ಇಂದು ಸ. ಹಿ. ಪ್ರಾ. ಶಾಲೆ ಸಳ್ಕೋಡು ಇಲ್ಲಿ ಕರ್ನಾಟಕ ಅರಣ್ಯ ಇಲಾಖಾವತಿಯಿಂದ ಬೀಜ ಬಿತ್ತನೆ ಅಭಿಯಾನ 2022-23 ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಬೀಜ ಬಿತ್ತೋಣ ಅರಣ್ಯ ಬೆಳೆಸೋಣ ಧ್ಯೆಯ ವಾಕ್ಯದೊಂದಿಗೆ ಬೀಜ ಬಿತ್ತನೆಗೆ ಚಾಲನೆ ನೀಡಿಲಾಯಿತು. ಜೊತೆಗೆ ಸಸಿ ವಿತರಣೆ, ವನಮಹೋತ್ಸವ, ಸೀಡ್ ಬೊಲ್ ಮಾಡಲಾಯಿತು.
ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರಾದ ಸುರೇಂದ್ರ ನಾಯ್ಕ್ ಸಭಾ ಅಧ್ಯಕ್ಷತೆ ವಹಿಸಿದ್ದರು. ಉಪವಲಯ ಅರಣ್ಯಾಧಿಕಾರಿ ಸುನಿಲ್ ಪ್ರಾಸ್ತಾವಿಕ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಜಡ್ಕಲ್ ಗ್ರಾಮಪಂಚಾಯತ್ ಸದಸ್ಯರಾದ ನಾಗೇಶ್ ನಾಯ್ಕ್, ಗ್ರಾಮ ಅರಣ್ಯ ಸಮಿತಿ ಉಪಾಧ್ಯಕ್ಷರಾದ ಮಹಾಬಲ ಪೂಜಾರಿ, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಬಾಬು ಗೌಡ, ಸೇವಾಪ್ರತಿನಿಧಿ ರಾಮ ಶೆಟ್ಟಿ ಅತ್ತಿಕಾರ್, ಪರಿಸರ ಪ್ರೇಮಿ ಸಂದೇಶ್ ಪ್ರಭು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಸಹಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಸಾಕ್ಷಿಯಾದರು.


ಶ್ರೀಯುತ ಬಾಬು ಗೌಡ ಅವರು ಸ್ವಾಗತಿಸಿ, ಅರಣ್ಯ ರಕ್ಷಕರಾದ ಶ್ರೀ ಬಸವರಾಜ್ ಕಾರ್ಯಕ್ರಮ ನಿರ್ವಹಿಸಿ, ಶ್ರೀ ಹರಿಪ್ರಸಾದ್ ವಂದಿಸಿದರು.
