Thursday, September 21, 2023
HomeKannada Articleವಿದ್ಯಾಕಾಶಿ  ಧಾರವಾಡ | Heggaddesamachar

ವಿದ್ಯಾಕಾಶಿ  ಧಾರವಾಡ | Heggaddesamachar

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ

       ಧಾರವಾಡ ಅಂದರೆ ” ಸುಧೀರ್ಘ ಪ್ರವಾಸದಲ್ಲಿ  ಸಿಗುವ ಸಣ್ಣ ವಿಶ್ರಾಮ ಅಥವಾ ಸಣ್ಣವಿಶ್ರಾಂತಿ ಧಾಮ” ಅಂತ ಅರ್ಥ ವಂತೆ. ಧಾರವಾಡ ಎಂಬ ಶಬ್ದ ಸಂಸ್ಕೃತದ ದ್ವಾರವಾಡದಿಂದ ಬಂದಿದ್ದು ಎನ್ನಲಾಗುತ್ತದೆ. ಧಾರವಾಡ ಜಿಲ್ಲೆ ವಿಜಯನಗರ ರಾಮ್ರಾಜನ್ ಕಾಲದ ಧಾರರಾಮ್ ಎಂಬವರು ಕೋಟೆಕಟ್ಟಿಸಿದ್ದ ‌ನಿಮ್ಮಿತ್ತ‌ ಈ ಊರಿಗೆ ಧಾರವಾಢ ಎಂಬ ಹೆಸರು ‌ಬಂದಿದೆ ಎಂದು ಇತಿಹಾಸದ ‌ಪುಟಗಳಲ್ಲಿದೆ. 
                
      ‌ಈ ನಗರಕ್ಕೆ  ಧಾರವಾಡ ಎಂದು ಹೆಸರು‌ ಬರಲು ಇನ್ನೊಂದು ಕಾರಣ‌ ಬಯಲು ಸೀಮೆ‌ ಮತ್ತು ಮಲೆನಾಡುಗಳ ನಡುವೆ ಈ ನಗರವಿದ್ದು ಬಯಲು ಸೀಮೆಯಿಂದ ಮಲೆನಾಡಿಗೆ ಹೋಗ‌ಬೇಕಾದರೆ ಧಾರವಾಡವೇ‌ ಮಾರ್ಗವಾಗಿದ್ದರಿಂದ  ಈ ಊರಿಗೆ  ಸಂಸ್ಕೃತದ  ದ್ವಾರವಾದ  ಎಂಬ ಹೆಸರು  ಬಂದಿತ್ತು ಎನ್ನುತ್ತಾರೆ. ಹೀಗೆ‌ ಬಾಯಿಂದ ಬಾಯಿಗೆ  ಹೋಗುತ್ತಾ‌ ಧಾರವಾಡ ಎಂದು  ಕರೆಯಲ್ಪಟಿತ್ತು ಎನ್ನುತ್ತಾರೆ ‌ಇಲ್ಲಿನ ಸ್ಥಳೀಯರು. ಒಂದು ಕಾಲದಲ್ಲಿ ಈ ಭಾಗವನ್ನು  ಬಾದಾಮಿಯ  ಚಾಲುಕ್ಯರು  ಆಳುತ್ತಿದ್ದರು ಎನ್ನುವ ಪೂರಕ ಮಾಹಿತಿಯನ್ನು ಇತಿಹಾಸಕಾರರು  ದಾಖಲಿಸಿದ್ದಾರೆ. ಇಲ್ಲಿನ ಭಾಷಾ ಶೈಲಿ, ಸಾಹಿತ್ಯ, ಧಾರವಾಡ ಪೇಢ, ಖಡಕ್ ಜೋಳದ  ರೊಟ್ಟಿ ,ಕೆಂಪು ಚಟ್ನಿ ಹೀಗೆ ಅನೇಕ ‌ವಿಚಾರಗಳಿಗೆ  ಪ್ರಸಿದ್ಧವಾದ ಜಿಲ್ಲೆ ಧಾರವಾಡ. 

      ವಿದ್ಯಾಕಾಶಿ=  ವಿದ್ಯಾಕಾಶಿ ಬಿರುದಾಂಕಿತ ಧಾರವಾಡದ  ಶಾಲಾ ಕಾಲೇಜಿನ  ಕಲಿಕೆಯ  ಗುಣ ಮಟ್ಟದ  ಮಾತು  ಜನಜನಿತ . ಉತ್ತರ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯೆಂದು ಕರೆಯಲ್ಪಡುವ ಧಾರವಾಡವನ್ನು  ವಿದ್ಯಾಕಾಶಿ ಎಂದೂ ಕರೆಯುತ್ತಾರೆ.  ಕೃಷಿ ವಿಶ್ವವಿದ್ಯಾಲಯ, ಕಾನೂನು ‌ವಿಶ್ವವಿದ್ಯಾಲಯ , ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕಾಲೇಜ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ, ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ,  ಅಷ್ಟೇ ಅಲ್ಲದೇ ಅನೇಕ ಬೇರೆ ಬೇರೆ ತರದ ಶಿಕ್ಷಣ ಸಂಸ್ಥೆಗಳು ಹಾಗೂ ಐ ಎ ಎಸ್,  ಕೆ ಎ ಎಸ್,  ಐ ಐ ಟಿ,  ಜೆ ಇ ಇ ,  ಬ್ಯಾಂಕ್ ಕಿಂಗ್ , ನೀಟ್ ತರಬೇತಿ ‌ಕೇಂದ್ರಗಳು ಅದೆಷ್ಟೋ ಮಕ್ಕಳಿಗೆ ವಿದ್ಯೆಯ ತುತ್ತು ಉಣಿಸಿದ ಧಾರವಾಡದಲ್ಲಿದೆ. ಸಾವಿರಾರು ವಿದ್ಯಾಸಂಸ್ಥೆ ಗಳು  ತಲೆ ಎತ್ತಿ ‌ನಿಂತಿದೆ. 150 ಪಿಯು ಕಾಲೇಜು, 27  ಡಿಗ್ರಿ ಕಾಲೇಜು, 13  ಪಾಲಿಟೆಕ್ನಿಕ್ ಕಾಲೇಜುಗಳಿದ್ದು  ಎತ್ತ  ಕಣ್ಣು ಹರಿಸಿದರು  ವಿದ್ಯಾರ್ಥಿಗಳು   ನೋಡಲು  ಸಿಗುತ್ತಾರೆ.
       ಹುಬ್ಬಳ್ಳಿ ಎಂದರೆ  ವಾಣಿಜ್ಯ ನಗರಿ  ಅದು ಕಾಮರ್ಸ್, ಧಾರವಾಡದಲ್ಲಿ  ಸಾಹಿತ್ಯ ‌ಮತ್ತು ಸಂಸ್ಕೃತಿಕ  ಚಟುವಟಿಕೆಯ  ತಾಣ ಹಾಗಾಗಿ  ಅದು  ಆಟ್ಸ್ ಎಂದು‌  ಪಿ ಲಂಕೇಶ್ ಬರೆದಿದ್ದನ್ನು  ಓದಿದ  ನೆನಪು.ನನ್ನ ಮಗ ನಾಲ್ಕು ‌ವರ್ಷ ಧಾರವಾಡದಲ್ಲಿ  ಇಂಜಿನಿಯರಿಂಗ್ ಓದುತ್ತಿರುವಾಗ  ಮುಂಬಯಿಯಿಂದ ಧಾರವಾಡಕ್ಕೆ ಹೋದಾಗೆಲ್ಲ  ಅಲ್ಲಿನ ಮೂಲೆ ಮೂಲೆಗಳನ್ನು  ಸುತ್ತಾಡಿ  ಬಂದಿದ್ದೆ. ಇಲ್ಲಿನ ಭಾಷಾ ಶೈಲಿಗೆ  ಬೆಚ್ಚಿ ಬಿದ್ದಿದ್ದು  ಒಮ್ಮೆ ‌ಎದುರಿನವರು  ಹೇಳಿದ್ದು  ಅರ್ಥವಾಗದಿದ್ದಾಗ  ಪುನಃ ಕೇಳಿದ್ದಕ್ಕೆ  “ಎನ್ ರೀ..ಹಿಂಗ್ ಹೋಗಿ ಹಾಗ್ ಬನ್ನಿ ಅಂದನಲ್ಲ…  ಅಂತ ಜೋರಾಗಿ ಕಿರುಚಿದ ವ್ಯಕ್ತಿಯ ಮಾತಿನ‌ ಶೈಲಿಗೆ ಬೆರಗಾಗಿದ್ದೆ ಮತ್ತೆ ಗೊತ್ತಾಯಿತು ಇಲ್ಲಿನ ಜನ ಜೋರಾಗಿ ಹೇಳುವುದೇ ಮಾಮೂಲಂತೆ . ಈ ರೀತಿಯ ‌ಕಿರುಚಾಟ ಮಾಮೂಲಿಯಾದರೆ ಇನ್ನೂ ಧಾರವಾಡದ ಜನರ  ಜಗಳ, ಗಲಾಟೆ ಹೇಗಿರ ಬಹುದು ಅಂದುಕೊಂಡಿದ್ದೆ. ಇಲ್ಲಿನವರು ಮೃದುವಾದ ಹೃದಯವಂತರು ಅದರಲ್ಲೂ ‌ಲೇಖಕರು  ಬರಹಗಾರರು ಅಂದುಗೊತ್ತಾದರೆ ಒಳ್ಳೆಯ ‌ಗೌರವ ಕೊಟ್ಟು ಅವರ ಅರಿವಿನ‌  ವಿಚಾರ  ವಿಪಯಗಳ  ಮಾಹಿತಿಯನ್ನು  ಹೇಳುತ್ತಾರೆ.

          ಸಾಹಿತ್ಯಿಗಳ  ತವರೂರು= ಕವಿಗಳು, ಲೇಖಕರು, ಸಾಹಿತಿಗಳು, ವಿಮರ್ಶಕರ ವಿದ್ಚಾಂಸರ ತಾಣವೆಂಬ ಮಾತಿದೆ. ಇಲ್ಲಿಯ  ಸಾಹಿತ್ಯ ದಿಗ್ಗಜ ರಲ್ಲಿ ‌ಬೆಟಗೇರಿ ಕೃಷ್ಣ ಶರ್ಮ, ಆರೂರು ವೆಂಕಟರಾಯರು, ದ.ರಾ ಬೇಂದ್ರೆ, ವಿ.ಕೃ ಗೋಕಾರರು, ಗೀರೀಶ್  ಕಾರ್ನಾಡ್, ಚಂದ್ರ ಶೇಖರ  ಕಂಬಾರರು, ಡಾ. ಎಂ,ಎಂ  ಕಲಬುರ್ಗಿ, ಚೆನ್ನವೀರ ಕಣವಿ, ಶಶಿದೇಶಪಾಂಡೆ ಹಾಗೂ ಇನ್ನೂ ಅನೇಕರು  ಈ ನಾಡಿನ  ಸಾಹಿತಿಗಳ ಪಟ್ಟಿಯಲ್ಲಿ ಸಿಗುತ್ತಾರೆ. ಧಾರವಾಡ ದಲ್ಲಿ ಎಲ್ಲಿ ನಿಂತು ಕಲ್ಲು ಎಸೆದರು‌ ಅದು  ಸಾಹಿತಿಗಳ ‌ಮನೆಗೆ ಬೀಳುತ್ತದೆ ಎಂದ ಪ್ರಚಲಿತ ‌ನುಡಿ. ಹಲವು ಜ್ಞಾನ ಪೀಠ ಪ್ರಶಸ್ತಿ ಗಳನ್ನು  ತನ್ನದಾಗಿಸಿಕೊಂಡ  ಜಿಲ್ಲೆ ಇದು.  ಸಂಗೀತ ‌ಕ್ಷೇತ್ರದ  ದ್ಗಿಜರು‌  ಪಂಡಿತ್ ಮಲ್ಲಿಕಾರ್ಜುನ ‌ಮುನ್ನಾರ್, ಪಂಡಿತ್ ಭೀಮ್‌ಸೇಬ್  ಜೋಶಿ , ಗಂಗೂಬಾಯಿ  ಹಾನಗಲ್, ಪಂಚಾಕ್ಷರಿ ಸ್ವಾಮಿ, ಮಾಧವಗುಡಿ, ಎಂ ವೆಂಕಟೇಶ ಕುಮಾರ್, ಜಯತೀರ್ಥ ಮೆವುಂಡಿ, ಕುಮಾರ ಗಂಧರ್ವ, ಸಂಗೀತ ಕಟ್ಟಿ ಇನ್ನೂ ಅನೇಕ ಸಂಗೀತ ದಿಗ್ಗಜರ ತವರೂರು ಇದು.  ಧಾರವಾಡ  ಜಿಲ್ಲೆಯನ್ನು ರಾಷ್ಟ್ರ‌ಮಟ್ಟದಲ್ಲಿ ಗುರುತಿಸಿ  ಕೀರ್ತಿ ಹೆಚ್ಚಿಸಿದ ಹಿಂದೂಸ್ತಾನಿ ಗಾಯಕರು ಇಲ್ಲಿಯವರು. ಸಾಹಿತ್ಯ ಸಂಗೀತದ  ತವರು. ಹೀಗೆ ಹಲವು  ವಿಶೇಷಗಳಿಗೆ  ಭಾಜನವಾದ  ಧಾರವಾಡ.

       ‌‌ ‌     ನದಿ=ಧಾರವಾಡದಲ್ಲಿ ಗುಪ್ತ ಗಾಮಿನಿಯಾಗಿ ಹರಿಯುವ ಏಕೈಕ ನದಿ ಶಾಲ್ಮಲಾ ಉಗಮ ಸ್ಥಾನದ  ಬಗ್ಗೆ ಸಾಕಷ್ಟು ಚರ್ಚೆಗಳು  ಇದೆ.  ಧರ್ಮ, ದೇವರು, ದೈವ್ವದ ಹೆಸರಿನಲ್ಲಿ ನಡೆಯುವ ವಿವಿಧ ಪೂಜೆ ಗಳ ಹೆಸರಿನಲ್ಲಿ  ಧಾರ್ಮಿಕ ತ್ಯಾಜ್ಯ ಗಳನ್ನು  ಶಾಲ್ಮಲೆಗೆ ಎಸೆಯುತ್ತಾರೆ ಎಂಬ ಕೂಗು ನವಪೀಳಿಗೆಯಿಂದ ಕೇಳಿ ಬರುತ್ತಿದೆ . ಆ ನಿಟ್ಟಿನಲ್ಲಿ   ಇಲ್ಲಿನ  ಯುವ ಪೀಳಿಗೆಗೆ ಅಭಿನಂದಿಸ‌ ಬೇಕು.

      ಧಾರ್ಮಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳು = ಧಾರವಾಡ ಜಿಲ್ಲೆಯ ನುಗ್ಗಿಕೆರೆ ಗ್ರಾಮದಲ್ಲಿ ಅಂಜನೆಯ ಎಂದರೆ ಭಕ್ತಿಯ  ಸಂಕೇತ ಧೈರ್ಯ, ಸಾಹಸದ  ಪ್ರತಿ ಬಿಂಬ ಎನ್ನುತ್ತಾರೆ.  ಈ ಅಂಜನೆಯನನ್ನು  ನೆನೆದರೆ ಮನದ  ಭಯ ದೂರವಾಗುತ್ತದೆ ಎನ್ನುತ್ತಾರೆ. ಇಲ್ಲಿನ ಅಂಜನೆಯನ  ಕಣ್ಣುಗಳಲ್ಲಿ  ಸಾಲಿಗ್ರಾಮ ವಿದೆ. ವಿಗ್ರಹದ  ಒಂದು ಕಣ್ಣು ‌ಬಲಕ್ಕೆ ವೀಕ್ಷಿಸುತ್ತಿದ್ದರೆ.  ಇನ್ನೊಂದು ಕಣ್ಣು ಎಡಕ್ಕೆ  ವೀಕ್ಷಿಸುತ್ತದೆ. ಸುಂದರ ಕೆತ್ತನೆಯ  ಬೆಳ್ಳಿಯ  ಬಾಗಿದ  ಚೌಕಟ್ಟಿನಲ್ಲಿ ‌ಕೇಸರಿ‌ ಬಣ್ಣದ  ಛಾಯಯೊಳಗೆ ಅಂಜನೆಯ ಎದ್ದು ಕಾಣುತ್ತಾನೆ. 

      ಕೆಂಪು ‌ಮುಖ ತಲೆಗೆ ಬಿಳಿ ಕಿರೀಟ, ಹರಸುವ  ಕೈಗಳು  ಕುತ್ತಿಗೆಯಲ್ಲಿ‌  ಜಪಮಾಲೆ ‌ಬಗೆ‌ ಬಗೆಯ  ಹಾರಗಳು  ಇದು  ಹನುಮನ ಅಲಂಕಾರ, ಒಂದು ಕೈಯಲ್ಲಿ ಸಂಜೀವಿನಿ ಪರ್ವತ ಇನ್ನೊಂದು ಕೈಯಲ್ಲಿ ಗದೆ ಹಿಡಿದು  ನಿಂತಿರುವ  ಪಂಚ ಲೋಹದ  ಮುದ್ದಾದ ಮೂರ್ತಿ.  ವಿಶಾಲ ಕೆರೆಯ  ದಂಡೆಯ  ಮೇಲೆ ಇರುವ ಈ ದೇಗುಲ ಕ್ಕೆ  ಬೇಟಿ‌  ನೀಡುವ  ಭಕ್ತರ ಹರಕೆ  ಪೂರೈಸುತ್ತಾನೆ ಅಂಜನೆಯ  ಎಂಬುದು  ಭಕ್ತರ ನಂಬಿಕೆ. 

        ಧಾರವಾಡದಲ್ಲಿ  ಅಪರೂಪದ ಕೆಂಪು ಈಶ್ವರ ಲಿಂಗ ಭಕ್ತರ ಕಲ್ಪ ವೃಕ್ಷಕಲೆಏಶ್ವರದ  ದೇವಾಲಯವಿದೆ. ಕಪ್ಪು ಬಣ್ಷದ  ಶಿಲೆ ಈಶ್ವರ ಲಿಂಗ  ಮೂರ್ತಿ ಎಲ್ಲೆಡೆ ಇದೆ. ಆದರೆ ಧಾರವಾಡದ  ಈ ಈಶಾನ್ಯ ದಿಕ್ಕಿನಲ್ಲಿ  ಅಮ್ಮಿನ ಬಾವಿ, ಗ್ರಾಮದ ಈ ದೇವಾಲಯದಲ್ಲಿ  ಸ್ವಲ್ಪ ವಿಭಿನ್ನ ಮತ್ತು ವಿಶೇಷ ಅಪರೂಪದ ಶಕ್ತಿ ಯ  ಈಶ್ವರ ಲಿಂಗ ವಿದೆ.  ಈಶ್ವರ  ಲಿಂಗ ಕೆಂಪು ಬಣ್ಣದಿಂದ ಕೂಡಿದ್ದು  ಸುತ್ತಲೂ ಬಿಳಿ ಶಿಲೆಯಿಂದ ಆವೃತ್ತಗೊಂಡಿರುವುದು ಕೆಳಗಡೆ  ಪೀಠಪಾನ ಬಟ್ಟಲು, ಕಪ್ಪು ಬಿಳುಪು ಶಿಲೆಯಿಂದ ಕೂಡಿದೆ.

       ದತ್ತಾತ್ರೇಯ ದೇವಾಲಯ , ದುರ್ಗಾದೇವಿ ದೇವಾಲಯ, ಪಾಂಡುರಂಗ ದೇವಾಲಯ, ಸೋಮೇಶ್ವರ ದೇಗುಲ, ಜನದಟ್ಟಣಿಯಿಂದ  ಕೂಡಿರುತ್ತದೆ. ಅಣ್ಣೀಗೇರಿ, ಹಲವಾರು ಪವಿತ್ರ ಮಠಗಳಾದ ಮೂರು ಸಾವಿರ ‌ಮಠ,  ಸಿದ್ದರೂಢ‌ಮಠ, ಇಸ್ಕಾನ್ ಮಂದಿರ ನಲೆನಿಂತ  ಕ್ಷೇತ್ರ ವಿದು.
       
         ಕಲಘಟಿಗಿ  ತೊಟ್ಟಿಲು= ಕಲಘಟಗಿಯ  ಬಣ್ಣದ  ಮರದ  ತೊಟ್ಟಿಲುಗಳು ವಿಶ್ವ ಪ್ರಸಿದ್ಧ. ಕೃತಕ ಬಣ್ಣ‌ಬಳಸದೆ ಅರಗಿನಿಂದ ತಯಾರಿಸಿದ ನೈಸರ್ಗಿಕ ಲೆಪನದ ಸಾಗುವಣಿಮರ,  ತೇಗಿನ ಮರದ ತೋಟಿಲಿಗೆ  ಜೇಡುಮಣ್ಣು, ಅಂಟು ಅರಗು ಬಳಸಲಾಗುತ್ತದೆ‌. ಪುರಾಣ ಚಿತ್ರಗಳೇ ಹೆಚ್ಚು ಆದ್ಯತೆ ನೀಡುವ  ಮಹಾಭಾರತ ಚಿತ್ರ ರೂಪಗಳಿರುವ,  ಸಾಮಾನ್ಯವಾಗಿ ತಿಟ್ಟಿಲಿನ  ಸುತ್ತಲೂ ರಾಮ, ಕೃಷ್ಣರ ಬಾಲ್ಯದ  ದಿನಚರಿಯಲ್ಲಿ ಚಿತ್ತಣಗಳ  ಅನೇಕ ಕಥಾ ಸರಾಂಶ ಚಿತ್ರ ಗಳನ್ನು  ಬಿಡಿಸಲಾಗುತ್ತದೆ. ಹಸಗೆ  ತೊಟ್ಟಿಲು ಹಿಡಿಗೆ  ಗಂಟೆ ಕಟ್ಟಲಾಗುತ್ತದೆ‌.         
       ಒಣಮರದಿಂದ  ತಯಾರಿಸುವ  ತೊಟ್ಟಿಲಿಗೆ  ಹುಣಸೆ ಹಣ್ಣನ್ನು ರುಬ್ಬಿ ಕುದಿಸಿ ಸೋಸಿ ಜೇಡಿ‌ಮಣ್ಣು‌ಸೇರಿಸಿ  ತೊಟ್ಟಿಲಿಗೆ  ಹಚ್ಚುತ್ತಾರೆ. ಕಲ್ಲಿನಿಂದ ಉಜ್ಜಿ ನಂತರ ‌ಕೇದಗಿ ಎಲೆಯಿಂದ ಪಾಲಿಶ್ ಮಾಡಲಾಗುತ್ತದೆ‌. ಈ ತೊಟ್ಟಿಲಿಗೆ‌ ಬಾರಿ ಪ್ರಮಾಣದಲ್ಲಿ ‌ಬೇಡಿಕೆ  ಇದ್ದು  ರಾಜಕಾರಣಿಗಳು, ದೊಡ್ಡದೊಡ್ಡ  ಕಲಾವಿದರ  ಮಕ್ಕಳಿಗೆ ಇಲ್ಲಿನ ತೊಟ್ಟಿಲು ಕರಿದಿಸಿರುವ  ವಿಚಾರವನ್ನು  ಇಲ್ಲಿನ ಕೆಲಸ‌ ಕರ್ಮಿಗಳು  ಸಂತಸದಿ ‌ಹಂಚಿಕೊಳ್ಳುತ್ತಾರೆ. ಕಲಘಟಗಿ ಧಾರವಾಡದ ಒಂದು ಊರು  ಊರಿನ ‌ಹೆಸರೆ ಈ‌ ತೊಟ್ಟಿಲಿಗೆ  ಬಂದಿದ್ದು.  ಈ ಊರಿನ  ಅವಲ್ಕಿ ಚುರುಮರುಗಳು  ಬಲುರುಚಿ ಇಲ್ಲಿನ ಅಕ್ಕಿಯ  ರುಚಿಗೆ ಹೆಸರು ವಾಸಿ.  ಇಂದಿಗೂ ಇಲ್ಲಿ ಅನೇಕ ಭತ್ತದ  ಗಿರಣಿಗಳು  ಕಾರ್ಯ ನಿರ್ವಹಿಸುತ್ತಿದೆ.

           ಗಜೇಂದ್ರ ಗಡ =  ಛತ್ರಪತಿ ಶಿವಾಜಿ‌ನಿರ್ಮಿಸಿದ  ಕೋಟೆ  ಇರುವ  ಚಾರಿತ್ರಿಕ ಸ್ಥಳ ವಿದು . ವಿರುಪಾಕ್ಷ  ಮತ್ತು  ಪಾಂಡುರಂಗ  ಎಂಬ  2 ದೇವಾಲಯವಿದೆ.  ಗುಹೆಯೊಂದರಲ್ಲಿ  ನಿರ್ಮಾಣವಾಡಲಾಗಿರುವ  ಕಾಕ ಕಾಲೇಶ್ವರ ದೇವಾಲಯ ಇಲ್ಲಿ  ಎಣ್ಣೆ ಗೊಂಡ ‌ಮತ್ತು  ಅರಸರಗೊಂಡ ಎಂಬ ಪವಿತ್ರ ‌ಹೊಂಡಗಳಿವೆ.

ನಮ್ಮ ‌ನೆಲದಲ್ಲಿ‌  ವಿದೇಶಿಗರ  ಸ್ಮಾರಕ ಸಮಾಧಿ  = ಸಾಂಸ್ಕೃತಿಕ ರಾಯಭಾರಿ ಎಂದೇ  ಪ್ರಸಿದ್ಧಿಯಾದ  ಧಾರವಾಡದಲ್ಲಿ ವಿದ್ಯಾರ್ಥಿ ಗಳು, ಸಂಶೋಧಕರು, ಪ್ರವಾಸಿಗರು ‌ಅನುದಿನವೂ‌ ಬೇಟಿ‌ನೀಡುವ  ಸ್ಥಳದ  ಆಸುಪಾಸಿನಲ್ಲಿ  ಜನರ ಗಮನವನ್ನು  ಅಷ್ಟಾಗಿ ಸೆಳೆಯದೆ  ದಾಖಲಾದ  ತಮ್ಮ ಅಸ್ತಿತ್ವದ  ಸತ್ಯವನ್ನು  ಯಹೂದಿಗಳ ಗೋರಿ  ಧಾರವಾಡ ಕೃಷಿ ವಿಶ್ವವಿದ್ಯಾಲಯದ  ಬಳಿ  ಸಮಾಧಿ ಇತಿಹಾಸದ  ಪಳಯುಳಿಕೆಗಳಂತೆ  ಬಿದ್ದು ಕೊಂಡಿದೆ. ನಮ್ಮ ‌ ‌ನೆಲ್ಲದಲ್ಲಿ ‌ಮಣ್ಣಾದ ವೀದೇಶಿಗರ‌ ಸ್ಮಾರಕ ‌ಸಮಾಧಿ.

      ಎತ್ತಣ  ಇಸ್ರೇಲ್ ಎತ್ತಣ ಧಾರವಾಡ ಭಾರತಕ್ಕೆ  ಬಂದು  ನೆಲೆಸಿದವರು  ಬಾಗ್ದಾದಿ  ಇಸ್ರೇಲಿಗರು  ಮತ್ತು ಬೆಸ್ ಇಸ್ರೇಲಿಗರು  ಎಂಬ‌ಮಾಹಿತಿ  ಇಲ್ಲಿದೆ.  ಇಸ್ರೇಲಿಗರು  ಶಾಶ್ವತವಾಗಿ ಶಾಂತಿ ಯಿಂದ  ಇಲ್ಲಿ‌ಗೋರಿ ಸ್ಥಾಪಿಸಿದ್ದು  ಹೇಗೆ  ಎಂಬ  ಸೋಜಿಗ  ಕಾಡುವುದು ಅಲ್ಲದೆ. ದೂರದ ಎರಡು  ರಾಷ್ಟ್ರಗಳ  ಬೇರೆ ಬೇರೆ ಧರ್ಮ, ಸಂಸ್ಕೃತಿಗಳ, ಸಾಮಾಜಿಕ, ‌ಕೌಟುಂಬಿಕ‌  ಸ್ಥಿತಿ ಗತಿಗಳ ‌ನಡುವೆ  ಅದೇಗೆ  ಹೊಂದಿಕೊಂಡುದ್ದರು . ಈ ನಾಡಿನ  ಸೇವೆಗೈದವರ‌ ಸಮಾಧಿಯೇ  ಎಂಬ  ಯಕ್ಷಪ್ರಶೇ  ಕಾಡುತ್ತದೆ.  ಇಲ್ಲಿ ಪಾಳು ಬಿದ್ದ ಐತಿಹಾಸಿಕ  ತುಣುಕುಗಳು  ಎನ್ನೆನ್ನುತ್ತವೆ  ಎನ್ನುವುದು ಅಗತ್ಯ ತಾನೆ.ಈ ಗೋರಿಯೊಳಗೆ   ಕಾಲಿಟ್ಟರೆ  ಅದ್ಯಾವುದೊ ಅರಿಯದ  ನೋವು  ,‌ಹೃದಯದ ಕೂಗು ‌ವಿಷಾಧ ಜೊತೆಯಾಗುತ್ತದೆ‌ ಅಂದ ಹಾಗೆ  ಇಲ್ಲಿ ಸಮಾಧಿ ಯಾದವರು  ನಮ್ಮ ದೇಶದವರಲ್ಲ.

       ಈ ಪ್ರದೇಶದಲ್ಲಿ 30 -40 ಕ್ಕು ಹೆಚ್ಚು‌ ಇಸ್ರೇಲಿಗರ  ಗೋರಿಗಳಿದ್ದವು  ಎಂದು  ಇಲ್ಲಿನ ಸ್ಥಳೀಯರ  ಹೇಳಿಕೆ  . ಆದರೆ ಇವೆಲ್ಲ  ಈಗ  ಹಾಳು  ಬಿದ್ದಿದೆ.  ಕೇಲವೆ‌  ಕೆಲವು ಸಾಧಾರಣ ಸ್ಥಿತಿಯಲ್ಲದೆ. ಅಥವಾ ಇನ್ನೂ ಒಂದೆರಡು ‌ವರ್ಷಗಳಲ್ಲಿ  ಶಿಥಿಲಾವಸ್ಥೆಗೆ  ಜಾರುವ  ಹಂತದಲ್ಲಿದ್ದು  . ಇಲ್ಲಿ ವಿದೇಶಿಯರ ಸ್ಮಾರಕಗಳಿದ್ದ  ಕುರುವು  ಇಲ್ಲದಾಗ ‌ಬಹುದು. ಇಲ್ಲಿ ‌ಬೆಳೆದು  ಹರಡಿನಿಂತ  ಗಿಡ  ಗಂಟಿಗಳ  ನಡುವೆ  ಹುಡುಕಾಡಿದರೆ  ಈಗ 8 ರಿಂದ 9 ಗೋರಿಗಳು  ಕಂಡು‌ಬರುತ್ತವೆ. ಕಸ, ಕಡ್ಡಿ, ಗಿಡ ಗಂಟೆಗಳಿಂದ ‌ಆವೃತವಾಗಿರುವ  ಗೋರಿಗಳ‌ ಬಳಿ ಹೋಗಲು ಕಷ್ಟಕರ  ಮುಳ್ಳು ಗಿಡಗಳಿಂದ  ಭಾಗಶಃ ಮುಚ್ಚಿದ  ದಯನೀಯ  ಸ್ಥಿತಿಯಲ್ಲಿದೆ.  ಇದರ  ದುಃಸ್ಥಿತಿಯ  ಬಗ್ಗೆ  ಮರುಕ ಪಡಿಸುತ್ತಾರೆ  ಈ ಪರಿಸರದ ‌ಜನ. ನಿರ್ಲಕ್ಷದಿಂದ  ನಾಶದತ್ತ ಸರಿಯುತ್ತಿದೆ. ಅನಾಥವಾಗಿ  ಸಂಪೂರ್ಣ ವಾಗಿ ಪಾಳು‌ಬಿದ್ದಿವೆ. ಪ್ಲಾಸ್ಟರ್  ಕಿತ್ತು ಹೋಗಿ ಕೆಲವು ಗೋರಿಗಳಿಂದ ಅಕ್ಷರಗಳು  ಸರಿಯಾಗಿ ಕಾಣದೆ ಅಳಿಸಿ ಹೋಗಿದೆ.

       ಅಳಿದುಳಿದವುಗಳಲ್ಲಿ  ಕೆಲವು ಮಾತ್ರ  ಪರಿಚಯದ ವಿವರಣೆ ಹೊಂದಿದೆ ಕೆಲವು ‌ಗೋರಿಗಳ ‌ಮೇಲೆ  ಸಾವಿನ ಕಾರಣವನ್ನು‌  ಬರೆದಿದ್ದಾರೆ.‌ಒಂದೊಂದು  ಬರಹವು ಪ್ರತ್ಯೇಕ ವಾದ ಕಥೆ‌ಹೇಳುತ್ತದೆ.ಇವುಗಳಲ್ಲಿ ಕೆಲವು ಕಡೆ ಇಂಗ್ಲಿಷ್ ಮತ್ತು ‌ಮರಾಠಿಯಲ್ಲಿ ತಿಳಿಸುವ  ಹೆಸರು ಹುದ್ದೆ‌  ಮತ್ತಿತ್ತರ  ವಿವರಗಳಿಗೆ  ಶತಮಾನದ ‌ಹಿಂದಿನ ಇತಿಹಾಸ ತೆರೆದಿಡಪಟ್ಟಂತೆ ಅದರೊಳಗೆ ‌ಸಮಾಧಿಯಾಗಿರುವ  ವ್ಯಕ್ತಿ ಗಳ ‌ಬಗ್ಗೆ   ಕಿರು  ಬರಹವಿದೆ. ಗೋರಿ ಗಳು  ಮಳೆ , ಗಾಳಿಗೆ ಶಿಥಿಲಗೊಂಡಿದೆ. ಅಕ್ಷರ ಕೆಲವೆಡೆ  ಅಳಿಸಿ  ಹೊಂದಂತೆ  ಇದೆ.  ಅರ್ಧಬರ್ದ  ಉಳಿದಿರುವ  ಅಕ್ಷರ ಗಳನ್ನು ಜಾಗೂರಕತೆಯಿಂದ ಸೂಕ್ಷ್ಮ ವಾಗಿ  ಓದ ‌ಬೇಕಾಗುತ್ತದೆ. ಅಷ್ಟೇ ಅಲ್ಲದೇ ಕೆಲ ಗೋರಿಗಳಲ್ಲಿ  ಇನ್ನೊಂದು ಭಾಷೆಯಲ್ಲಿ ಪರಿಚಯ  ಬರೆದಿದೆ.  ಅದು  ಇಸ್ರೇಲಿಗರ  ಹಿಬ್ರೂ  ಭಾಷೆ  ಎನ್ನುತ್ತಾರೆ ಸ್ಥಳೀಯ ‌ನಿವೃತ  ಶಿಕ್ಷಕರೊಬ್ಬರು.

           ಇಲ್ಲಿನ ಗೋರಿಗಳಲ್ಲಿ  ಸೇನೆಯಲ್ಲಿ  ಸೇವೆ ಸಲ್ಲಿಸಿದ  ಇಸ್ರೇಲ್ ನವರದ್ದು  ಅವರ ‌ಹೆಸರಿನ ಜತೆಗೆ  ಮೇಜರ್, ಸುಬೇದಾರ್, ರೆಜೆಮೆಂಟ್ ಎಂಬ ಶಬ್ದ ಗಳಿವೆ.  ಇನ್ನೂ ಆಶ್ಚರ್ಯ ದ  ವಿಚಾರ ಅಂದರೆ ಧಾರವಾಡದ  ಇತಿಹಾಸಕಾರರಲ್ಲಿ  ಇಸ್ರೇಲಿಗರ  ಬಗ್ಗೆ ಯಾವುದೇ ಉಲ್ಲೇಖ ವು ಇಲ್ಲ ಈ ಗೋರಿಯ  ‌ಮಾಹಿತಿ ದಾಖಲಿಕರಿಸಲ್ಪಟ್ಟ  ಯಹೂದಿಗಳ ಸಮಾಧಿ  ಸ್ಮಶಾನದ ಸಮೀಕ್ಷೆ ನಡೆಸಿ  ವ್ಯಾಪಕ  ಮಾಹಿತಿ ಸಂಗ್ರಹಿಸಿದವರು   ಕೂಡ  ಧಾರವಾಡದ ಈ ಸಮಾಧಿ ಅಥವಾ ವಿದೇಶಗರ ಸ್ಮಾರಕ ‌ಸಮಾಧಿಯನ್ನು  ದಾಖಲಿಸದಿರುವುದು   ಒಂದು ದುರಂತ.

        ಗಮನಿಸಿ ಬೇಕಾದ ಯಾರು ಗಮನಿಸದೆ   ಸಮೀಕ್ಷೆ ಗೆ  ಒಳಪಡದೆ  ಅಧ್ಯಯನಕೊಳಗಾಗದ  ಗೋರಿ ಇದು . ಆದರೆ ಇಲ್ಲಿನ  ಪ್ರತಿಯೊಂದು ಕಲ್ಲು ಕಥೆ  ಹೇಳುತ್ತದೆ. ಆದರೆ ‌ಕೇಳುವ  ಕಿವಿ‌ನೋಡುವ  ಕಣ್ಣುಗಳು ಬೇಕಷ್ಟೇ  ಇದನ್ನು  ಸಂರಕ್ಷಿಸಲು  ಸ್ಥಳೀಯರು  ಹಲವು ಬಾರಿ ಸಂಬಂಧ ಪಟ್ಟ ಆಡಳಿತ ವಿಭಾಗವನ್ನು  ಆಗ್ರಹಿಸಿದ್ದರೂ , ರಕ್ಷಣೆಗೆ  , ದುರಸ್ತಿಗೆ ಯಾವುದೇ ಸೂಕ್ತ ಕ್ರಮ  ತೆಗೆದು ‌ಕೊಂಡಿಲ್ಲ. ತಾಜ್ಯ ರಾಶಿ ಬಿದ್ದಿದ್ದು  ಮಾವು  , ಚಿಕ್ಕು  ತೋಟದ ‌ಮೂಲೆಯೊಂದರಲ್ಲಿ ಈ  ಗೋರಿ ಅಡಗಿ‌ ‌ಕುಳಿತ್ತಂತೆ  ಇದ್ದು ಗೋರಿ ಪ್ರಾಮುಖ್ಯತೆ ಕಳೆದು ಕೊಳ್ಳುತ್ತಿದೆ.

       ನೂರಾರು ವರ್ಷ ಗಳ ಇತಿಹಾಸ ವಿರುವ  ಗೋರಿ ರಕ್ಷಿಸ  ಬೇಕಾಗಿದೆ. ಈ ಗೋರಿ ಗಳು  ನಾಶದಂಚಿಗೆ  ಸರಿದಿರುವ  ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದರು. ಗೋರಿ ಗಳ ಕಥೆ- ವ್ಯಥೆಗಳ  ಸ್ಥಳ ವೊಂದು  ಧಾರವಾಡದಲ್ಲಿದೆ  ಎನ್ನುವುದನ್ನು ಪ್ರಾಚ್ಯ ವಸ್ತು ಇಲಾಖೆಯ  ಆದಿಕಾರಿಗಳು  ಇತ್ತ ಗಮನ ಹರಿಸಿಲ್ಲ ಯಾಕೆ ಎಂಬುದು ‌ದೊಡ್ಡ‌ಪ್ರಶ್ನೆಯಾಗಿ  ಉಳಿದಿದೆ.

      ಇತಿಹಾಸದ  ವಿದ್ಯಾರ್ಥಿ ಗಳಿಗೆ  , ತಜ್ಞರಿಗೆ  ಇಲ್ಲಿನ ಹೆಚ್ಚಿನ ಮಾಹಿತಿ ಸಿಗಲಿದೆ.  ಇಲ್ಲಿನ  ಗೋರಿಗಳ ಹಳೆಯ  ಸ್ವರೂಪವನ್ನು  ಉಳಿಸಿಕೊಂಡು ಸಮಾಧಿಗಳ  ಜೀರ್ಣೋದ್ಧಾರವಾಗ ‌ಬೇಕಾಗಿದೆ.  ಮೌನ ದಲ್ಲಿಯೇ  ತಮ್ಮ ಕಥೆ‌‌ ಹೇಳುವ ಗೋರಿಯ  ಬಗ್ಗೆ ಆಡಳಿತ ವ್ಯವಸ್ಥೆ ಯ  ನಿರ್ಲಕ್ಷ್ಯ  ಎದ್ದು  ಕಾಣುತ್ತದೆ.  ಈ ಇಸ್ರೇಲಿ ಗೋರಿ ಗಳು  ಮುಳ್ಳಿನ  ಪೊದೆಗಳ  ಗಿಡಗಂಟಿಗಳ ಮದ್ಯದಲ್ಲಿ  ತನ್ನ ಸ್ಥಿತಿಯ  ಬಗ್ಗೆ ಕಣ್ಣೀರ  ಕಥೆ‌ ಹೇಳಲೂ ತವಕಿಸಿದಂತಿದೆ.

       ಇಲ್ಲಿನ ಗೋರಿಗಳು  ಒಂದು ಗೋರಿ ಯಂತೆ  ಮತ್ತೊಂದು ಇಲ್ಲದಿರುವುದು ಇವುಗಳ  ವಿಶೇಷತೆ  . ಪ್ರತಿ ಯೊಂದು  ಗೋರಿಯ  ಮೇಲೆಯು  ಸತ್ತ ವ್ಯಕ್ತಿಗಳ ವಿವರವಿದೆ. ಯುದ್ಧದಲ್ಲಿ ಮರಣ  ಹೊಂದಿದವರ   ನೆನಪಿಗಾಗಿ  ವೀರಗಲ್ಲು, ಪತಿ ಚಿತೆಯಲ್ಲಿ  ಸತ್ತು ಸಹಗಮನ  ಗೈದ  ಮಹಾಸತಿ ಕಲ್ಲು ಗಳನ್ನು  ಕೆತ್ತಿ ಇಡುವುದು  ಸಾಮಾನ್ಯವಾಗಿ ‌ಅಲ್ಲಲ್ಲಿ  ನೋಡಿರುತ್ತೇವೆ.  ನಮ್ಮ ದೇಶದ  ವೀರ ಮಹಾವೀರ  ಇತಿಹಾಸದ  ಕುರುಹುಗಳಾಗಿ ಇಂಥ  ಹಲವಾರು ಬಗೆಯ  ವೀರ ಗಲ್ಲುಗಳು, ಮಹಾಸತಿ ಕಲ್ಲು  ಹಾಗೂ ಕಲ್ಲಿನ  ಗೋರಿ ಗಳು ಹೆಚ್ಚಾಗಿ ಕಾಣ‌ಬರುತ್ತದೆ. ಆದರೆ  ವಿದೇಶಗರದ್ದೆ  ಆದ  ಪ್ರತ್ಯೇಕ ಕಲ್ಲುಗಳು   ಇರುವುದು   ವಿರಳ  ಇದನ್ನು ಸೂಕ್ಷ್ಮ ವಾಗಿ  ಗಮನಿಸಿ ಅದ್ಯಯನಕ್ಕೆ  ಒಳಪಡಿಸಿದರೆ  ದೇಶಾಂತರ  , ಕಲಾಂತರ‌ಪುರಾಣ  ಇತಿಹಾಸ ವೆಂದಲ್ಲಾ  ಹರಿದಾಡುತ್ತಾ‌‌ಕೊನೆಗೆ  ಈ ಸಮಾಧಿ ಒಳಗಿನ  ಅನೇಕ ವಿಚಾರ ‌ವಿಷಯಗಳು  ಹೊರ ಬರಬಹುದು

          ತಮ್ಮ ಪೂರ್ವಜರ ಗೋರಿಗಳನ್ನು  ನೋಡಿ ಗೌರವಿಸಲು ವಿದೇಶದಿಂದ  ಅವರ ಸಂಬಂಧಿಕರು  ಅಥವಾ ಅಧಿಕಾರಿಗಳು   ಬರುತ್ತಾರಾ ಎಂದು   ಇಲ್ಲಿನ ‌ನಿವಾಸಿಗಳಿಗೆ ‌ಕೇಳಿದರೆ  ವಿದೇಶಿಗರು ‌ಬರುತ್ತಾರೆ.  ಆದರೆ ಅವರು ಪ್ರವಾಸಿಗರೊ ಸಂಬಂಧಿಗಳೊ  ಗೊತ್ತಿಲ್ಲ ಎನ್ನುವ  ಉತ್ತರ ಬಂತು  ಒಟ್ಟಿನಲ್ಲಿ  ಇಲ್ಲಿನ ‌ಗೋರಿಗಳ  ಇತಿಹಾಸವನ್ನು  ಇನ್ನಷ್ಟು ಅಗೆದಷ್ಟು  ಬಗೆದಷ್ಟು ಹೊಸ ಹೊಸ‌ವಿಚಾರಗಳು  ತಿಳಿದು‌‌ ಬರುವ ವಿಚಾರಗಳು.

    ರುಚಿಕರ ಧಾರವಾಡ ಫೇಡಾದ  ಹಿಂದಿನ ಸ್ವಾರಸ್ಯ= ಧಾರವಾಡ ಊರಿನ ಹೆಸರಿನೊಂದಿಗೆ ‌ಮಿಳಿತಗೊಂಡು  ವಿಶ್ವ ಪ್ರಸಿದ್ಧಿ ಪಡೆದಿರುವ  ಅನೇಕ ಖಾದ್ಯಗಳಲ್ಲಿ  ಧಾರವಾಡ ಫೇಡವು  ಒಂದು. ‌ಕರ್ನಾಟಕದ  ವಿಶಿಷ್ಟ ತಿನಿಸು ಎಂದೇ  ಕರೆಯಲ್ಪಡುವ ಧಾರವಾಡ ಫೇಡೆಗೆ   ಭೌಗೋಳಿಕ ಸೂಚ್ಯಂಕದ  ಪಟ್ಟಿಯಲ್ಲಿ  ಸ್ಥಾನ ಪಡೆದಿದ್ದು  ಜಿ. ಐ ಟ್ಯಾಗ್ ಸಂಖ್ಯೆ 85.  ಫೇಡಾ ಉತ್ಪಾದಕರು  ಫೇಡಾವನ್ನು  ಬರಿ ಸಿಹಿ  ತಿನಿಸು ಎನ್ನುವುದಕ್ಕೆ  ಸೀಮಿತ ‌ಗೋಳಿಸದೇ ಅದನ್ನು ವಾಣಿಜ್ಯ ಕರಣ  ಮಾಡಿ ಇದೀಗ  ವಿದೇಶಿಗಳಿಗೂ  ಹೋಗುವಂತೆ  ಮಾಡುವಲ್ಲಿ ಯಶಸ್ವಿಯಾಗಿ ದ್ದಾರೆ.  ಹಾಗಾಗಿ  ಧಾರವಾಡ ಫೇಡಾದ  ವಹಿವಾಟು  ಸ್ಥಳೀಯ ‌ಮಾರುಕಟ್ಟೆಯನ್ನು ಮೀರಿ ಸಾವಿರ, ಲಕ್ಷದ  ಗಡಿದಾಟಿ  ಕೋಟಿ ಕೋಟಿ  ವಹಿವಾಟು  ನಡೆಸುತ್ತಿದೆ ಠಾಕುರ್ ಹಾಗೂ ಮಿಶ್ರಾ ಫೇಡಾಗಳೆಂದೂ  ಹೆಸರುವಾಸಿ ಜಿ.ಐ ಟ್ಯಾಗ್ ಪಡೆದಿರುವ  ಸಿಹಿತಿನಿಸು.
            
    ಧಾರವಾಡ ಜ್ಞಾನ ನಗರದಲ್ಲಿ ಪಂಡಿತ್ ಅವಧ್‌ ಬಿಹಾರಿ‌ ಮಿಶ್ರಾ 1933 ರಲ್ಲಿ ಸಣ್ಣ ಅಂಗಡಿಯನ್ನು  ಪ್ರಾರಂಭಿಸಿದರಂತೆ  ಅಲ್ಲಿ  ಅವರು ತಯಾರಿಸಿದ  ಫೇಡಾ ಹಲವು ವರ್ಷಗಳ ನಂತರ ಧಾರವಾಡ ಫೇಡಾ ಎಂದು ಪ್ರಸಿದ್ಧ ವಾಯಿತು  ಧಾರವಾಡ ಫೇಡಾ ಮೂಲತಃ  ಉತ್ತರ ಪ್ರದೇಶದ ಉತ್ಪನ್ನ ದಿಂದ  ವಲಸೆ  ಬಂದಿರುವ  ಠಾಕೂರ್ ಕುಟುಂಬದವರಿಂದ  ಪ್ರಾರಂಭವಾಯಿತು  ಇವರ  ಮೊದಲ ತಲೆ ಮಾರಿನ ವಂಶದವರಾದ  ರಾಮ್ ರತನ್  ಸಿಂಗ್ ಫೇಡಾವನ್ನು  ಸ್ಥಳೀಯ ವಾಗಿ  ಮಾರಾಟ‌ಮಾಡಲು  ಪ್ರಾರಂಭಿಸಿದರು. ಮಿಶ್ರಾ ಫೇಡಾ ಅಂಗಡಿಯ  ಮಾಲಿಕರ  ಮಾತಿನಂತೆ”  ನಮ್ಮ ತಾತನ  ಕಾಲದಿಂದಲೂ  ಇದೆ  ರುಚಿಯ  ಫೇಡಾ ಮಾಡುತ್ತಿದ್ದೇವೆ. ಈಗಲೂ ಹಾಗೆ  ಮಾಡುತ್ತಾ‌ಇದ್ದೀವಿ‌.

            ಧಾರವಾಡ ಫೇಡಾ ಇಂದಿನ ವರೆಗೆ ‌ಮಾರುಕಟ್ಟೆ ಕುಸಿತ ಉದಾಹರಣೆಯೆ  ಇಲ್ಲವಂತೆ  ಧಾರವಾಡ, ಹುಬ್ಬಳ್ಳಿ, ಬೆಳಗಾವಿ  ಸೇರಿದಂತೆ ಉತ್ತರ ಕರ್ನಾಟಕ ‌ಮತ್ತು  ದಕ್ಷಿಣ ಮಹಾರಾಷ್ಟ್ರ ಭಾಗಗಳಲ್ಲಿ ಶುಭ ಕಾರ್ಯಗಳಿಗೆ  ಸಂತಸ ಸಂಭ್ರಮ ಹಂಚಿಕೊಳ್ಳಲು ಫೇಡಾ ಬಳಕೆಯಾಗುತ್ತದೆ.

       ಧಾರವಾಡ ‌ಫೆಡಾ ಪ್ರಾದೇಶಿಕ ವೈಶಿಷ್ಟ್ಯತೆಗಳನ್ನು ಒಳಗೊಂಡಿರುವ  ಉತ್ಪನ್ನ ಗಳ ಸಾಲಿನಲ್ಲಿದ್ದು  ಜಿಯೋಗ್ರಾಫಿಕಲ್ ಇಂಡಿಕೇಶನ್ಸ್ ಅಥವಾ ಭೌತಿಕ ಸೂಚ್ಯಂಕ ದ  ಅಡಿಯಲ್ಲಿ  ನೊಂದಣಿ‌ಮಾಡಲಾಗಿದೆ.  ಹಾಲಿನಿಂದ ತಯಾರಿಸುವ  ಇತರ  ಉತ್ಪನ್ನ ಗಳಿಗೆ ಹೋಲಿಸಿದರೆ  ಧಾರವಾಡ ಫೇಡಾ ಹೆಚ್ಚುಕಾಲ  ಬಾಳುತ್ತದೆ. ಅತ್ಯಂತ ವಿಶಿಷ್ಟ ವಿಧಾನ ದಲ್ಲಿ  ತಯಾರಿಸುವ  ಯಾವುದೇ ಇತರ  ರುಚಿ ಹಾಗೂ ಫ್ಲೇವರ್ಗಳನ್ನು  ಬಳಸದಿರುವ  ಸ್ವಾದಿಷ್ಟ ಫೇಡಾ ಇದು.

         ಧಾರವಾಡ ಹುಬ್ಬಳ್ಳಿ ಗೌಳಿ ಕುಟುಂಬಗಳು  ಸಾಕುವ  ದೇಶಿ ಹಸುವಿನ ಹಾಲಿನಿಂದ ಅಂದರೆ ಪ್ರಕೃತಿದತ್ತ ಆಹಾರವಾದ  ಹುಲ್ಲು  ಜವಾರಿ  ತಿಂದು ‌ಹಸುಗಳು  ಎಮ್ಮೆ ಗಳು  ಗುಣಮಟ್ಟದ  ದೇಶಿ‌ಹಾಲು  ಕೊಡುತ್ತವೆ.  ಅದರಿಂದ  ತಯಾರಿಸಿದ  ಫೇಡಾ‌ರುಚಿ‌  ಹಾಗೂ ಪರಿಮಳವು  ಹೇಚ್ಚೆನುತ್ತಾರೆ.  ಒಂದು  ಫೇಡಾ  ತುಂಡು  ಬಾಯಿಗೆ  ಹಾಕಿ ಕೊಂಡರೆ  ಮತ್ತೊಂದು ತುಂಡು ಬೇಕೆನಿಸುತ್ತದೆ. ಇನ್ನೊಂದು  ವಿಶೇಷ ವೆಂದರೆ  ಹುಬ್ಬಳ್ಳಿ ಧಾರವಾಡದಲ್ಲಿ  ಹಾಲಿನ  ಅಂಗಡಿ, ಬಸ್ಸ್  ನಿಲ್ದಾಣ, ರೈಲು ನಿಲ್ದಾಣ, ಹೈಟೆಕ್ ‌ಮಳಿಗೆಗಳು  , ಖಾಸಗಿ ಹೋಟೆಲ್ ಮಾಹಲ್ ಗಳು , ಸಣ್ಣ ಕಿರಣಿ ಅಂಗಡಿಗಳಲ್ಲಿ ಉತ್ತಮ ಗುಣಮಟ್ಟದ ಫೇಡಾ‌ಲಭ್ಯ.  ಅಷ್ಟೇ ಅಲ್ಲದೇ ಫೇಡಾ ಅಂಗಡಿ ಗಳು  ಫೇಡಾ ವ್ಯಾಪಾರ ಕ್ಕಾಗಿ ಯೆ  ತೆರೆದಿರುತ್ತದೆ. 
         
        ಧಾರವಾಡ ಪೇಡ ಅಧಿಕೃತವಾಗಿ  ಮುಂಬೈ, ದೆಹಲಿ ಚೈನ್ಯ, ಬೆಂಗಳೂರು ಅಷ್ಟೇ ಅಲ್ಲ ‌ಕಾಶ್ಮೀರದ  ಕಣಿವೆಗಳನ್ನು ದಾಟಿದಲ್ಲದೆ  ದೇಶ ವಿದೇಶಗಳಿಗೂ ಸಾಗಿದೆ  . ಠಾಕೂರ್ ಸಿಂಗ್ ಫೇಡಾ ಕ್ಕೆ  ಹೆಚ್ಚಿನ ‌ಬೇಡಿಕೆ  ಇದೆ . ಅಮೆರಿಕಾ, ಇಂಗ್ಲಿಷ್‌ ಪ್ರಾನ್ಸ್  ಹಾಗೂ  ಆಸ್ಟ್ರೇಲಿಯಾ ಗಳಲ್ಲಿ  ನಿಯಮಿತ ವಾಗಿ  ಧಾರವಾಡ ಫೇಡಾದ ಕ್ಕೆ ಒಳ್ಳೆಯ ಮಾರುಕಟ್ಟೆ ಇದೆ.  ಸದ್ಯಕ್ಕೆ ಧಾರವಾಡ ಫೇಡಾ ಕ್ಕೆ  600 ರಿಂದ ‌700 ರೂಪಾಯಿ ಬೆಲೆ ಇದೆ.

       ಔಗೋಳಿಕ ಸೂಚ್ಯಂಕ ಎಂಬುದು ಒಂದು ವಸ್ತು ವಿನ  ಅಥವಾ ಸಾಮಗ್ರಿಯ  ಮೂಲವನ್ನು  ನಿರ್ದಿಷ್ಟವಾಗಿ ಒಂದು ಭೂಪ್ರದೇಶ ಕ್ಕೆ (ಊರು ದೇಶ)  ಗುರುತಿಸಲ್ಪಡುವ ವಿಧಾನ. ಈ ವಸ್ತುವಿನ  ವಿಶೇಷ ಹಕ್ಕನ್ನು ‌ನಿಗದಿಗೊಳಿಸುವ  ಒಂದು  ಮಾರ್ಗ ‌ವಿಶ್ವವಾಣಿಜ್ಯ ಸಂಘಟನೆ ಸದಸ್ಯ  ರಾಷ್ಟ್ರವಾಗಿರುವ  ಭಾರತವು  1999  ರಲ್ಲಿ ಸರಕುಗಳ  ಬೌಗೋಳಿಕ  ಸೂಚ್ಯಂಕ  ಕಾಯ್ದೆಯನ್ನು  ಜಾರಿಗೊಳಿಸಿತು.ಧಾರವಾಡ ಪೇಡದಾ  ರುಚಿ,  ಪರಿಮಳ, ಹಾಗೂ  ಖಾದ್ಯ ರುಚಿಕರ  ತಿನಿಸುಗಳ  ಹಿಂದಿನ ಸ್ವಾರಸ್ಯ ಈ ಎಲ್ಲ‌ಹಿನ್ನಲೆಯಲ್ಲಿ ಫೇಡಾ ವನ್ನು  ಬೌಗೋಳಿಕ ಸೂಚ್ಯಂಕ ದ  ಮೂಲಕ  ಗುರುತಿಸಿ  ವಸ್ತು ವಿನ  ವಿಶೇಷ ತೆ  ಯ ಬಗ್ಗೆ ಅಂತರಾಷ್ಟ್ರೀಯ ‌ಮಾರುಕಟ್ಟೆಗಳಲ್ಲಿ ಆವಸ್ತು  ವಿನ  ವಿಶೇಷ ಹಕ್ಕನ್ನು  ನಿಗದಿ ಗೊಳಿಸುವ  ಒಂದು ಮಾರ್ಗ. ತಾನು ಗುರುತಿಸಿ ಕೊಂಡಿರುವ ಭೌಗೋಳಿಕ ಪ್ರದೇಶದೊಂದಿಗೆ  ಐತಿಹಾಸಿಕ ವಾಗಿ  ಬೆಳೆದಿರಬೇಕು. ಈ ಎಲ್ಲಾ  ಅರ್ಹತೆಯನ್ನು  ಧಾರವಾಡ ಪೇಡಾ ಹೊಂದಿದ  ಕಾರಣ ಅದಕ್ಕೆ  ಜಿಐ ಮಾನ್ಯತೆ ಪಡೆದಿದೆ.

       ತಾಜ ಹಾಗೂ ತನ್ನ  ಸ್ವಾದಿಷ್ಟ ಕಾಯ್ದು ಕೊಳ್ಳುವ  ಸಿಹಿ ತಿನಿಸು  . ಹಾಲು ‌ಉತ್ಪಾದನೆ  ಅದರಿಂದ  ಖುವಾ ತಯಾರಿಕೆ  ಸಿಹಿ  ಸೇರ್ಪಡೆ, ಪ್ಯಾಕೇಜ್ ಂಗ್ ಸಾಗಾಟ ‌ಮತ್ತು  ಮಾರಾಟ ‌ಪ್ರತಿ‌ಹಂತದಲ್ಲೂ  ಪೇಡಾ ವ್ಯಾಪಾರಿಗಳು  ಇದರ  ಬಗ್ಗೆ ನಿಗಾ ಇಟ್ಟಿರಿರುತ್ತಾರೆ.  ಒಂದು ಸಮೀಕ್ಷೆ ಯಂತೆ  ಧಾರವಾಡ ‌ನಗರದಿಂದ  ಪ್ರತಿದಿನ  5 ಸಾವಿರ ‌ಕೆ.ಜಿ ಯಷ್ಟು  ಪೇಡಾ ಉತ್ಪಾದನೆ ಯಾಗಿ  ಹೊರ  ರಾಜ್ಯ ಕ್ಕೆ  ಹೋಗುತ್ತದೆ.  ಹಬ್ಬ  ಹರಿದಿನಗಳು   ವಿಶೇಷ ದಿನಗಳಲ್ಲಿ  8 ಸಾವಿರ ಕೆ.ಜಿ ಪೇಡಾ ಉತ್ಪಾದನೆ ಯಾಗುತ್ತದೆ. ಒಟ್ಟಿನಲ್ಲಿ ಸ್ಥಳೀಯ ವಾಗಿ   ತಯಾರಾಗಿ ಅದರ  ಪರಿಚಯ  ಅದೇ  ನೆಲದಲ್ಲಿ  ಮುಗಿಯದೇ  ದೇಶ-  ವಿದೇಶಗಳ ಲ್ಲಿಯ   ತನ್ನ ರುಚಿಯ ಸ್ವಾದ  ಹೆಚ್ಚಿಸಿದ  ಧಾರವಾಡ ಫೇಡಾ ಒಮ್ಮೆ ತಿಂದು ‌ನೋಡಿ.


     ಧಾರವಾಡ ಎಮ್ಮೆ= ಧಾರವಾಡ ಎಮ್ಮೆ ಗೆ  ರಾಷ್ಟ್ರಮಟ್ಟದಲ್ಲಿ  ದೇಶಿತಳಿಯ  ಸ್ಥಾನ ದೊರತಿದೆ. ಧಾರವಾಡ ಫೇಡಾ ರುಚಿಗೆ  ಎಮ್ಮೆ ಹಾಲು ಕಾರಣ . ದೇಶ ದ  18  ನೇ  ಎಮ್ಮೆ ತಳಿಯಾಗಿ ಧಾರವಾಡ ಎಮ್ಮೆ ಘೋಷಣೆ ಯಾಗುದ್ದು ಅವು ನೀಡುವ ಹಾಲಿನ ಪ್ರಮಾಣ  ಮತ್ತು ಗುಣಮಟ್ಟ ಸಾಕಷ್ಟು ಹೆಸರುವಾಸಿ. ಧಾರವಾಡ ವಿಶ್ವ ವಿದ್ಯಾಲಯದಲ್ಲಿ  2014  ರಿಂದ  ಧಾರವಾಡ ಎಮ್ಮೆ ‌ಬಗ್ಗೆ ಅಧ್ಯಯನ ಆರಂಭಿಸಿತು.‌ಇಲ್ಲನ ಎಮ್ಮೆ ಗಳನ್ನು  ಜವಾರಿ  ಎಮ್ಮೆ ಎಂದೂ ‌ಕರೆಯುತ್ತಾರೆ.

    ಅರವಟ್ಟಿಗೆ = ಸಂಗೊಳ್ಳಿ ರಾಯಣ್ಣ ನಿಗೆ  ನೀರೂ ನೀಡಿದ ಅರವಟ್ಟಿಗೆ  ಧಾರವಾಡ  ತಾಲೂಕಿನ  ಪ್ರಮುಖ ಗ್ರಾಮ.ಗ್ರಾಮಸ್ಥರು  ಹೇಳುವಂತೆ ಅರವಟ್ಟಿಗೆ ಅಂದರೆ ಬ್ರಿಟಿಷ್ ರ   ವಿರುದ್ಧ ‌ಹೋರಾಡುತ್ತಿದ್ದ  ಕ್ರಾಂತಿ ವೀರ  ಸಂಗೊಳ್ಳಿ ರಾಯಣ್ಣ ನ  ತಂಡ ಸುರಕ್ಷಿತ ವಾಗಿರಲು  ಇದ್ದ   ರಹಸ್ಯ ಸ್ಥಳ . ಇಲ್ಲಿ ರಾಯಣ್ಣ ಸ್ನಾನ ‌ಮಾಡುತ್ತಿದ್ದ ರಾಯಣ್ಣ  ಮಡಿ ಇಂದಿಗೂ ಇದೆ.
    
ಜಕಣಿ ಬಾವಿ= ಮಹಾತ್ಮ ಗಾಂಧಿಯವರ  ನೇತೃತ್ವದಲ್ಲಿ  ದೇಶಾದ್ಯಂತ  ನಡೆದ  ಅಸಹಕಾರ  ಚಳುವಳಿಗೆ  ಸಾಕ್ಷಿಯಾಗಿ  ಧಾರವಾಡದ  ಜಕಣಿಬಾವಿಯಲ್ಲಿದೆ  ಹುತಾತ್ಮ ರ ಸ್ಮಾರಕ. ಜಕಣಿ ಬಾವಿ  ಧಾರವಾಡ ನಗರದ  ಹೃದಯ ಭಾಗದಲ್ಲಿದ್ದು  ಅಸಹಕಾರ  ಚಳುವಳಿ ಭಾಗವಾಗಿ ‌ನಡೆದ  ಪ್ರತಿ ಭಟನೆ ವೇಳೆ ಬ್ರಿಟಿಷರು ನಡೆದಿದ ಗೋಲಿಬಾರ್ ನಲ್ಲಿ  ಮೂವರು ಸ್ವಾತಂತ್ರ್ಯ ಯೋಧರು ಬಲಿಯಾಗಿದ್ದಾರೆ. ಅವರ ನೆನಪಿಗಾಗಿ  ಇಲ್ಲಿ ಅನುದಿನ  ದೀಪ ಬೆಳಗಿಸುತ್ತಾರೆ‌.
ವಿದ್ಯಾಕಾಶಿ ಧಾರವಾಡದಲ್ಲಿ  ಇನ್ನೂ ಅನೇಕ  ಪ್ರೇಕ್ಷಣೀಯ ಸ್ಥಳಗಳಿವೆ.  ಈ ಊರಿಗೆ ಈ  ಊರೆ  ಸಾಟಿ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments