Monday, September 26, 2022
HomeKannada Articleವೇಶ್ಯಾವೃತ್ತಿಗೆ ಕಾನೂನಿನ ಹೊದಿಕೆ : Heggaddesamachar

ವೇಶ್ಯಾವೃತ್ತಿಗೆ ಕಾನೂನಿನ ಹೊದಿಕೆ : Heggaddesamachar

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ

      ವೇಶ್ಯಾವಾಟಿಕೆಯನ್ನು ಕಾನೂನು ಬದ್ಧವೃತ್ತಿ ಎಂದು ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ಆದೇಶದಲ್ಲಿ ಲೈಂಗಿಕ ಕಾರ್ಯಕರ್ತೆಯರಿಗೆ ರಕ್ಷಣೆಯಹಕ್ಕು, ಘನತೆಯಿಂದ ಗೌರವಯುತವಾಗಿ ಬದುಕು ಸಾಗಿಸಿ ಜೀವಿಸುವಂತಾಗಲು ಪೊಲೀಸರು ವೇಶ್ಯಾವೃತ್ತಿ ನಡೆಯುವ ಸ್ಥಳಗಳಿಗೆ ದಾಳಿ ಮಾಡುವಂತಿಲ್ಲ ಹಾಗೂ ವೇಶ್ಯಾವೃತ್ತಿಯಲ್ಲಿ ತೊಡಗಿದ ಮಹಿಳೆಯರನ್ನು ಅಪರಾಧಿ ಎಂದು ಪರಿಗಣಿಸಬಾರದು ಸ್ವಯಂ ಪ್ರೇರಣೆಯ ವೇಶ್ಯಾವಾಟಿಕೆ ಅಕ್ರಮವಲ್ಲ, ವೇಶ್ಯೆಯರನ್ನು ಬಂದಿಸುವುದು, ದಂಡ ಹಾಕುವುದು, ಕಿರುಕಳ ನೀಡುವಂತಿಲ್ಲ ವೇಶ್ಯಾವಾಟಿಕೆ ಕಾನೂನು ಬಾಹಿರ ಅಲ್ಲ ಎಂದು ಅವರ  ಬದುಕಿಗೆ ಯೋಗ್ಯವಾದ  ತೀರ್ಪು ‌ನಾಯ್ಯಮೂರ್ತಿ ಎಲ್ ನಾಗೇಶರಾವ್  ನೇತೃತ್ವದ  ಮೂರು  ಸದಸ್ಯರ ನ್ಯಾಯ ಪೀಠ ಲೈಂಗಿಕ  ಕಾರ್ಯ ಕರ್ತರ  ಹಕ್ಕು  ರಕ್ಷಣೆಗೆ   ಪ್ರಮುಖ ನಿರ್ದೇಶನ ನೀಡಿದೆ. ವೇಶ್ಯಾವಾಟಿಕೆಯನ್ನು ಕಾನೂನು ಬದ್ಧ ಎಂದು ಅಂಗೀಕರಿಸಿದರೆ ಅವರ ಕೆಲಸಕ್ಕೆ ಗೌರವದೊಂದಿಗೆ ಬಲವು ಬರುತ್ತದೆ ಈ ಮಹಿಳೆಯರು ಮುಖ್ಯ ವಾಹಿನಿಗೆ ಬರುವಂತಾಗಿ ಅಬಲೆಯಿಂದ ಸಬಲೆಯರಾಗುತ್ತಾರೆ.  
       
     ಜೀವನದಲ್ಲಿ ಯಾವುದೇ ಭದ್ರತೆ-ಭರವಸೆ ಇಲ್ಲದೆ, ಆತ್ಮ ತೃಪ್ತಿ, ಸ್ವಾತಂತ್ರ್ಯ, ಘನತೆ ಗೌರವಗಳಿಲ್ಲದ, ಭಾವನಾತ್ಮಕ ಬೆಸುಗೆಯ ಒಪ್ಪಂದದ ನೆರವು ,ಭಾರತೀಯ ಸಂಸ್ಕೃತಿಯ ಹೊದಿಕೆ ಇಲ್ಲದೆ, ಪಿಸುಮಾತಿನ ಮಧುರತೆ ಕೇಳದೆ, ಭಾವನೆಗಳ ಅಲೆ ಎಬ್ಬಿಸದೆ ಕೇವಲ ಹಣಕ್ಕಾಗಿ ನಡೆವ ಶಾರೀರಿಕ ಸಂಬಂಧಗಳ‌ ವ್ಯಾಪಾರ ವೇಶ್ಯಾವಾಟಿಕೆ ಇಂದು ನಿನ್ನೆಯದಲ್ಲ. ಬಯಸದೆ ಅನಿವಾರ್ಯತೆಯಿಂದ ಈ ವೃತ್ತಿ ಯಲ್ಲಿ ತೊಡಗಿ ಮೈಮಾರಿ ಗ್ರಾಹಕರ ಅಗತ್ಯ ಪೂರೈಸುವ ಕಾಯಕದಲ್ಲಿ ತೊಡಗಿ ಹಣ ಸಂಪಾದಿಸುತ್ತಿರುವವರ ಬದುಕು ಕೆಂಪು ದೀಪಗಳ ಕೆಳಗಿನ ಕಗ್ಗತ್ತಲಲ್ಲಿ ಬದುಕು ಸಾಗಿಸುವ ವೇಶ್ಯೆಯರ  ಜೀವನ ಸಂಕಷ್ಟಕ್ಕೆ ಸಿಲುಕಿದ ಅತಂತ್ರದ ಬದುಕಿನಚಿತ್ರಣ ಬದಲಾಗಬೇಕಾದರೆ ವೇಶ್ಯವಾಟಿಕೆಯನ್ನು ಒಂದು  ವೃತ್ತಿ ಎಂಬ ದೃಷ್ಟಿಯಿಂದ ನೋಡಬೇಕು. ಲೈಂಗಿಕ ಕಾರ್ಯ ಕರ್ತೆಯರು ಕಾನೂನಿನ ಸಮಾನ ರಕ್ಷಣೆಗೆ ಅರ್ಹರು ಎಂದು ಅನಿಸಿದಾಗ  ಸಮಾಜದಲ್ಲಿ ನೆಮ್ಮದಿಯ ಬದುಕು ಅವರದಾಗುತ್ತದೆ.


               
      ಪ್ರತಿದಿನ ಹತ್ತಾರು‌ ಪುರುಷರಿಗೆ‌ ಸುಖನೀಡುವ ವೇಶ್ಯೆಯರ ಬಾಳಿನಲ್ಲಿ “ಸುಖ” ಎಂಬ ಶಬ್ದಕ್ಕೆ ಅರ್ಥವಿಲ್ಲ. ಮನಸಾರೆ ಇಚ್ಚಿಸಿ ಯಾರು  ವೇಶ್ಯೆಯಾಗುವುದಿಲ್ಲ. ಕೆಲ ಘೋರ ಪರಿಸ್ಥಿತಿ ಅವರನ್ನು ವೇಶ್ಯೆಯರ ನ್ನಾಗಿ ಮಾಡುತ್ತದೆ. ಪ್ರೀತಿಯ ಒಲುವೆಯ ಮಾತಿಲ್ಲವಾದ ರೂ ದೇಹ ಹಂಚಿಕೊಳ್ಳಬೇಕು. ಬದುಕಿನ ನಿರ್ವಹಣೆಗೆ  ಹುಡುಕಿಕೊಂಡ  ದಾರಿ ಇದು. ಹೌದು ನಾನು ಹೇಳುತ್ತಿರುವುದು ವೇಶ್ಯಾವೃತ್ತಿಯನ್ನು ಒಪ್ಪಿಕೊಂಡು ಅಪ್ಪಿಕೊಂಡು ಕೆಂಪು ದೀಪದ ಬೆಳಕಲ್ಲಿ ಕತ್ತಲ ಬದುಕು ಸಾಗಿಸುವ ಹೆಣ್ಣು ಜೀವದ ಬಗ್ಗೆ. ಅಂತವರಿಗೆ ಕಾನೂನಿನ ಹೊದಿಕೆ ಇದ್ದರೆ ಶ್ರೀ ರಕ್ಷೆ  ಇದ್ದಂತೆ. ಆದರೆ ವೈಶ್ಯಾವಾಟಿಕೆಯಲ್ಲಿ ತೊಡಗಿಕೊಂಡ  ಸಾಮಾನ್ಯ  ಮಹಿಳೆಯರಿಗೆ ‌ಸುಪ್ರೀಂ ‌ಕೋರ್ಟನ  ತೀರ್ಪಿನ ಅರಿವು  ಅದರ  ಒಳಿತಿನ  ಫಲ ಸಿಗಲಿದೆಯೆ. ನಿಜ  ಅರ್ಥದಲ್ಲಿ  ಅವಳ  ಬದುಕಿನ  ಹಕ್ಕು ಅವಳಿಗೆ ದೊರೆಯುತ್ತದೆಯಾ. ವೇಶ್ಯೆಯರ  ರಕ್ಷಣೆ ಗೆ  ಕೋರ್ಟ್ ನ  ತೀರ್ಪು ಹೇಳಿಕೆ  ಸಕಾರವಾಗಲಿದೆಯಾ

       ಸರ್ಕಾರ  ಈವಾಗಲೆ   ಇತರ ಹಲವು ಕ್ಷೇತ್ರಕ್ಕೆ ನೆರವು ನೀಡಿದೆ.ಆದರೆ ಲೈಂಗಿಕ ವೃತ್ತಿಯಲ್ಲಿರುವ ಸಮುದಾಯಕ್ಕೆ ಸರಕಾರದ,  ವಿವಿಧ ಸಾಮಾಜಿಕ ಸಂಘ ಸಂಸ್ಥೆಗಳ, ಎನ್ ಜಿ ಒ ಗಳ ಸಹಾಯ ಸಹಕಾರ ಸೌಲಭ್ಯಗಳಿಂದ  ವೇಶ್ಯೆಯರು ವಂಚಿತರಾಗಿದ್ದಾರೆ. ಅದೇ ರೀತಿ ಲೈಂಗಿಕ ಕಾರ್ಯ ಕರ್ತೆಯರ ಅಭ್ಯುದಯಕ್ಕೆ ನೆರವು ಸಿಗಲು ತೊಡಕಾಗುತಿದೆ. ವೇಶ್ಯಾವಾಟಿಕೆ ಯೆಂಬ ಕತ್ತಲೆಯ ಕೂಪದಿಂದ ಬಳಲುವವರ ಕಥೆಯೂ ಅವರ ಸ್ಥಿತಿ-ಗತಿಯೂ ಚಿಂತಾಜನಕವಾಗಿದೆ. ವೇಶ್ಯಾವೃತ್ತಿ  ನಡೆಸುವುದು  ತಪ್ಪಲ್ಲ  ಎಂದು ಸುಪ್ರೀಂ ಕೋರ್ಟ್ ‌ನೀಡಿರುವ ತೀರ್ಪು ಸ್ವಾಗತರ್ಹ ಎಂದು  ದೊಡ್ಡ  ದೊಡ್ಡ ‌ಅಧಿಕಾರಿಗಳು, ಕಾನೂನು ತಜ್ಞರ ಹೇಳಿಕೆ  ಹೊರಬರುತ್ತಿದೆ.‌ಮಾಧ್ಯಮಗಳಲ್ಲಿ ಪ್ರಸಾರ, ಪ್ರಚಾರ, ವಾಗುತ್ತಿದೆ. ಆದರೆ ಸಾಮಾನ್ಯ ವೇಶ್ಯೆಯರ ಬದುಕಿನಲ್ಲಿ ಶಾಶ್ವತ ಸ್ವಾತಂತ್ರ್ಯ ದೊರಯಲಿದೆಯಾ.
                
      ದೇಶದ ಅತೀ ದೊಡ್ಡ ರೆಡ್ ಲೈಟ್ ಪ್ರದೇಶ ದಕ್ಷಿಣ ಮುಂಬಯಿ ಕಾಮಾಠಿಪುರ ಇಡೀ ಮುಂಬಯಿ ಹಾಗೂ ಉಪನಗರದ‌  ಕೆಲವು  ಬೀದಿ – ಗಲ್ಲಿ ಗಳಲ್ಲಿ ಹಗಲು-ರಾತ್ರಿ ದೇಹ ವ್ಯಾಪಾರದಲ್ಲಿ ತೊಡಗಿದ ವೇಶ್ಯೆಯರ ಬಗ್ಗೆ ಅಗತ್ಯವಾಗಿ ಯೋಚಿಸ ಬೇಕಾಗಿದೆ. ವೇಶ್ಯೆಯರ ಪರವಾಗಿ ದಣಿವರಿಯದೆ ದುಡಿಯುವ ಕೆಲವು ಸಂಸ್ಥೆ ಇದೆ ಆದರೆ ವೇಶ್ಯೆಯರ ಬದುಕಿನಲ್ಲಿ ಬರುವ ಆಕಸ್ಮಿಕ ತಿರುವುಗಳನೇಕ. ಇಂತಹ ಮಹಿಳೆಯರ ಅಭಿವೃದ್ಧಿಗಾಗಿ ಸರಕಾರದ ಅನೇಕ ಯೋಜನೆಗಳು ಚಾಲ್ತಿಯಲ್ಲಿದ್ದರು  ನಿರೀಕ್ಷಿತ  ಪಲಿತಾಂಶ ಕಂಡು ಬಂದಿಲ್ಲ.

        ಹೊಟ್ಟೆ ಪಾಡಿಗಾಗಿ ದೇಹವನ್ನೇ  ಬಂಡವಾಳವಾಗಿರಿಸಿಕೊಂಡು ನಡೆಸುವ ಸೆಕ್ಸ್ ವರ್ಕ್ ಎಂಬ ಈ ದಂಧೆಯನ್ನು ಮುಖ್ಯವಾಗಿ ವೇಶ್ಯಾಗೃಹ, ಹಾಗೂ ನಿರ್ದಿಷ್ಟ ರಸ್ತೆ, ರೈಲ್ವೆ ನಿಲ್ದಾಣ, ಬಸ್ ತಾಣ, ಸೇರಿದಂತೆ ಜನದಟ್ಟಣೆಯ ಪ್ರದೇಶದಲ್ಲಿ ನಿಂತು ವ್ಯಾಪಾರ ಕುದುರಿಸಿ ಹೋಟೆಲ್, ಲಾಡ್ಜ್ ಗಳಿಗೆ ಕರೆದೊಯ್ದು ಲೈಂಗಿಕ ಚಟುವಟಿಕೆ ನಡೆಸಲಾಗುತ್ತದೆ. ರೆಡ್ ಲೈಟ್ ಏರಿಯಾದಲ್ಲಿ ಅಂದರೆ ಕೆಂಪು ದೀಪ ಪ್ರದೇಶದಲ್ಲಿ ವೇಶಾವೃತ್ತಿಯಿಂದಲೇ ಬದುಕಿನ ಬಂಡಿಸಾಗಿಸುವ ಲಕ್ಷಾಂತರ ಲೈಂಗಿಕ ಕಾರ್ಯಕರ್ತೆಯರು ದ್ಯೆನಂದಿನ ಗಳಿಕೆಯ ಮೇಲೆ ಅವಲಂಬಿತರಾಗಿದ್ದು ಪ್ರತಿ ದಿನ ಬೀದಿ ಬೀದಿಗಳಲ್ಲಿ ಗಿರಾಕಿಗಳಿಗಾಗಿ ಕಾದು ನಿಂತು ತಮ್ಮ ಹಾಗೂ ತಮ್ಮವರ ಜೀವನಸಾಗಿಸುತ್ತಿದ್ದ ಲೈಂಗಿಕ ಕಾರ್ಯಕರ್ತೆಯರಿಗೆ ದಿನದ ಆದಾಯದಿಂದ ತುತ್ತಿನ ಚೀಲತುಂಬಿಸಿಕೊಳ್ಳುತ್ತಿದ್ದ ವೇಶ್ಯೆಯರ ಆದಾಯದ ಮೂಲಕ್ಕೂ ಕಾನೂನಿನ ‌ತೊಡಕ್ಕಿತ್ತು. ಸಾಮಾಜಿಕ ‌ಕೆಳಸ್ತರದಲ್ಲಿ ಅತ್ಯಂತ ಅನ್ಯಾಯ ಹಾಗೂ ಹೀನಾಯ ಸ್ಥಿತಿಯಲ್ಲಿ ಬದುಕುತ್ತಿರುವವರಲ್ಲಿ ಮೊದಲನೆ ಸ್ಥಾನ ವೇಶ್ಯೆಯರದ್ದು ಎಂದರು ತಪ್ಪಾಗಲಾರದು.

        ವಿದ್ಯೆಯಿಂದ ಹೆಣ್ಣು ಮಕ್ಕಳ ಬದುಕು ಬದಲಾಗಿದೆ, ಕಾಲ ಬದಲಾಗಿದೆ ಎನ್ನಲಾಗುತ್ತದೆ ಆದರೆ ವೇಶ್ಯೆಯರ ಜೀವನ ಎಷ್ಟು ಮಾತ್ರಕ್ಕೂ ಬದಲಾಗಿಲ್ಲ. ಇಲ್ಲಿನ ಹೆಚ್ಚಿನ ವೇಶ್ಯೆಯರು  ಇನ್ನೊಬ್ಬರ ವಂಚನೆಗೆ‌ ಒಳಗಾಗಿ  ವೇಶ್ಯಾವೃತ್ತಿಗೆ ದೂಡಲ್ಪಟ್ಟವರು. ಈ ವೃತ್ತಿಯಲ್ಲಿ ತೊಡಗಿಕೊಂಡ ಹೆಣ್ಣೊಬ್ಬಳು  ತನ್ನ ಅಳಲನ್ನು ತೋಡಿಕೊಂಡ‌ಪರಿ ಹೀಗಿದೆ…. ಮಾತು ಕತೆ ‌ನಡೆಸಿ ಒಬ್ಬನೇ ಬರಬೇಕಾದ ಗಿರಾಕಿ ತನ್ನೊಂದಿಗೆ 4-5 ಜನರನ್ನು ಕರೆತಂದು ಒಬ್ಬರ ನಂತರ ಒಬ್ಬರಂತೆ ಅತ್ಯಾಚಾರದ ‌ಮಾದರಿಯಲ್ಲಿ ಲೈಂಗಿಕ ಕ್ರಿಯೆ ನಡೆಸಿ ರೌಡಿತನ ತೋರಿಸಿದ್ದುಉಂಟು ಒಬ್ಬನಿಗೆ ಮಾತುಕತೆ ಆದಷ್ಟೇ‌ ಹಣ ನೀಡಿ ಗುಂಪು ಕಾಮತೃಷೆಯನ್ನು ತೀರಿಸಿಕೊಂಡ ವಿಚಾರ ಪೊಲೀಸರಿಗೆ ದೂರು ನೀಡಲು ಹೋದರೆ ತಮ್ಮ ಜೋಪಡಾದಲ್ಲಿ ಈ ವೃತ್ತಿ ಮಾಡುತ್ತಿರುವುದಾಗಿ ಸಿಕ್ಕಿ ‌ಬೀಳುವಭೀತಿ. ಒಟ್ಟಿನಲ್ಲಿ ಅಡಕತ್ತರಿಯಲ್ಲಿ ಸಿಕ್ಕ ಅನುಭವ. ಲೈಂಗಿಕ ಶೋಷಣೆ ಹಾಗೂ ಅನೈತಿಕ ದೇಹ ವ್ಯಾಪಾರ ಪ್ರತಿ ಬಂಧಿಸುವ ಕಾಯ್ದೆಯ ‌ಹೆಸರಿನಲ್ಲಿ ಈ‌ ಅಮಾಯಕರ ಮೇಲೆ ದಬ್ಬಾಳಿಕೆ ನಡೆಸುವವರಿಗೆ ಇನ್ನೂ  ಅವಕಾಶಗಳಿಲ್ಲ  ಸುಪ್ರೀಂ ಕೋರ್ಟ್ ಹೇಳಿಕೆ ಯಂತೆ .

        ಲೈಂಗಿಕ ವೃತ್ತಿಯಲ್ಲಿ  ಇರುವವರಿಗೂ ಮನಸಿದೆ ,ಕನಸಿದೆ, ಆಶೆಗಳಿವೆ ಜೀವನದ ಅನೇಕ ಸುಂದರ ‌ಬಯಕೆಗಳಿವೆ ಕೂರ್ರಮೃಗಗಳಿಗಿಂತಲೂ ಕಡೆಯಾಗಿ ಅಮಾನವೀಯತೆಯಿಂದ ವರ್ತಿಸುವವರಿಂದ ರಕ್ಷಣೆಯು ಇಲ್ಲ. ಇಲ್ಲಿ ವಿಕೃತ ಕಾಮಿಗಳು, ವ್ಯಸನಿಗಳು,ಕಾಯಿಲೆಯವರು, ಕುಡುಕರು, ವ್ಯೆಯಕ್ತಿಕ ಸ್ವಚ್ಚತೆ ಇಲ್ಲದವರು, ಹಣ ಕೊಟ್ಟಿದ್ದೇವೆ ಎಂದು ದರ್ಷ ತೋರುವ ಕ್ರೂರಿಗಳಿಗೂ ಸೆರಗುಹಾಸಿ ಶರೀರ ಒಪ್ಪಿಸುವ ಅಸಾಹಯಕ ಪರಿಸ್ಥಿತಿಯ ಹೆಣ್ಣು ಜೀವದ ವೇದನೆಗೆ ಧ್ವನಿಯಾಗಲಿದೆ ಸುಪ್ರೀಂ ಕೋರ್ಟ್  ಹೇಳಿಕೆ.

       ಕೆಲವರು ಹೊಟ್ಟೆಪಾಡು, ಜೀವನ ನಿರ್ವಹಣೆ ಗೋಸ್ಕರ ಈ ವೃತ್ತಿಯನ್ನು ಒಪ್ಪಿಕೊಂಡು ಅಪ್ಪಿ ಕೊಂಡಿದ್ದಾರೆ  .ಲೈಂಗಿಕ ವೃತ್ತಿ   ನಿರತರಲ್ಲಿ ವಿವಾಹಿತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ಬೀದಿಗಳಲ್ಲಿ ‌ನಿಂತು ಗಿರಾಕಿಗಳಿಗೆ ‌ಹೊಂಚು ಹಾಕುತ್ತಿರುವ ವೇಶ್ಯೆ ಯರೆಲ್ಲಾ ಅವರ‌ ಸ್ಥಿತಿ-ಗತಿಗಳ‌ ಬಗ್ಗೆ ಆತಂಕ ಮೂಡಿಸುವ  ವಿಚಾರಗಳಿವೆ.    

                        
                  
           ವ್ಯಾಪಕವಾಗಿ ಹರಡಿರುವ ಈ ದಂಧೆಗೆ ಅಮಾಯಕ ಹೆಣ್ಣು ಮಕ್ಕಳನ್ನು  ವೇಶ್ಯಾವಾಟಿಕೆಗೆ ದೂಡುವ  ಕಳ್ಳ ಸಾಗಣೆ ಮಾಡುವ ಅಂಕಿ ಅಂಶಗಳು ಕೂಡ ಬೆಚ್ಚಿಬೀಳಿಸುವಂತದ್ದು. ಲೈಂಗಿಕ ಕಾರ್ಯಕರ್ತೆಯರ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸುವವರು ಬಹು ವಿರಳ. ಇಲ್ಲೊಂದು ಆಶ್ಚರ್ಯಕರ ಸಂಗತಿ ಅಂದರೆ ಲೈಂಗಿಕ ಕಾರ್ಯಕರ್ತೆಯರ ಮಕ್ಕಳು ‌ಅದೆ ವೃತ್ತಿಗೆ ಯಾಕೆ  ಧುಮುಕುತ್ತಾರೆ.  ರೆಡ್ ಲೈಟ್ ಏರಿಯಾದ ಬದುಕಿನ‌ ಬವಣೆ ಇಲ್ಲಿನ‌ ನೋವು‌ ಬಾದಕಗಳ   ಅರಿವು ಅವರಿಗೆ ಇದೆಯಲ್ಲಾ ಹಾಗಿದ್ದರೂ ತಮ್ಮ ಮಕ್ಕಳನ್ನು ಯಾಕೆ ಈ ವೃತ್ತಿಗೆ ಸೇರಿಸಿಕೊಳ್ಳುತ್ತಾರೆ. ಕೆಲವು ವರ್ಷಗಳ ಹಿಂದೆ ಭಿಕ್ಷುಕರ ಬದುಕಿನ‌ ಸಮೀಕ್ಷೆ ನಡೆಸುವಾಗ ಬೇಕಾದ ಮಾಹಿತಿಗಾಗಿ ವೇಶ್ಯೆಯೊಬ್ಬರನ್ನು ಸಂಪರ್ಕಿಸಿದ್ದೆ. ತದನಂತರ ಕೆಲ ತಿಂಗಳ ಹಿಂದೆ ನಾನು ರೈಲ್ವೆ ಬ್ರಿಜ್ ಹತ್ತಿ ಸಾಗುವಾಗ ಅವರನ್ನು ನೋಡಿ ಕಿರುನಗುಸೂಸಿದ್ದೆ.ಆದರೆ ‌ಅವಳೆಂದು ನನ್ನನ್ನು ನೋಡಿಯು‌ ನೋಡದಂತಿರುವುದ ನ್ನು ಗಮನಿಸಿದ್ದೆ. ಒಮ್ಮೆ ‌ಹತ್ತಿರ ಹೋಗಿ ‌ಕೇಳಿದೆ ಗುರುತು ಸಿಗಲಿಲ್ಲವೆ ‌ಎಂದೆ. ಚೆನ್ನಾಗಿ ಗುರುತು ಸಿಕ್ಕಿದೆ ಆದರೆ‌ ನಮ್ಮಂತವರು ನಿಮ್ಮನ್ನು ‌ನೋಡಿನಕ್ಕರೆ ಜನ ತಪ್ಪು ‌ತಿಳಿಯುತ್ತಾರೆ. ನಾವು ಗಿರಾಕಿಗಳನ್ನು ಕಾಯುವವರು ಎಂದರು.ಅಲ್ಲೆ ಬದಿಯಲ್ಲಿ ಅವಳ ಮಗಳು  ನಿಂತಿದ್ದಳು ನನ್ನನ್ನು  ಇಲ್ಲಿ ‌ಬಲವಾಗಿ‌ ಕಾಡಿದ್ದು… ಮಗಳು ತಾಯಿಯೊಂದಿಗೆ ಏಕೆ ಬಂದಿದ್ದಳು,ಯಾವ ಉದ್ದೇಶದಿಂದ ಅವಳು ಇದೆ ವೃತ್ತಿಗೆ ಬಂದಳೆ ಆ ತಾಯಿಯಲ್ಲಿ  ಹೇಗೆ ‌ಕೇಳಲಿ ನಿನ್ನ ಮಗಳು‌ ನಿನ್ನ ಹಾಗೆ  ವೇಶ್ಯೆಯೆ ಎಂದು.ನಂತರ ‌ಹಲವು ದಿನ ದೂರದಿಂದ ನಿಂತು ನೋಡಿದರೆ  ಮಗಳು ತಾಯಿ ಇಟ್ಟ ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಿರುವುದು ಅರಿವಿಗೆ ಬಂತು.

       ವೇಶ್ಯಾವೃತ್ತಿಗೆ  ವಯಸ್ಸೆನ್ನುವುದು ಮಾರಕ,ಸಂಪಾದನೆಯ ಹೊಡೆತಕ್ಕೆ  ಇವರ ಏರುತ್ತಿರುವ ವಯಸ್ಸು ಕಾರಣವಾಗುತ್ತದೆ.ವಯಸ್ಸಾದ ಲೈಂಗಿಕ ಕಾರ್ಯ ಕರ್ತೆಯರ ಪಾಡು‌ಬಲು ಗೋಳು. ಒಬ್ಬ ವೇಶ್ಯೆ ತನ್ನ ಯೌವನ,ವಯಸ್ಸು ಕಳೆದುಕೊಂಡು ಪ್ರಾಯ ಸರಿದ ಮೇಲೆ ಯಾರಿಗೂ ಬೇಡವಾಗುತ್ತಾಳೆ. ಯಾವುದೆ ರೀತಿಯ ಲೈಂಗಿಕ ಕಾಯಿಲೆ ಅಡರಿಕೊಂಡರಂತು ಪರಿಸ್ಥಿತಿ ಅತಂತ್ರವಾಗುತ್ತದೆ. ಪ್ರತಿ ದಿನ ಹಲವಾರು ದೇಹಗಳು ಸೋಂಕಿ,ಹೆದರಿಕೆ,ಒತ್ತಡಗಳಲ್ಲಿ ಮೈಮಾರಿಗಳಿಸಿದ ಹಣವನ್ನು ಹೆದರಿಸಿ ದೋಚುವವರು ಇದ್ದಾರೆ. ಸಮಾಜದ ನಿಂದನೆಗೆ ಒಳಗಾಗುವ,ನರಕಮಯ ಬದುಕು ಇವರದು. ಗರ್ಭವತಿಯಾಗಿ ಅದೆಷ್ಟೋ ಸಲ ಗರ್ಭಪಾತ ಮಾಡಿಕೊಂಡವರು ಅಲ್ಲದೇ ತಾನು ವೇಶ್ಯೆಯಾದರು ಮಕ್ಕಳಿಗೆ ಜನ್ಮ ಕೊಟ್ಟು ವಿದ್ಯೆ ಬುದ್ದಿ ನೀಡಿ ಈ ವಿಷವರ್ತುಲದಿಂದ ಹೊರ ಬರಲು ಹೆಣಗಾಡುತ್ತಲೆ  ಇರುವವರು  ಅನೇಕ.

         ಕನಸುಮನಸ್ಸಿನಲ್ಲಿ ಊಹಿಸಲೂ ‌ಭಯಪಡುವಂತ ವೇಶ್ಯಾವಾಟಿಕೆ ಲೆಕ್ಕ ಸಿಗದಷ್ಟು ಬೆಳೆದ ವೃತ್ತಿ ಪುಲ್ ಟೈಮ್ ಮತ್ತು ಪಾರ್ಟ್ ಟೈಮ್ ಲೈಂಗಿಕ ಕಾರ್ಯ ಕರ್ತೆಯಾಗಿ  ದುಡಿಯುವರಿದ್ದಾರೆ. ಹೆಣ್ಣು ಮಗಳೊಬ್ಬಳು  ಈ ವೃತ್ತಿಯಲ್ಲಿ ದುಡಿದು  ಕುಟುಂಬದ ಹೊಟ್ಟೆ ಹೊರೆಯುತ್ತಾಳೆ. ಆದರೂ ಅವಳ ದುಡಿತಕ್ಕೆ ಬೆಲೆ ಇಲ್ಲ. ಆದರೆ ಕಾನೂನಿನ ಸಮ್ಮತಿ ದೊರೆತ ‌ಮೇಲೆ ಎಲ್ಲವು‌ ‌ನಿರಾಳವಾಗಲಿದೆ. ವೇಶ್ಯಾವೃತ್ತಿಯ ಕುರಿತು  ಸುಪ್ರೀಂ ಕೋರ್ಟ್  ತೀರ್ಪಿನ  ಬಗ್ಗೆ ‌ಬುದ್ದಿ ಜೀವಿಗಳು ಸಂವಾದ ‌ನಡೆಸುತ್ತಿರುವುದು ಸತ್ಯ  ಆದರೆ ವೇಶ್ಯೆಯ  ಬದುಕಿನಲ್ಲಿ ಅದಾವತರದ ಬದಲಾವಣೆಯಾಗಲಿದೆಯೆ, ಅವರ  ಬದುಕಿನ  ಕೆಲವು  ಅಡರು, ತೊಡರುಗಳು  ನೋವು ಹಿಂಸೆಗಳು  ದೂರವಾಗಲಿದೆಯೆ  ಕಾದು ‌ನೋಡೊಣ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments