ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ
ವಿಶ್ವದ ಎರಡನೆಯ ದೊಡ್ಡ ಡೈನೋಸಾರ್ ಪಳೆಯುಳಿಕೆಗಳ ಸಂಗ್ರಹದ ಭಾರತದ ಏಕೈಕ ಡೈನೋಸಾರ್ ಪಾರ್ಕ್, ಇಂಡಿಯನ್ ಜುರಾಸಿಕ್ ಪಾರ್ಕ್ ಎಂದು ಪ್ರಸಿದ್ದಿ ಪಡೆದ “ಇಂಡ್ರೋಡ ಡೈನೋಸಾರ್ ಪಳೆಯುಳಿಕೆ ಪಾರ್ಕ್”, ಗುಜರಾತ್ ನಲ್ಲಿದೆ. ಡೈನೋಸಾರ್ ಗೂ ಗುಜರಾತ್ ಗೂ ಅವಿನಾಭಾವನಂಟು ಎಂದರು ತಪ್ಪಾಗಲಾರದು. ವಿಶ್ವದ ಎತ್ತರದ ಏಕತ ಮೂರ್ತಿ ಇರುವ ರಾಜ್ಯ, ಬಟ್ಟೆ ಹಾಗೂ ವಜ್ರ ವ್ಯಾಪಾರಕ್ಕೆ ಮುಂಚುಣಿಯಲ್ಲಿದ್ದು ಶ್ರೀಮಂತಕಲೆ, ಸಂಸ್ಕೃತಿ, ಯಾತ್ರಾಸ್ಥಳ, ಬಾಯಿಯಲ್ಲಿ ನೀರೂರುವ ಖ್ಯಾದಗಳಿಗೆ ಹೆಸರು ವಾಸಿಯಾದ ಗುಜರಾತ್ ಗೂ ಡೈನೋಸಾರ್ ಗು ವಿಶಿಷ್ಟ ನಂಟಿರುವುದು ಅಚ್ಚರಿಯ ವಿಷಯ ಅನಿಸಿತು. ಡೈನೋಸಾರ್ ಟೂರಿಸಂ ಎಂಬ ಹೆಸರಿನಿಂದ ಗುಜರಾತ್ ಪ್ರವಾಸೋದ್ಯಮ ಇಲಾಖೆ ಅಬ್ಬರದ ಪಚಾರಕೂಡಾ ಮಾಡುತ್ತಿದೆ. ಎಲ್ಲಿಯ ಗುಜರಾತ್ ಎಲ್ಲಿಯಾ ಡೈನೋಸಾರ್ ಎಂದೆನಿಸಿದರು ವೈಜ್ಞಾನಿಕವಾಗಿ ಧೃಡಪಟ್ಟ ಅನೇಕ ವಿಚಾರಗಳು ಗುಜರಾತಿನ ಇತಿಹಾಸದಲ್ಲಿ ಹುದುಗಿದೆ. ಗುಜರಾತ್ ನಲ್ಲಿ ಈ ಪಾರ್ಕ್ ಇರುವ ಸ್ಥಳ ಹಾಗೂ ಅದರ ಸುತ್ತ ಮುತ್ತಲಿನ ಕಣಿವೆ ಪ್ರದೇಶಗಳಲ್ಲಿ ಡೈನೋಸಾರ್ ಗಳು ವಾಸವಾಗಿ ಓಡಾಡುತ್ತಿದ್ದವು ಅವುಗಳ ಪಳಯುಳಿಕೆಗಳ ಅವಶೇಷಗಳನ್ನು ಹೊಂದಿರುವ ಕೆಲವು ರಾಜ್ಯ ಗಳಲ್ಲಿ ಗುಜರಾತ್ ಮುಂಚೂಣಿಯಲ್ಲಿದೆ.
ಮನುಷ್ಯ ಸಂಕುಲ ಸೃಷ್ಟಿಯಾಗುವ ಎಷ್ಟೋ ಕಾಲದ ಮೊದಲು ಈ ಪ್ರಾಣಿಗಳು ಒಂದರೊಂದಿಗೆ ಒಂದು ಜಗಳವಾಡುತ್ತಾ ಪರಸ್ಪರ ಹೋರಾಟ, ಭೂಕಂಪ, ಚಂಡಮಾರುತ, ಹಿಮಪಾತ ಮೊದಲಾದ ಹಲವು ನಿಸರ್ಗ ವಿಕೋಪಗಳಿಂದಾಗಿ ಈ ಜೀವಿಗಳು ನಿರ್ವಂಶವಾಗಿ ಹೋಗಿವೆ ಎನ್ನುತ್ತಾರೆ. ಡೈನೋಸಾರ್ ಅಧ್ಯಯನ ಶೀಲರು. ದೈತ್ಯ ಗಾತ್ರದ ಈ ಜೀವಿಗಳು ಹಿಂದೆ ಭೂಮಿಯಲ್ಲಿ ಬದುಕ್ಕಿದ್ದವು ಎಂಬುದಕ್ಕೆ ಹಲವು ನಿದರ್ಶನಗಳಿವೆ. ಇಂದಿಗೂ ಗುಜರಾತ್ ನ ಕೆಲವು ಪ್ರದೇಶಗಳಾದ ರವೊಲಿಯಾ, ಸೋನ್ ಘಿರ್ ಬಾಗ್, ಹಿಮತ್ ನಗರ್, ಪಂಚಮಹಲ್, ವಡೋದರದ ಆಸುಪಾಸಿನ ವಿಭಿನ್ನ ಸ್ಥಳಗಳಲ್ಲಿ ಮೂಳೆ, ಮೊಟ್ಟೆ, ಹಲ್ಲುಗಳು ಭೂಮಿಯ ಅಡಿಯಿಂದ ವಿವಿಧ ಕಾಮಗಾರಿಗಳು ನಡೆಯುವಾಗ ಸಿಗುತ್ತದೆ.
ಭಾರತದ ಮೊದಲ ಡೈನೋಸಾರ್ ಮಾಹಿತಿ ಕೇಂದ್ರ ಹಾಗೂ ವಸ್ತು ಸಂಗ್ರಹಾಲಯ 25 ಸಾವಿರ ಚದರ ಅಡಿ ವಿಸ್ತೀರ್ಣ ದಲ್ಲಿದ್ದ ಈ ಸಂಗ್ರಹಾಲಯದಲ್ಲಿ ಹತ್ತು ಸಾವಿರಕ್ಕು ಹೆಚ್ಚಿನ ಸಂಖ್ಯೆಯಲ್ಲಿ ಡೈನೋಸಾರ್ ಗಳ ಮೊಟ್ಟೆಗಳನ್ನು ಸಂಗ್ರಹಿಸಿ ಇಡಲಾಗಿದೆ. ಮೂಳೆಗಳು, ಹಲ್ಲು, ಅಸ್ಥಿಪಂಜರ, ಪಳೆಯುಳಿಕೆ ಅಲ್ಲದೆ ನೋಡುತ್ತಲೆ ಬೆಚ್ಚಿ ಬೀಳುವ ಹಾವಿನ ಪಳೆಯುಳಿಕೆಯಂತು ನಾನು ಇಂದಿಗೂ ನೆನಪಿಸಿಕೊಂಡು ಭಯಪಡುತ್ತೇನೆ. ಅಷ್ಟು ದೊಡ್ಡದಾಗಿ ಭಯ ಹುಟ್ಟಿಸುವಂತಿದೆ. ಈ ಹಾವಿನ ಆಹಾರ ಡೈನೋಸಾರ್ ಮೊಟ್ಟೆಗಳಂತೆ.
ಇಲ್ಲಿನ ಯಾವುದೆ ವಸ್ತುವನ್ನು ಮುಟ್ಟುವಂತಿಲ್ಲ . ಈ ಪಳೆಯುಳಿಕೆಗಳು ಎಲ್ಲಿಯಾದರೂ ಹಾಳಾದವು ಅಂದರೆ ಪುನಃ ಪಡೆಯಲು ಸಾದ್ಯವಿಲ್ಲದ್ದು ಆದ್ದರಿಂದ ಈ ಪಾರ್ಕ್ ನಲ್ಲಿರುವ ಮೂಳೆ, ಅಸ್ಥಿಜರ ಪ್ರತಿಯೊಂದು ವಸ್ತು ಅಮೂಲ್ಯವಾದುದು. ಆದರೆ ಜನರಿಗೆ ಇದರ ಬೆಲೆಯ ಅರಿವಿಲ್ಲದೆ ಕೆಲವರು ಮೂಗು ಮುರಿಯುತ್ತಾರೆ.
ಇಂಡ್ರೋಡದ ಜನನಿ = ಮಕ್ಕಳು ವೃದ್ದರು ಎಂಬ ಬೇದವಿಲ್ಲದೆ ಬೆರಗು ಗಣಿನಿಂದ ನೋಡುವ ಈ ಪಾರ್ಕ್ ನಿರ್ಮಾಣ ಕಾರಣಿ ಕರ್ತೆ ಆಲಿಯಾ ಸುಲ್ತಾನ್ ಬಾಬಿಯಾ ಎಂಬವರ ದೂರದೃಷ್ಟಿ. ನರ್ಮದಾ ನದಿ ತೀರದ ಮೃದು ಮಣ್ಣಿನ ಪ್ರದೇಶದ ಮಣ್ಣಿನೊಳಗೆ ಎಲುಬಿನ ಹಂದರಗಳು ಸಾಲು ಸಾಲಾಗಿ ಕಾಣಸಿಕ್ಕಾಗ ದೊಡ್ಡ ಚಂಡಿಗಿಂತಲೂ ದೊಡ್ಡದಾಗಿರುವ ವಸ್ತುಗಳು ಸಿಕ್ಕಿರುವುದು ಸುಲ್ತಾನ್ ಬಾಬಿಯಾ ಗಮನಕ್ಕೆ ಬರುತ್ತದೆ. ಕೆಲವರು ಇದು ಹಿಂದಿನ ಕಾಲದ ಮದ್ದು ಗುಂಡುಗಳೆಂದರೆ ಇನ್ನು ಕೆಲವರು ಇದನ್ನು ಶಿವಲಿಂಗ ಎಂದರೆ ಮತ್ತೆ ಕೆಲವರು ಉಪಯೋಗವಿಲ್ಲದ ಕಲ್ಲು ಗುಂಡುಗಳೆಂದರೆ ಇನ್ನು ಕೆಲವರು ನೆಲಗಡಲೆ, ಮಸಾಲೆ, ಕುಟ್ಟಲು ಈ ಚಂಡಿನಾಕಾರದ ಡೈನೋಸಾರ್ ಮೊಟ್ಟೆ ಬಳಸಿದರು.
ಯಾವುದೊ ಒಂದು ಮನೆಯಲ್ಲಿ ಒಲೆಯ ಗುಂಡಾಗಿ ಬಳಸಿದ್ದರು. ಆಗ ಒಲೆಯ ಶಾಖಕ್ಕೆ ಬೆಂದಾಗ ಈ ಮೊಟ್ಟೆಯಿಂದ ಪರಿಮಳ ಸೂಸ ತೊಡಗಿತು. ಒಡೆದು ಹೊರ ಬಂದ ಮೃದುವಸ್ತು ರುಚಿ ನೋಡಿದಾಗ ಇದು ಮೊಟ್ಟೆಯ ರುಚಿ ಎಂಬ ಅನುಮಾನ ಬಂದು ಆಲಿಯಾ ಸುಲ್ತಾನ್ ಬಾಬಿಯಾ ಜೀವ ಶಾಸ್ತ್ರೀಕ್ಕೆ ಸಂಬಂಧಿಸಿದ ಅಧ್ಯಯನ ಶೀಲರಿಗೆ ಇದರ ಮಾಹಿತಿ ನೀಡಿದಾಗ ಹಲವಾರು ಪರೀಕ್ಷೆಗಳ ನಂತರ ಇದು ಡೈನೋಸಾರ್ ಮೊಟ್ಟೆ ಎನ್ನುವುದು ಧೃಡ ಪಟ್ಟಾಗ . ಇಲ್ಲಿನ ಆಸುಪಾಸಿನ ಪ್ರದೇಶದಲ್ಲಿ ಶೋದಿಸಿದಾಗ 15 ಸಾವಿರಕ್ಕು ಹೆಚ್ಚು ಮೊಟ್ಟೆಗಳು ಲಭಿಸಿದ್ದು. ಸಾಧಾರಣವಾಗಿ 10 ಸಾವಿರ ಮೊಟ್ಟೆಗಳು ಆರೋಗ್ಯ ದಾಯಕವಾಗಿದ್ದು ಡೈನೋಸಾರ್ ಹೆಚ್ಚಿನ ಸಂಖ್ಯೆಯಲ್ಲಿ ಗುಜರಾತ್ ನಲ್ಲಿ ವಾಸಿಸಿದ್ದವು ಎಂಬುದಕ್ಕೆ ಇದು ಸಾಕ್ಷಿಯಾಯಿತು ಅಷ್ಟೇ ಅಲ್ಲದೆ. ಮೂಳೆ ,ಚರ್ಮ, ಉದ್ದ ಹಲ್ಲುಗಳು, ಬೆನ್ನೆಲುಬು ಲಭಿಸಿದ್ದು ಸುಲ್ತಾನ್ ಬಾಬಿಯಾ ಈ ಪರಿಯಲ್ಲಿ ಲೆಕ್ಕಕ್ಕೂ ಮೀರಿ ದೊರೆತಿರುವ ಡೈನೋಸಾರ್ ಪಳೆಯುಳಿಕೆಗಳು ಸಿಕ್ಕಿರುವುದನ್ನು ಗಮನಿಸಿ ಪುರಾತತ್ವ ಶಾಸ್ತ್ರ ಜ್ಞರು ಹಾಗೂ ಕಛ್ ವಿಶ್ವವಿದ್ಯಾಲಯದ ತಜ್ಞರು ನಡೆಸಿದ ಪರೀಕ್ಷೆಗಳಲ್ಲಿ ಇವು ಡೈನೋಸಾರ್ ಮೊಟ್ಟೆ ಗಳೆಂಬುದು ಡೃಢ ಪಡಿಸಿಕೊಂಡು. ಇಂಡ್ರೋಡಾ ಡೈನೋಸಾರ್ ಪಾರ್ಕ್ ನಿರ್ಮಾಣಕ್ಕೆ ಪ್ರಾರಂಭಿಸಿದರು.
ಇದು ಅರಣ್ಯ ಇಲಾಖೆಯ ಉದ್ಯಾನವನ ಆದರೂ ಡೈನೋಸಾರ್ ಪಾರ್ಕ್ ಎಂದೆ ವಿಖ್ಯಾತಗೊಂಡಿದೆ. ಭೂ ವೈಜ್ಞಾನಿಕ ವಿಭಾಗ ಮತ್ತು ಪ್ರವಾಸೋದ್ಯಮ ಇಲಾಖೆಗಳು ಯುನೆಸ್ಕೋ ಗೆ ಇಲ್ಲಿ ಟೆರನೋಸಾರಸ್ ರೆಕ್ಸ್ ಟಿಟಿನೊಸಾರಸ್, ಪಾಸುರಸ್, ಬ್ರಾಕಿಯೊ ಸಾರಸ್, ಅಂಟಾರ್ಕೊಸಾರಸ್, ಸ್ವೆಗೊಸಾರಸ್ ಜಾತಿಯ ಡೈನೋಸಾರ್ ಗಳು ನಲೆ ಬೀಡಾಗಿದ್ದ ಈ ಸ್ಥಳವನ್ನು ಯುನೆಸ್ಕೋ ಪ್ರವಾಸೋದ್ಯಮ ಕೇಂದ್ರ ವೆಂದು ಪ್ರಕಟಿಸಲು ಇಲ್ಲಿನ ಮಾಹಿತಿ ಒದಗಿಸಲಾಗಿದೆ.
ಭಾರತದ ಜುರಾಸಿಕ್ ಪಾರ್ಕ್ ಎಂದು ಕರೆಯುವ ಮಾನವ ನಿರ್ಮಿತ ಅರಣ್ಯದಲ್ಲಿ ಇಂಡ್ರೋಡಾ ಡೈನೋಸಾರ್ ಪಾರ್ಕ್ ಗೆ ಗುಜರಾತ್ ನ ಅಹಮದಾಬಾದ್ ಹತ್ತಿರದ ಬಲಸಿನಾರ್ ರೈಯಾಲಿ ಎಂಬ ಊರಿನಲ್ಲಿದೆ. ಈ ಊರು ಗಾಂದಿನಗರದಿಂದ 100 ಕಿ ಮಿ ದೂರದಲ್ಲಿದೆ.ಪರಿಸರ ಮತ್ತು ಸಂಶೋಧನಾ ಕೇಂದ್ರ ಗೀರ್ ಫೌಂಡೇಶನ್ ಇದರ ಮೇಲೆವಿಚಾರಣೆ ನೋಡಿಕೋಳ್ಳುತ್ತಿದೆ. 428 ಹೆಕ್ಟೇರ್ ವಿಸ್ತಿರ್ಣದಲ್ಲಿರುವ ಈ ಪಾರ್ಕ ನ ಸುತ್ತ ಸಸಿಗಳನ್ನು ನಟ್ಟು ಸುಂದರವಾದ ಅರಣ್ಯವನ್ನು ಸೃಷ್ಟಿಸಲಾಗಿದೆ. ಈ ಅರಣ್ಯದಲ್ಲಿ ಹುಲಿ, ಚಿರತೆ, ಜಿಂಕೆ, ನವಿಲು, ಕಾಡು ಬೆಕ್ಕು, ಕೆಂದಳಿಲು, ಪಕ್ಷಿ ಸಂಕುಲಗಳಿವೆ. ಅನೇಕ ಸಸ್ತನಿ, ಸರೀಸೃಪಗಳು ಇದ್ದು. ಎಲ್ಲಕ್ಕಿಂತ ಮುಖ್ಯವಾಗಿ 6 ಎಕರೆ ಸ್ಥಳದಲ್ಲಿ ಡೈನೋಸಾರ್ ಗೆ ಸಂಬಂಧಿಸಿದ ಪಳಯುಳಿಕೆಗಳ ವಿಭಾಗವೊಂದು ಜನರಾಣ್ಯದಿಂದ ದೂರವಾಗಿ ದಟ್ಟ ಕಾಡಿನ ಮಧ್ಯೆ ಅಳಿದು ಹೋದ ಡೈನೋಸಾರ್ ಗಳ ಅವಶೇಷಗಳನ್ನು ನೋಡಬಹುದು ಅಷ್ಟೇ ಅಲ್ಲದೆ ನಮ್ಮ ಅರಿವಿನ ಪರೀದಿ ಹೆಚ್ಚಿಸಿಕೊಳ್ಳಲು ಇಲ್ಲಿ ಅವಕಾಶವಿದೆ. ಆಸಕ್ತರಿಗೆ ಡೈನೋಸಾರ್ ನ ದೇಹರಚನೆ, ಆಹಾರ ಪದ್ದತಿ, ಅವುಗಳ ಜೀವನಕ್ರಮ ಕುರಿತು ಮಾಹಿತಿ ನೀಡಲಾಗುತ್ತದೆ. ಈ ಸಂಗ್ರಹಾಲಯದಲ್ಲಿ ಡೈನೋಸಾರ್ ನ ಪ್ರತಿಕೃತಿಗಳಿವೆ. ಇಲ್ಲಿನ ಸಿಬ್ಬಂದಿಗಳು ಪ್ರವಾಸಿಗರೊಂದಿಗೆ ಸ್ಪಂದಿಸುವ ಪರಿ ಅನನ್ಯ.
ಗುಜರಾತ್ ನ ನರ್ಮದಾ ಜಿಲ್ಲೆಯ ಕೆವಡಿಯಾ ಸರ್ದಾರ್ ಪಟೇಲ್ ಏಕತಾ ಮೂರ್ತಿ ಸಮೀಪ ಇನ್ನೊಂದು ದೊಡ್ಡ ಡೈನೋಸಾರ್ ಪಾರ್ಕ್ ಇದೆ. ಇಲ್ಲಿ ಕಾಡಿನೊಳಗೆ ಇರಿಸಲಾದ ಡೈನೋಸಾರ್ ನ ಪ್ರತಿಕೃತಿಗಳ ನೋಡಲು ಸಿಗುವುದೊಂದು ನೈಜವಾಗಿ ಕಾಣಿಸುತ್ತದೆ ಚಿಕ್ಕ ಮಕ್ಕಳಿಗಂತು ಬಹಳ ಸಂತಸ ಸ್ಥಳ . ಇಲ್ಲಿನ 30 ಫೀಟ್ ಎತ್ತರದ ಪ್ರತಿಮೆಯೊಂದು ತಯಾರಿಸಿದ ಕೆಲವು ದಿನಗಳಲ್ಲಿ ನೆಲಕ್ಕುರುಳಿರುವುದು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಪ್ರಚಾರ ಪಡೆದಿದೆ.
ಈ ಸ್ಥಳದಲ್ಲಿ ವಾಸಿಸಿ ಅಳಿವಿನಂಚಿಗೆ ಸಾಗಿದ ಡೈನೋಸಾರ್ ಗಳಿಗೆ ನಿಜ ಅರ್ಥದಲ್ಲಿ ಶ್ರದ್ದಾಂಜಲಿ ನೀಡಿದಂತಿದೆ. ಇಷ್ಟು ದೊಡ್ಡ ಗಾರ್ಡನ್ ದೈತ್ಯ ಆಕಾರದ ಡೈನೋಸಾರ್ ಮೂರ್ತಿಗಳು ನೋಡಲು ಸಿಕ್ಕರು ಪ್ರತ್ಯೇಕವಾಗಿ ಈ ಪಾರ್ಕ್ ನಲ್ಲಿನ ವಿಚಾರಗಳನ್ನು ಹೇಳುವ ಗೈಡ್ ಗಳ ಕೊರತೆ ಎದ್ದು ಕಾಣಿಸುತ್ತದೆ. ಇಲ್ಲಿ ಯಾರಿಗೆ ಎಷ್ಟು ಅನುಭವ ಸಿಕ್ಕಿತೊ ಅದನ್ನೆ ಮನದಟ್ಟು ಮಾಡಿಕೊಂಡು ತಮ್ಮ ಅರಿವಿನಂತೆ ನೋಡಿ ಮುಂದೆ ಸಾಗುತ್ತಾರೆ. ಬೃಹತ್ ಜೀವಿಗಳು ನರ್ಮದಾ ನದಿ ತೀರದಲ್ಲಿ ವಾಸಿಸಿದ್ದವು ಎನ್ನುವುದನ್ನು ಮೆಲುಕು ಹಾಕಲು ಇದು ಒಂದು ಅವಕಾಶವಷ್ಟೆ.
ಪ್ರಕೃತಿಯ ಅಗಾಧತೆಯ ಮುಂದೆ ಬೇರೆಲ್ಲವು ತೃಣವೇ ದಟ್ಟವಾದ ಕಾಡು, ಕಣಿವೆ ಪ್ರದೇಶ ನೋಡಿದಷ್ಟು ದೂರ ಹಸಿರು ಚಲುವು ಮೈದುಂಬಿಕೊಂಡು ಕಣ್ಮನ ಸೆಳೆಯುವ ವಿವಿಧ ಪ್ರಕಾರದ ಪ್ರಾಣಿಲೋಕ ಪಕ್ಷಿಗಳ ಕಲರವದೊಂದಿಗೆ ಡೈನೋಸಾರ್ ಪ್ರತಿಕೃತಿಗಳನ್ನು ನೋಡಬಹುದು.
ಹಸಿರು ಕಾಡಿನ ನಡುವೆ ಸಾಕಷ್ಟು ಹೊತ್ತು ಅಲ್ಲಿ ಕಳೆದು ಫೋಟೊ ತೆಗೆದು ಸಂಭ್ರಮಿಸುವವರ ಸಂಖ್ಯೆ ವಿಪರೀತವಿದೆ. ದೈತ್ಯರೂಪ ಜೀವಿಗಳ ಕಣ್ಣಾರೆ ಕಾಣದಿದ್ದರು ಅವುಗಳ ಪಳೆಯುಳಿಕೆ, ಮೊಟ್ಟೆ ,ಪ್ರತಿಕೃತಿ ನೋಡಿ ಅಲ್ಲಿಂದ ಹೊರಟೆವು .ಸಾದ್ಯವಾದರೆ ಗುಜರಾತ್ ಗೆ ಹೋದವರು ಇಲ್ಲೆಲ್ಲಾ ಹೋಗಿ ಬನ್ನಿ.
ಹೋಗುವ ಮಾರ್ಗ= ಇಂಡ್ರೋಡಾ ಡೈನೋಸಾರ್ ಪಾರ್ಕ್ ಗೆ ಗುಜರಾತ್ ಅಹಮದಾ ಬಾದ್ ಸರ್ದಾರ್ ವಲ್ಲಭ ಬಾಯ್ ಪಟೆಲ್ ವಿಮಾನ ನಿಲ್ದಾಣದಿಂದ ಕೇವಲ ಅರ್ದ ಗಂಟೆಗಳ ದಾರಿ. ಡೈನೋಸಾರ್ ಪ್ರತಿಕೃತಿಗಳನ್ನು ನಿಲ್ಲಿಸಿದ ಕಾಡಿಗೆ ಹೋಗಲು ಸರ್ದಾರ್ ವಲ್ಲಭಭಾಯಿ ಪಟೇಲ್ ಏಕತ ಮೂರ್ತಿ ಯಿಂದ 1 ಕಿಮಿ ದೂರದ ಅಂತರದಲ್ಲಿದೆ.