Monday, June 27, 2022
HomeKannada Articleತಾಯಿ ಭುವನೇಶ್ವರಿ ತೇರು ಸಾಗಿಬರುತ್ತಿದೆ : heggaddesamachar

ತಾಯಿ ಭುವನೇಶ್ವರಿ ತೇರು ಸಾಗಿಬರುತ್ತಿದೆ : heggaddesamachar

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ

          ನವೆಂಬರ್ ತಿಂಗಳ ಆಗಮನವಾಗುತ್ತಿದ್ದಂತೆ  ವನಸಿರಿಯ ಬೀಡು ,ವೈವಿಧ್ಯಮಯ ಪಾರಂಪರಿಕ ದೇವಾಲಯಗಳ‌ ತಾಣ  ಕೋಟೆ ಕೊತ್ತಲಗಳ ನಾಡಿನಲ್ಲಿ  ಕನ್ನಡ ರಾಜ್ಯೋತ್ಸವದ ಸಿರಿ ಸೊಬಗು ಕನ್ನಡಿಗರೆಲ್ಲರ‌ ಮೈಮನಗಳಲ್ಲಿ ಕನ್ನಡ ತನ ತುಂಬಿ ತುಳುಕುವ ತಾಯಿ ಭುವನೇಶ್ವರಿ ತೇರು ಸಾಗಿಬರಲಿದೆ. ಕನ್ನಡದ ಬಾವುಟ‌ ಮೇಲೆರಲಿದೆ. ಕನ್ನಡ ರಾಜ್ಯೋತ್ಸವ ಕನ್ನಡ ನಾಡು ಮಾತ್ರವಲ್ಲ ದೇಶ ವಿದೇಶ, ಹೊರರಾಜ್ಯಗಳಲ್ಲಿ ನೆಲೆಸಿರುವ ಕನ್ನಡಿಗರ ಪಾಲಿಗೂ ಪುಳಕವನ್ನುಂಟು‌ ಮಾಡುವ  ಹಬ್ಬ. ನವೆಂಬರ್ ತಿಂಗಳು ಬಂತೆಂದರೆ ಕನ್ನಡ ನಾಡು ನುಡಿಯ ಬಗೆಗಿನ ಅಭಿಮಾನ ಉತ್ಸವದ ಲಹರಿ ಇದ್ದಕ್ಕಿದಂತೆ ಹರಡುತ್ತದೆ. ಕನ್ನಡ ರಾಜೋತ್ಸವ ಅಂಗವಾಗಿ  ಕನ್ನಡವನ್ನು ಮನೆ‌ ಮನೆಗೆ ತಲುಪಿಸುವ ಆಶಯದೊಂದಿಗೆ ಮಾತಾಡ್‌…ಮಾತಾಡ್…ಕನ್ನಡ ‌ಎಂಬ  ಹೆಸರಿನ ಅಭಿಯಾನವೂ   ನಡೆದಿದೆ .ಕನ್ನಡ  ರಾಜ್ಯೋತ್ಸವದ  ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪರಿಕಲ್ಪಿಸಿರುವ  ಬಹು ನಿರೀಕ್ಷಿತ  ಕನ್ನಡ ಗೀತಗಾಯನದಲ್ಲಿ ಕುವೆಂಪುರವರ‌ ಬಾರಿಸು ಕನ್ನಡ ಡಿಂಡಿಮವ, ನಿಸಾರ್ ಅಹಮದ್ ಅವರ ಜೋಗದ  ಸಿರಿ ಬೆಳಕಿನಲ್ಲಿ, ಡಾ. ಹಂಸಲೇಖರ ಹುಟ್ಟಿದರೆ  ಕನ್ನಡ ನಾಡಲಿ ಹುಟ್ಟ ಬೇಕು ಈ ಕನ್ನಡಗಾನ ಏಕ ಕಾಲದಲ್ಲಿ ‌ಮೊಳಗಿ  ಕನ್ನಡದ  ಕಂಪಿಗೆ ಗಾಯನದ ಇಂಪು ನೀಡಿತು.

       ರಾಜ್ಯೋತ್ಸವದ ಮಹತ್ವ = ಕನ್ನಡ ಮಾತನಾಡುವ ಪ್ರಾಂತ್ಯಗಳನೆಲ್ಲಾ ಸೇರಿಸಿ ವಿಶಾಲ ಮೈಸೂರು ರಚನೆಗೆ ಒಪ್ಪಿಗೆ ಸಿಕ್ಕಾಗ  ನವೆಂಬರ್ ಒಂದು 1956 ರಂದು ಮದ್ರಾಸ್, ಮುಂಬಯಿ, ಹೈದರಾಬಾದ್ ಪ್ರಾಂತ್ಯ ದ ಕನ್ನಡ ಮಾತಾನಾಡುವ  ಪ್ರದೇಶಗಳು ಸೇರಿಸಿ  ವಿಶಾಲ ಮೈಸೂರು ಹೆಸರಿನಲ್ಲಿ ರಾಜ್ಯ ಅಸ್ತಿತ್ವಕ್ಕೆ ಬಂತು. ನಂತರ ನವೆಂಬರ್  ಒಂದು 1973 ರಲ್ಲಿ ಕರ್ನಾಟಕವೆಂದು ಪುನರ್ನಾಮಕರಣ ಗೊಂಡಿತು.       
           ಕನ್ನಡ ಭಾಷೆ,  ಕರ್ನಾಟಕದ ಏಕೀಕರಣದ ಇತಿಹಾಸ ಹಾಗೂ ಮಹತ್ವದ ಹೋರಾಟಗಳ ಬಗ್ಗೆ ಯಾರು‌ ಮರೆಯ ಬಾರದೆಂಬ ಉದ್ದೇಶದಿಂದ ನಾಡಿಗಾಗಿ, ಭಾಷೆಯ ಉಳಿವಿಗಾಗಿ ಶ್ರಮಿಸಿದವರ ನೆನಪು ಹಸಿರಾಗಿಸಲು, ಕನ್ನಡ ನೆಲದ ಕೀರ್ತಿ ಪತಾಕೆಯನ್ನು ಬಹು ಎತ್ತರಕ್ಕೆ ಹಾರಿಸಿದವರ  ನೆನೆಯುವ ಅಗತ್ಯವೂ ಇದೆ. ಕರ್ನಾಟಕ ಏಕಿಕರಣಕ್ಕೆ ಅನೇಕ ಮಹನೀಯರ ಕೊಡುಗೆಯು ಮಹತ್ವದ್ದು. 

   ಕನ್ನಡ ಭಾಷೆ =  ವಿಶ್ವದ ಪ್ರಾಚೀನ ಭಾಷೆಗಳಲ್ಲಿ ಕನ್ನಡವೂ ಒಂದು ತನ್ನದೇ ಆದ ಲಿಪಿಯನ್ನು ಹೊಂದಿದೆ.

ಸಿರಿ  ಗನ್ನಡಂ ಗೆಲ್ಗೆ
ಹಿರಿ ಗನ್ನಡಂ ಗೆಲ್ಗೆ
ಸಿರಿ ಗನ್ನಡಂ ಗೆಲ್ಗೆ, ಬಾಳ್ಗೆ
ಕನ್ನಡ ತಾಯಿ ಗೆಲ್ಗೆ ಬಾಳ್ಗೆ  ನಿಜವಾಗಿಯು ಒಂದು ಭಾಷೆ ಉಳಿದರೆ ನಾಡೊಂದು ಉಳಿದಂತೆ. ಭಾಷೆಗೆ ಜನರನ್ನು ಒಗ್ಗೂಡಿಸುವ ಶಕ್ತಿ ‌ಇದೆ. ಭಾಷೆ ಉಳಿವು ಅನೇಕ ಸಂಗತಿಗಳನ್ನು ಒಳಗೊಂಡಿರುತ್ತದೆ. ಕನ್ನಡ ನಾಡು ನುಡಿಗೆ  ಅದರದೆ ಆದ ಸ್ಥಾನ ಮಾನ ಹಿರಿಮೆಯಿದೆ. ಕನ್ನಡ ರಾಜ್ಯೋತ್ಸವದ ಆಚರಣೆ ಸಾರ್ಥಕವಾಗ ಬೇಕಾದರೆ . ನಾಡಿನ ಕನ್ನಡ ಶಾಲೆಗಳಲ್ಲಿ ಕನ್ನಡ ಮೊಳಗಬೇಕು.  ಬೆಳಗಬೇಕು. ಬೆಳೆಯಬೇಕು ಯಾವೊಂದು ‌ಕನ್ನಡ ಶಾಲೆ ‌ಮುಚ್ಚಬಾರದು. ನವೆಂಬರ್ ಅಂದರೆ ಕನ್ನಡ,  ಉಳಿದೆಲ್ಲ ತಿಂಗಳು ಬೇರೆ ಭಾಷೆಯದಾಸರಾಗುವುದಲ್ಲ.

         ಕನ್ನಡದ‌ ನಂಬಿಕೆಯ ಭಿನ್ನತೆಗಳ ಬೆಸದು ಒಂದು ಗೂಡಿಸಿ  ಕನ್ನಡ ನೆಲವ ಕನ್ನಡದ ನಂಬಿಕೆಯ ಕೈ ಹಿಡಿದು ನಡೆದಿತು ಉನ್ನತಿಯ ಶಿಖರಕ್ಕೆ ಕನ್ನಡದ ಕುಲವ ಎಂದ ಸಿದ್ದಯ್ಯಪುರಾಣಿಕರ ಮಾತಿನ ಅರಿವು ಇಂದು ಯಾರು ಗಮನಿಸುತ್ತಿಲ್ಲ.ಕರ್ನಾಟಕ ದಟ್ಟಕಾನನಗಳ , ಮೋಹಕ  ಕಡಲನ್ನು ಗಿರಿಶಿಖರಗಳನ್ನು, ನಿತ್ಯಹರಿದ್ವರ್ಣದ ಕಾಡುಗಳು ಜೀವವೈವಿಧ್ಯದ ತೊಟ್ಟಿಲಾದ ಪಶ್ಚಿಮ ಘಟ್ಟಗಳನ್ನು ತನ್ನ ಒಡಲೊಳಗೆ ಇರಿಸಿಕೊಂಡಿದೆ. ಒಟ್ಟಿನಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ನಮ್ಮ ನಾಡು ಎನ್ನುವುದನ್ನು‌ ಮರೆಯದೆ ಸಾಮಾನ್ಯವಾಗಿ ಕನ್ನಡಾಭಿಮಾನ  ಎಲ್ಲರಲ್ಲೂ ದ್ವಿಗುಣಗೊಳ್ಳುವುದು  ನವೆಂಬರ್ ನಲ್ಲಿ ಅನ್ನುವಂತಾಗ ಬಾರದು.

          ‌ಅರಂಕುಶ  ವಿಟ್ಟೊಡಂ ನೆನೆವುದೆನ್ನ‌ ಮನಂ ಬನವಾಸಿ‌ದೇಶಮಂ ಎಂದ ಪಂಪನ‌ ಮಾತಿನಂತೆ ಕನ್ನಡ ವನ್ನು ಕನ್ನಡ ತನವನ್ನು  ನಾಡು ನುಡಿಯ ರಕ್ಷಣೆ, ಅಭಿವೃದ್ಧಿಯ ಸಂಕಲ್ಪ ಈ ಸಂದರ್ಭದಲ್ಲಿ ರಾಜ್ಯೋತ್ಸವ ಅಂದ ತಕ್ಷಣ ಕನ್ನಡದ ಡಿಂಡಿಮ ಮೊಳಗಲಿದೆ. ನಾಡು ನುಡಿಯ ರಕ್ಷಣೆಯ ಸಂಕಲ್ಪ ಈ ಸಂದರ್ಭದಲ್ಲಿ ‌ಮತ್ತೊಮ್ಮೆ   ಕನ್ನಡದ ಡಿಂಡಿಮ‌ ಮೊಳಗಲಿದೆ.  ತಾಯಿ ಭುವನೇಶ್ವರಿ ದೇವಿಗೆ ಪುಷ್ಪಾ ರ್ಚನೆ ಧ್ವಜಾರೋಹಣ ಕನ್ನಂಡಾಬೆಯ‌ ಮೆರವಣಿಗೆ , ಗೌರವ ವಂದನೆ ನಡೆಯಲಿದೆ .


          
         ಕನ್ನಡ ಧ್ವಜ = ಅರಶಿಣ‌ ಹಾಗೂ ಕುಂಕುಮದ ಸಂಕೇತ ಕರ್ನಾಟಕದ ಹಳದಿ ಕೆಂಪು ವಿಶ್ರಿತಧ್ವಜ ನಮ್ಮ ಹೆಮ್ಮೆಯ ಪ್ರತೀಕವೂ ಹೌದು . ವಿವಿಧ ಸಂಘ- ಸಂಸ್ಥೆ ಗಳು ಶಾಲಾ ಕಾಲೇಜು, ಸರಕಾರಿ‌ ಕಚೇರಿಗಳಲ್ಲಿ ರಾಷ್ಟ್ರ ಧ್ವಜದ ಜತೆಗೆ  ಕನ್ನಡ ದ್ವಜ ಹಾರಿಸುವ  ಮೂಲಕ ನಾಡದೇವಿ ಭುವನೇಶ್ವರಿಗೆ ನಮನ ಸಲ್ಲುತ್ತದೆ.
   ಏರುತ್ತಿರುವುದು ಹಾರುತ್ತಿರುವುದು
   ನೋಡು ನಮ್ಮ ಬಾವುಟ
   ತೋರುತ್ತಿಹುದು‌ ಹೊಡೆದು‌ ಹೊಡೆದು
    ಬಾನಿನಗಲ ಪಟ ಪಟ….

ಇಂದಿಗೂ ಅಚ್ಚಳಿಯದೆ ನೆನಪಿನಂಗಳದಲ್ಲಿ ಗುಂಯ್ ಗುಟ್ಟುತ್ತಿರುವ ಪ್ರಾಥಮಿಕ ಶಾಲಾ ಪದ್ಯದಲ್ಲಿದ್ದ ಈ ಹಾಡು ಹಾಡುವಾಗಲೇ ಭಕ್ತಿ ಸೆರೆ ಉಕ್ಕುತ್ತದೆ ಇದು ರಾಷ್ಟ್ರದ ಭಾವುಟಕ್ಕೆ ನಾವು ನೀಡುತ್ತಿದ್ದ ಗೌರವ ಗಾಯನವಾದರು 
         ರಾಷ್ಟ್ರ ಮಾತೆಯಾಗಿ ತಾಯಿ ಭಾರತಿ ಕಾಣಿಸಿಕೊಂಡಂತೆ ಕರ್ನಾಟಕ ತಾಯಿಯಾಗಿ ಭುವ ನೇಶ್ವರಿ ನಮ್ಮ ‌ಮನದಲ್ಲಿ ಅರಳುವಳು.  ನಾಡಿನಾದ್ಯಂತ ಕನ್ನಡ ರಾಜ್ಯೋತ್ಸವ ಸಂಭ್ರಮದಿಂದ ಆಚರಿಸುವಾಗ  ಮನ ತಣಿಸುವ ನಾಡಗೀತೆ , ಭಾವಪರವಶರನ್ನಾಗಿ ನಮ್ಮನ್ನು ನಾವು ಮರೆಯುವಂತೆ ಮಾಡಿದ ತಾಯಿ ಭುವನೇಶ್ವರಿಯ ಸ್ತುತಿ ಹತ್ತು ‌ಹಲವು  ಕನ್ನಡ ಭಾವ ಗೀತೆಗಳು ಎಲ್ಲೆಡೆ ಅರಳುವ  ಕನ್ನಡ ಧ್ವಜ ನೋಡುಗರ ಕಣ್ಣಿನ ಹಬ್ಬ.
        ಕನ್ನಡ ಬಾವುಟ ‌ಮತ್ತೆ ಮೇಲೆರುವ ಈ ಹೊತ್ತಿನಲ್ಲಿ ಕನ್ನಡ ನಾಡಿನಿಂದ ಭಾರತ ರತ್ನಗಳು  ಮಿಂಚಿದ್ದು ನೆನಪಿಸಿ ಕೊಳ್ಳ ಬಹುದು.  ಮೋಕ್ಷಗುಂಡಂ ವಿಶ್ವೇಶ್ವರಯ್ಯ ಈ ಪ್ರಶಸ್ತಿ ಗೆ ಬಾಜನರಾದ ಮೊದಲ ಕನ್ನಡಿಗರು.
        
        ನಾಡ ಗೀತೆ =2004 ರಲ್ಲಿ ನಾಡಗೀತೆಯನ್ನು ಅಧಿಕೃತಗೊಳಿಸಲಾಯಿತು. ಕುವೆಂಪು ರಚಿಸಿದ  ಸಾಂಸ್ಕೃತಿಕ ವೈಭವದ  ನಾಡಗೀತೆ                         
        ಜಯ ಭಾರತ ಜನನಿಯ ತನುಜಾತೆ 
    ಜಯ ಹೇ ಕರ್ನಾಟಕ ಮಾತೆ
    ಜಯ ಸುಂದರ ನದಿ ವನಗಳ ನಾಡೆ
     ಜಯ ಹೇ ರಸ ಋಷಿಗಳ ಬೀಡೆ
      ರಾಘವ  ಮಧು ಸೂಧನರ ವತರಿಸಿದ 
      ಭಾರತ ಜನನಿಯ ತನುಜಾತೆ….. 
  ಈ ನಾಡ ಗೀತೆ ಕನ್ನಡಿಗರ  ಹೃದಯದಲ್ಲಿ ನಾಡಿನ ಬಗೆಗೆ ಅಭಿಮಾನದ ಅಲೆ ಎಬ್ಬಿಸಿದೆ . 
  
      ನಾಡಗೀತೆ ಹಾಡುವ  ಕಾಲಾಅವಧಿ, ಧಾಟಿ‌,ರಾಗ ಸಂಯೋಜನೆ,  ಪರಿಷ್ಕರಣೆ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದಿ ತಜ್ಞರ ಸಮಿತಿ ರಚಿಸಿ  ಅಭಿಪ್ರಾಯ ‌ಕೋರಿತ್ತು ಸರಕಾರ.


     ಜಯ ಭಾರತ ಜನನಿಯ ತನುಜಾತೆ ಕವಿತೆಯನ್ನು ಜನಪ್ರಿಯ ಗೊಳಿಸಿದವರು ಅನಂತ ಸ್ವಾಮಿ. ಮೈಸೂರು ಅನಂತಸ್ವಾಮಿ ಹಾಗೂ ಸಿ ಅಶ್ವಥ್ ಇಬ್ಬರ ಸ್ವರ ಸಂಯೋಜನೆಯ ದಾಟಿಗಳು ಜನ ಮನ್ನಣೆ ಗಳಿಸಿದ ನಂತರ ಅಧಿಕೃತ ಹಾಡಿನ ದಾಟಿ, ಸಮಯದ ಬಗ್ಗೆ ಹಲವಾರು ಪ್ರಶ್ನೆ ಗಳು ಮೂಡಿವೆ. ದಶಕದಿಂದ ಚರ್ಚೆ ನಡೆಯುತ್ತಿದೆ. ಸಲ ರಾಜೋತ್ಸವದ ವೇಳೆಗೆ ವಿವಾದಕ್ಕೆ ಇತಿ ಶ್ರೀ ಹಾಡುಲಿದ್ದಾರೆಯೇ ಕಾದು ನೋಡೋಣ.


         ರಾಜ್ಯೋತ್ಸವ ಪ್ರಶಸ್ತಿ = ರಾಜ್ಯ ಸರಕಾರದ  ಪ್ರ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಆಯ್ಕೆ ‌ಮಾಡಲಾಗುತ್ತದೆ.   ಈ ವರ್ಷ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರನ್ನು ಗುರುತಿಸಿ online ಮೂಲಕ ಅವರ‌ ಹೆಸರು ಶಿಫಾರಸು ಮಾಡಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಸೇವಾ ಸಿಂದು ಪೋರ್ಟ ಲ್ ಮೂಲಕ  ಅರ್ಹರನ್ನು ಗುರುತಿಸಬಹುದು . ರಾಜ್ಯ ಸರಕಾರದಿಂದ ನೀಡುವ ಉನ್ನತ ನಾಗರಿಕ ಪ್ರಶಸ್ತಿ ಇದು .ನವೆಂಬರ್ ಒಂದು ಕನ್ನಡ ರಾಜ್ಯೋತ್ಸವ ದಿನದಂದು  ರಾಜ್ಯದ ಮುಖ್ಯ ಮಂತ್ರಿಗಳು ಪ್ರದಾನಿಸುತ್ತಾರೆ. 1966 ರಿಂದ ರಾಜ್ಯೋತ್ಸವ  ಪ್ರಶಸ್ತಿ ಕೊಡಲು ಪ್ರಾರಂಭಸಲಾಗಿದೆ.‌ ಯಾವುದೇ ಪ್ರಶಸ್ತಿ ಸ್ಥಾಪನೆಯ ಹಿಂದೆ ‌ನಿಜವಾಗಿಯು ಉದತ್ತಾವಾದ  ಉದೇಶವಿರುತ್ತದೆ.‌ಈ ಪ್ರಶಸ್ತಿ ಕಲೆ, ಸಾಹಿತ್ಯ, ರಂಗ ಭೂಮಿ, ಸಿನಿಮಾ,  ಸಂಗೀತ, ನೃತ್ಯ, ಚಿತ್ರಕಲೆ, ಸಮಾಜ ಸೇವೆ, ಪತ್ರಿಕೋದ್ಯಮ, ಕ್ರೀಡೆ, ವೈದ್ಯಕೀಯ ,ಶಿಕ್ಷಣ ,ಕೃಷಿ, ವಿಜ್ಞಾನ ‌ಮತ್ತು ತಂತ್ರಜ್ಞಾನ ವಿಭಾಗಗಳಲ್ಲಿ ದಾನಗೈದ ಸಾಧಕರಿಗೆ ಕೊಡಲಾಗುವುದು.‌ ಕ್ರೀಡಾ ಕ್ಷೇತ್ರವನ್ನು ಹೊರತುಪಡಿಸಿ ಉಳಿದ  ಕ್ಷೇತ್ರದ ಪ್ರಶಸ್ತಿ ಪುರಸ್ಕೃತರು 60  ಪೂರೈಸಿರಬೇಕು‌. ಪ್ರಶಸ್ತಿ ಜೊತೆಗೆ ಹಾರ, ಶಾಲು, ಮೈಸೂರು ಪೇಟ ಹಣ್ಣಿನ ಬುಟ್ಟಿ ಜೊತೆಗೆ 25 ಗ್ರಾಮ್ ಚಿನ್ನದ ಪದಕ 1 ಲಕ್ಷ ನಗದು  ನೀಡಲಾಗುತ್ತದೆ‌. ರಾಜೋತ್ಸವ ಪ್ರಶಸ್ತಿಗೆ  ಶಿಫಾರಸಿಗಿಂತ ಸಾಧನೆಯೆ ಮಾನದಂಡ ವಾಗಾದಾಗಲೇ ಚಂದ‌  ಹಾಗೂ ‌ಗೌರವ.

           
    
          ‌ಹೆಸರಿನ‌ ಕುತೂಹಲ = ಕರ್ನಾಟಕ ಎನ್ನುವ ಹೆಸರಿನ ‌ಬಗ್ಗೆ‌  ಭಿನ್ನವಾದ  ವಿಶ್ಲೇಷಣೆಗಳಿವೆ.  ಕನ್ನಡಿಗರ ನಾಡು ಕರ್ನಾಟಕ ಎನ್ನುವುದು ಒಂದಾದರೆ  ಇನ್ನು ಕೆಲವರು ಹೇಳುವಂತೆ  ಕರ್ನಾಟಕದ ಬಹುತೇಕ ‌ಪ್ರದೇಶದಲ್ಲಿ ಕಪ್ಪು ‌ಮಣ್ಣು ಇದ್ದು ‌.  ಕರು ಎಂದರೆ  ಕಪ್ಪು  ಇರುವುದರಿಂದ  ಕರ್- ನಾಡು ಕರ್ನಾಟಕ ಆಯಿತೆನ್ನುವ ವಾದವೂ ಇದೆ.  ಕನ್ನಡ‌ ಮಾತನಾಡುವ ನಾಡು  ಕರ್ನಾಟಕ ಆಯಿತು ಎನ್ನಲಾಗುತ್ತದೆ.    ಏಕೀಕರಣ ಮರು  ನಾಮಕರಣದ‌ನಂತರವು ಕನ್ನಡ ಮಾತನಾಡುವ ಪ್ರದೇಶಗಳು ಕರ್ನಾಟಕದ ತೆಕ್ಕಗೆ ಇನ್ನು ಬಂದಿಲ್ಲ ಕನ್ನಡ ಮಾತನಾಡುವ ಪ್ರದೇಶಗಳು ಏಕಿಕರಣಗೊಂಡು‌ ಕರ್ನಾಟಕ ಎನ್ನುವ ಹೆಸರಾಯಿತು ಅನ್ನುವರು ಇದ್ದಾರೆ. ಕರ್ನಾಟಕ ಪದದ ಮೂಲ ಪದ ಸಂಸ್ಕೃತ . ಸಂಸ್ಕೃತದ‌ ಕನ್ನಡ ಎಂಬ ಪದದಿಂದ ಕರ್ನಾಟಕವಾಯಿತು.

          ಕರ್ನಾಟಕದ ಏಕೀಕರಣದ ನಿಜವಾದ ಆಶಯ ಸಕಾರಗೊಂಡಿದೆಯೆ ನಿರೀಕ್ಷಿತ ಪ್ರಗತಿ ಸಾಧನೆ ಯಾಗಿದೆಯಾ ನಾಡಿನಾದ್ಯಾಂತ ಪಸರಿಸಿದ  ಕನ್ನಡ ಕಂಪಿನ ನಡುವೆ‌ ತಾಯಿಕನ್ನಡಾಂಬೆಗೆ  ನಮನ ಸಲ್ಲಿಸುತ್ತಾ ಕನ್ನಡ ಭಾಷೆ ‌ಬಗೆಗೆ ನಿಜವಾದ ಅಭಿಮಾನ‌  ಕಾಳಜಿ ಪ್ರತಿ ಯೊಬ್ಬ ಕನ್ನಡಿಗನಲ್ಲಿ ಮೂಡಬೇಕು.      
    ಕನ್ನಡ ಎನಿ‌ ಕುಣಿದಾಡುವುದೆನ್ನೆದೆ
    ಕನ್ನಡ ಎನೆ‌ ಕಿವಿ ನಿಮಿರುವುದು
    ಕಾಮನ ಬಿಲ್ಲನು‌ ಕಾಣುವ ಕವಿಯೊಳು 
    ತಟನೆ ಮನ ಮೈ ಮರೆಯವುದು  

ರಾಷ್ಟ್ರಕವಿ ಕುವೆಂಪು ಅವರು ರಚಿಸಿದ ಈ ಕವಿತೆ ಮೈಮನ ನವಿರೇಳಿಸುತ್ತದೆ.

           ರಾಜ್ಯಾ ಮತ್ತೊಂದು ರಾಜ್ಯೋತ್ಸವ  ಸಂಭ್ರಮದ ಮುಂಬೆಳಕಿನಲ್ಲಿ ನಿಂತಿದೆ ಹಾಗೆ  ಹಿನ್ನೋಟ‌ ಹರಿಸಿದಾಗ ಕಾಣಸಿಗುವುದು ಕರ್ನಾಟಕದ ಲಾಂಛನವಾದ  ಎರಡು ತಲೆಗಳ  ಕಾಲ್ಪನಿಕ ಪಕ್ಷಿ ಗಂಡ ಬೇರುಡ ಮತ್ತು ರಾಜ್ಯ ಮರ ಶ್ರೀ ಗಂಧ, ಹೂ- ಕಮಲ, , ಪ್ರಾಣಿ- ಆನೆ,‌ಪಕ್ಷಿ- ನೀಲಕಂಠ, ರಾಜ್ಯ ‌ನೃತ್ಯ ಯಕ್ಷಗಾನ ಇದೆಲ್ಲ ಕಣ್ಣಮುಂದೆ ಹಾದು ಹೋಗುತ್ತದೆ.ಹಾಗೆ ನಾಡು ನುಡಿಯ ಬಗ್ಗೆ ಅಭಿಮಾನಗಳು ಮೂಡುತ್ತದೆ.

ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು…

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments