Thursday, September 21, 2023
HomeKannada Articleರಾಣಿಯರ  ಕಣ್ಣೀರಿನ ಕತೆಗೆ ಸಾಕ್ಷಿ  ಸಾಠ್ ಖಬರ್ | Heggaddesamachar

ರಾಣಿಯರ  ಕಣ್ಣೀರಿನ ಕತೆಗೆ ಸಾಕ್ಷಿ  ಸಾಠ್ ಖಬರ್ | Heggaddesamachar

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ

         ಕಲ್ಯಾಣಿ ಚಾಲುಕ್ಯರಿಂದ ಸ್ಥಾಪಿತವಾದ  ಬಿಜ್ಜನ ಹಳ್ಳಿ ಎಂಬ ಹೆಸರ ಊರು ರಾಜ ಬಿಜ್ಜಳನ ನೆನಪಿಗಾಗಿ ಬಿಜಾಪುರ ಎಂಬ ಹೆಸರಿನಲ್ಲಿದ್ದ  ನಗರ ಈಗ ವಿಜಯಪುರ ಎಂದು ಕರೆಯಲಾಗುತ್ತದೆ. ದೆಹಲಿಯ ಖಿಲ್ಜಿ ಸುಲ್ತಾನರ ಪ್ರಭಾವಕ್ಕೆ ಒಳಗಾಗಿ ಬೀದರಿನ ಬಹುಮನಿ ಸುಲ್ತಾನರು, ಆದಿಲ್ ಶಾಹಿ ಸುಲ್ತಾನರು ನಿಜಾಮರ ಆಳ್ವಿಕೆಗೆ ಒಳಪಟ್ಟು ನಂತರ ಹತ್ತು ‌ಹಲವು ಕಾರಣಗಳಿಂದ‌ ಹರಿದು ಹಂಚಿ ಹೋಗಿ ರೂಪುಗೊಂಡ ರಾಜ್ಯಗಳಲ್ಲಿ  ಈ ಗುಮ್ಮಟ ನಗರಿ ವಿಜಯಪುರವು ಒಂದು .ವಿಜಾಪುರ ಎಂದರೆ ವಿಜಯದ ಪುರ ಎಂಬುದಾಗಿ ಇದು ಆದಿಲ್ ಷಾಹಿ ಆಡಳಿತ ರಾಜಧಾನಿಯಾಗಿತ್ತು.  
         ಮುಸ್ಲಿಂ ಅರಸರು ಹಲವು ಸ್ಮಾರಕಗಳನ್ನು  ನಿರ್ಮಿಸಿದ್ದು  ಆದಿಲ್ ಷಾನ ವಂಶಾಡಳಿತದಲ್ಲಿ ಬಿಜಾಪುರದಲ್ಲಿ‌  ವಿಶೇಷ ಸ್ಮಾರಕಗಳು ನಿರ್ಮಾಣಗೊಂಡಿದ್ದವು. ಹಲವು‌ ಮಸೀದಿ, ಸಮಾಧಿ, ಸೌಧಗಳು, ಅರಮನೆ ‌ಕೋಟೆಗಳು ಈ ಭಾಗದಲ್ಲಿದ್ದು ಅಷ್ಟೊಂದು ಅಭಿವೃದ್ಧಿ ಹೊಂದಿರದ  ಊರು ಇದು. ಜನ ಸಾಮಾನ್ಯರ  ಬದುಕುವ ಶೈಲಿಯು  ಇಲ್ಲಿನ ಬಡತನ ಸಿರಿತನವನ್ನು ಬಿಂಬಿಸುತ್ತದೆ. ಆದರೆ ಪ್ರವಾಸಿಗರಿಗೆ  ಅನುದಿನವು ಕೊರತೆ  ಇಲ್ಲದ ಊರು ಇದು.

         ರಾಣಿಯರ ಕಣ್ಣೀರಿನ ಕಥೆ  ಹೇಳುವ  ಸಾಠ್ ಖಬರ್  ವಿಜಯಪುರದಲ್ಲಿದೆ.  ರಾಣಿಯರ  ವೇದನೆಗೆ , ಸಾಕ್ಷಿಯ ಪ್ರತೀಕವಾಗಿರುವ ಸಾಠ್ ಖಬರ್  ಹೆಸರೆ  ಸೂಚಿಸುವಂತೆ  ಇಲ್ಲಿ  60 ಕ್ಕೂ ಹೆಚ್ಚು ಗೋರಿಗಳು ವಿಶಾಲ ಸ್ಥಳದಲ್ಲಿ ಸಾಲು ಸಾಲಾಗಿ ನೆಲದಿಂದ  ಮೂರು ಫಿಟ್ ಎತ್ತರದಲ್ಲಿ  ಕಟ್ಟಲಾಗಿದೆ. ಇಷ್ಟೊಂದು  ಗೋರಿ ಒಂದೇ ಸ್ಥಳದಲ್ಲಿ ನೋಡುವಾಗ  ಅಚ್ಚರಿ ಹಾಗೂ ಮನ ಕಲಕುವ  ಕಥೆ ಯೊಂದು  ಎದುರಾಗುತ್ತದೆ. ಐತಿಹಾಸಿಕ  ವಾಸ್ತು ಶಿಲ್ಪದ  ದೃಷ್ಟಿಯಿಂದ  ಆಕರ್ಷಕವಾಗಿಲ್ಲದಿದ್ದರು  ಮಹತ್ವದ  ಪ್ರೇಕ್ಷಣಿಯ  ಸ್ಥಳ. ಈ ಗೋರಿಗಳು  ಬೀಜಾಪುರದ  ಸೇನಾಧಿಕಾರಿಯೊಬ್ಬರ   63  ಪತ್ನಿಯರದಂತೆ.  65 ಪತ್ನಿಯರು ಏಕಕಾಲಕ್ಕೆ   ಸಾವನಪ್ಪಿದುದರ‌ ಹಿಂದೆ  ಒಂದು  ಹೃದಯ ಹಿಂಡುವ  ಕಥೆ  ಇದೆ.  ವಿಜಯಪುರದಲ್ಲಿನ  ಸ್ಮಾರಕಗಳು  ಗತ ವೈಭವ ಸಾರಿವ,ಕೆಲವು  ಪ್ರೇಮದ ಕುರುಹುಗಳು, ನೆನಪಿನ ಕಾಣಿಕೆಯು  ಇದೆ.  ಆದರೆ ಈ ಸಾಠ್ ಕಬರ್   ಮುಗ್ದ ಹೆಣ್ಣು ಜೀವದ  ಅಮಾನವೀಯ ಕ್ರೌರ್ಯದ  ಚಿತ್ರಣ.

          17 ನೇ ಶತಮಾನದಲ್ಲಿ  ವಿಜಯಪುರದಲ್ಲಿ  ಎರಡನೆ  ಆದಿಲ್ ಶಾನ  ಆಳ್ವಿಕೆಯ   ಕಾಲದಲ್ಲಿ ಮೋಗಲ್  ಮತ್ತು ‌ಮರಾಠರ  ದಾಳಿಯಿಂದ  ದುರ್ಬಲ ಗೊಳ್ಳುತ್ತಾ  ಹೋದ ವಿಜಯಪುರದ ಸುಲ್ತಾನರು  ಬಸವಳಿದು  ಹೋಗಿದ್ದರು. ಎರಡನೇ ಆದಿಲ್ ಶಾ ಅನಾರೋಗ್ಯ ಹೊಂದಿದ  ಸಮಯದಲ್ಲಿ ಮರಾಠರನ್ನು  ಹಿಂಬಡಿಯಲು  ತನ್ನ  2ನೇ ಸೇನಾಧಿಕಾರಿಗಳ  ಮುಂದೆ  ಬಡಿಮಾ ಬೇಗಂಳ  ಕರೆಯ   ಮೇಲೆಗೆ  ಅಫ್ಜಲ್ ಖಾನ್ ಶಿವಾಜಿ  ಹಾಗೂ ಮರಾಠ  ರಾಜರುಗಳನ್ನು  ಸದೆ ಬಡಿಯುವುದಾಗಿ ಮಾತುಕೊಡುತ್ತಾನೆ.


ಜ್ಯೋತಿಷ್ಯದಲ್ಲಿ  ಅಪಾರ  ನಂಬಿಕೆ ಇಟ್ಟಿದ್ದ ಅಫಜಲ್ ಖಾನನು ಶಿವಾಜಿಯ ‌ಮೇಲೆ ದಂಡೆತ್ತಿ ಹೋಗುವ ಮುನ್ನ ತನ್ನ ರಾಜ್ಯದಲ್ಲಿರುವ  ಬಾಬಾರೊಬ್ಬರ ಬಳಿ ಭವಿಷ್ಯ  ಕೇಳಲು ಹೋಗುತ್ತಾನೆ. ಆಗ ಬಾಬಾ ಖಾನನಿಗೆ  ಶಿವಾಜಿಯ  ಮೇಲೆ ದಾಳಿಗೆ ಹೋಗದಿರುವಂತೆ ಸಲಹೆ ನೀಡುತ್ತಾನೆ. ಯುದ್ಧಕ್ಕೆ  ಹೋದರೆ ಮರಣ ಖಂಡಿತಾ ಎಂದು ಎಚ್ಚರಿಕೆ ನೀಡಿದರು  ಅಪ್ಜಲ್ ಖಾನ್ ತನ್ನ  ನಿರ್ಧಾರದಿಂದ  ಹಿಮ್ಮೆಟ್ಟುವುದಿಲ್ಲ. ಒಂದು ರಾತ್ರಿ ಖಾನ್ ಗೆ ತನ್ನ  ಪತ್ನಿಯರನ್ನು   ಬಂಧಿಸಿ  ಗುಲಾಮರನ್ನಾಗಿಸಿದ್ದು, ಹಾಗೂ ಅವರ ‌ಮೇಲೆ ಅತ್ಯಾಚಾರ  ಮಾಡುತ್ತಿರುವ  ಕನಸು  ಬೀಳುತ್ತದೆ. ಕನಸಿನಿಂದ  ವಿಚಲಿತಗೊಂಡವ ಎಲ್ಲರನ್ನು  ಒಮ್ಮೆ  ಕೊಂದು ಬಿಡುವ  ಉಪಾಯ  ಹುಡಿ   ಎಲ್ಲ ಪತ್ನಿಯರನ್ನು ನವರಸಪುರದ  ಹತ್ತಿರ ವಿರುವ  ತನ್ನ  ವಾಸಸ್ಥಾನಕ್ಕೆ  ಕರೆಸಿಕೊಳ್ಳುತ್ತಾನೆ. ಒಬ್ಬೊಬ್ಬರನ್ನಾಗಿ  ಕರೆದು  ಅವರೊಂದಿಗೆ  ಪ್ರೀತಿಯಿಂದ  ಮಾತನಾಡಿಸಿ  ಅಲ್ಲೇ ಹತ್ತಿರದ ಬಾವಿಯ ಹತ್ತಿರ  ಕರೆದು ‌ಕೊಂಡು  ಹೋಗುತ್ತಾನೆ.  ಹೀಗೆ  ಹೊದವರು  ಯಾರು  ಹಿಂದೆ ಬಾರದಿದ್ದಕ್ಕೆ ‌ಸಂಶಯ ‌ಪಟ್ಟು ಇಬ್ಬರು  ಅಲ್ಲಿಂದ  ಓಡಿ  ಹೋಗುತ್ತಾರೆ. ಅವರನ್ನು  ಬೆನ್ನಟ್ಟಿ  ಹೋದ  ಸೈನಿಕರು  ಒಬ್ಬಳನ್ನು  ಚಿಗಣಿ  ಬಾಬಾದ  ದರ್ಗಾದ  ಬಳಿ  ಮತ್ತೋಬ್ಬಳನ್ನು  ತೊರವಿ  ಗ್ರಾಮದ  ಹತ್ತಿರ ‌ಕೊಲೆ ಮಾಡಿ  ಅಲ್ಲಿಯೇ  ಅವರ  ಸಮಾಧಿ ‌ಮಾಡುತ್ತಾರೆ.

      ಈ ಅಪ್ಜಲ್ ಖಾನನಿಗೆ  65 ಜನ  ಹೆಂಡತಿಯರು.  ಇವರನ್ನೆಲ್ಲ  ಒಂದೇ ದಿನ ಈತ ಕೊಲ್ಲುತ್ತಾನೆ.ತನ್ನ ಮರಣ ನಂತರ ಇವರು  ಬೇರೆಯವರಿಗೆ  ಸಿಗ ಬಾರದು  ಎಂಬ  ಉದ್ದೇಶದಿಂದ  ಉಪಾಯ ಹೂಡಿ. ಅಪ್ಜಲ್ ಖಾನನ  ಮನಸ್ಸಿನಲ್ಲಿ  ಕೊಲೆಯ  ಬೀಜವನ್ನು  ಬಿತ್ತಿದವನು ಆತನ ಭರವಸೆಯ  ಜೋತಿಷಿಯಂತೆ.  ಆತ  ಈ ಬಾರಿ ನೀನು ಯುದ್ದ ಭೂಮಿಯಿಂದ  ಬರುವುದಿಲ್ಲ  ಎಂದು  ಭವಿಷ್ಯ  ನುಡಿದನಂತೆ  . ಆಗ  ವಿಜಯಪುರವನ್ನು  ಎರಡನೆಯ  ಆದಿಲ್ ಶಾಹಿ ಆಳುತ್ತಿದ್ದ ಮಹಾರಾಷ್ಟ್ರ ವನ್ನು  ಛತ್ರಪತಿ ಶಿವಾಜಿಯ ಆಳ್ವಿಕೆ ಇತ್ತು. ಆದಿಲ್ ಶಾಹಿಯ  ಸೇನಾಪತಿ ಅಫ್ಜಲ್ ಖಾನ್ಗೆ  ಯಾವುದೇ ಯುದ್ದಕ್ಕೆ  ಹೋಗುವಾಗ  ಭವಿಷ್ಯ  ಕೇಳುವ ಅಭ್ಯಾಸ ವಿತ್ತು.  ಈ ಯುದ್ದದಲ್ಲಿ  ನೀನು  ಸಾಯುವ  ಸಾದ್ಯತೆ  ಹೆಚ್ಚಿದೆ  ಎಂದ  ಜ್ಯೋತಿಷಿಯರ  ಮಾತಿನಿಂದ   ಚಿಂತಿತನಾದ  ಖಾನ್ ತನ್ನ  ಮರಣ ನಂತರ ಹೆಂಡಂದಿರು ಬೇರೆಯವರ  ಪಾಲಾಗಬಾರದೆಂದು  ಯೋಚಿಸಿ  ಕೊಲೆಗೆ  ಪಿತೂರಿ ‌ಹೂಡಿದ.

    ಒಂದೇ ದಿನ ತನ್ನ ಹೆಂಡಂತಿಯರನ್ನು   ಒಂದೆಡೆಗೆ  ಕರೆಯುತ್ತಾನೆ .ಅದರಲ್ಲಿ 3 ಜನರಿಗೆ  ಯಾಕೆ ಕರೆದಿರ ‌ಬಹುದೆಂದು  ಯೋಚಿಸಿ ಅಲ್ಲಿಂದ  ತಪ್ಪಿಸಿಕೊಂಡು ಓಡಿ  ಹೋಗುತ್ತಾರೆ. ಹೊರ ವಲಯದ ಹಾಳು ಬಾವಿಗೆ‌ ಉಳಿದವರನ್ನು  ನೂಕಿ  ಕೊಲೆ‌ಮಾಡುತ್ತಾನೆ. ತಪ್ಪಿಸಿ ಕೊಂಡವರಲ್ಲಿ  ಮೂವರು  ಸೆರೆ ಸಿಕ್ಕು  ಅವರನ್ನು  ಅಲ್ಲಿ ಯೇ  ಕೊಂದು  ಸಮಾಧಿ ಮಾಡಲಾಯಿತು. ಖತೀಜಾಬೀಬಿ ಎಂಬವಳು  ಇನ್ನೂ ಹೆಚ್ಚು  ದೂರ ಓಡಿ ಹೋಗಿ ಸೆರೆ  ಸಿಕ್ಕುತ್ತಾಳೆ. ಅವಳನ್ನು  ಅಲ್ಲೆ  ಕೊಲೆ ಮಾಡಲಾಗುತ್ತದೆ.  ಅವಳು ಸತ್ತ ಸ್ಥಳವೇ  ಖತೀಜಾ ಪುರ. ಈ  ಎಲ್ಲಾ ಕೊಲೆಯಾದ  ಹೆಂಡತಿಯರಿಗೆ  ಸಮಾಧಿ ಕಟ್ಟಿ ಅದರ ಬದಿಯಲ್ಲಿ  ತನಗೂ  ಒಂದು ಸಮಾಧಿಯನ್ನು  ಕಟ್ಟಿಕೊಂಡಿದ್ದ. ಆಗ ನಡೆದ  ಯುದ್ಧದಲ್ಲಿ ಖಾನ್  ಸತ್ತಿದ್ದ  ಮಹಾರಾಷ್ಟ್ರ ದ ಪ್ರತಾಪ್ ಗಡದಲ್ಲಿ.

      ಈ ಸಮಾಧಿಯಲ್ಲಿ   ಕೊಲೆಯ  ಕನವರಿಕೆ ಇದೆ.  ಸಾಠ ಖಬರ್ ಒಂದು ಐತಿಹಾಸಿಕ ತಾಣ ಪ್ರವಾಸಿಗರು  ಅದನ್ನು ‌ನೋಡಿ ಬರಲು  ತವಕಿಸುತ್ತಾರೆ. ಆದರೆ  ಹೆನ್ರಿ ಕಸಿನ್ದ ಎಂಬ  ಇತಿಹಾಸ ತಜ್ಞರು ದಾಖಲಿಸಿದ ಈ ಎಲ್ಲಾ ಮಾಹಿತಿಯನ್ನು  ಅಲ್ಲಿನ  ಗೈಡ್ಗಳು ಆಸ್ತಕರಿಗೆ  ಒದಗಿಸುವ ವಾಗ  ‌ಕೇಳುಗರು  ವಿಷಾದ ಗೊಳ್ಳುವುದೆ  ಹೆಚ್ಚು. ಈ ಖಬರಿನ  ಒಂದು  ಬದಿಯಲ್ಲಿ ಕಮಾನುಗಳ  ಕಟ್ಟಡವಿದೆ. ಹತ್ತಿಹೋಗಲು  ಮೆಟ್ಟಿಲುಗಳಿವೆ ಆದರೆ ಕಾಮಾನು  ಹಾಗೂ  ಮೆಟ್ಟಿಲುಗಳು  ಬೀಳಲು  ಪ್ರಾರಂಭವಾಗಿದೆ.

          ಇಲ್ಲಿಗೆ  ಹೋಗುವ ದಾರಿ  ಸರಿ ಇಲ್ಲ  ಸರಿಯಾದ  ರಸ್ತೆಯ  ವ್ಯವಸ್ಥೆಯು ಇಲ್ಲ.  ಪ್ರವಾಸಿಗರಿಗೆ ಯಾವುದೇ  ಸಲಹೆ, ಸೂಚನೆ, ಮಾಹಿತಿಯ  ಫಲಕಗಳಿಲ್ಲ. ಗೈಡ್ ಗಳು  ಅರುಹಿದ್ದಕ್ಕೆ  ತಲೆದೂಗಬೇಕು  ಅಷ್ಟೇ. ಈ ಸಾಠ್  ಖಬರ್ ‌ನಲ್ಲಿ   ಹುಲ್ಲುಹಬ್ಬಿ ,ಕಸ ‌ಕಡ್ಡಿ ತುಂಬಿದೆ ಯಾವುದೆ  ರೀತಿಯ ಸ್ವಚ್ಚತೆಯಾಗಲಿ  ಅಳಿದ ಭಾಗದ  ರೀಪೇರಿಯಾಗಲಿ  ಆಗಿಲ್ಲ. ಈ ಸ್ಮಾರಕದಲ್ಲಿ  ಎಲ್ಲವು  ದುರಂತದಂತೆ  ಕಾಣುತ್ತದೆ.ಘೋರ ಇತಿಹಾಸವುಳ್ಳ ಸಾಠ್  ಖಬರ್  ಪ್ರವಾಸಿಗರು ಇಲ್ಲಿನ ವಾತಾವರಣ ನೋಡಿ‌ ಹಿಂಜರಿಯುವಂತಿದೆ. ಸುರಕ್ಷಿತೆಯ ಕೊರತೆರಯು  ಎದ್ದು ಕಾಣುತ್ತದೆ.  ಭಾರತೀಯ ಪುರಾತತ್ವ  ಇಲಾಖೆಯ  ಯಾವ  ನಿಯಮವು  ಇಲ್ಲಿ ‌ಪಾಲನೆ  ಆಗುತ್ತಿಲ್ಲ. ಇಲ್ಲಿನ ರಾಣಿಯರು ಹೇಗೆ  ಸುರಕ್ಷಿತವಾಗಿರಲ್ಲಿಲ್ಲವೋ  ಹಾಗೆ  ಅವರ  ಸಮಾಧಿಗೂ  ಸುರಕ್ಷತೆ  ಇಲ್ಲ. ಕೆಲವು ಸಮಾಧಿ  ಶಿಥಿಲವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments