Thursday, September 21, 2023
HomeKannada Articleವಾಸ್ತುಶಿಲ್ಪದ  ತೊಟ್ಟಿಲು ಬಾದಾಮಿ : Heggaddesamachar

ವಾಸ್ತುಶಿಲ್ಪದ  ತೊಟ್ಟಿಲು ಬಾದಾಮಿ : Heggaddesamachar

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ     

       ಬಾದಾಮಿ ಎಂದಾಕ್ಷಣ ನೆನಪಾಗುವುದು  ಸಹಸ್ರಾರು ವರ್ಷಗಳ ಹಿಂದೆಯೆ  ಗುಡ್ಡವನ್ನು ಕೊರೆದು ನಿರ್ಮಿಸಿದ ‌ಗುಹಾಲಯ ಹಾಗೂ ದೇವಾಲಯಗಳು. ಚಾಲುಕ್ಯ ಸಾಮ್ರಾಜ್ಯದ ರಾಜಧಾನಿಯಾಗಿ‌ ಮೆರೆದ ಇತಿಹಾಸ ಪ್ರಸಿದ್ಧ ‌ಬಾದಾಮಿ‌ ಬಾಗಿಲ‌ ಕೋಟೆ‌ ಜಿಲ್ಲೆಯಲ್ಲಿದೆ. ಶೈವ, ವೈಷ್ಣವ, ಜೈನ, ಬೌದ್ಧಧರ್ಮವನ್ನು ಬಿಂಬಿಸುವ ನೋಡಲೆ ಬೇಕಾದ ಗುಹಾಲಯಗಳು ಇಲ್ಲಿದೆ. ಆರನೇ ಶತಮಾನದ ಮಧ್ಯ ಭಾಗದಲ್ಲಿ ಚಾಲುಕ್ಯ ಅರಸ ಮೊದಲನೆ ಪುಲಕೇಶಿಯು ಬಾದಾಮಿಯನ್ನು ತನ್ನ ‌ರಾಜಧಾನಿಯನ್ನಾಗಿ‌ ಮಾಡಿಕೊಂಡು ಆಳ್ವಿಕೆ ‌ಮಾಡುವ ‌ಮೊದಲೇ ಸುಪ್ರಸಿದ್ಧ ‌ವಾಣಿಜ್ಯ‌ನಗರಿಯಾಗಿತ್ತು. ಇಂತಹ ‌ಪ್ರವಾಸಿ ತಾಣಗಳು ಕಣ್ಮನಗಳಿಗೇನೋ ಸ್ವರ್ಗ. ಪ್ರವಾಸಕ್ಕಾಗಿ ಹೊಸ ಊರುಗಳಿಗೆ ಹೋದಾಗ ಉತ್ಸಾಹ ದಷ್ಟೆ ಆತಂಕವೂ ಇರುತ್ತದೆ. ಸುರಕ್ಷಿತ ಪಾದರಕ್ಷೆಗಳೊಂ‌ದಿಗೆ ಹೋದರೆ  ಇಲ್ಲಿನ ‌ಏರು  ತಗ್ಗಿನ  ಪ್ರದೇಶಗಳಲ್ಲಿ ಚೆನ್ನಾಗಿ‌ಸುತ್ತಾಡ ‌ಬಹುದು.
       
      ಬಾದಾಮಿ‌ ಬೆಟ್ಟದ ಕೆಳಗೆ ಅಗಸ್ತ‌  ತೀರ್ಥ ಮಹಾ ಸರೋವರ ಎಂಬ ವಿಶಾಲವಾದ  ಜಲಾಶಯವಿದೆ. ಒಟ್ಟಾರೆ ಕಣ್ಣು ಹಾಯಿಸಿದೆಡೆ‌ ಮನಸೆಳೆವ ಹಳದಿ ಕೆಂಪು ನಸುಗೆಂಪು ಶಿಲೆಗಳ ಚಿತ್ತಾರ ಶಿಲ್ಪಗಳು ಅಲ್ಲದೆ ಬೆಟ್ಟಗಳ ಅಪೂರ್ಣ ನೋಟಗಳು.‌ವಾಸ್ತು ಶಿಲ್ಪ ಮತ್ತು ಶಿಲ್ಪ ಕಲೆಯ ಶ್ರೀಮಂತ‌ ಆಗರ ಅಖಂಡವಾದ ಬಂಡೆಯನ್ನು ಕೊರೆದು‌ ನಿರ್ಮಿಸಲಾದ  ಸ್ಮಾರಕಗಳು‌ ಬೆರಗು ಮೂಡಿಸುವ ಚಾಲುಕ್ಯರ ಕಾಲದ ಸುಂದರವಾಸ್ತು ರಚನೆಯ ಭವ್ಯ ದರ್ಶನ ಇಲ್ಲಿ ಸಿಗುತ್ತದೆ. ಈ ಸ್ಥಳಕ್ಕೆ ಹಿಂದೆ ವಾತಾಪಿಪುರ ಮತ್ತು ಅಗಸ್ತ ತೀರ್ಥ ಎಂಬ ಹೆಸರುಗಳಿದ್ದವು. ಚಾಲುಕ್ಯ ರ ರಾಜಧಾನಿಯಾಗಿದ್ದ  ವಾತಾಪಿಯಲ್ಲಿ ಅಂದರೆ ಈಗಿನ ಬಾದಾಮಿಯಲ್ಲಿ ಎದ್ದು ಕಾಣುವ ಶಿಲಾ ಸ್ತಂಭಗಳು ಮುಖ ಮಂಟಪ, ಒಳಗಿನ ಮಹಾ ಮಂಟಪ ಮತ್ತು ಗರ್ಭ ಗೃಹಗಳಿವೆ. ಒಂದರ ಮೇಲೊಂದು  ಮೇಲಕ್ಕೆ ಸಾಗುವ‌ ಈ ಗುಹೆಗಳ‌ ನಡುವೆ ಮೆಟ್ಟಿಲುಗಳ ದಾರಿ ಇದ್ದು.

HEGGADDE STUDIO DIGITAL MEDIA


     ಇಲ್ಲಿನ ಶಿಲ್ಪಗಳಿಗೆ ಅವುಗಳದ್ದೆ ಆದ ವಿಭಿನ್ನ  ವಿಶಿಷ್ಟ ವೈಭವಗಳಿವೆ. ಚಾಲುಕ್ಯರ  ಕಲಾ ಶ್ರಿಮಂತಿಕೆಯನ್ನು ಧಾರ್ಮಿಕ ಸೌಹಾರ್ದವನ್ನು ಎತ್ತಿ ತೋರಿಸುವ ಇಲ್ಲಿನ ಸುತ್ತಾ ಮುತ್ತಾ ಮೇಳೈಸಿ‌ ನಿಂತ ಅಸಂಖ್ಯಾತ ಕಲ್ಲಿನ ಸ್ಮಾರಕಗಳು ಇದು ಕೇವಲ ದೇವಾಲಯಗಳ ವಾಸ್ತು ಶೈಲಿಯ ಉಗಮಸ್ಥಾನ ‌ಮಾತ್ರವಲ್ಲ‌ ಒಂದೇಡೆ ಇರುವ ಅಪರೂಪದ ವಾಸ್ತು ಶಿಲ್ಪ ‌ಕಲಾಕಾಶಿ . ಮಲಪ್ರಭಾ ನದಿಯ ಹೊರವಲಯದಲ್ಲಿ ಹರಡಿ ನಿಂತ ಕಲ್ಲಿನ ಬೆಟ್ಟಗಳನ್ನು ಕೊರೆದು ಮಾಡಿದ ಗುಹೆಗಳು ಸೂಕ್ಷ್ಮ ‌ಕುಸೂರಿ ಕೆತ್ತನೆಯ  ದೇವಾಲಯಗಳು ರೂಪುಗೊಂಡು ಈ ಕಲಾ‌ ನಿಪುಣತೆಯನ್ನು ನೋಡಲು 2 ಕಣ್ಣು ಸಾಲದು.

       ಗುಹೆ ಒಂದರ ಗೋಡೆಯ ಮೇಲೆ ತಾಂಡವ‌ ನೃತ್ಯದ ಭಂಗಿಯಲ್ಲಿರುವ ನಟರಾಜನ ಶಿಲ್ಪ. ನಾಟ್ಯ‌ಮುದ್ರೆಗಳನ್ನು ತೋರಿಸುತ್ತಾ  ಡಮರುಗದೊಂದಿಗೆ, ಸರ್ಪ, ತ್ರಿಶೂಲ, ಕೊಡಲಿಗಳನ್ನು ಕಾಣಬಹುದು. ಈ‌ ನಟರಾಜನ ಬಳಿ‌   ಗಣೇಶ ಮತ್ತು ನಂದಿಯರಿದ್ದಾರೆ. ಪಕ್ಕದ ಗೋಡೆಯ  ಮೇಲೆ ಮಹಿಷಾಸುರ ಮರ್ದಿನಿ ದುರ್ಗೆಯ ಭಿತ್ತಿ ಶಿಲ್ಪ ಇದೆ. ಆಧುನಿಕ ಯುಗದ ವಿಜ್ಞಾನಿಗಳಿಗೂ  ಸವಾಲೆನಿಸುವಂತೆ  ಕುಶಲತೆ ಇಲ್ಲಿದೆ. ಗುಹೆಯ ಪ್ರವೇಶ ದ್ವಾರದ ಬಳಿ ತ್ರಿಶೂಲ ಹಿಡಿದ ದ್ವಾರಪಾಲಕ ನಿಂತಿದ್ದು ಅವನ ಕೆಳಗೆ‌ ಇರುವ  ಶಿಲೆ ಎಡದಿಂದ ಆನೆಯಂತೆ ಬಲದಿಂದ ‌ನೋಡಿದರೆ ಗೂಳಿಯಂತೆ ಕಾಣಿಸುವ  ಶಿಲ್ಪ ಗಳನ್ನು ಕಡೆದು ನಿಲ್ಲಿಸಿದ್ದಾರೆ.  ಚಾಲುಕ್ಯರ ಅದ್ಭುತ ಕಲಾ ನಿಪುಣತೆಗೆ ಮನಸ್ಸು , ತಲೆ ಬಾಗುತ್ತದೆ.

KGF CHAPTER 2

     ಮುಖ ಮಂಟಪದ ಒಳಗೆ  ಹರಿಹರ‌ ಮೂರ್ತಿ ಇದ್ದು ಪಕ್ಕದಲ್ಲಿ ಪಾರ್ವತಿ ‌ಮತ್ತು ಲಕ್ಷ್ಮೀ ಯರು ‌ನಿಂತಿದ್ದಾರೆ.  ಗೋಡೆಯ ಕೊನೆಯಲ್ಲಿ ಅರ್ಧನಾರೀಶ್ವರ ಮೂರ್ತಿ ಶಿವನ ಭಾಗದ ‌ಬಳಿ ನಂದಿ‌ ಮತ್ತು ಭೃಂಗ‌ ನಿಂತಿದ್ದು ‌ ಗುಹೆಯ ಒಳ ಭಾಗದಲ್ಲಿ  ಗಣೇಶ ಮತ್ತು ಕಾರ್ತಿಕೇಯ ಚಾಲುಕ್ಯರ ಆರಾಧ್ಯ ದೇವರು‌ ಇದೆ. ಗುಹೆಯ ಚಾವಡಿಯಲ್ಲಿ ನಾಗರಾಜ , ಯಕ್ಷ‌ ಮತ್ತು ಅಪ್ಸರೆಯರು ವಿದ್ಯಾಧರ ದಳಪತಿಗಳು ಹಾಗೂ ‌ಮಂಟಪದ ನಡುವೆ  ಕಲ್ಲಿನ ನಂದಿ ವಿಗ್ರಹವಿದೆ.  ಮತಾಂಧರ ವಿದ್ರೋಹಕ್ಕೆ ಬಲಿಯಾಗಿ ಭಗ್ನಗೊಂಡ ಶಿಲ್ಪಗಳು ವಿಶಿಷ್ಟ ‌ವಾಸ್ತು ಶಿಲ್ಪಗಳನ್ನು‌  ಹಾಳುಗೆಡವಿದನ್ನು‌ ನೋಡುತ್ತಿದ್ದರೆ ಅಯ್ಯೊ ಎನಿಸುತ್ತದೆ.

    ‌‌‌  ಇಲ್ಲಿನ ಗುಹೆ ಒಳಗೆ ಬಿತ್ತಿ ಶಿಲ್ಪಗಳಲ್ಲಿ ಭಾಗವತ  ಪುರಾಣದ ಚಿತ್ರಣ‌ ಇದೆ. ಸಮುದ್ರ‌ ಮಂಥನ ಕಥೆ‌ ಇದೆ. ಕೃಷ್ಣನ ಜನನ, ಗೋಪಾಲ ಕೃಷ್ಣನ  ಚಿತ್ರಗಳಿವೆ ಸೂರಿನ ಮೇಲೆ ಗಜಲಕ್ಷ್ಮಿ, ಸ್ವಸ್ತಿಕ, ಗಗನಗಾಮಿ, ಗಂಧರ್ವರು, ಬ್ರಹ್ಮ, ಶೇಷಶಯನ, ವಿಷ್ಣು ಗರುಡ ವಾಹನ ಮುಂತಾದ ‌ಶಿಲ್ಪಗಳನ್ನು ಕೆತ್ತಲಾಗಿದೆ. ಬಾದಾಮಿಯಲ್ಲಿ ವೈಷ್ಣವ ‌ಮತ್ತು ಜೈನ ಧರ್ಮದ ಗುಹಾಲಯಗಳು ಮುಸ್ಲಿಂ ಶೈಲಿಯ ಆದಿಲ್ ಷಾಹಿ ಸ್ಮಾರಕ ಟಿಪ್ಪು ಸುಲ್ತಾನ್ ನ ಸಮಾಧಿ. ಅಪರೂಪದ ಹದಿನೆಂಟು ಕೈಗಳ‌ ನಟರಾಜ ಮೂರ್ತಿ ಆಕರ್ಷಕವಾಗಿದೆ. 

         ಗುಹಾಲಯದ ತಳ ಮಟ್ಟದಲ್ಲಿ ಒಂದು ಕೆರೆ ಅದರ‌ ಆಚೆ‌‌‌ ದಂಡೆಯ ಮೇಲೆ ಭೂತನಾಥ ದೇವಾಲಯವಿದೆ. ಈ‌ ಕಲ್ಲಿನ ದೇವಾಲಯವು ಸೂರ್ಯಾಸ್ತ ಸಮಯದಲ್ಲಿ ನೀರು ‌ಮತ್ತು‌ ಸೂರ್ಯನ  ಕಿರಣಗಳ ಪ್ರತಿ ಫಲದಿಂದ ‌ಚಿನ್ನದ ದೇವಾಲಯದಂತೆ ಹೊಳೆಯುತ್ತದೆ.  ಮೊದಲನೆಯ‌ ಗುಹೆಯಿಂದ ‌ಮೆಟ್ಟಿಲು‌ ಹತ್ತಿ‌‌ಹೋದರೆ ‌ಎರಡನೆ  ಗುಹೆಗೆ ತಲುಪ‌ಬಹುದು .ಈ ಗುಹೆಯ  ಅಂಗಣ‌‌ ಮತ್ತು ಸ್ತಂಭಗಳನ್ನು ಏಕಶಿಲೆಯಲ್ಲಿ ಕೆತ್ತಲಾಗಿದೆ. ಸ್ತಂಭ ಗಳ‌  ಮೇಲೆ  ವಿವಿಧ ಮುಖ ಭಾವದ  ಗಣಗಳ  ಚಿತ್ರ ವಿದೆ.  ಗುಹೆಯ ಎರಡನೆ ಗುಹೆಯಿಂದ  ಮೇಲೆ ಹೋದಾಗ ‌ಮೂರನೇ ಗುಹೆ ಸಿಗುತ್ತದೆ. ಇಲ್ಲಿ ವಿಷ್ಣು ದೇವಾಲಯವಿದೆ. ಇದರಲ್ಲಿ ಸೂಕ್ಷ್ಮ ‌ಕುಸುರಿ‌ ಕೆಲಸ ‌ಕಾಣ‌ಬಹುದು. ಅನಂತ ಶಯನ , ವಾಸುದೇವ, ವರಾಹ, ಹರಿಹರ  ಮತ್ತು ನರಸಿಂಹ ಮೂರ್ತಿಗಳಿವೆ.‌ ಯಂತ್ರ-ಚಕ್ರ-ಸಂಕೇತವನ್ನು‌ ಬಳಸಿರುವುದು‌  ವಿಶೇಷ. ‌ಸೂರಿನ‌ ಮೇಲೆ ಬಣ್ಣದ ಭಿತ್ತಿ‌ಚಿತ್ರಗಳು‌ ಕಾಣಿಸುತ್ತವೆ. ವರ್ಣಿಸಲಾಗದ ಕಲಾ‌ ವೈಭವ ಇಲ್ಲಿದೆ. 

JEENI HEALTH MILLETS

    ‌ಹಾಳು ಮುಳಾಗಿದ್ದರು ಇಲ್ಲಿನ ದೇವಾಲಯಗಳು ತಮ್ಮ‌ ಕಲಾ ಸೌಂದರ್ಯದಿಂದ ಕಣ್ಮನ  ಸೆಳೆಯುತ್ತದೆ. ಬಾದಾಮಿಯಲ್ಲಿ ಊಟ, ವಸತಿ ಸೌಕರ್ಯಗಳು ಚೆನ್ನಾಗಿ ಇದ್ದು ಹೆಂಗಸರು ಖಡಕ್ ರೊಟ್ಟಿ, ಕೆನೆಮೊಸರು ಚಟ್ನಿ, ತರತರದ ಪಲ್ಯ, ಮಜ್ಜಿಗೆ ಮಾರುತ್ತಾ ಬರುತ್ತಾರೆ. ಪ್ರವಾಸಕ್ಕೆ ಹೋದವರು ಅದರ ರುಚಿ‌ ನೋಡಿ‌ ಬನ್ನಿ.

       ಬಾದಾಮಿಯಲ್ಲಿ ಪ್ರಮುಖವಾಗಿ ಅಗಸ್ತ್ಯ ತೀರ್ಥ ಮಹತ್ವದ ಸ್ಥಾನದಲ್ಲಿದೆ. ನೀರು ತುಂಬಿದಾಗ ಕೆರೆಯ ‌ನೋಡಲು ಪ್ರವಾಸಿಗರು  ಹೆಚ್ಚು ‌ಆಗಮಿಸುತ್ತಾರೆ. ಮೇಣ ಬಸದಿ, ಶೈವ ಗುಹಾಲಯ, ಸ್ಥಳಿಯ ಗುಹಾಲಯಗಳಲ್ಲಿ ಇದು ಪ್ರಾಚೀನವಾಗಿದ್ದು. ಗರ್ಭಗೃಹ, ಸಭಾಮಂಟಪ, ಮುಖ ಮಂಟಪವನ್ನು ‌ಒಳಗೊಂಡಿದೆ. ಮುಖ ಮಂಟಪದಲ್ಲಿ  ಹರಿಹರ, ಅರ್ಧ ನಾರೀಶ್ವರ, ವಾತಾಪಿ ಗಣಪ ಕಾರ್ತಿಕೇಯ, ನಟರಾಜನ ಶಿಲ್ಪವು ಅಪೂರ್ವವಾಗಿದೆ. ವೈಷ್ಣವ ಗುಹಾಲಯ, ಜೈನ ಗುಹಾಲಯದಲ್ಲಿ‌ ಬಿತ್ತಿಯಮೇರೆಗೆ ಪಾರ್ಶ್ವನಾಥ ಮೂರ್ತಿ ಇದೆ. ಇನ್ನೂ ರಾಚನಿಕ‌ ದೇವಾಲಯಗಳು, ಜಂಬೂಲಿಂಗ ದೇವಾಲಯಗಳು, ಅನೇಕ ಶಿವಾಲಯಗಳು ಅದರ ಸಭಾಮಂಟಪ ಬಿದ್ದು ಹೋಗಿದೆ. ಮೂಲಗಿತ್ತಿ ಶಿವಾಲಯ, ಭೂತನಾಥ ದೇವಾಲಯಗಳಲ್ಲಿ  ಹೆಚ್ಚಿನ ‌ಹಂತದಲ್ಲಿ‌ ತುಂಡಾಗಿದೆ.

      ಹೆಚ್ಚಿನ ಭಾಗಗಳಲ್ಲಿ ಹಾಳಾದ ದೇವಾಲಯಗಳ‌ ಮೂರ್ತಿಗಳು  ಅಷ್ಟ‌ ಭುಜದ  ನರಸಿಂಹ ಹಿರಣ್ಯ‌ಕಶಪುವನ್ನು‌ ಸಂಹರಿಸುವ  ಕಲಾ ಚಿತ್ರ ‌ಕಾಳಿಂಗವನ್ನು‌ ಮರ್ಧಿಸುವ ಶ್ರೀ ಕೃಷ್ಣ. ದೊಡ್ಡ ಶೈವದ್ವಾರ ಪಾಲಕರ  ಕಲಾತ್ಮಕ ಶಿಲ್ಪಗಳಿವೆ. ರಾಷ್ಟ್ರಕೂಟ ‌ಮತ್ತು ವಿಜಯನಗರ ಕಾಲದ ವೀರಗಲ್ಲು‌ ಮತ್ತು ಸತಿಯ‌ ಮೂರ್ತಿಗಳನ್ನು ಕಾಣಬಹುದು ಮಕರ ತೋರಣ, ಬ್ರಹ್ಮ, ಗಣೇಶ, ಮಹಿಷಾಸುರ ಮರ್ದಿನಿಯ ಶಿಲ್ಪ ಕಲಾಕೃತಿ ‌ಜೋಡಿ, ಸಿಂಹಗಳು ನಾಗದಂಪತಿ, ಶಿವ, ಸರಸ್ಪತಿಗಳ‌ ಮೂರ್ತಿಗಳೆಲ್ಲವೂ‌ ಒಂದಲ್ಲಾ ಒಂದು ಭಾಗ ತುಂಡಾಗಿದ್ದು ಇವೆಲ್ಲ ಇದ್ದ ಹಾಗೆ ಇದ್ದಿದ್ದರೆ‌ ಗತ‌ವೈಭವ ಸಾರುವ ಸ್ಮಾರಕ ಗಳಿಗೆ ಇನ್ನೂ ‌ಹೆಚ್ಚಿನ ಮೆರಗು ಬರುತ್ತಿತ್ತು.

DR BKS VARMA


      
      ವಿಶ್ವಪರಂಪರೆಯ  ತಾಣವೆಂದು  ಗುರುತಿಸಿ ಕೊಂಡಿರುವ  ಬಾದಾಮಿಯ ಶಿಲ್ಪ  ವಾಸ್ತು ಶಿಲ್ಪ ಸರೋವರ ಅಲ್ಲನ ಬೆಟ್ಟ  ಅದರ ಸುತ್ತಲೂ ಬಂಡೆ, ಕೆಂಪು ‌ಮರಳುಗಳಲ್ಲಿ ಚಾಲುಕ್ಯ ವಾಸ್ತು ಶಿಲ್ಪ ಮತ್ತು ಕೆತ್ತನೆಯ ಚಿತ್ತಾರ  ಮದ್ಯದಲ್ಲಿ  ಹಚ್ಚ ಹಸಿರನ್ನು‌‌ ಹೊದ್ದಿರುವಂತೆ  ಸಬ್ದವಾಗಿರುವ  ಅಗಸ್ತ್ಯ ಸರೋವರ ಇಲ್ಲಿನ ‌ಗುಹೆಗಳು ಜೈನ ಮತ್ತು ಭೌದ್ದ ಗುಹಾಲಯಗಳಿವೆ.

        ಐತಿಹಾಸಿಕ ಹೊಂಡಗಳ ಕಥೆಯು ಕುತೂಹಲಕಾರಿ. 1400 ವರ್ಷಗಳ ಇತಿಹಾಸವುಳ್ಳ ಬಾದಾಮಿಯ  ಹೊಂಡ ರಂಗ ಭೂತನಾಥಗುಡಿಗಳ ಸಂಕೀರ್ಣದವರೆ ಗೂ  ಹಬ್ಬಿದೆ. ಆನೆ ಗುಂಡ ಎಂಬ ಹೊಂಡದ ‌ನಡುವೆ ಒಂದು‌ಕಲ್ಲು ಬಂಡೆ ಇದೆ.  ನೋಡಲು ‌ಮಲಗಿದ  ಆನೆಯಂತೆ‌  ಕಾಣುವುದರಿಂದ ಆ‌ ಬಂಡೆಗೆ  ಆನೆಗುಂಡ‌ ಎಂಬ  ಹೆಸರಿದೆ. ಹೊಂಡದಲ್ಲಿ‌  ನೀರು ತುಂಬಿರುವಾಗ  ಈಜುಗಾರರು ಆನೆ ಗುಂಡ‌ ಹುಡುಕಿ ಅದರ  ಮೇಲೆದ್ದು ನಿಲ್ಲುತ್ತಾರೆ. ಅಂಥವರಿಗೆ “ಆನೆಗುಂಡಿ‌ಬಲ್ವಾನ್” ಅಂತ ಶಹಾಬ್ಬಾಸ್ ಗಿರಿ‌ಕೊಡ್ತಿದ್ದರು ಎಂದು ನಮ್ಮೊಂದಿಗಿದ್ದ‌ ಗೈಡ್  ನ ಹೇಳಿಕೆ.

Previous article
Next article
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments