Thursday, September 21, 2023
HomeKannada Articleತ್ರಂಬಕೇಶ್ವರ

ತ್ರಂಬಕೇಶ್ವರ

ನಿರಾಕಾರ ಪರಂಜ್ಯೋತಿ ಸ್ವರೂಪ ಪರಮಾತ್ಮ‌ಶಿವ ಎಂಬುದು‌ ಭಕ್ತರ ಅಚಲ ನಂಬಿಕೆ. ಶಿವ ಎಂದರೆ ಸರ್ವ ಕಲ್ಯಾಣ ಕಾರಿ,‌ಶುಭಕಾರ, ಮಂಗಳಕಾರಿ, ಸರ್ವ ಶಕ್ತಿ ವಂತ, ಚ್ಯೆತನ್ಯ ಇಡಿ‌ ವಿಶ್ವದ ತಂದೆ ಅದಕ್ಕಾಗಿ ಎಲ್ಲಾ ಧರ್ಮದವರು ಪರಮಾತ್ಮನನ್ನು ಜ್ಯೋತಿಯ ರೂಪದಲ್ಲಿ ಆರಾಧಿಸುತ್ತಾರೆ. ಭಾರತದ ಉದ್ದಗಲದಲ್ಲು ಶಿವನನ್ನು ಜ್ಯೋತಿರ್ಲಿಂಗ ರೂಪದಲ್ಲಿ ಪೂಜಿಸುತ್ತಾರೆ. ನಿರಾಕಾರ ಜ್ಯೋತಿ ಸ್ವರೂಪದಲ್ಲಿ‌ ಶಿವನನ್ನು ಭಕ್ತರು ಒಪ್ಪಿಕೊಳ್ಳುವು ಉದು ಇದೆ. ಹೀಗೆ ‌ಹನ್ನೆರಡು ಜ್ಯೋತಿರ್ಲಿಂಗಗಳ ದರ್ಶನ ಮಾನವನ ಇಚ್ಚೆಯು‌ ಆಗಿರುತ್ತದೆ. ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರದಲ್ಲಿ ‌ತ್ರಂಬ್ರಕೇಶ್ವರವೂ ಒಂದು.
ದಟ್ಟ ಮರ ಗಿಡ ಹುಲ್ಲುಗಳಿಂದ‌ ಆವೃತವಾಗಿರುವ ತ್ರಯಂಬಕೇಶ್ವರ ದೇಗುಲ ಬ್ರಹ್ಮ ಗಿರಿ, ನೀಲಗಿರಿ‌ ಮತ್ತು‌ ಕಾಲಗೀರಿ ಬೆಟ್ಟಗಳ‌ ನಡುವೆ ಗೋದಾವರಿ ನದಿಯ ಉಗಮಸ್ಥಾನ ಬಳಿ ಇರುವ ಸುಪ್ರಸಿದ್ಧ ‌ಜ್ಯೋತಿರ್ಲಿಂಗ ನಾಸಿಕದಿಂದ 30 ಕಿ. ಲೋ ಮಿಟರ್ ದೂರದಲ್ಲಿದೆ ಕಪ್ಪು ಕಲ್ಲಿನಿಂದ ‌ಮಾಡಲಾದ ದೇವಾಲಯದ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಯು ಅದ್ಬುತವಾಗಿದೆ.
ಗರ್ಭಗುಡಿಯೊಳಗಿನ‌ ಜ್ಯೋತಿ ರ್ಲಿಂಗದಲ್ಲಿ ಮೂರು ‌ಮುಖಗಳಿದ್ದು ಇವುಗಳಿಗೆ ಬ್ರಹ್ಮ ವಿಷ್ಣು ಮತ್ತು ರುದ್ರ ಎಂಬ ಭಕ್ತಿಯ ಭಾವ ಭಕ್ತರಲ್ಲಿ ಇವುಗಳ ಸ್ವರ್ಣ‌ಮುಕುಟದಲ್ಲಿ ವಜ್ರ ವೈಢೂರ್ಯ ಹಾಗೂ ಮುತ್ತು ರತ್ನಗಳಿಂದ ಅಲಂಕಾರ ಗೊಂಡಿದೆ. ಮಂದಿರದ ಆವರಣದಲ್ಲಿ ಅಮೃತ ಕುಂಡ ಎಂಬ ಪುಷ್ಕರಣಿ ಇದ್ದು ಇದರ‌ ನೀರಿನಿಂದ ಶಿವಲಿಂಗಕ್ಕೆ‌ನಿತ್ಯ ಅಭಿಷೇಕ ಮಾಡಲಾಗುತ್ತದೆ.

ಗೌತಮ ಮಹಾಋಷಿಗಳ‌ ತ್ಯಾಗದ ಫಲವಾಗಿ ಇಲ್ಲಿ ಹರಿವ ಗೋಧಾವರಿಗೆ‌ ಗೌತಮಿ ಎಂಬ ಹೆಸರು ‌ಬಂದಿದ್ದು‌ ಗೋಧಾವರಿ ಗೌತಮರ ಪ್ರಾರ್ಥನೆಯಿಂದ‌ ಭಕ್ತ ವತ್ಸಲನಾದ‌ ಶಿವನು ತೈಂಬಕೇಶ್ವರ ರೂಪದಲ್ಲಿ ಇಲ್ಲಿ ನೆಲೆಸಿದ್ದು. ಅವುಗಳ ಮೇಲಿನ ತಗ್ಗು ಗಂಗಾ- ಗೋಧಾವರಿ ,ಸರಸ್ವತಿ ನದಿಗಳ‌ ಪ್ರತೀಕಎನ್ನುತ್ತಾರೆ. ಪಾಣಿಪಾಟ್‌ ಮೇಲೆ ಮೂರು ‌ಕಡೆ ಕಣ್ಣುಗಳನ್ನು ಕೆತ್ತಲಾಗಿದೆ. ‌ತೈಂಬ್ರಕೇಶ್ವರನ ದರ್ಶನ ‌ಮಾಡಿದರೆ‌ ಸಕಲಪಾಪಗಳು ನಾಶವಾಗಿ ಮೋಕ್ಷ ಲಭಿಸುತ್ತದೆ ಎಂಬ ‌ನಂಭಿಕೆ ಭಕ್ತರಲ್ಲಿ. ಇಲ್ಲಿ ‌ಶಿವಲಿಂಗ ಮುಟ್ಟುವುದಕ್ಕೆ ‌ಅವಕಾಶವಿಲ್ಲ. ರುದ್ರ, ರುದ್ರಿ, ಲಘುರುದ್ರ, ಮಹಾರುದ್ರ, ಅತಿರುದ್ರ ಎಂಬ ವಿಶೇಷ ಗಣಗಳಿರುವ ದೇವಾಲಯವಿದು
ಪ್ರತಿ ಸೋಮವಾರ ಸ್ವರ್ಣ ಕೀರಿಟದ ಪಲ್ಲಕ್ಕಿ ಮೆರವಣಿಗೆ ನೋಡಲು ಭಕ್ತಿಗಣ ದೆವಾಲಯದ ಸುತ್ತ ತುಂಬಿರುತ್ತಾರೆ. ಇಲ್ಲಿನ ಆಸುಪಾಸಿನಲ್ಲಿ ಸಂಗಮೇಶ್ವರ, ಕನಕೇಶ್ವರ, ಕಪಿಲೇಶ್ವರ, ತ್ರಿಭುವನೇಶ್ವರ‌ ದೇವಾಲಯಗಳಿವೆ. ಹಾಗೂ ಪಂಚವಟಿಯ ಸಮೂಹ ದೇವಾಲಯವನ್ನು ನೋಡಿ ಬರಬಹುದು. ದೇವಸ್ಥಾನ ದಲ್ಲಿ ಗೋಪುರ, ದೀಪಮಾಲೆ, ಬಂಗಾರದ ಕಳಸ‌, ಮಂದಿರದ ‌ಮೇಲಿನ ಶಿಲ್ಪಾಕೃತಿ‌ ಮತ್ತು‌ ಕೆತ್ತನೆಯು ಬಹುನಾಜೂಕಾಗಿದೆ. ಪೂರ್ವಾಭಿಮುಖವಾಗಿರುವ ವಿಶಾಲ ಶಿವಾಲಯಕ್ಕೆ ನಾಲ್ಕು ಶಿಲಾದ್ವಾರಗಳಿವೆ. ಶಿವಾಲಯದ ಮೇಲೆ ಕಳಶ ಸಹಿತ ಐದು ಗೋಪುರ ಗಳಿವೆ.‌ ಮದ್ಯದ ಗೋಪುರದ ‌ಮೇಲೆ ಆಮೆಯ ಶಿಲ್ಪ ವನ್ನು ಕೆತ್ತಲಾಗಿದೆ.

ಸೃಷ್ಟಿ- ಸ್ಥಿತಿ- ಲಯಗಳ ಪ್ರತೀಕವೆನಿಸಿದ ಈ ಶಿವಾಲಯ ‌ಪ್ರದಕ್ಷಣಾ ಪಥದಲ್ಲಿರುವ ಭವ್ಯವಾದ‌ ಮಂಟಪದಲ್ಲಿ ನಂದಿಯ ವಿಗ್ರಹವಿದೆ. ದೇವಾಲಯದ ಸುತ್ತಾ ಗಂಗಾದೇವಿ, ಜಲೇಶ್ವರ, ರಾಮೇಶ್ವರ, ಗೌತಮೇಶ್ವರ, ಕೇದಾರನಾಥ, ರಾಮಕೃಷ್ಣ ,ಪರಶುರಾಮ, ಲಕ್ಷ್ಮೀ ನಾರ‌ಯಣ ಮೂರ್ತಿಗಳು‌ ಇದೆ. ಅಷ್ಟೇ ಅಲ್ಲದೆ ಇಲ್ಲಿ ಹಲವು ಸಂತರ‌ ಸಮಾಧಿಗಳು‌ ಮತ್ತು ಆಶ್ರಮಗಳಿವೆ.

ಈ ದೇವಾಲಯ ತೀರ್ಥಕ್ಕೆ (ಜಲಕುಂಡ) ಅಮೃತವರ್ಷಿಣಿ ಎನ್ನುತ್ತಾರೆ. ಇಲ್ಲಿ ಬಿಲ್ವ ತೀರ್ಥ, ವಿಶ್ವನಾಥ‌ತೀರ್ಥ ಮತ್ತು ‌ಮುಕುಂದ‌ತೀರ್ಥ‌ಎಂಬ ಕುಂಡಗಳು ಇದೆ. ದೇವಾಲಯದ ಮುಖ್ಯ ದ್ವಾರದಲ್ಲಿ‌ ವಿಶೇಷ‌ ದರ್ಶನದ ಟೀಕೆಟಿಗೆ ವ್ಯವಸ್ಥೆ ಇದೆ. ಮುಂಜಾನೆ‌ 5 ರಿಂದ ‌ರಾತ್ರಿ 10ರ ತನಕ ತೆರೆದಿರುತ್ತದೆ. ದೇವಾಲಯದ ಸುತ್ತಮುತ್ತಣ ಬ್ರಾಹ್ಮಣ ಪೂಜಾರಿಗಳು ಪಿತೃಶ್ರಾದ್ದ, ಪಿತೃದೋಷ ಪರಿಹಾರಕ್ಕಾಗಿ ಅನೇಕ ‌ಮಾರ್ಗದರ್ಶನ ಆ‌ ಪೂಜೆ, ಈ‌ ಪೂಜೆ ಅಂತ ಪೀಡಿಸುವುದರಿಂದ ಆ ಬಗ್ಗೆ ‌ಭಕ್ತಗಣ ತಮ್ಮ‌ ಎಚ್ಚರಿಕೆ ತಪ್ಪದೆ ಏನು ಯಾವ ಪೂಜೆ ಮಾಡಬೇಕು ಎಂದು‌ ತಾವು ನಿರ್ದ್ದರಿಸಿ ಕೊಳ್ಳಬೇಕು.

ಪೌರಾಣಿಕ ಹಿನ್ನಲೆ =ಒಮ್ಮೆ ‌ವಿಷ್ಣು ಮತ್ತು ‌ಬ್ರಹ್ಮದೇವರ ನಡುವೆ ತಾನು‌ ಮೇಲೆ ನಾನು ಮೇಲೆ ಎಂಬ ವಾಗ್ವದ ನಡೆದಿತ್ತು. ಜಗಳವಾಡುತ್ತಾ ಅವರು ಹೋರಾಟ ಕ್ಕೆ ಇಳಿದು ಒಬ್ಬರನ್ನೊಬ್ಬರು ‌ಕೊಲ್ಲಲು ಪ್ರಯತ್ನಿಸಿದರು. ವಿಷ್ಣು ಮಹೇಶ್ವರಾಸ್ತ್ರವನ್ನು ಹೂಡುದರೆ ಬ್ರಹ್ಮ ಪಾಶುಪತಾಸ್ತ್ರಹೂಡಿದ್ದ. ಇವರಿಬ್ಬರ ಯುದ್ದದಿಂದ ಸೃಷ್ಟಿ ನಾಶವಾಗುವ ಪರಿಸ್ಥಿತಿ ಬಂತು ಆಗ‌ ಮಹಾದೇವ ಅವರ‌ ನಡುವೆ ಮಹಾ ಅಗ್ನಿಸ್ತಂಭವಾಗಿ ನಿಲ್ಲುತ್ತಾನೆ.
ಪ್ರಕರವಾಗಿ ಹೊಳೆಯುವ ಸ್ತಂಭದ ಆದಿ ಅಂತ್ಯ ಎಲ್ಲಿದೆ ಅಂತ ವಿಷ್ಣು ಮತ್ತು ಬ್ರಹ್ಮನಿಗೆ ಕಾಣಿಸಲಿಲ್ಲ ಇಬ್ಬರೂ ಸ್ತಂಭವನ್ನು ಆಶ್ಚರ್ಯ ದಿಂದ‌ ನೋಡುತ್ತಿದ್ದದಂತೆ ಇಬ್ಬರ‌ ಕೈಯಿಂದ ಅಸ್ತ್ರ ಕೆಳಗೆ‌ ಬೀಳುತ್ತದೆ. ಈ ಸ್ತಂಭದ ‌ಕೊನೆಯನ್ನು ಮೊದಲು‌ ಹುಡುಕಿದವರು ತಮ್ಮಲ್ಲಿ‌ ದೊಡ್ಡವರು ಎಂದು ಬ್ರಹ್ಮ ‌ಮತ್ತು ವಿಷ್ಣು ‌ತೀರ್ಮಾನಿಸಿದರು .ವಿಷ್ಣು ‌ವರಾಹ ರೂಪತಾಳಿ ಸ್ತಂಭದ ಕೆಳ ಭಾಗಕ್ಕೆ‌ತೆರಳಿದ. ಬ್ರಹ್ಮ ಹಂಸರೂಪದಲ್ಲಿ‌ ಮೇಲಕ್ಕೆ ಹಾರಿದ .‌ವಿಷ್ಣು ಎಷ್ಟೆ ಹುಡುಕಿದರು ತಳಸಿಗದೆ ರಣಭೂಮಿಗೆ ಮರಳಿದ ಬ್ರಹ್ಮ ನಿಗೂ ಕೊನೆಸಿಗದೆ ಹಾರುತ್ತಿರುವಾಗ ಸುವಾಸನೆಯ ಕೇದಿಗೆ ಹೂವೊಂದು ಇದಿರಾಯಿತು. ಬ್ರಹ್ಮ ಹೂವಿನ ‌ಬಳಿ ಸ್ತಂಭದ ‌ಮೂಲ ವಿಚಾರಿಸಿದ.ಆಗ‌ ಕೇದಿಗೆ ಇದರ ತಲೆಯ ಭಾಗ ನೋಡುವ ಆಶೆ ಬಿಟ್ಟು ಬಿಡು ಎಂದಿತು. ಆಗ ಬ್ರಹ್ಮ ನಾನು‌ ಮರಳುತ್ತೆನೆ ಆದರೆ ‌ನಾನು ಸ್ತಂಭದ ‌ಮೇಲ್ತುದಿ ನೋಡಿರುವುದಾಗಿ ನೀನು ಸಾಕ್ಷಿ ‌ನುಡಿಯ‌ ಬೇಕು‌ ಎಂದನು. ಕೇದಗಿ ಒಪ್ಪಿಕೊಂಡಿತು. ಹೀಗೆ ಬ್ರಹ್ಮ ದೇವ ರಣಭೂಮಿಗೆ‌ ಮರಳಿ ತಾನು ಸ್ತಂಭದ ಮೇಲ್ಬಾಗ ನೋಡಿ ಬಂದಿದ್ದೇನೆಂದು ಹೇಳಿದ ಅವನೇ ದೊಡ್ಡವನೆಂದು ವಿಷ್ಣು ಒಪ್ಪಿಕೊಂಡ.
ಬ್ರಹ್ಮ ದೇವನ ಸುಳ್ಳಿಗೆ ಶಿವ ಕೋಪ‌ಗೊಂಡು‌ ಶಿವನ ಎರಡು ಹುಬ್ಬುಗಳ ಮದ್ಯದಲ್ಲಿ ರೂಪುಗೊಂಡ ಭೈರವ ಸೃಷ್ಟಿಯಾದವ ಶಿವನ ಆದೇಶದಂತೆ ಭೈರವ ಬ್ರಹ್ಮ ದೇವನ ಹಿಡಿದು ಸುಳ್ಳಾಡಿದ ಒಂದು ತಲೆಯನ್ನು ಕತ್ತರಿಸಿದ ಅಂದಿನಿಂದ ಬ್ರಹ್ಮ ನಿಗೆ ನಾಲ್ಕು ತಲೆ ಮಾತ್ರ ಉಳಿಯಿತು. ಹಾಗೂ ಕೇದಗೆ ಹೂವಿಗೆ ಪೂಜೆಗಳಲ್ಲಿ ಸ್ಥಾನವಿಲ್ಲ ಬ್ರಹ್ಮ ದೇವನಿಗೆ ಜಗದಲ್ಲಿ ಪೂಜೆ ಇಲ್ಲ ಎಂದು ಮಹಾದೇವ ಶಾಪ‌ನೀಡಿದ. ಆದಿ ಅಂತ್ಯಗಳಿಲ್ಲದ ಬೆಳಕಿನ ಸ್ತಂಭ‌‌ ಕಾಣಿಸಿ ಕೊಂಡ ಸ್ಥಳಗಳೆ ಜ್ಯೋರ್ತಿಲಿಂಗಗಳು ಹನ್ನೆರಡು ಜ್ಯೋತಿರ್ಲಿಂಗಗಳು ಪರಮ ಪವಿತ್ರವಾದುದು ಎಂಬ ನಂಬಿಕೆ ಇದೆ.

  • ಲತಾ ಸಂತೋಷ ಶೆಟ್ಟಿ ಮುದ್ದುಮನೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments