Sunday, June 11, 2023
HomeKannada Articleವಿಶ್ವವಿಖ್ಯಾತ ಗೋಲಗುಮ್ಮಟ : Heggaddesamachar

ವಿಶ್ವವಿಖ್ಯಾತ ಗೋಲಗುಮ್ಮಟ : Heggaddesamachar

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ     

 ‌‌     ‌ಕಲ್ಯಾಣಿ ಚಾಲುಕ್ಯರಿಂದ ಸ್ಥಾಪಿತವಾದ  ಬಿಜ್ಜನ ಹಳ್ಳಿ ಎಂಬ ಹೆಸರ ಊರು ರಾಜ ಬಿಜ್ಜಳನ ನೆನಪಿಗಾಗಿ ಬಿಜಾಪುರ ಎಂಬ ಹೆಸರಿನಲ್ಲಿದ್ದ  ನಗರ ಈಗ ವಿಜಯಪುರ ಎಂದು ಕರೆಯಲಾಗುತ್ತದೆ. ದೆಹಲಿಯ ಖಿಲ್ಜಿ ಸುಲ್ತಾನರ ಪ್ರಭಾವಕ್ಕೆ ಒಳಗಾಗಿ ಬೀದರಿನ ಬಹುಮನಿ ಸುಲ್ತಾನರು, ಆದಿಲ್ ಶಾಹಿ ಸುಲ್ತಾನರು ನಿಜಾಮರ ಆಳ್ವಿಕೆಗೆ ಒಳಪಟ್ಟು ನಂತರ ಹತ್ತು ‌ಹಲವು ಕಾರಣಗಳಿಂದ‌ ಹರಿದು ಹಂಚಿ ಹೋಗಿ ರೂಪುಗೊಂಡ ರಾಜ್ಯಗಳಲ್ಲಿ  ಈ ಗುಮ್ಮಟ ನಗರಿ ವಿಜಯಪುರವು ಒಂದು. ವಿಜಾಪುರ ಎಂದರೆ ವಿಜಯದ ಪುರ ಎಂಬುದಾಗಿ ಇದು ಆದಿಲ್ ಷಾಹಿ ಆಡಳಿತ ರಾಜಧಾನಿಯಾಗಿತ್ತು.  ದಕ್ಷಿಣ ಭಾರತದ ‌ವಾಸ್ತು ಶಿಲ್ಪಕ್ಕೆ ‌ಹೆಸರಾದುದು‌ ವಿಜಯಪುರವನ್ನು  ದಕ್ಷಿಣ ಭಾರತದ ‌ತಜಾ ಮಹಲ್ ಎಂದು ‌ಕರೆಯಲಾಗುತ್ತದೆ.  ಮುಸ್ಲಿಂ ಅರಸರು ಹಲವು ಸ್ಮಾರಕಗಳನ್ನು  ನಿರ್ಮಿಸಿದ್ದು  ಆದಿಲ್ ಷಾನ ವಂಶಾಡಳಿತದಲ್ಲಿ ಬಿಜಾಪುರದಲ್ಲಿ‌  ವಿಶೇಷ ಸ್ಮಾರಕಗಳು ನಿರ್ಮಾಣಗೊಂಡಿದ್ದವು. ಹಲವು‌ ಮಸಿದಿ, ಸಮಾಧಿ, ಸೌಧಗಳು, ಅರಮನೆ ‌ಕೋಟೆಗಳು ಈ ಭಾಗದಲ್ಲಿದ್ದು ಅಷ್ಟೊಂದು ಅಭಿವೃದ್ಧಿ ಹೊಂದಿರದ  ಊರು ಇದ್ದಲ್ಲಿ ಜನ ಸಾಮಾನ್ಯರ  ಬದುಕುವ ಶೈಲಿಯು  ಇಲ್ಲಿನ ಬಡತನವನ್ನು ಸಿರಿತನವನ್ನು ಬಿಂಬಿಸುತ್ತದೆ. ಆದರೆ ಪ್ರವಾಸಿಗರಿಗೆ  ಅನುದಿನವು ಕೊರತೆ  ಇಲ್ಲದ ಊರು ಇದು.

  ‌       ಸುಂದರ ಉದ್ಯಾನವನದ ನಡುವೆ ತಲೆ ಎತ್ತಿನಿಂತಿರುವ ಗೋಲಗುಮ್ಮಟ. ರೊಮ್ ನಲ್ಲಿ ಸೈಂಟ್ ಪೀಟರ್ಸ ಬೆಸಿಕಾ‌  ನಂತರದ  ಎರಡನೇ ಬಹುದೊಡ್ಡ ದೈತಗೋರಿ. ವಿಶಿಷ್ಟ ಶೈಲಿಯಲ್ಲಿ‌ ನಿರ್ಮಿಸಿದ ಐತಿಹಾಸಿಕ‌ ಸ್ಮಾರಕ. ಇದನ್ನೊಮ್ಮೆ ನೋಡುವ ಕುತೂಹಲವಿತ್ತು. ಮುಸ್ಲಿಂ ವಾಸ್ತು ಶೈಲಿಯಲ್ಲಿರುವ  ಗುಮ್ಮಟ ಗುಂಬಜ ಅಥವಾ ಗೋಲಗುಮ್ಮಟ ಅರ್ಧ ಗೋಲಾಕಾರದ  ಬೃಹತ್ ರಚನೆಯಾಗಿದ್ದು  ಇದರ ಅಡಿಪಾಯವು ಕಲ್ಲು ಹಾಸಿನ‌ ಮೇಲಿದ್ದು ಯಾವುದೇ ಕಂಬ ಅಥವಾ ಪಿಲ್ಲರ್ ಆಧಾರವಿಲ್ಲದೆ. ವಿಶಾಲ ಸ್ಥಳ ಹೊಂದಿದ್ದು ಕೆಳ ಅಂತಸ್ತು ಹಾಗೂ ಮೇಲಿನ ಭಾಗದಲ್ಲೂ  ವಿಶಾಲ ಸ್ಥಳ ಹೊಂದಿದೆ. ಚೌಕಾಕಾರದ  ಸ್ಮಾರಕದ ನಾಲ್ಕು ಮೂಲೆಗಳಲ್ಲಿ ಅಷ್ಟ ಭುಜಾಕೃತಿಯ ಎತ್ತರವಾದ ಮೀನಾರ. ಇದು ವಿಶ್ವದ 2 ನೇ ಅತೀ ದೊಡ್ಡ ಮಾನವ  ನಿರ್ಮಿತ ಗುಂಬಜ್. ಗೋಲ್  ಗುಂಬಜ್ ಮಹಮ್ಮದ್ ‌ಆದಿಲ್ ಷಾನ‌  ಗೋರಿಯಾಗಿ ಕಟ್ಟಲಾದ‌ ಸ್ಮಾರಕ ಇದನ್ನು ಯಾಕೂತ್  ಮತ್ತು ದಬೂಲ್  ಇದರ‌ ವಿನ್ಯಾಸ‌ಕಾರರು. 18000 ಚದರ ಅಡಿಗಳ ವಿಸ್ತೀಣದಲ್ಲಿ 156 ಅಡಿ ಎತ್ತರ‌  ಇರುವ ಕಟ್ಟಡ  ಕಿರೀಟ ಪ್ರಾಯ ಗುಮ್ಮಟದ ವಿಸ್ತೀರ್ಣ ಸುಮಾರು 144 ಅಡಿಯ  ಪರಿಧಿ  ಇದರ ಉದ್ದ ಅಗಲ‌ 50  ಮಿ. ಹೊರಗಡೆ ಎತ್ತರ 198 ಅಡಿ ಮತ್ತು ಒಳಗಡೆ ಎತ್ತರ 175 ಅಡಿ ಇದ್ದು‌ ಮೇಲಿನ  ಗೋಲಾಕಾರದ ಗುಂಬಜ್ 39 ಮಿ  ವ್ಯಾಸ ಹೊಂದಿದೆ. 38 ಅಂತಸ್ತುಗಳಿವೆ. ಬಿಚ್ಚಾಆಕಾರದ  ಪ್ರಾಂಗಣವನ್ನು ಆವರಿಸಿದ ಎತ್ತರದ 4 ಗೋಡೆಗಳ‌ ಮೇಲೆ  ಕಮಲದದಳಗಳನ್ನು ಕವುಚಿ ಹಾಕಿರುವಂಥಾ ವಿನ್ಯಾಸದಲ್ಲಿ  ನಿರ್ಮಿಸಲಾಗಿದೆ.

        ಪಿಸುಗುಟ್ಟುವ ಶಾಲೆ = ಗೋಲಗುಮ್ಮಟದ ಪ್ರಧಾನ ಕೊಠಡಿಯಲ್ಲಿ ಪ್ರತಿ ಶಬ್ದವು ಏಳು ಬಾರಿ ಪ್ರತಿ ಧ್ವನಿತ ವಾಗುವುದು ವಿಶೇಷ. ಇಲ್ಲಿನ ಪಿಸುಗುಟ್ಟುವ  ಆವರಣದಲ್ಲಿ  ಅತೀ ಸಣ್ಣ ಶಬ್ದವು 37 ಮಿ ದೂರದಲ್ಲಿ ಸ್ಪಷ್ಟವಾಗಿ ‌ಕೇಳಿ ಬರುತ್ತದೆ. ಅದಕ್ಕಾಗಿ ಪಿಸುಗುಟ್ಟುವ ಶಾಲೆ  ಎಂದು ಕೂಡ ಕರೆಯತ್ತಾರೆ. ಪ್ರತಿ ಧ್ವನಿ ಗುಣವು‌ ವಿಶೇಷ‌‌  ಲಕ್ಷಣಗಳಲ್ಲಿ ಒಂದು.  ಅತ್ಯಂತ ಮೆಲುದ್ವನಿಯ ಲ್ಲಿ ಆಡಿದ ಮಾತನ್ನು ಕೂಡ  ಗ್ಯಾಲರಿಯ ಒಂದು ತುದಿಯಿಂದ ಇನ್ನೊಂದು ತುದಿಯವರೆಗೂ‌ ಕೇಳ  ಬಹುದು ಒಂದು ಬಾರಿ‌ ಕೈ ಚಪ್ಪಳೆ ತಟ್ಟಿದರೆ 7 ಬಾರಿ ಪ್ರತಿಧ್ವನಿತವಾಗುತ್ತದೆ. ‌ಗೋಲ್ ಗುಂಬಜ್ಜ  ಯಾವುದೇ ‌ಮೂಲೆಯಲ್ಲಿ  ಸಣ್ಣ‌ ಶಬ್ಬ‌ ಮಾಡಿದರೂ  ಇನ್ನೊಂದು ಮೂಲೆಯಲ್ಲಿ ಆ ಶಬ್ದ ಪ್ರತಿಧ್ವನಿಸುತ್ತದೆ.  ಗೋಲಗುಮ್ಮಟದ ಮುಖ್ಯದ್ವಾರದ ಮೂಲಕ ಒಳ‌ಪ್ರವೇಶಿಸಿದರೆ  ಮುಂದೆ ಸಾಗಲು ಓಣಿರತದ ದಾರಿ ಇದೆ. ಅದರಲ್ಲಿ ಸಾಗುತ್ತಾ ಮೇಲೆ ‌ಹೋದರೆ  ಪ್ರತಿ ಅಂತಸ್ತಿಗೂ 15 ಮೆಟ್ಟಿಲುಗಳಂತೆ ಹಂತ‌ಹಂತವಾಗಿ  ಏಳು ಅಂತಸ್ತುಗಳನ್ನು ಏರಬೇಕು. ಗುಮ್ಮಟದ ಒಳ ಪ್ರವೇಶಿಸಲು ದ್ವಾರಗಳಿದ್ದು ಎಲ್ಲ ಕಡೆಯಿಂದಲೂ‌ ಮೇಲೆ  ಸಾಗಬಹುದು.

          ‌ವಿಶ್ವ ವಿಖ್ಯಾತಗೊಳ ಗುಮ್ಮಟ ವೀಕ್ಷಣೆಗೆ  ರಾತ್ರಿ 9 ಗಂಟೆವರೆಗೆ  ಕಲಾವಕಾಶ‌ ನೀಡಲು  ಕೇಂದ್ರ ಸರಕಾರ ನಿರ್ಧರಿಸಿದೆ.  ಗುಮ್ಮಟ ವೀಕ್ಷಣೆಗೆ ರಾತ್ರಿ ತನಕ  ವಿಸ್ತರಿಸಿದರೆ  ಬೆಳಕು ಪ್ರವಾಸಿಗರಿಗೆ ಕಲ್ಪಿಸಬೇಕಾದ ಸೌಲಭ್ಯ ಸುರಕ್ಷತೆ, ಭದ್ರತೆಯ  ಬಗ್ಗೆ ಗಂಭೀರವಾಗಿ  ಚಿಂತನೆ ನಡೆಸ‌ಬೇಕೆಂದು  ಇತಿಹಾಸ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕೇಂದ್ರ ಸರ್ಕಾರದ ಆದೇಶದಂತೆ ಗುಮ್ಮಟ ವೀಕ್ಷಣೆಯ ಅವಧಿ  ವಿಸ್ತರಣೆ  ಆಗಿದೆ. ರಜಾದಿನಗಳಾದರೆ ಪ್ರವಾಸಿಗರಿಂದ ತುಂಬಿರುತ್ತದೆ.  ಇನ್ನೂ ಬಣ್ಣ ಬಣ್ಣದ  ಬೆಳಕಿನಲ್ಲಿ ರಾತ್ರಿಯು  ಗುಮ್ಮಟ ‌ವೀಕ್ಷಣೇ ಮಾಡಬಹುದು. ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯವತಿಯಿಂದ ಈ ವೀಕ್ಷಣೆಗೆ ಅವಕಾಶ ಕಲ್ಪಸಲಾಗಿದೆ.  ಈ ಮೊದಲು  ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆ ವರೆಗಿನ ಸಮಯನ್ನು ವಿಸ್ತರಣೆ ಮಾಡಲಾಗಿದೆ.
 
        ಮುಸ್ಲಿಂ ಶೈಲಿಯ ವಾಸ್ತು ಶಿಲ್ಪ ಮತ್ತು ಶಿಲ್ಪ ಕಲೆಗಳಿಗೆ  ವಿಜಯಪುರ ಒಳ್ಳೆಯ  ನಿರ್ದಶನ ಇಲ್ಲಿದೆ ಮಸಿದಿಗಳು, ಸಮಾಧಿಗಳು,  ಅರಮನೆಗಳು ಮತ್ತು ಕೋಟೆ ಎಂಬ ವಿಭಾಗಗಳಾಗಿ ವರ್ಗೀಕರಿಸಬಹುದು.  ಸಮಾಧಿಗಳ‌ ನಗರವೆಂದೆ ಖ್ಯಾತವೆತ್ತಿದ ಊರು. ವಾಸ್ತು ಶಿಲ್ಪ ಹಾಗೂ ಚಾರಿತ್ರಿಕ ಮಹತ್ವಗಳಿಗೆ  ಹೆಸರು ವಾಸಿ. ವಿಜಯಪುರ ಎಂದಾಕ್ಷಣ ಮುಂದೆ ಬರುವುದು ಗೋಲ್ ಗುಂಬಜ್ ದೇಶ ವಿದೇಶದ‌ ಪ್ರವಾಸಿಗರನ್ನು  ತನ್ನತ್ತ‌ ಸೆಳೆಯುವ  ಭವ್ಯ ಸ್ಮಾರಕದ ತವರು ಗೋಲ ಗುಮ್ಮಟ ‌ಬಿಜಾಪುರ ಕರ್ನಾಟಕದ ಪ್ರಮುಖ ಪ್ರವಾಸಿತಾಣ. ಈ ಸ್ಮಾರಕಗಳಿಂದ ಉತ್ತಮ  ಆದಾಯವು‌ ಇದೆ. ಆದರೆ ಇಲ್ಲಿ ಅಧಿಕೃತ ‌ಮಾಹಿತಿ‌ ನೀಡುವಂತ ಟೂರಿಸ್ಟ್ ಗೈಡ್ ಗಳ ಸಂಖ್ಯೆ ಹೆಚ್ಚಿದ್ದರು ಕೇಳಿದ ಪ್ರಶ್ನೆಗೆ ‌ಸಮರ್ಪಕ  ಉತ್ತರ ಕೊಡುವುದಿಲ್ಲ. ಗೊಂದಲ‌ ನಿವಾರಿಸುವ ಬದಲು ಅವರಿಗೆ  ಎನು ಗೊತ್ತು, ಎಷ್ಟು ಗೊತ್ತು ಅದನ್ನೆ ಗಿಳಿಪಾಠದಂತೆ  ಅರುಹುತ್ತಾರೆ. ಗುಮ್ಮಟ ನಗರದ ಐತಿಹ್ಯ ‌ತಿಳಿಯುವ ವರಿಗೆ  ಮಾಹಿತಿ‌ ಕೊರತೆ ಎದ್ದು ಕಾಣುತ್ತದೆ.  ಬರದ‌ನಾಡು ಎಂಬುದು ಸತ್ಯ. ಇಲ್ಲಿ ಸೂರ್ಯ ನ ತಾಪ ಆಗಾಧ ದಿಂದ ಧಗ ಧಗ ಸುರಿವಂತ ಬಿಸಿಲು.

         ವಿಶ್ವ ವಿಖ್ಯಾತ ಗೋಳಗುಮ್ಮಟ ಶಿಥಿಲವಾಗಿದೆ.  ಮಳೆಗಾಳಿಗೆ‌ ಭಗ್ನಗೊಂಡಿದ್ದು ಐತಿಹಾಸಿಕ ಸ್ಮಾರಕಕ್ಕೆ ಅಪಾಯ ಎದುರಾಗಿದೆ. ಈ ಗೋಳ ಗುಮ್ಮಟದ ಪೂರ್ವ ದಿಕ್ಕಿನ ಆರನೆ ಅಂತಸ್ತಿನ ‌ಸಮಭಾಗದಲ್ಲಿ ಇರುವ ಶಿಲೆಯ ತುಂಡುಗಳು ಕುಸಿದು‌ ಬಿಟ್ಟಿದೆ. ವಿಶೇಷ ‌ವೆರುಗು‌ ನೀಡುವ ಶಿಲ್ಪಗಳು‌ ಕಪ್ಪು ಡೆಕ್ಕನ್‌ ಶಿಲೆಯಿಂದ ‌ನಿರ್ಮಾಣ ಗೊಂಡ‌ ಆನೆ ಸೊಂಡಿಲಿನ ‌ಮಾದರಿಯ ಶಿಲ್ಪಗಳು ಗೋಳ ಗುಮ್ಮಟ ಸುತ್ತಲೂ ಬಾಚಿಕೊಂಡಿದೆ. ಇವು ಇತ್ತೀಚೆಗೆ ತುಂಡಾಗಿ ಬೀಳುತ್ತಿದೆ. 

         ಬಿಳಿ ಜೋಳದ ರೊಟ್ಟಿ, ಶೆಂಗಾ ಚಟ್ನಿ, ಎಣ್ಣಿ ಬದನೆಯಕಾಯಿ, ಕೆನೆಮೊಸರು.  ಪ್ರಮುಖ ಖ್ಯಾದವಾದ ಬಿಳಿ ಜೋಳದ ರೊಟ್ಟಿ ಬಹಳ ಮೃದುವಾಗಿ ಹಾಗೂ ರುಚಿಕಟ್ಟಾಗಿರುತ್ತದೆ.  ಇದರೊಂದಿಗೆ ಚವಳಿ ಕಾಯಿ ಪಲ್ಯವು ಬಹು ರುಚಿ. ಸಜೆರೊಟ್ಟಿ ಕೂಡ ಇಲ್ಲಿನ ಊಟದ  ವಿಶೇಷತೆಯ ಪಟ್ಟಿಯಲ್ಲಿದೆ. 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments