Monday, May 16, 2022
HomeFilm News"ಏರೆಗಾವುಯೆ ಕಿರಿಕಿರಿ "- ಡಿಸೆಂಬರ್ 24ಕ್ಕೆ

“ಏರೆಗಾವುಯೆ ಕಿರಿಕಿರಿ “- ಡಿಸೆಂಬರ್ 24ಕ್ಕೆ

ಕರಾವಳಿ ಹಾಗೂ ತುಳುನಾಡ ಬಹುನಿರೀಕ್ಷಿತ ಚಲನಚಿತ್ರ “ಏರೆಗಾವುಯೆ ಕಿರಿಕಿರಿ” ಡಿ.24ರಂದು ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆಯಾಗಲಿದೆ. ಕನ್ನಡ ಕರಾವಳಿಯ ಭಾಗಗಳಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರ ಫುಲ್ ಆಫ್ ಕಾಮಿಡಿ ವಿಥ್ ಆಕ್ಷನ್ ಪ್ಯಾಕೇಜ್ ಆಗಿದೆ. ಬಾಲಿವುಡ್‌ನ ಹಸರಾಂತ ಸ್ಟಂಟ್ ಮಾಸ್ಟರ್ ರಾಮ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ನವೀನ್ ಡಿ. ಪಡೀಲ್, ಅರವಿಂದ ಬೋಳಾರ್ ಐಶ್ವರ್ಯ ಹೆಗ್ಡೆ, ಶ್ರದ್ದಾ ಸಾಲಿಯಾನ್, ಉಮೇಶ್ ಮಿಜಾರ್ ,ಸಂದೀಪ ಶೆಟ್ಟಿ ಮಾಣಿಬೆಟ್ಟು, ಸುಂದರ ರೈ ಮಂದಾರ, ಸರೋಜಿನಿ ಕಟ್ಟಿ ಮುಂತಾದ ಹೆಸರಾಂತ ಕಲಾವಿದರು ಅಭಿನಯಿಸಿರುವುದು ವಿಶೇಷ….

ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ಬಾಲಿವುಡ್ ನ ಹ್ಯಾಂಡ್ ಸಮ್ ಆ್ಯಂಡ್ ಫಿಟ್ ಮಾಡೆಲ್ ಕಂ ಸೀರಿಯಲ್ ನಟ ಮಹಮ್ಮದ್ ನಯೀಮ್ ಕಾಣಿಸಿಕೊಂಡಿದ್ದಾರೆ. ಕಳೆದ 8 ವರ್ಷಗಳಿಂದ ಮಾಡಲಿಂಗ್ ಸಿರಿಯಲ್ ಗಳಲ್ಲಿ ತನ್ನ ಛಾಪು ಮೂಡಿಸಿರುವ ಇವರು ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್ ಹಾಗೂ ಉಡುಪಿಯ ಪಿ.ಪಿ.ಸಿ ಕಾಲೇಜಿನ ಹಳೆ ವಿದ್ಯಾರ್ಥಿ.

ಮೂಲತ: ಉಡುಪಿ ಜಿಲ್ಲೆಯ ಉದ್ಯಾವರದಾಗಿರುವ ಇವರು ಹೆಸರಾಂತ ಧಾರವಾಹಿಗಳಾದ ಕುಂಕುಮ ಭಾಗ್ಯ, VOH APNA SA, ಸಿದ್ಧಿವಿನಾಯಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ನಟನೆಯ ಜೊತೆಗೆ ಡ್ಯಾನ್ಸ್‌ನಲ್ಲೂ ಎತ್ತಿದ ಕೈ. DID (DANCE INDIA DANCE), FREEDUM BLAST Joda donos 130ಕ್ಕೂ ಅಧಿಕ ಶೋಗಳಲ್ಲಿ ಮಿಂಚಿರುವ ಇವರು ಸದ್ಯ ಮಾಯಾನಗರಿ ಮುಂಬೈಯ ಬಹುಬೇಡಿಕೆಯ ಮಾಡೆಲ್. ಇದೀಗ ತುಳುನಾಡ ಬಹುನಿರೀಕ್ಷಿಕ ಚಿತ್ರ ‘ಏರಗಾವುಯ ಕಿರಿಕಿರಿ’ ಚಿತ್ರದ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟಿರುವ ಇವರು ತುಳುನಾಡ ಜನರ ಮನಸ್ಸು ಗೆಲ್ಲುವುದರಲ್ಲಿ ಸಂಶಯವಿಲ್ಲ.

ಚಿತ್ರದ ನಿರ್ದೇಶಕರು ಬಾಲಿವುಡ್, ಟಾಲಿವುಡ್, ಕೋಸ್ಟಲ್‌ವುಡ್‌ನಲ್ಲಿ 100ಕ್ಕೂ ಅಧಿಕ ಚಿತ್ರಗಳಲ್ಲಿ ತನ್ನ ಕೈ ಚಳಕ ತೋರಿಸಿರುವ ಬಾಲಿವುಡ್‌ನ ರಾಮಣ್ಣ ಎಂದೇ ಖ್ಯಾತಿ ಪಡೆದಿರುವ ರಾಮ್ ಶೆಟ್ಟಿ ಕೂಡ ಹೀರೋ ಬಗ್ಗೆ ವಿಶ್ವಾಸ ಹೊಂದಿ ಬೆನ್ನು ತಟ್ಟಿರುವುದು ಈ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ರಾಮ್ ಶೆಟ್ಟಿ ಪ್ರೋತ್ಸಾಹ ಅವರ ಆಶೀರ್ವಾದ ಚಿತ್ರಕ್ಕೆ ಮತ್ತು ಚಿತ್ರದ ಹೀರೋ ಮಹಮ್ಮದ್ ನಯೀಮ್’ ಅವರಿಗೆ ಯಶಸ್ಸು ತಂದು ಕೊಡಲಿ ಎಂಬುವುದೇ ಏರೆಗಾವುಯೆ ಕಿರಿಕಿರಿ ಚಿತ್ರ ತಂಡದ ಆಶಯ.

“ಏರೆಗಾವುಯೆ ಕಿರಿಕಿರಿ” ಸಿನಿಮಾ ಡಿಸೆಂಬರ್ 24 ರಂದು ಶುಕ್ರವಾರ ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ. ಮಂಗಳೂರಿನಲ್ಲಿ ರಮಾಕಾಂತಿ, ಬಿಗ್ ಸಿನಿಮಾಸ್, ಪಿ.ವಿ.ಆರ್, ಸಿನಿ ಪೊಲೀಸ್, ಉಡುಪಿಯಲ್ಲಿ ಕಲ್ಪನಾ, ಕಾರ್ಕಳದಲ್ಲಿ ರಾಧಿಕಾ, ಮಣಿಪಾಲದಲ್ಲಿ ಭಾರತ್ ಮಾಲ್, ಪುತ್ತೂರಿನಲ್ಲಿ ಅರುಣ, ಕಾಸರಗೋಡಿನಲ್ಲಿ ಕೃಷ್ಣ, ಸುಳ್ಯದಲ್ಲಿ … ಶುಂಠಿಕೊಪ್ಪದಲ್ಲಿ… ಬೆಳ್ತಂಗಡಿಯಲ್ಲಿ ಭಾರತ್ ಸಿನಿಮಾ ಮಂದಿರದಲ್ಲಿ ಸಿನಿಮಾ ಬಿಡುಗಡೆಗೊಳ್ಳಲಿದೆ…
ನೋಡಿ…ಹರಸಿ…

ರಿ: ಹೆಗ್ಗದ್ದೆ ಸಮಾಚಾರ್.ಕಾಮ್ ಬೆಂಗಳೂರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments