Thursday, September 21, 2023
HomeNewsಮೆಕ್ಕೆ ಒಕ್ಕೂಟದಲ್ಲಿ ವನಮಹೋತ್ಸವ : Heggaddesamachar

ಮೆಕ್ಕೆ ಒಕ್ಕೂಟದಲ್ಲಿ ವನಮಹೋತ್ಸವ : Heggaddesamachar

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಬಿ ಸಿ ಟ್ರಸ್ಟ್ ಬೈಂದೂರು ತಾಲೂಕು ಕೊಲ್ಲೂರು ವಲಯದ ಮೆಕ್ಕೆ ಒಕ್ಕೂಟದಲ್ಲಿ ಇಂದು ಪರಿಸರ ಮಾಹಿತಿ ಕಾರ್ಯಕ್ರಮ ನಡೆಯಿತು. ಒಕ್ಕೂಟದ ಅಧ್ಯಕ್ಷರಾದ ಎಂ. ಜೆ. ಬೇಬಿಯವರು ಸಭೆ ಅಧ್ಯಕ್ಷತೆ ವಹಿಸಿದ್ದರು.

ತಾಲೂಕು ಸಮನ್ವಯ ಅಧಿಕಾರಿ ಗೀತಾ ಮೇಡಂ ಪರಿಸರ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ರಿಕವರಿ ಮೇಲ್ವಿಚಾರಕರಾದ ಸುರೇಶ್, ಕಾರ್ಯಕ್ಷೆತ್ರದ ಸೇವಾಪ್ರತಿನಿಧಿ ರಾಮ ಶೆಟ್ಟಿ ಅತ್ತಿಕಾರ್, ಒಕ್ಕೂಟದ ಉಪಾಧ್ಯಕ್ಷರಾದ ಸೂಲ್ಯ ಪೂಜಾರಿ ಉಪಸ್ಥಿತರಿದ್ದರು.

ಸೇವಾಪ್ರತಿನಿಧಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಧರ್ಮಶ್ರೀ ತಂಡದ ಜಲಜ ಅವರು ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments