ಲವ್ ಯೂ ರಚ್ಚು ಸಿನಿಮಾ ಹೇಗಿದೆ? ಇದು ಸದ್ಯಕ್ಕೆ ಎಲ್ಲರ ಕುತೂಹಲ. ಏನಿದೆ? ಏನಿಲ್ಲ !?? ಇಲ್ಲಿದೆ ವಿವರ…
ಇದು ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಜೊತೆಗೆ ಚಿತ್ರದ ಟೈಟಲ್ಲೇ ಹೇಳುವ ಹಾಗೆ, ಹಿಂದೆ ನಾವೆಲ್ಲಾ ಪೋಸ್ಟರ್ ನೋಡಿರುವ ಹಾಗೆ ಇನೋಸೆಂಟ್ ಲವ್ ಸ್ಟೋರಿ. ಇಂತಹ ಕಥೆ ಹೊಸದೇನಲ್ಲ. ಇನ್ನೂ ಚಿತ್ರದ ಕಥೆಯ ವಿಚಾರಕ್ಕೆ ಬಂದ್ರೆ ಕ್ಯೂಟ್ ಲವ್ ಮಧ್ಯೆ ಕೊಲೆಯೊಂದು ಜರುಗಿ, ಆ ಕೊಲೆ ಮುಚ್ಚಿಡುವ ಒದ್ದಾಟ ಓಡಾಟ ಮತ್ತು ಅದರ ಹಿಂದಿರುವ ಸಸ್ಪೆನ್ಸ್ ಇಷ್ಟೇ ಬಿಟ್ಟರೆ ನಿರ್ದೇಶಕ ಬೇರೇನೋ ಹೇಳಿದ್ದರೆ ಅದು ಕಾಕತಾಳೀಯ ಅಷ್ಟೆ.
ಚಿತ್ರ ತೆಗೆಯುವಾಗಿನ ಪ್ರಯತ್ನಗಳೆಲ್ಲವೂ ಚೆನ್ನಾಗಿಯೇ ಇದೆ ಆದರೆ ಕೆಲವೊಂದು ಕಡೆ ಅತೀ ಬುದ್ದಿವಂತಿಕೆಯ ಯಾಮಾರಿಸುವಿಕೆ ಪ್ರೇಕ್ಷಕನಿಗೆ ಕಥೆಯ ಮೇಲಿನ ಭರವಸೆಯನ್ನು ಮತ್ತು ನಂಬುಗೆಯನ್ನು ದೂರತಳ್ಳಿಸಬಹುದು ಲವ್ ಯೂ ರಚ್ಚು ಯಾಕೆ ಬಡವಾಯ್ತು ಅಂದ್ರೆ ಇದೇ ಕಾರಣವಾಗಬಹುದು. ಇನ್ನೂ ಪಾತ್ರವರ್ಗದಲ್ಲಿ ಅಜಯ್ ಮತ್ತು ರಚಿತಾ ನಂಬುಗೆಯ ಕೆಲಸ ಮಾಡಿದ್ದಾರೆ.
ರಚಿತಾ ರಾಮ್ ದಪ್ಪಗಾಗಿದ್ದಕ್ಕೋ ಎನೋ ಫ್ಯಾಮಿಲಿ ಲೀಡ್ ಕ್ಯಾರೆಕ್ಟರ್, ಹೆಂಡತಿಯ ಪಾತ್ರ ಸೂಟೆಬಲ್ ಅನಿಸಿದೆ. ಟ್ರೈಲರ್ ನಲ್ಲಿ ನೀವು ಈಗಾಗಲೇ ನೋಡಿರುವ ಅಂಶಗಳು ಚಿತ್ರದ ಹೈಲೆಟ್ಸ್ ಆದ್ರೂ, ಅದನ್ನ ಬಿಟ್ಟು ಮತ್ತೊಂದಿಷ್ಟು ತಿರುವು, ಮುರುವುಗಳು ಚಿತ್ರದಲ್ಲಿ ಅಡಕವಾಗಿದೆ. ಒಟ್ಟಾರೆಯಾಗಿ ಮೊದಲಾರ್ಧ ಒಂಥರ ಇದ್ರೆ, ದ್ವಿತಿಯಾರ್ಧ ಇನ್ನೋಂದು ರೀತಿ ಇದೆ. ಕಥೆ ಹೇಳೊದು ಇಲ್ಲಿ ಸರಿ ಹೋಗಲ್ಲ ಕಾರಣ ಸಸ್ಪೆನ್ಸ್ ಹೇಳೊದಕ್ಕಿಂತ ನೋಡೋದೆ ಚೆಂದ… ಭಯಂಕರವೇನೋ ಇಲ್ಲ, ಸಂದರ್ಭಕ್ಕೆ ಎನು ಬೇಕೋ ಅವೆಲ್ಲ ಬಂದ್ರೆ ಅದು ನಿರ್ದೇಶಕ ಮಾಡುವ ಕಾಕತಾಳೀಯ.
ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಸಬ್ಜೆಕ್ಟ್ ಇಷ್ಟಪಡುವವರು ಈ ಸಿನಿಮಾನ ನೋಡಬಹುದು. ಮದುವೆ, ಸಂಬಂಧ ಇವುಗಳ ಬೆಲೆ ಮತ್ತು ಭಾವನಾತ್ಮಕವಾಗಿ ಬೆಳೆಯುವ ಒಲುಮೆ ಅದರಾಚೆಗಿನ ಅಹಿತಕರ ಸಂಬಂಧ ಇತ್ಯಾದಿಗಳ ನಿಜಜೀವನದ ಇತೀಚೆಗೆ ಸಮಾಜದಲ್ಲಿ ನಡೆಯುತ್ತಿರುವ ಕಥೆಯನ್ನೇ ತೆರೆ ಮೇಲೆ ನೋಡಿ ಕೆಟ್ಟತನದ ದಾರಿಯಲ್ಲಿ ನಡೆದರೆ ಆಗುವ ಎಡವಟ್ಟುಗಳನ್ನ ಸರಿಪಡಿಸಿಕೊಳ್ಳುವ ಇರಾದೆಗೆ ನಮ್ಮನ್ನ ದೂಡುಕೊಳ್ಳಬಹುದು ಟೋಟ್ಟಲ್ಲಿ ಲವ್ ಯೂ ರಚ್ಚು ಕಥೆ ಒಂದೆರಡು ದಿನದ ಜರ್ನಿ ಆ ಜರ್ನಿಯ ಒಳಗಿನ ನೋವು, ನಲಿವು, ಸಂಕಟ. ಕಥೆಗೆ ಬೇಕಾಗಿರುವ ಹಾಗಿನ ತಿರುವುಗಳು ಇವಿಷ್ಟೆ ಎನ್ನಬಹುದು.
ಅತೀಯಾದ ಪಾತ್ರವರ್ಗ ಇಲ್ಲ. ಒಂದೇ ನೇರಕ್ಕೆ ಕಥೆ ಸಾಗುವುದರಿಂದ ಅತೀಯಾದ ಬೇಸರವೂ ಇಲ್ಲ. ನಂಬುಗೆಯ ಪ್ರೀತಿ ಸಮಾಜಕ್ಕೆ ಸಿಗಲಿ ಎನ್ನುವುದೇ ಲವ್ ಯೂ ರಚ್ಚು ಚಿತ್ರದ ತಾತ್ಪರ್ಯ ಅನಿಸುತ್ತೆ ಜೊತೆಗೆ ಸಿನಿಮಾದಲ್ಲಿ ಏನೇನೋ ಹುಡುಕುವ ಬದಲು ಸಮಯ ಕಳೆಯಲು ಹೊಸ ವರ್ಷಾಚರಣೆಯ ಸಂದರ್ಭ ಮಜ ಅನುಭವಿಸಲು ಈ ಸಿನಿಮಾ ಓಕೆ ಎನ್ನಬಹುದು. ಚಿತ್ರದಲ್ಲಿ ಬರುವ ಒಂದೆರೆಉ ಹಾಡುಗಳು ಕಥೆಗೆ ಪೂರಕವಾಗಿ ಮನಸ್ಸಲ್ಲಿ ಆಲಾಪ ಬೀರುವುದು ಕೂಡ ಸುಳ್ಳಲ್ಲ ಎನ್ನಬಹುದು.
ಇದು ಹಿಟ್ಟೋ ಪ್ಲಾಪೋ ಶಾಂತಂ ಪಾಪಂ ನೀವೇ ಕಂಡು ಹೇಳಿ…
– ಸಂದೀಪ್ ಶೆಟ್ಟಿ ಹೆಗ್ಗದ್ದೆ