ಇಂತಹದನ್ನೆಲ್ಲಾ ಕೇಳಿದರೇ ನೋವಾಗುತ್ತೆ,😢 ಊರು ಉದ್ಧಾರವಾಗಲಿ ಎಂದು ಸದಾ ಬಯಸುವ ನಮ್ಮಂಥ ಎಳೆ ಮನಸ್ಸುಗಳಿಗೆ ಇಂತಹ ಕುರುಡು, ಕುಡುಕ, ನಪುಂಸಕ, ಕಾಕರ ನೃತ್ಯವೇ ಜಾಸ್ತಿ ಆದಾಗ ಮನದೊಳಗಿನ ಆಶಾಭಾವ ಕರಗುತ್ತದೆ..!
ಇಷ್ಟಕ್ಕೂ ಊರಿಗೊಂದು ಪಂಚಾಯತ್, ಏರಿಯಾಗೊಂದು MLA, ಕೇರಿಗೊಂದು ಠಾಣೆ ಇವೆಲ್ಲಾ ಬೇಕಾ ಎನಿಸುತ್ತದೆ..! ☹️ ನಮ್ಮೂರಿಗೆ ಉಪಕರಿಸೋದು ಒಂದು ದೇವಸ್ಥಾನವಾದ್ರೆ ಮತ್ತೊಂದು ಊರಿಗಿರುವ ಮೂಲಭೂತ ಸೌಕರ್ಯಗಳು ಎನ್ನಬಹುದು ಅವುಗಳಿಗೆ ರಕ್ಷಣೆ ಇಲ್ಲಾ ಅಂತಾದ್ರೆ ಊರು ಉದ್ಧಾರ ಆಗುತ್ತಾ!?
ಯಾಕೆ ಇಷ್ಟುದ್ದದ ಸಿದ್ಧಾಂತಗಳನ್ನ ಈತ ಬರಿತಿದ್ದಾನೆ ಅಂದುಕೋಬೇಡಿ ಕಾರಣ ಇವತ್ತು ಮುಂಜಾನೆಯ ಸುದ್ಧಿ ಕೇಳಿ ಮನಸಿಗೆ ತೀರಾ ಅಸಾಮಾಧಾನ ಎನಿಸಿತು😥, ಜನ ಯಾಕೆ ಇನ್ನೂ ಹೀಗೆ ಇದ್ದಾರೆ ಎನ್ನುವ ಕ್ರೋಧ ಎದುರಾಯಿತು… 😡
ಹಾಗಾದ್ರೆ ಆಗಿದ್ದೇನು ಕೇಳ್ತೀರಾ!?..
ಕೊಲ್ಲೂರು ಠಾಣಾ ವ್ಯಾಪ್ತಿಯ ಹೊಸೂರು ‘ಶ್ರೀ ಮಹಿಷಾಮರ್ಧಿನಿ ದೇವಸ್ಥಾನ’ದ ಹುಂಡಿಯನ್ನ ಒಡೆದು ಅದರೊಳಗಿರುವ ಹಣವನ್ನ ದೋಚಿ ಕಿಡಿಗೇಡಿಗಳು ಪರಾರಿಯಾಗಿದ್ದಾರಂತೆ🤨… ದೋಚಿರೋದು ಸದ್ಯಕ್ಕೆ ದೇವರ ದುಡ್ಡಾದ್ರೂ ಅದು ಒಟ್ಟಾಗಿದ್ದು ಮಂದಿ ಹಣವಾಗಿ, ಅನೇಕರ ಹರಕೆ, ಧಾನದ ಫಲವಾಗಿ…
ದೇವಾಲಯದ ಮಂಡಳಿ ಈ ಬಗ್ಗೆ ಪೋಲೀಸ್‌ರಿಗೆ ದೂರು ನೀಡಿದೆ, ಸ್ಥಳ ಭೇಟಿಯಾಗಿದೆ ಎನ್ನುವುದನ್ನೂ ಕೇಳ್ಪಟ್ಟೆ!! ಆದರೆ ಸದ್ಯಕ್ಕಿರುವ ಪ್ರಶ್ನೆ ‘ಕಳ್ಳ ಸಿಕ್ತಾನಾ!?’…😵
ಸಾಮಾನ್ಯವಾಗಿ ಯಾಕಿಂತ ಪ್ರಶ್ನೆ ಏಳುತ್ತೆ ಅಂದ್ರೆ;, ಊರಲ್ಲಿರೋ ಬೆಲೆಬಾಳುವ ಗ್ರಾಮ ಉದ್ದಾರದ ಬೆಳಕಿಗಾಗಿ ಪಂಚಾಯತ್ ಹಾಕಿರುವ ‘ಸೋಲಾರ್ ಬೀದಿ ದೀಪ‘ಗಳನ್ನೇ ಕದ್ದು, ಅದರಲ್ಲಿರುವ ಬ್ಯಾಟರಿ ಬಿಡಿ!, ಕಂಬದ ಸಮೇತ ಎತ್ತಾಕ್ಕೊಂಡು ಹೋದಾಗಲೂ,- ವಿಷಯ ತಿಳಿದರೂ ಎಚ್ಚೆತ್ತುಕೊಳ್ಳದ ಇಲಾಖೆ, ಮತ್ತು ಘನ ಪಂಚಾಯತ್ ಮಂಡಳಿಯ ಮುಖಂಡರು.., ಇನ್ನೀ ದೇವರ ಡಬ್ಬಿಯ ದುಡ್ಡಿನ ವಿಚಾರಕ್ಕೆ ಬಂದು ತಮ್ಮವರನ್ನ ತಾವೇ ಪೊಲೀಸರಿಗೆ ಒಪ್ಪಿಸುತ್ತಾರಾ!? ನೀವೇ ಹೇಳಿ…☹️
ಬರೀ ಪೊಲೀಸ್ ಫೈಲ್ ನಲ್ಲಿ ದಾಖಲಾಗಿ ಮರೆಯಾಗುವ ಇಂತಹ ಸಣ್ಣಪುಟ್ಟ ಕೇಸ್ ಗಳನ್ನ ‘ದೇವರೇ ನೋಡ್ಕೊಳ್ತಾನೆ ಬಿಡಿ’ ಎನ್ನುವ ಘೋಷ ವಾಕ್ಯದೊಂದಿಗೆ ಸುಮ್ಮನಾಗಿ ಉದ್ದಾರದ ಉದ್ಗೋಷವನ್ನ ಈ ಹಿಂದೆ ನೋಡಿ ನೋಡಿ ಸಾಕಾಗಿದೆ. ಬೆಳಕು ನೀಡಲು ಹಾಕುವ ದಾರಿ ದೀಪವೇ ರಾತ್ರೋ ರಾತ್ರಿ ಕಣ್ಮರೆಯಾಗಿ ಕತ್ತಲೆಯಾಗುವ ಈ ಸಂದರ್ಭದಲ್ಲಿ ನಾವುಗಳು ದಿನಕ್ಕೊಂದು ಬಾರಿ ದೀಪ ಹಚ್ಚುವ ದೇವರ ಬೆಳಕಿಗಾಗಿ, ಊರ ಬೆಳಕಿಗಾಗಿ ಯೋಚಿಸುತ್ತೇವಾ!! ಅಸಾಧ್ಯ ಅನಿಸುತ್ತೆ…😓
ಇಂತಹ ಘಟನೆಗಳು ನಡೆದಾಗ ವ್ಯಾಪ್ತಿಗೆ ಬರುವ ಪಂಚಾಯತ್ ಮತ್ತು ಆ ಭಾಗದ ಮುಖಂಡರು ಖುದ್ಧಾಗಿ, ಪ್ರಕರಣ ಭೇಧಿಸುವವರೆಗೆ ಎಡೆಬಿಡದೆ ಹೋರಾಡಲಿ ಎನ್ನುವುದು ನನ್ನ ಆಶಯ… ಬೆಳಿಗ್ಗೆ ಸುದ್ಧಿಯಾಯ್ತು, ಮಧ್ಯಾಹ್ನ ಸರಿದೊಯ್ತು, ಸಂಜೆ ನಾಳೆ ನೋಡಿದರಾಯ್ತು..! ಎನ್ನುವ ಮನಸ್ಸಿದ್ದರೆ ಅಂತಹವರು ಮುಖಂಡರೇ ಆಗಿರಬೇಡಿ, ಅಧಿಕಾರಿಗಳೇ ಆಗಬೇಡಿ… ಕುಡಿತದ ಛಟ, ಸದಾ ಊರ ನೆಮ್ಮದಿ ಹಾಳುಗೆಡವುವ ಕಾಮಾಂಧತೆಯ ಮಧವೇರಿರುವ ಇಂತಹ ಕಿಡಿಗೇಡಿಗಳ ಶರಣಾಗತಿ ಬೇಗ ಆಗಲಿ, ಈ ನೊಂದ ಬರವಣಿಗೆಗೂ ಉತ್ತರ ಧಕ್ಕಲಿ… ಜೈ ಮಹಿಷಮರ್ಧಿನಿ…
– ಸಂದೀಪ್ ಶೆಟ್ಟಿ ಹೆಗ್ಗದ್ದೆ
ಸಂಪಾದಕರು, ಹೆಗ್ಗದ್ದೆ ಸಮಾಚಾರ್.ಕಾಮ್ ಬೆಂಗಳೂರು