ ಬಯಸಿದ ಬಾಳ‌ ಸಂಗಾತಿಯನ್ನು ‌ಮದುವೆಯಾಗಲು‌ ಒಪ್ಪಿಗೆ ನೀಡಲು ನಿರಾಕರಿಸಿದರೆ ಆತ್ಮಹತ್ಯೆಯ ಬೆದರಿಕೆ. ಇಲ್ಲಿ ತಪ್ಪಿದ್ದು‌ ಕೇವಲ ಮಕ್ಕಳು ಮಾತ್ರ ಅಲ್ಲ ಅವರ ಲಾಲನೆ‌ ಪಾಲನೆಯ ಹಳಿ ತಪ್ಪಿದ್ದು‌ ನಮ್ಮಂತಹ ಪಾಲಕರಿಂದಲೇ. ಮಕ್ಕಳ ‌ಮನಸು ತಿಳಿನೀರಿನಂತೆ ಅಲ್ಲೋಲ ಕಲ್ಲೊಲವಾಗಿಸಿದ್ದು ನಾವೇ. ಜಗತ್ತನ್ನೇ ‌ಗೆಲ್ಲಲು ಕಲಿಸಿದ್ದೆವು ತನ್ನನ್ನು ತಾನು ಗೆಲ್ಲಲು, ಅರಿಯಲು ಕಲಿಸಿಲ್ಲ. ಮಕ್ಕಳ ‌ಬೆಳವಣಿಗೆಯಲ್ಲಿ‌ ಪಾಲಕರ ಪಾತ್ರದ ಮಹತ್ವ ಅರಿಯಲು ತಡವಾಗದಿರಲಿ.

ನವೆಂಬರ್ 14 ನ್ನು ಸರಕಾರ ಹಾಗೂ ಶಾಲೆಗಳು ಮಕ್ಕಳ ದಿನಾಚರಣೆ ಆಚರಿಸಿಕೊಂಡರೆ ಸಾಲುದು ಪಾಲಕರು ಆದರ್ಶ ಪ್ರಾಯರಾಗಿರ‌ಬೇಕು…

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments