Thursday, September 29, 2022
HomeKannada Articleಧಾರವಾಡ ಫೇಡಾ : Heggaddesamachar

ಧಾರವಾಡ ಫೇಡಾ : Heggaddesamachar

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ

     ಸಪ್ತಕೆರೆ, ಸಪ್ತಗಿರಿ ಇರುವ ಊರು ಧಾರವಾಡ. ಧಾರವಾಡ ಅಂದರೆ “ಸುಧೀರ್ಘ ಪ್ರವಾಸದಲ್ಲಿ ಸಿಗುವ ಸಣ್ಣ ವಿಶ್ರಾಮ ಅಥವಾ ಸಣ್ಣ ವಿಶ್ರಾಂತಿ ಧಾಮ” ಅಂತ ಅರ್ಥವಂತೆ. ಧಾರವಾಡ ಎಂಬ ಶಬ್ದ ಸಂಸ್ಕೃತ ದ ದ್ವಾರವಾಡ ದಿಂದ ಬಂದಿದ್ದು ಎನ್ನಲಾಗುತ್ತದೆ. ಧಾರವಾಡ ಜಿಲ್ಲೆ ವಿಜಯ ನಗರ ರಾಮ್ರಾಜನ್ ಕಾಲದ ಧಾರರಾಮ್ ಎಂಬವರು ಕೋಟೆ ಕಟ್ಟಿಸಿದ್ದ ‌ನಿಮ್ಮಿತ್ತ‌ ಈ ಊರಿಗೆ ಧಾರವಾಡ ಎಂಬ ಹೆಸರು ‌ಬಂದಿದೆ ಎಂದು  ಇತಿಹಾಸದ ‌ಪುಟಗಳಲ್ಲಿದೆ. ಧಾರವಾಡ ಊರಿನ ಹೆಸರಿನೊಂದಿಗೆ ‌ಮಿಳಿತಗೊಂಡು ವಿಶ್ವ ಪ್ರಸಿದ್ಧಿ ಪಡೆದಿರುವ ಅನೇಕ ಖಾದ್ಯಗಳಲ್ಲಿ ಧಾರವಾಡ ಫೇಡವು ಒಂದು.

    ಕರ್ನಾಟಕದ ವಿಶಿಷ್ಟ ತಿನಿಸು ಎಂದೇ ಕರೆಯಲ್ಪಡುವ ಧಾರವಾಡ ಫೇಡಾ ಭೌಗೋಳಿಕ ಸೂಚ್ಯಂಕದ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು ಇದರ ಜಿ. ಐ ಟ್ಯಾಗ್ ಸಂಖ್ಯೆ 85. ಫೇಡಾ ಉತ್ಪಾದಕರು ಫೇಡಾವನ್ನು ಬರಿ ಸಿಹಿ ತಿನಿಸು ಎನ್ನುವುದಕ್ಕೆ ಸೀಮಿತಗೋಳಿಸದೇ ಅದನ್ನು ವಾಣಿಜ್ಯಕರಣ ಮಾಡಿ ಇದೀಗ ವಿದೇಶಗಳಿಗೂ ಹೋಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾಗಿ ಧಾರವಾಡ ಫೇಡಾದ ವಹಿವಾಟು ಸ್ಥಳೀಯ ‌ಮಾರುಕಟ್ಟೆಯನ್ನು ಮೀರಿ ಸಾವಿರ, ಲಕ್ಷದ ಗಡಿದಾಟಿ ಕೋಟಿ ಕೋಟಿ  ವಹಿವಾಟು ನಡೆಸುತ್ತಿದೆ. ಠಾಕುರ್ ಹಾಗೂ ಮಿಶ್ರಾ ಫೇಡಾಗಳೆಂದೂ  ಹೆಸರುವಾಸಿ ಜಿ.ಐ ಟ್ಯಾಗ್ ಪಡೆದಿರುವ ಸಿಹಿತಿನಿಸು ಇದು
         


     ಧಾರವಾಡ ಜ್ಞಾನ ನಗರದಲ್ಲಿ ಪಂಡಿತ್ ಅವಧ್‌ ಬಿಹಾರಿ‌ ಮಿಶ್ರಾ 1933ರಲ್ಲಿ ಸಣ್ಣ ಅಂಗಡಿಯನ್ನು ಪ್ರಾರಂಭಿಸಿದರಂತೆ ಅಲ್ಲಿ ಅವರು ತಯಾರಿಸಿದ ಫೇಡಾ ಹಲವು ವರ್ಷಗಳ ನಂತರ ಧಾರವಾಡ ಫೇಡಾ ಎಂದು ಪ್ರಸಿದ್ಧವಾಯಿತು ಧಾರವಾಡ ಫೇಡಾ ಮೂಲತಃ ಉತ್ತರ ಪ್ರದೇಶದ ಉತ್ಪನ್ನದಿಂದ ವಲಸೆ ಬಂದುರುವ ಠಾಕೂರ್ ಕುಟುಂಬದವರಿಂದ ಪ್ರಾರಂಭವಾಯಿತು. ಇವರ ಮೊದಲ ತಲೆ ಮಾರಿನ ವಂಶದವರಾದ ರಾಮ್ ರತನ್ ಸಿಂಗ್ ಫೇಡಾವನ್ನು ಸ್ಥಳೀಯವಾಗಿ ಮಾರಾಟ‌ಮಾಡಲು ಪ್ರಾರಂಭಿಸಿದರು. ಮಿಶ್ರಾ ಫೇಡಾ ಅಂಗಡಿಯ ಮಾಲಿಕರ ಮಾತಿನಂತೆ ನಮ್ಮ ತಾತನ ಬಾಲ್ಯದಿಂದಲೂ ಇದೆ ರುಚಿಯ ಫೇಡಾ ಮಾಡುತ್ತಿದ್ದೇವೆ. ಈಗಲೂ ಹಾಗೆ  ಮಾಡುತ್ತಾ‌ ಇದ್ದೀವಿ‌.

  ಧಾರವಾಡ ‌ಫೇಡಾ ಪ್ರಾದೇಶಿಕ ವೈಶಿಷ್ಟ್ಯತೆಗಳನ್ನು ಒಳಗೊಂಡಿರುವ ಉತ್ಪನ್ನಗಳ ಸಾಲಿನಲ್ಲಿದ್ದು ಜಿಯೋಗ್ರಾಫಿಕಲ್ ಇಂಡಿಕೇಶನ್ಸ್ ಅಥವಾ ಭೌತಿಕ ಸೂಚ್ಯಂಕದ ಅಡಿಯಲ್ಲಿ ನೊಂದಣಿ‌ಮಾಡಲಾಗಿದೆ. ಹಾಲಿನಿಂದ ತಯಾರಿಸುವ ಇತರ ಉತ್ಪನ್ನಗಳಿಗೆ ಹೋಲಿಸಿದರೆ ಧಾರವಾಡ ಫೇಡಾ ಹೆಚ್ಚುಕಾಲ ಬಾಳಿಕೆಬರುತ್ತದೆ. ಅತ್ಯಂತ ವಿಶಿಷ್ಟ ವಿಧಾನದಲ್ಲಿ  ತಯಾರಿಸುವ  ಯಾವುದೇ ಇತರ  ರುಚಿ ಹಾಗೂ ಫ್ಲೆವರ್ ಗಳನ್ನು  ಬಳಸದಿರುವ ಸ್ವಾದಿಷ್ಟ ಫೇಡಾ ಇದು.

     ಧಾರವಾಡ ಹುಬ್ಬಳ್ಳಿ ಗೌಳಿ ಕುಟುಂಬಗಳು ಸಾಕುವ  ದೇಶಿ ಹಸುವಿನ ಹಾಲಿನಿಂದ ಅಂದರೆ ಪ್ರಕೃತಿದತ್ತ ಆಹಾರವಾದ  ಹುಲ್ಲು  ಜವಾರಿ  ತಿಂದು ‌ಹಸುಗಳು ಎಮ್ಮೆಗಳು ಗುಣಮಟ್ಟದ ದೇಶಿ‌ಹಾಲು ಕೊಡುತ್ತವೆ. ಅದರಿಂದ  ತಯಾರಿಸಿದ ಫೇಡಾ‌ರುಚಿ‌  ಹಾಗೂ ಪರಿಮಳವು ಹೆಚ್ಚು‌ ನನ್ನಂತವರಿಗೆ ಒಂದು ಫೇಡಾ ತುಂಡು ಬಾಯಿಗೆ  ಹಾಕಿ ಕೊಂಡರೆ  ಮತ್ತೊಂದು ತುಂಡು ಬೇಕೆನಿಸುತ್ತದೆ. ಇನ್ನೊಂದು ವಿಶೇಷವೆಂದರೆ ಹುಬ್ಬಳ್ಳಿ ಧಾರವಾಡದಲ್ಲಿ ಹಾಲಿನ ಅಂಗಡಿ, ಬಸ್ಸ್ ನಿಲ್ದಾಣ, ರೈಲು ನಿಲ್ದಾಣ, ಹೈಟೆಕ್ ‌ಮಳಿಗೆಗಳು, ಖಾಸಗಿ ಹೋಟೆಲ್, ಮಾಹಲ್ ಗಳು, ಸಣ್ಣ ಕಿರಣಿ ಅಂಗಡಿಗಳಲ್ಲಿ ಉತ್ತಮ ಗುಣಮಟ್ಟದ ಫೇಡಾ‌ಲಭ್ಯ. ಅಷ್ಟೇ ಅಲ್ಲದೇ ಫೇಡಾ ಅಂಗಡಿಗಳು ಫೇಡಾ ವ್ಯಾಪಾರಕ್ಕಾಗಿಯೆ  ತೆರೆದಿರುತ್ತದೆ. 

   ಧಾರವಾಡ ಪೇಡ ಅಧಿಕೃತವಾಗಿ ಮುಂಬೈ, ದೆಹಲಿ ಚೈನ್ಯ, ಬೆಂಗಳೂರು ಅಷ್ಟೇ ಅಲ್ಲ ‌ಕಾಶ್ಮೀರದ  ಣಿವೆಗಳನ್ನು ದಾಟಿದಲ್ಲದೆ ದೇಶ ವಿದೇಶಗಳಿಗೂ ಸಾಗಿದ ಉದಾಹರಣೆ ಇದೆ. ಠಾಕೂರ್ ಸಿಂಗ್ ಫೇಡಾಕ್ಕೆ  ಹೆಚ್ಚಿನ ‌ಬೇಡಿಕೆ ಇದ್ದು. ಅಮೆರಿಕಾ, ಇಂಗ್ಲಿಷ್‌ ಪ್ರಾನ್ಸ್ ಹಾಗೂ ಆಸ್ಟ್ರೇಲಿಯಾಗಳಲ್ಲಿ ನಿಯಮಿತವಾಗಿ ಧಾರವಾಡ ಫೇಡಾಕ್ಕೆ ಒಳ್ಳೆಯ ಮಾರುಕಟ್ಟೆ ಇದೆ. ಸದ್ಯಕ್ಕೆ ಧಾರವಾಡ ಫೇಡಾಕ್ಕೆ  600 ರಿಂದ ‌700 ರೂಪಾಯಿ ಬೆಲೆ ಇದೆ.

    ಔಗೋಳಿಕ ಸೂಚ್ಯಂಕ ಎಂಬುದು ಒಂದು ವಸ್ತುವಿನ ಅಥವಾ ಸಾಮಗ್ರಿಯ ಮೂಲವನ್ನು ನಿರ್ದಿಷ್ಟ ವಾಗಿ ಒಂದು ಭೂಪ್ರದೇಶಕ್ಕೆ (ಊರು, ದೇಶ) ಗುರುತಿಸಲ್ಪಡುವ ವಿಧಾನ. ಈ ವಸ್ತುವಿನ  ವಿಶೇಷ ಹಕ್ಕನ್ನು ‌ನಿಗದಿಗೊಳಿಸುವ ಒಂದು ಮಾರ್ಗ ‌ವಿಶ್ವವಾಣಿಜ್ಯ ಸಂಘಟನೆ ಸದಸ್ಯ  ರಾಷ್ಟ್ರವಾಗಿರುವ  ಭಾರತವು 1999ರಲ್ಲಿ ಸರಕುಗಳ ಬೌಗೋಳಿಕ ಸೂಚ್ಯಂಕ  ಕಾಯ್ದೆಯನ್ನು ಜಾರಿಗೊಳಿಸಿತು.ಧಾರವಾಡ ಪೇಡದಾ  ರುಚಿ, ಪರಿಮಳ, ಹಾಗೂ  ಖಾದ್ಯ ರುಚಿಕರ ತಿನಿಸುಗಳ ಹಿಂದಿನ ಸ್ವಾರಸ್ಯ ಈ ಎಲ್ಲಾ ಹಿನ್ನಲೆಯಲ್ಲಿ ಫೇಡಾವನ್ನು ಬೌಗೋಳಿಕ ಸೂಚ್ಯಂಕದ ಮೂಲಕ ಗುರುತಿಸಿ  ವಸ್ತುವಿನ  ವಿಶೇಷತೆಯ ಬಗ್ಗೆ ಅಂತರಾಷ್ಟ್ರೀಯ ‌ಮಾರುಕಟ್ಟೆಗಳಲ್ಲಿ ಆ ವಸ್ತುವಿನ ವಿಶೇಷ ಹಕ್ಕನ್ನು ನಿಗದಿಗೊಳಿಸುವ ಒಂದು ಮಾರ್ಗ. ತಾನು ಗುರುತಿಸಿ ಕೊಂಡಿರುವ ಭೌಗೋಳಿಕ ಪ್ರದೇಶದೊಂದಿಗೆ ಐತಿಹಾಸಿಕವಾಗಿ  ಬೆರೆತಿರಬೇಕು. ಈ ಎಲ್ಲಾ  ಅರ್ಹತೆಯನ್ನು  ಧಾರವಾಡ ಪೇಡಾ ಹೊಂದಿದ  ಕಾರಣ ಅದಕ್ಕೆ  ಜಿಐ ಮಾನ್ಯತೆ ದೊರೆತಿದೆ.

     ತಾಜ ಹಾಗೂ ತನ್ನ ಸ್ವಾದಿಷ್ಟ ಕಾಯ್ದುಕೊಳ್ಳುವ  ಸಿಹಿ ತಿನಿಸು. ಹಾಲು ‌ಉತ್ಪಾದನೆ  ಅದರಿಂದ  ಸಿಹಿ  ಸೇರ್ಪಡೆ, ಪ್ಯಾಕೇಜಿಂಗ್ ಸಾಗಾಟ ‌ಮತ್ತು ಮಾರಾಟ ‌ಪ್ರತಿ‌ಹಂತದಲ್ಲೂ  ಪೇಡಾ ವ್ಯಾಪಾರಿಗಳು  ಇದರ  ಬಗ್ಗೆ ನಿಗಾ ಇಟ್ಟಿರಿರುತ್ತಾರೆ.  ಒಂದು ಸಮೀಕ್ಷೆಯಂತೆ  ಧಾರವಾಡ ‌ನಗರದಿಂದ  ಪ್ರತಿದಿನ  5 ಸಾವಿರ ‌ಕೆ.ಜಿ ಯಷ್ಟು  ಪೇಡಾ ಉತ್ಪಾದನೆಯಾಗಿ ಹೊರ ರಾಜ್ಯಕ್ಕೆ  ಹೋಗುತ್ತದೆ. ಹಬ್ಬ ಹರಿದಿನಗಳು ವಿಶೇಷ ದಿನಗಳಲ್ಲಿ  8 ಸಾವಿರ ಕೆ.ಜಿ ಪೇಡಾ ಉತ್ಪಾದನೆಯಾಗುತ್ತದೆ. ಒಟ್ಟಿನಲ್ಲಿ ಸ್ಥಳೀಯವಾಗಿ  ತಯಾರಾಗಿ ಅದರ  ಪರಿಚಯ ಅದೇ ನೆಲದಲ್ಲಿ ಮುಗಿಯದೇ  ದೇಶ – ವಿದೇಶಗಳಲ್ಲಿಯ  ತನ್ನ ರುಚಿಯ ಸ್ವಾದ  ಹೆಚ್ಚಿಸಿದ ಧಾರವಾಡ ಫೇಡಾ ಒಮ್ಮೆ ತಿಂದು ‌ನೋಡಿ.
     ಧಾರವಾಡ ಫೇಡಾ ಹಲವು ವಿಧಾನಗಳಲ್ಲಿ ತಯಾರಿಸುತ್ತಾರೆ.ಹಾಲಿನ ಪುಡಿ,ಸಕ್ಕರೆ, ತುಪ್ಪ ದೊಂದಿಗೆ ‌ಮತ್ತೆ ಕೆಲವರು ಹಾಲಿನಿಂದ ‌ಪನ್ನಿರು ತೆಗೆದು ‌ಪನ್ನಿರಿಗೆ ತುಪ್ಪಾ,ಸಕ್ಕರೆ, ಹಾಲು ‌ಬೆರಸಿ‌ ತಯಾರಿಸುವ ಕ್ರಮವು‌‌ ಇದೆ. ತಯಾರಿಕೆಯ ಎಲ್ಲಾ ‌ವಿಧಾನಗಳಲ್ಲೂ ಜಾಗುರಕತೆ ಅತಿ ಮುಖ್ಯ. ಕಡಿವೆ ಶಾಖದಲ್ಲಿ ಹಾಲಿನ ಹುಡಿ ಅಥವಾ ಪನ್ನಿರನ್ನು  ಹುರಿಯ  ಬೇಕಾಗುತ್ತದೆ. ಸಕ್ಕರೆ ಹಾಲನ್ನು  ಹಂತ ಹಂತವಾಗಿ  ಬೆರೆಸಬೇಕು . ಒಮ್ಮೆಗೆ  ಮಿಶ್ರಣಕ್ಕೆ ಸೇರಿಸಬಾರದು.


ಧಾರವಾಡ ಎಮ್ಮೆ= ಧಾರವಾಡ ಎಮ್ಮೆಗೆ ರಾಷ್ಟ್ರಮಟ್ಟದಲ್ಲಿ  ದೇಶಿತಳಿಯ ಸ್ಥಾನ ದೊರೆತಿದೆ. ಧಾರವಾಡ ಫೇಡಾ ರುಚಿಗೆ ಎಮ್ಮೆ ಹಾಲು ಕಾರಣ. ದೇಶದ 18ನೇ ಎಮ್ಮೆ ತಳಿಯಾಗಿ ಧಾರವಾಡ ಎಮ್ಮೆ ಘೋಷಣೆಯಾಗಿದ್ದು ಅವು ನೀಡುವ ಹಾಲಿನ ಪ್ರಮಾಣ ಮತ್ತು ಗುಣಮಟ್ಟ ಸಾಕಷ್ಟು ಹೆಸರುವಾಸಿ. ಧಾರವಾಡ ವಿಶ್ವ ವಿದ್ಯಾಲಯದಲ್ಲಿ  2014ರಿಂದ  ಧಾರವಾಡ ಎಮ್ಮೆ ‌ಬಗ್ಗೆ ಅಧ್ಯಯನ ನಡೆಸುತ್ತಿದೆ.‌ ಇಲ್ಲಿನ ಎಮ್ಮೆ ಗಳನ್ನು  ಜವಾರಿ ಎಮ್ಮೆ ಎಂದೂ ‌ಕರೆಯುತ್ತಾರೆ. ಒಟ್ಟಿನಲ್ಲಿ ಪೇಡಾದ ರುಚಿಯಲ್ಲಿ  ಎಮ್ಮೆಯ  ಹಾಲಿನ ಯೋಗಧಾನವು  ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments