Thursday, December 1, 2022
HomeKannada Articleರಂಗನತಿಟ್ಟನಲ್ಲಿ  ಬಾನಾಡಿಗಳ - ಚಿನ್ನಾಟ : Heggaddesamachar

ರಂಗನತಿಟ್ಟನಲ್ಲಿ  ಬಾನಾಡಿಗಳ – ಚಿನ್ನಾಟ : Heggaddesamachar

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ     

   ಶ್ರೀ ರಂಗಪಟ್ಟಣದಿಂದ ನಾಲ್ಕು ಕಿ.ಮೀ ದೂರದಲ್ಲಿ ‌ಕಾವೇರಿ ಜಲಾಶಯ ವ್ಯಾಪ್ತಿಯ ಸುಮಾರು ನಲ್ವತ್ತು ಎಕರೆ‌ಪ್ರದೇಶದಲ್ಲಿ ರಂಗತಿಟ್ಟು ಪಕ್ಷಿಧಾಮವಿದ್ದು‌ ಮೈಸೂರಿನಿಂದ ಇಪ್ಪತ್ತು ಕಿ.ಮೀ.ದೂರದಲ್ಲಿದೆ.  ವೈವಿಧ್ಯಮಯ ಜೀವ ಸಂಕುಲಗಳಲ್ಲದೆ ವಿಶ್ವದ ಎಲ್ಲೆಡೆಯಿಂದ ‌ಇಲ್ಲಿಗೆ ಆಗಮಿಸುವ ‌ಬಾನಾಡಿಗಳ ಗುಂಪನ್ನು ನೋಡುವುದೇ ಮಹಾನಂದ. ಪ್ರಕೃತಿಯ ಸೌಂದರ್ಯದ ನಡುವೆ ಪಕ್ಷಿಗಳ‌ ಕಲರವದಲ್ಲಿ ಪ್ರವಾಸಿಗರು ತಲ್ಲೀನರಾಗುವಂತೆ ಮಾಡುವುದು ಈ ತಾಣ. ದೇಶವಿದೇಶದ ಮೂಲೆ ಮೂಲೆಗಳಲ್ಲಿರುವ ಬಗೆ‌ಬಗೆಯ ಪಕ್ಷಿಗಳು‌ ಸೇರುವ ಪಕ್ಷಿ ಧಾಮವಿದು. ಪಕ್ಷಿ ಪ್ರಿಯರ ನೆಚ್ಚಿನ ತಾಣ. ಕಾವೇರಿ ನದಿಯ ದ್ವೀಪದಲ್ಲಿ ವಾಸಿಸುವ ಪಕ್ಷಿಗಳ ಗುಂಪು ಕಣ್ಮನ ‌ಸೆಳೆವ ರಂಗನ‌ತಿಟ್ಟಿನ ಮುಕುಟ‌ಮಣಿ. ಈ ಜಾಗದಲ್ಲಿ  ಪ್ರವಾಸಿಗರು ಸಮೀಪದಲ್ಲಿಯೇ ಪಕ್ಷಿಗಳನ್ನು ವೀಕ್ಷಿಸಬಹುದು.

       ಮೈಸೂರು ಸಂಸ್ಥಾನವನ್ನು ಆಳಿದ ಒಡೆಯರ ಮನೆತನದಿಂದ ಪಕ್ಷಿಗಳಿಗೆ ಆನಂದನವೊಂದು ಪ್ರಾರಂಭವಾಯಿತು. 1939ರಲ್ಲಿ ‌ಮೈಸೂರಿಗೆ ಭೇಟಿ ‌ನೀಡಿದ ಪಕ್ಷಿ ವಿಜ್ಞಾನಿ ಡಾ. ಸಲೀಂ ಆಲಿಯವರು ರಂಗನತಿಟ್ಟಿನ ಮಹತ್ವವನ್ನು  ಹಾಗೂ ಈ ಪ್ರದೇಶದ ರಕ್ಷಣೆಗೆ  ಮೈಸೂರು ಅರಸರಲ್ಲಿ ಮನವಿ‌ಮಾಡಿದ್ದು. ರಂಗನತಿಟ್ಟು ಪ್ರವೇಶದ್ವಾರದಲ್ಲಿರುವ ಮಾಹಿತಿ ‌ಕೇಂದ್ರಕ್ಕೆ ಡಾ.ಸಲೀಂ ಆಲಿಯವರ ‌ಹೆಸರನ್ನು  ಇಡಲಾಗಿದೆ.


    ಅಗಣಿತ ಅಚ್ಚಿಯ ಬಾನಾಡಿಗಳ‌ ಚಿನ್ನಾಟ ನೋಡಲು ಅಕ್ಟೋಬರ್ ನಿಂದ ಮಾರ್ಚ್ ತಿಂಗಳವರೆಗೆ  ಸೂಕ್ತಕಾಲ. ನವೆಂಬರ್, ಡಿಸೆಂಬರ್ ನ ಮೈಕೊರೆಯುವ ಚಳಿಯಿಂದ ರಕ್ಷಿಸಿಕೊಳ್ಳಲು ಟಿಬೇಟ್, ಲಡಾಕ್, ಮಂಗೋಲಿಯಾ ರಾಷ್ಟಗಳಿಂದ ಪಕ್ಷಿಗಳು ಇಲ್ಲಿಗೆ ಆಗಮಿಸುತ್ತವೆ.  ಹಕ್ಕಿಗಳಿಗೆ ಬೇಕಾದ ಸೂಕ್ಷ್ಮ ಪರಿಸರ, ವಾಸ ಹಾಗೂ ಸಂತಾನೋತ್ಪತ್ತಿಗೆ ಪೂರಕವ್ಯವಸ್ಥೆ ಇದೆ. ಹಕ್ಕಿಗಳಿಗೆ ಗೂಡುಕಟ್ಟಲು ಅನುಕೂಲವಾಗುವಂತೆ ಹುಲ್ಲು ಬೆಳೆಸಲಾಗಿದೆ.

       ರಂಗನತಿಟ್ಟು  ಪಕ್ಷಿಧಾಮದಲ್ಲಿ ಗುಬ್ಬಿಚ್ಚಿಯಿಂದ ರಣಹದ್ದಿನವರೆಗೆ  ನಾನಾ ಆಕಾರದ ಬಣ್ಣ,ರೂಪದಲ್ಲಿ, ನಡವಳಿಕೆಯಲ್ಲಿ ಭಿನ್ನ, ವಿಭಿನ್ನವಾದ ಪಕ್ಷಿ ಪ್ರಪಂಚ  ಹಕ್ಕಿಗಳಲ್ಲಿ ಭಾವನೆಗಳಿವೆ ,ಹಸಿವು, ನಿದ್ದೆ, ತಲ್ಲಣ, ನೀರಡಿಕೆಗಳಿವೆ. ಅವುಗಳು  ಸಂಸಾರ ನಡೆಸುವ ಪರಿ ತನ್ನವರಿಗೆ ರಕ್ಷಣೆ ಒದಗಿಸುವ ಪಕ್ಷಿಗಳ ಜೀವನ ಶೈಲಿ ಯಿಂದ ಮಾನವ ಕಲಿಯ ಬೇಕಾದುದು  ಬಹಳಷ್ಟಿದೆ. ಅವುಗಳ ವೀಕ್ಷಣಾ ಸಾಮರ್ಥ್ಯಕ್ಕೂ  ಬೆರಗಾಗಲೇ  ಬೇಕು  .ಪಕ್ಷಿಗಳು ಅಪಾಯ , ಬೇಸರ ,ಸಂತಸ ಹೀಗೆ ವಿವಿಧ ಭಾವನೆಗಳಿಗೆ ಭಿನ್ನ ಧ್ವನಿಯ ಮೂಲಕ ಅಭಿವ್ಯಕ್ತಗೊಳುತ್ತವೆ.

     ಪ್ರಕೃತಿಯೇ  ಹಾಗೆ ಕುತೂಹಲಗಳ  ಖಜಾನೆ. ಭೂಮಿಯಲ್ಲಿ  ವಾಸಿಸುವ ಜೀವಿ ವೈವಿಧ್ಯಗಳಲ್ಲಿ ಪಕ್ಷಿ ಗಳ ಸಹಬಾಳ್ವೆ, ಸಾಮರಸ್ಯ, ಕೆಲವು ಪಕ್ಷಿಗಳ ನಡುವಿನ ಸಂಬಂಧಗಳು ಶಬ್ದಗಳ ವರ್ಣನೆಯ ಪರಿಧಿಗಳಿಂದಾಚೆ ಉಳಿಯುತ್ತದೆ . ಪ್ರಕೃತಿಸೊಬಗಿನ‌ ನಿರ್ಮಲತೆಯ  ಪ್ರತೀಕ ಬಾನಾಡಿಗಳು.  

     ಬೆಳಗಿನ ದೋಣಿ ವಿಹಾರ, ಪಕ್ಷಿಗಳ‌ ವೀಕ್ಷಣೆಗೆ ಸೂಕ್ತ ಸಮಯ. ಬೋಟಿಂಗ್  ಪ್ರತ್ಯೇಕ 60 ರೂಪಾಯಿ ನೀಡಿ ಮೂವತ್ತು ‌ನಿಮಿಷಗಳವರೆಗೆ ನದಿಯಲ್ಲಿ ವಿಹರಿಸ ಬಹುದು. ಇಲ್ಲಿ ಜಲಕ್ರೀಡೆ ಆಡುವ ಹಕ್ಕಿಗಳು, ಗುಬ್ಬಚ್ಚಿಯಿಂದ ರಣಹದ್ದಿನವರೆಗೆ ನಾನಾ ಆಕಾರದ  ಹಕ್ಕಿಗಳಿಗೆ. ಆಕಾರ , ಬಣ್ಣ, ರೂಪ, ನಡವಳಿಕೆಯಲ್ಲಿ ಪ್ರತಿಯೊಂದರಲ್ಲೂ  ಭಿನ್ನವಾದ  ಪಕ್ಷಿ ಪ್ರಪಂಚ ರಂಗನ ತಿಟ್ಟಿನಲ್ಲಿದೆ. 

      ‌ಹಕ್ಕಿಗಳು ಹಾರುತ್ತಲೇ ನೀರಿನೊಳಗೆ ಮೀನನ್ನು ಗಮನಿಸಿ ತಟ್ಟನೆ ನೀರಿನಲ್ಲಿ ಮುಳುಗಿ ಮೀನು ಹಿಡಿಯುವುದನ್ನು ‌ನೋಡುವಾಗ ಇವುಗಳ ಚುರುಕು ಸೂಕ್ಷ್ಮ ಗಾಹಿತನಕ್ಕೆ  ಆಶ್ಚರ್ಯವಾಗುತ್ತದೆ. ಸಾಗರೋಪಾದಿಯಲ್ಲಿ ಸಾವಿರ ಸಾವಿರ‌ಹಕ್ಕಿಗಳು ಒಮ್ಮೆ ಲೆ ಹರಿದು ಬಂದರೆ ಅದೆಂಥ ಬೆರಗು ಹುಟ್ಟಿಸಬಹುದೆಂದು ನೀವೇ ಯೋಚಿಸಿ. ಇಂತಹ ದೃಶ್ಯ ಸಿಗ ಬೇಕಾದರೆ ರಂಗನತಿಟ್ಟು ಪಕ್ಷಿಧಾಮಕ್ಕೆ ಭೇಟಿ ನೀಡಲೇಬೇಕು . ಇಲ್ಲಿನ ದೇಶ ವಿದೇಶದ  ಹಕ್ಕಿಗಳು ಒಂದಕ್ಕಿಂತ ಒಂದು ಚೆನ್ನ, ಒಂದಕ್ಕಿಂತ ಮತ್ತೊಂದು ಭಿನ್ನ. ಇಲ್ಲಿನ ಪಕ್ಷಿ ಗಳ ಜಾಣ್ಮೆಗೆ ತಲೆದೂಗಲೇ‌ಬೇಕು.‌ ಗೂಡುಕಟ್ಟಲು ಕಡ್ಡಿಗಳನ್ನು ಕೊಕ್ಕಿನಲ್ಲಿ  ಹಿಡುದು ತರುವ ದೃಶ್ಯ, ಮರಿಗಳಿಗೆ ರಕ್ಷಣೆ ನೀಡುಲು ತನ್ನ ರೆಕ್ಕೆಗಳ ಕೆಳಗೆ ಪ್ರೀತಿಯಿಂದ ಅಪ್ಪಿಕೊಳ್ಳುವ ದೃಶ್ಯ, ಇಳಿಸಂಜೆ ‌ಹೊತ್ತಿಗೆ ಗೂಡು ಸೇರುವಾಗ ಅಲ್ಲೊಂದು ಪಕ್ಷಿ ಸಂಕುಲದ ಸುಂದರ ಸಂವಹನದ  ನಿನಾದವೇ  ಸೃಷ್ಟಿಯಾಗುತ್ತದೆ. ಇದನ್ನೆಲ್ಲಾ ನೋಡಲು  ಪ್ರವಾಸಿಗರಿಗೆ  ಅಟ್ಟಣಗೆ‌  ನಿರ್ಮಾಣ ‌ಮಾಡಲಾಗಿದೆ.

       ರಂಗನ ತಿಟ್ಟಿನಲ್ಲಿ ‌‌ವಿಶಿಷ್ಟ ‌ಬಗೆಯ ಇನ್ನೂರಕ್ಕೂ ‌ಹೆಚ್ಚಿನ ಪ್ರಭೇದದ ವೃಕ್ಷಗಳನ್ನು ‌ಇಲ್ಲಿ ಕಾಣಬಹುದು.‌ ಮರಗುಡ, ಬಳ್ಳಿ, ಹುಲ್ಲು , ಜಲಸಸ್ಯ ವಲಸೆ ಬರುವ ಹಕ್ಕಿಗಳಿಗೆ ತಂಗುದಾಣವಾಗಿದೆ. ಕಾವೇರಿ ನದಿಯ ‌ದಂಡೆಯ ಆಸುಪಾಸುನ ‌ಮರಗಳ ಮೇಲೆ ಹಕ್ಕಿ ಠಿಕಾಣಿ ಹೂಡುತ್ತವೆ. ಗೂಡು‌ಕಟ್ಟಲು ಕುರುಚಲು ‌ಪೊದೆಗಳು, ನೆಲೆಯಾಗಲು ಅನುಕೂಲಕರ ಪ್ರದೇಶ, ವಾತಾವರಣ ಇಲ್ಲಿದೆ. ಪ್ರವಾಸಿಗರಿಗೆ ಪ್ರಕೃತಿ ಸೌಂದರ್ಯದೊಂದಿಗೆ ಪಕ್ಷಿಗಳ  ಚಿನ್ನಾಟ, ಚಿಲಿಪಿಲಿ‌ನಿನಾದ, ನಿತ್ಯ ಕಲರವ  ನೋಡಿ ಆನಂದಿಸಲು  ಸದಾವಕಾಶ. ಆಯಾ ಪಕ್ಷಿಗಳು  ತಮ್ಮದೇ ಆದ ಧ್ವನಿಯಲ್ಲಿ ಸದ್ದು‌ ಮಾಡುತ್ತಾ‌ ಮರದಿಂದ ಮರಕ್ಕೆ ಕೊಂಬೆಯಿಂದ ಕೊಂಬೆಗೆ‌ ಹಾರಾಡುವುದನ್ನು ನೋಡುವಾಗ ಮೂಖಜೀವಿಗಳಿಗೆ  ಎಷ್ಟೊಂದು ಜೀವಂತಿಕೆ  ಇದೆ ಎಂದೆನುಸುತ್ತದೆ. ರಂಗನ ತಿಟ್ಟಿನ  ನಡು ತಟದಲ್ಲಿಯ  ಹಸಿರುಕ್ಕಿಸುವ ತೋಟ, ಗದ್ದೆ, ಕೇದಿಗೆ‌ಬನ, ಮುಂಡಿಗ ಸಸ್ಯಗಳಲ್ಲಿ ‌ಕಾಣಸಿಗುವ  ಹಕ್ಕುಗಳು ಬೇಡವೆಂದರು ನಮ್ಮನ್ನು ತಡೆದು ನಿಲ್ಲುವಂತೆ ಮಾಡುತ್ತದೆ. ಪಕ್ಷಿ ‌ಪ್ರೇಮಿಗಳಿಗೆ  ಪಕ್ಷಿ ಗಳ ಸಮಗ್ರ ಅಧ್ಯಯನ ‌ಮಾಡುವವರಿಗೆ  ಇದು ಸೂಕ್ತ ಸ್ಥಳ.


       
ರಾಮ್ಸಾರ್ ಜೌಗು ತಾಣ

     ವೈವಿಧ್ಯಮಯ ಪಕ್ಷಿ ಜಲಚರ, ಔಷಧೀಯ ಸಸ್ಯಗಳನ್ನು ಹೊಂದಿರುವ ರಾಜ್ಯದ ಅತೀ ದೊಡ್ಡ ‌ಪಕ್ಷಿಧಾಮ ಮಂಡ್ಯ ಜಿಲ್ಲೆಯ  ಶ್ರೀ ರಂಗಪಟ್ಟಣದ ರಂಗನತಿಟ್ಟು ‌ಪಕ್ಷಿಧಾಮನ್ನು ರಾಮ್ಸೂರ್ ವೆಟ್ ಲ್ಯಾಂಡ್ (ಜೌಗುತಾಣ) ಎಂಬ ಘೋಷಿಸುವಂತೆ‌ ರಾಜ್ಯ ಅರಣ್ಯ ಇಲಾಖೆ ಕೇಂದ್ರ ಸರಕಾರಕ್ಕೆ ಮನವಿ‌ಮಾಡಿತ್ತು. ಈಗ ಕಾವೇರಿ ನದಿ‌ಕಣಿವೆ ಪ್ರದೇಶದ ರಂಗನ‌ತಿಟ್ಟು ಪಕ್ಷಿಧಾಮ ಹಲವು ದ್ವೀಪಗಳಿಂದ ಕೂಡಿದೆ. ವರ್ಷ ಪೂರ್ತಿ ನೀರು ಹರಿಯುವ ನೈಸರ್ಗಿಕ ಜಾಗುತಾಣ ಪ್ರದೇಶದಲ್ಲಿ ಈ ತಾಣದ ಸ್ಥಿತಿ ಗತಿಗಳನ್ನು  ಗಮನಿಸಿ  ಪರಿಸರ ತಜ್ಞರು ಸಮೀಕ್ಷೆ ‌ನಡೆಸಿ ಪರಿಸರ ಸೂಕ್ಷ್ಮ ‌ಪ್ರದೇಶವಾಗಿರುವ ರಂಗನತಿಟ್ಟು ರಾಮ್ಸಾರ್ ಜೌಗು ಎಂದು ಘೋಷಿಸಿತು.

    1971 ರಲ್ಲಿ ಇರಾನ್ ದೇಶದಲ್ಲಿರುವ ರಾಮ್ಸಾರ್ ಎಂಬಲ್ಲಿ ವಿಶ್ವದ ವಿವಿಧ ಜೌಗು ಪ್ರದೇಶಗಳ ಸಂರಕ್ಷಣೆಗೆ ಸಮಾವೇಶ ನಡೆದಿತ್ತು.‌ ಅದೇ‌ಹೆಸರಿನಿಂದ ಜೌಗು ತಾಣಗಳ ಸಂರಕ್ಷಣೆ‌ಮಾಡಲಾಗುತ್ತದೆ.

ಬಾನಾಡಿಗಳ ವಲಸೆ
    ಪಕ್ಷಿ ಗಳಿಗೂ ಉಂಟು  ಪ್ರವಾಸದ ಹುಚ್ಚು. ಆಹಾರ, ಸಂತಾನಾಭಿವೃದ್ಧಿ ‌ಮತ್ತು ಪ್ರತಿ ಕೂಲ ಹವಾಮಾನದ ಕಾರಣಕ್ಕಾಗಿ ‌ವಲಸೆ ಹೋಗುತ್ತವೆ. ಸ್ಥಳೀಯವಾಗಿ ವಲಸೆ ಹೋಗುವ ಪಕ್ಷಿಗಳು ಸಾಮಾನ್ಯವಾಗಿ ಆಹಾರ ಉಪಲಬ್ದತೆ ಅವಲಂಬಿಸಿ ‌ಸೀಮಿತ  ಪ್ರದೇಶಕ್ಕೆ ಹೋಗುತ್ತದೆ.ಋತುಗಳು ಬದಲಾದಂತೆ ವಾಸಸ್ಥಳ ಬದಲಾಯಿಸುತ್ತವೆ.‌ ಪಕ್ಷಿಗಳು‌ ನಿಖರವಲಸೆಯನ್ನು ಪೂರೈಸಿ ಕೆಲ ಸ್ಥಳಗಳಿಗೆ ಸುಮ್ಮನೆ ಭೇಟಿ ಕೊಡುವುದು ಉಂಟು, ನೈಸರ್ಗಿಕವಾಗಿ ಶ್ರೀ ಮಂತವಾಗಿರುವ ಅಂದರೆ ಆಹಾರ, ಧಾನ್ಯ, ಹುಳು ಹಪ್ಪಟ್ಟೆ ಹೇರಳವಾಗಿ ಸಿಗುವ ಸ್ಥಳಗಳಿಗೆ ಹಕ್ಕಿಗಳು ವಲಸೆ‌ಹೋಗುತ್ತವೆ. ರಂಗನತಿಟ್ಟು ಪಕ್ಷಿ ಧಾಮಗಳಲ್ಲಿ ಮುನ್ನೂರಕ್ಜೂ  ಹೆಚ್ಚುಜಾತಿಯ ಪಕ್ಷಿಗಳು ಚಳಿಗಾಲದಲ್ಲಿ  ಬಂದರೆ ಕೆಲ‌ ಪಕ್ಷಿಗಳು ಬೇಸಿಗೆಯಲ್ಲಿಬರುತ್ತವೆ. ವಿವಿಧ ಪ್ರಭೇದದ  ಪಕ್ಷಿಗಳು ದೂರದ ಬರ್ಮಾ, ಇಂಡೋನೇಶಿಯಾ , ಥೈಲ್ಯಾಂಡ್, ಪಾಕಿಸ್ತಾನದಿಂದ  ಇಲ್ಲಿಗೆ ವಲಸೆ ‌ಬರುತ್ತದೆ.

     ಪ್ರಪಂಚದಲ್ಲಿ ಅತ್ಯಂತ ದೂರ ವಲಸೆ ಹೋಗುವ ಆರ್ಕಿಕ್ಟನ್ ‌ಕೂಡ ರಂಗನತಿಟ್ಟು ಪಕ್ಷಿಧಾಮಕ್ಕೆ ಆಗಮಿಸಿದ  ದಾಖಲೆ ಇದೆ. ಇವುಗಳು ಬಹುದೂರ  ಹಾರಲು ಬೇಕಾಗುವಶಕ್ತಿಗಾಗಿ  ಹೆಚ್ಚಿನ ಆಹಾರ ಸೇವಿಸುತ್ತವೆ. ವೃತ್ತಾಕಾರದಲ್ಲಿ, ಎತ್ತರಕ್ಕೆ ದೀರ್ಘ ಕಾಲ ಗುಂಪಿನಲ್ಲಿ ಹಾರುವುದು ಮೊದಲಾದ  ವಿವಿಧ ಬಗೆಯ ಹಾರುವಹಕ್ಕಿಗಳು ನದಿ,ಸರೋವರದ, ಸಾಗರ, ಪರ್ವತ ದಾಟಿ‌ಬರುತ್ತದೆ. ಭೂಮಿಯ ಗುರುತ್ವಾಕರ್ಷಣೆ ಹಕ್ಕಿಗಳ ವಲಸೆಯ ಮಾರ್ಗಸೂಚಿ. ಅನಾನೂಕೂಲಕರ ಪರಿಸ್ಥಿತಿಯಿಂದ  ತಪ್ಪಿಸಿಕೊಳ್ಳಲು ಪಕ್ಷಿಗಳು ನಿರ್ದಿಷ್ಟ ಸಮಯ ದಲ್ಲಿ ಚಾಚು ತಪ್ಪದೆ ವಲಸೆ  ಪ್ರಕ್ರಿಯೆಗೊಳಪಡಿಸುತ್ತವೆ.  

      ವಲಸೆ  ಹಕ್ಕಿಗಳಲ್ಲಿ ಅತೀ ದೂರ ದೇಶಗಳ  ವ್ಯಾಪ್ತಿ‌ಮೀರಿ ಹಾರಾಡುವ ಪಕ್ಷಿಗಳು  ಗುಂಪಿನಲ್ಲಿ  ವಲಸೆ ಹೋಗುವ ಹಕ್ಕಿಗಳು ಪ್ರಯಾಣದ  ನಡುವೆ ಅಲ್ಲಲಿ ವಿರಮಿಸಿ ಮುನ್ನಡೆವ ಹಕ್ಕಿಗಳು ಅಲ್ಲದೆ ಪ್ರತಿ ವರ್ಷವೂ ಒಂದೇ ಹಾದಿಯಲ್ಲಿ ಸಾಗುವ ಹಕ್ಕಿಗಳ ವಿರಮಿಸುವ ಸ್ಥಳಗಳು ಒಂದೆ ಆಗಿದ್ದು  ರಂಗನತಿಟ್ಟು ಪಕ್ಷಿ ಕಾಶಿ  ಇವುಗಳಿಗೆ  ಆಶ್ರಯತಾಣವಾಗಿದೆ.

          ಹಕ್ಕಿಗಳ  ಪಯಣ, ಪ್ರಭೇಧ, ವಲಸೆ ಹಕ್ಕಿಗಳ ಮಾಹಿತಿ ಇವುಗಳ ಜೀವನ ಕ್ರಮ, ಆಹಾರ ಸೇವನೆ, ವಂಶಾಭಿವೃದ್ಧಿ ಯ  ಬಗ್ಗೆ ಮಾಹಿತಿಯನ್ನು  ಗೈಡ್ ‌ಇಲ್ಲಿ ನೀಡುತ್ತಾರೆ. ನ್ಯೂಜೆರ್ಸಿಯ ‌‌ಮೂಲದೆಂದು  ಹೇಳಲಾಗುವ ಮಿಂಚಿನ  ಕೆಂಬೇರ್ಗ ಪಕ್ಷಿಯು ವಲಸೆ  ಬರುವ ಪ್ರಮುಖ  ಪಕ್ಷಿ ಗಳಲ್ಲೊಂದು. ಹೊಳೆಯುವ ಗರಿಗಳಿಂದ  ಇವುಗಳಿಗೆ ಮಿಂಚಿನ ಕೆಂಬೇರ್ಗ ಎಂದು  ಹೆಸರು. ಈ ಪಕ್ಷಿಗಳನ್ನು  ನೋಡುವುದೇ ಒಂದು ‌ಚೆಂದ. 

ಪಕ್ಷಿಗಳ ಜಾತ್ರೆ

        ನವೆಂಬರ್ ‌ನಿಂದ ಮಾರ್ಚ್‌ ವರೆಗೆ ವಲಸೆ ಹಕ್ಕಿಗಳಿಂದ ರಂಗನತಿಟ್ಟು ಪಕ್ಷಿ ಧಾಮ ತುಂಬಿರುತ್ತದೆ. ಚಳಿಗಾಲದಲ್ಲಿ ವಲಸೆ‌ಬರುವ ಕುಂದು ತಲೆಯ ಕಡಲಕ್ಕಿ‌ಲೋಚಗುಟ್ಟುವುದನ್ನು  ಕಾಣಬಹುದು. ಕೆಂಪು‌ಕಾಲಿನ  ಬಾಣ ಹಕ್ಕಿ‌ಚಳಿ‌ತಡೆಯಲಾರದೆ  ಹೆಚ್ಚು ದೂರ ಪಯಣಿಸಿ ಭಾರತಕ್ಕೆ  ಬರುವುದು, ಬೂದುಕತ್ತಿನ ಲಾಫಿಂಗ್ ಧ್ರಶ್ ಹಾಗೂ ಮಲಬಾರ್ ಸಿಳ್ಳದಗಳ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ತಗ್ಗುತ್ತಿದ್ದರು ರಂಗನತಿಟ್ಟು ಪಕ್ಷಿಧಾಮದಲ್ಲಿ ಹೆರಳವಾಗಿ ‌ಕಾಣಸಿಗುತ್ತದೆ. ನಿರಂತರ ಚಟುವಟಿಕೆಯಲ್ಲಿದ್ದು ಸಾಮಾನ್ಯವಾಗಿ ಗುಂಪಿನಲ್ಲಿರುವ ಕಂದು‌ ಮೈಯಲ್ಲಿ ಬೂದು ಬಣ್ಣದ‌ಗರಿ ಹಾಗೂ ಹಳದಿ ಬಣ್ಣದ  ಕೊಕ್ಕು ಹೊಂದಿರುವ ಹರಟೆ ಮಲ್ಲ ಪಕ್ಷಿ. ಸಂಘ ಜೀವನದ ಪ್ರತೀಕದಂತಿರುವ ಹರಟೆ ಮಲ್ಲ ಅಪಾಯ ಬಂದರೆ ಸತ್ತಂತೆ ಬಿದ್ದು ನಾಟಕ ವಾಡಿ ವೈರಿಗಳಿಂದ ತಪ್ಪಿಸಿಕೊಳ್ಳುವ  ಜಾಣ್ಮೆ ಯನ್ನು  ಹೊಂದಿದೆ.

ಅಷ್ಟೇ ಅಲ್ಲದೇ ಥಟ್ಟನೆ ಮಿಂಚಿ‌ಮರೆಯಾಗುವ ರಿವಟ್ರ್ ಟನ್ರ್ ಹಕ್ಕಿಯ  ವೇಗದ  ಹಾರಾಟ  ಪ್ರವಾಸಿಗರಿಗೆ  ಸಂತಸವೆನಿಸುತ್ತದೆ. 

        ಜಾತಕ ಪಕ್ಷಿ  ಹೆಸರು ಕೇಳಿದ್ದೆ  ನೋಡಿದ್ದು ಇದೇ  ಮೊದಲ ಬಾರಿ  ರಂಗನ ತಿಟ್ಟು ಪಕ್ಷಿಧಾಮದಲ್ಲಿ ಕಾಯುವಿಕೆಗೆ  ಪ್ರಖ್ಯಾತವಾಗಿರುವ ಜಾತಜ ಪಕ್ಷಿ ಆಪ್ರೀಕಾ ಮತ್ತು ಏಷ್ಯಾ ಖಂಡದಲ್ಲಿ  ಹೆಚ್ಚು ಕಾಣಸಿಗುವುದು. ಕೋಗಿಲೆಯ ಪ್ರಭೇದಕ್ಕೆ  ಸೇರಿದ ಹಕ್ಕಿ ತಲೆಯ ಮೇಲಿರುವ  ಕೋಡಿನಂತೆ  ಎದ್ದು ನಿಂತಿರುವ ಕಪ್ಪು ಬಿಳಿಪು ಪುಟ್ಟ ಜುಟ್ಟು ಇವುಗಳ ಮುಖ್ಯ ಚಿಹ್ನೆ. ಇಂಪಾದ ಸ್ವರ ಹೊಂದಿದ  ಪಕ್ಷಿಗಳ ಸಾಲಿಗೆ ಸೇರುತ್ತದೆ. ಇವುಗಳು ಕೇವಲ ಮಳೆಯ ನೀರನ್ನಷ್ಟೆ ಕುಡಿದು ತಮ್ಮ ದಾಹವನ್ನು  ತೀರಿಸಿಕೊಳ್ಳುತ್ತವೆ   ಯೆಂಬುದು ನಂಬಿಕೆ. ಹೀಗಾಗಿಯೇ  ಮುಂಗಾರಿನ  ಬರುವಿಕೆವರೆಗೆ ಕಾಯುವ ಇವುಗಳ ತಾಳ್ಮೆ ಪ್ರಸಿದ್ಧಿಯನ್ನು ಪಡೆದಿದೆ.

      ರಂಗನ ತಿಟ್ಟು ಪಕ್ಷಿ ಧಾಮದ ಇನ್ನೊಂದು ಸುಂದರ  ಹಕ್ಕಿ ವಿಶಿಷ್ಟ ಪಾದಗಳ ರಚನೆಯಿಂದ  ನೀರಿನಲ್ಲಿ ನಡೆಯ ಬಲ್ಲ‌  ಹಾಗೂ ಗುಂಪಿನಲ್ಲಿ ಬದುಕುವ ರಾಜ ಹಂಸ ಹಕ್ಕಿ ನೀಳಕಾಯ ಉದ್ದವಾದ  ಹಿಮ್ಮುಖವಾಗಿ ಮಡಚಬಹುದಾದ  ಕೆಂಪು ಬಣ್ಣದ  ಉದ್ದನೆಯ  ಕಾಲುಗಳು ಇಂಗ್ಲಿಷ್ ಅಕ್ಷರದ  S ನಂತೆ  ಕಾಣುವ ಕೊರಳು, ಕೆನೆ ಮಿಶ್ರಿತ ಬಿಳಿ, ಕಿತ್ತಳೆ ಬಣ್ಣದ ಗರಿ ಹೊಂದಿದ ರಾಜಹಂಸಗಳು ರಂಗನ ತಿಟ್ಟಿನ ಕಾವೇರಿ ನದಿಯಲ್ಲಿ ಹೇರಳವಾಗಿ  ಕಾಣಸಿಗುತ್ತದೆ. ಕೆಂಪು, ಕೊಕ್ಕು, ಹಸಿರು ಬಣ್ಣದ  ಮುದ್ದಾಗಿ ಕಾಣುವ ಪಕ್ಷಿಗಳು‌ ಇಲ್ಲಿವೆ. ಚಕ್ರವಾಕಗಳ ಜೋಡಿ ಸಾಲು ಸಾಲು ಬೆಳ್ಳಕ್ಕಿಗಳು  ನೀರು ಕಾಗೆ, ಚಮಚ ಕೊಕ್ಕಿನ ಪಕ್ಷಿ ಗೊರವ, ತೆರೆದ ಕೊಕ್ಕಿನ ಕೊಕ್ಕರೆ, ಬಿಳಿ ಜೆಂಬರಲು ಸದಾ ಚಿಲಿಪಿಲಿ ಗುಟ್ಟುತ್ತಾ ಹಾರಾಡುತ್ತುರುತ್ತವೆ.  ಬಣ್ಣದ  ಕೊಕ್ಕರೆ, ಬುದಬಕ, ಚುಕ್ಕೆ ‌ಬಾತು,ಕೆಂಬರಲು, ನೀರು ಕಾಗೆ ಅಷ್ಟೇ ಅಲ್ಲದೇ ಪಕ್ಷಿ ‌ಲೋಕದ  ವರ್ಣರಂಜಿತ ಪಕ್ಷಿ ಎಂದೇ ಕರೆಸಿಕೊಳ್ಳುವ ನಾಚಿಕೆ ಸ್ವಭಾವದ ನವರಂಗಿನ ಹಕ್ಕಿಗಳು  ಹಾರುವುದಕ್ಕಿಂತ‌ ಹೆಚ್ಚು‌ನೆಲದಲ್ಲಿ ‌ಪೊದೆಗಳಲ್ಲಿ ನಡೆದಾಡುತ್ತಾ ಸೂರ್ಯೋದಯ ಮತ್ತು ಸೂರ್ಯಸ್ತದ  ಸಮಯದಲ್ಲಿ ಮಾತ್ರ ಕೂಗುವ ಸ್ವಭಾವ ಇದರದು.

        ರಂಗನತಿಟ್ಟಿ‌ನಲ್ಲಿ  ಮರ ಕುಟಿಕಗಳ  ದರ್ಶನವೂ  ಆಗುತ್ತದೆ. ಮರದ  ಕಾಂಡದ  ನಡುವೆ ಅವಿತಿರುವ  ಹುಳುಗಳನ್ನು ಹೆಕ್ಕಿ ತಿನ್ನುವ ಹಕ್ಕಿಯ ‌ಕೊಕ್ಕೆ ಮೂರು ಪದರದಾಗಿದ್ದು  ಹೊರಗಿನ  ಮೊದಲ ಪದರು ಹೆಚ್ಚು ಪ್ರೋಟೀನ್ ಯುಕ್ತ ಚಿಪ್ಪಿನಂತಹ ಗಟ್ಟಿ ಎಲುಬಿನಿಂದ ಕೂಡಿದೆ. ಎರಡನೆಯ ಎಲುಬಿನ ಪದರ ಟೊಳ್ಳಾಗಿದ್ದು  ಮೂರನೇ ಪದರ ಜೊತೆಗೆ ಜೋಡಿಸುತ್ತದೆ. ಇದು ಹೆಚ್ಚು ಗಟ್ಟಿಯಾಗಿದ್ದು ಈ ವ್ಯವಸ್ಥೆಯಿಂದಾಗಿ‌ ಮರಕುಟುಕದ ಕೊಕ್ಕು  ಹೆಚ್ಚು  ಗಡುಸಾಗಿ ಏಟು ತಡೆದುಕೊಳ್ಳುವ  ಶಕ್ತಿ ಹೊಂದಿದೆ. 
     ಪಶ್ಚಿಮ ಘಟ್ಟದಲ್ಲಿ ವ್ಯಾಪಕವಾಗಿ ಕಾಣಸಿಗುವ ಕಾರಣ ಹಕ್ಕಿ ಆಕರ್ಷಕ ಬಣ್ಣದ ಗರಿಗಳ ಸೌಂದರ್ಯದಿಂದ ಹೆಸರುವಾಸಿ. ‌ವಲಸೆ ಹೋಗುವ ಹಕ್ಕಿಗಳ ಸಾಲಿಗೆ  ಸೇರವ ಇವು  ಆಹಾರ ಹಾಗೂ ವಾತಾವರಣ ಕ್ಕನುಗುಣವಾಗಿ ಸ್ಥಳೀಯವಾಗಿ  ಸ್ಥನಪಲ್ಲಟವನ್ನು ಮಾಡುತ್ತಾ ರಂಗನತಿಟ್ಟು ಪಕ್ಷಿ ಧಾಮಕ್ಕೆ ಬರುತ್ತದೆ. 

     ರಂಗನತಿಟ್ಟು ಪಕ್ಷಿ ಧಾಮದಲ್ಲಿ ವಿವಿಧ ಭಂಗಿಯಲ್ಲಿ ತಿರುಗುತ್ತಾ ಕಸರತ್ತು ಪ್ರದರ್ಶನ ಮಾಡುವಂತಹ ಸಾಹಸ ಪ್ರದರ್ಶಿಸುವ ‌ಇಂಡಿಯನ್‌ರೋಲರ್‌ ನೀಲಿ‌ಬಣ್ಣದ ಹಕ್ಕಿಗಳು  ಮನತಣಿಸುತ್ತದೆ. ಭಾರತದ ಹಕ್ಕಿಗಳಲ್ಲಿ ಅತಿಚಿಕ್ಕದು ಎಂಬಹೆಗ್ಗಳಿಕೆ ಹೊಂದಿದ  ಕೆಂಪು ಎದೆಯ ಗುಬ್ಬಿ ಪಕ್ಷಿಗಿಡದಿಂದ ಗಿಡಕ್ಕೆ ಹಾರುತ್ತಾ ಹೂವಿನಲ್ಲಿ ತನ್ನ ದೇಹ ಮುಳುಗಿಸಿ ‌ಮಕರಂದ ಹೀರುವ ಹಕ್ಕಿ‌ಇದು. ಪರಾಗಸ್ಪರ್ಶಕ್ಕೂ ಕಾರಣವಾಗುವುದು. ಉರುಟಾದ ರೆಕ್ಕೆ ಉದ್ದ ಬಾಲ ಹಾರಾಡುವುದಕ್ಕಿಂತ ನೆಲದಲ್ಲಿ ಓಡಾಡುವುದೇ  ಹೆಚ್ಚು.ಈ( ಹಕ್ಕಿ ಸಂಘ ಜೀವಿ.ಸಿಳ್ಳೆಯ ಮೂಲಕ ರಾಗಮಾಡಿ‌ ಹಾಡುವ ಹಕ್ಕಿ ಇದು ಗೂಡು ಕಟ್ಟುವ ಪ್ರಕ್ರಿಯೆಯ, ಮರಿಗಳಿಗೆ ಗುಟುಕು ತಿನಿಸುವುದು, ಮರಿಗಳ ರಕ್ಷಣೆ, ಲಾಲನೆಪಾಲನೆ ಮಾಡುತ್ತಾ, ವಲಸೆ ಹಕ್ಕಿಗಳು ತಮ್ಮ ಮೂಲ ನಿವಾಸಕ್ಕೆ ಕುಟುಂಬ ಸಮೇತ ಹಾರಿ ಹೋಗುತ್ತವೆ.

ಪಕ್ಷಿ ಲೋಕದ ತಾಯ್ತನ

ಪ್ರಕೃತಿಯಲ್ಲಿ  ಸ್ವಚ್ಛಂದವಾಗಿ ಹಾರಾಡುವ ಬಾನಾಡಿಗಳ ಬದುಕೆ ವಿಚಿತ್ರ

      ಗೀಜಗ = ಮಳೆಗಾಲದಲ್ಲೆ ಇವುಗಳ ಬಾಣಂತನ , ಮರದ ತುದಿಯಲ್ಲಿ ಬಾಗಿದ ರೆಂಬೆಗಳಿಗೆ ಜೊತು ಬೀಳುವಂತೆ ಸುಂದರವಾದ ಗೂಡನ್ನು ನೇಯುವುದು ಈ ಪಕ್ಷಿಯ ವಿಶೇಷತೆ  ಮೇ ತಿಂಗಳಿಂದ ಸೆಪ್ಟೆಂಬರ್ ‌ಕೊನೆತನಕ ಮರಿಮಾಡುತ್ತದೆ.
ಗಂಡು ಗೀಜಗ ಗೂಡುಕಟ್ಟುವ ಕುಶಲತೆ ಹೊಂದಿದ್ದು ಹೆಣ್ಣು ಹಕ್ಕಿಯನ್ನು ಒಲಿಸಿಕೊಳ್ಳಲು ಗಂಡು ಮೊದಲು ಅರ್ಧ ಗೂಡು ರಚಿಸುತ್ತದೆ. ಅದನ್ನು ಹೆಣ್ಣು ಹಕ್ಕಿ ಇಷ್ಟ ಪಟ್ಟರೆ ಆ ಗೂಡನ್ನು ಪೂರ್ಣ ಗೊಳಿಸುತ್ತದೆ. ಇಷ್ಟವಾಗದೆ ಇದ್ದರೆ ಗಂಡು ಪುನಃ  ಬೇರೆ ಗೂಡು ಕಟ್ಟಲು ಪ್ರಾರಂಬಿಸುತ್ತದೆ. ಎಷ್ಟು ಸಲ ಬೇಕಾದರು. ಗೂಡು ಕಟ್ಟಿಕೊಳ್ಳಲು‌ ಬೇಸರಿಸಿ‌ಗೊಳ್ಳದ ಇದರ ಪ್ರಿತಿಯ ಆಳದ ಅರಿವು ಜನರಿಗೆ ಮುಟ್ಟಿಸಿದವರು ಸಲೀಂ ಆಲಿ. ಈ‌ಹಕ್ಕಿಗಳನ್ನು‌‌ ನೇಕಾರ‌ ಹಕ್ಕಿ ಎಂದು ಕರೆಯುತ್ತಾರೆ. ಗೂಡು ಕಟ್ಟುವ ಬುದ್ದಿಶಕ್ತಿ  ಅಚ್ಚರಿಯ ವಿಷಯ.

     ತೆನೆಹಕ್ಕಿ= ವಿಶೇಷವಾಗಿ ತನ್ನ ಚಲನವಲನಕ್ಕೆ ‌ಹೆಸರುವಾಸಿಯಾದ ‌ತೆನೆ‌ಹಕ್ಕಿಗಳು ಗೂಡುಕಟ್ಟದೆ  ಬಾಣಂತನ ಮಾಡಿಸಿ ಕೊಳ್ಳುತ್ತದೆ. ಬಯಲ್ಲಿ., ಗಟ್ಟಿ‌ನೆಲದ‌ ಮೇಲೆ ,ಕಲ್ಲಿನ ಪೊಟರಿನಲ್ಲಿ ಮೊಟ್ಟೆ ಇಟ್ಟು ಮರಿಮಾಡುತ್ತದೆ. 

    ಗದ್ದೆ ಮಿಂಚುಳು= ಸುಂದರವಾದ ಪಕ್ಷಿಗಳಲ್ಲಿ ಗದ್ದೆ ಮಿಂಚುಳು ಪ್ರಮುಖವಾದುದು.ಕಾಫಿ ಬಣ್ಣದ ತಲೆ, ಭುಜ, ಹೊಟ್ಟೆ , ಬಿಳಿ ಬಣ್ಣದ ಎದೆ, ನೀಲಿ ಆವರಿಸಿಕೊಂಡಿರುವ ರೆಕ್ಕೆ ಇದರ ವಿಶೇಷ.

       ಕಲ್ಲುಗೊರವ= ಕಪ್ಪು ಬಿಳಿಪಿನ ಕಲ್ಲುಗಿರವ ಮಾರ್ಚ್ ನಿಂದ ಅಗಸ್ಟವರೆಗೆ ನೆಲವನ್ನು ಕರೆದು ಸಣ್ಣಗುಳಿ ಮಾಡಿ ಮೊಟ್ಟೆ ಇಡುತ್ತದೆ.  ಕುರುಚಲು ಗಿಡಗಳ ನಡುವೆ ನೆಲದಲ್ಲು ಓಡಾಡಿಕೊಂಡು  ಜೀವಿಸುತ್ತದೆ.
ಒಟ್ಟಿನಲ್ಲಿ ಬಾನಾಡಿಗಳ ಚಿನ್ನಾಟ ನೋಡಲು ಬಲು ಸೊಗಸು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments