ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ
ಯಾರಿವಳು ವಿಶ್ವಂಭರಿ ಮಾತಾ… ಎಲ್ಲಿದೆ ಈ ಧಾಮ… ಗೆಳತಿ ಸೀಮಾ ಪಟೇಲ್ ಗುಜರಾತಿ ಮಹಿಳಾಮಂಡಳಿಯ ಸದಸ್ಯರು ವಿಶ್ವಂಭರಿ ಧಾಮಕ್ಕೆ ಹೋಗುತ್ತಿದ್ದೇವೆ ಬಾ ಅಂದಾಗ ನನಗನ್ನಿಸಿದ್ದು ಹೀಗೆ. ಮಾ ವಿಶ್ವಂಭರಿ ಧಾಮ ಗುಜರಾತ್ ವಲ್ಸಾಡ್ ಬಳಿ ಇದೆ. ವಲ್ಸಾಡ್ ನಿಂದ 2 ಕಿ.ಮೀ ಪೂರ್ವಕ್ಕೆ ಸಾಗಿದರೆ 10 ಎಕರೆಗೂ ಹೆಚ್ಚು ವಿಸ್ತಾರವಾದ ಸ್ಥಳದಲ್ಲಿ ಪ್ರಕೃತಿಯ ಸೌಂದರ್ಯದ ನಡುವೆ ಪರಾ ನದಿಯ ಕಿನಾರದಲ್ಲಿ ಈ ದೇವಾಲಯ ತಲೆ ಎತ್ತಿ ನಿಂತಿದೆ. ಉಚಿತ ಪ್ರವೇಶವಿರುವ ದೇವಾಲಯವನ್ನು ಬೆಳಿಗ್ಗೆ 8 ರಿಂದ 12.30ರವರೆಗೆ ಹಾಗೂ ಸಂಜೆ 4 ರಿಂದ 8 ರವರೆಗೆ ಸಂದರ್ಶಿಸ ಬಹುದು. ಭಾರತಿಯ ಸಂಸ್ಕೃತಿಯ ವಿಶಿಷ್ಟತೆಗಳು ಆಸಕ್ತರನ್ನು ಆಕರ್ಷಿಸುತ್ತಲೇ ಬಂದ ಹಾಗೆ ಕಲಾ ನೈಪುಣ್ಯತೆಯ ಅರಿವು ಮೂಡಿಸುವ ಕೇಂದ್ರವೂ ಹೌದು ಒಟ್ಟಿನಲ್ಲಿ ಪ್ರವಾಸಿಗರನ್ನು ಕೈಬಿಸಿ ಕರೆಯುವ ಆಧ್ಯಾತ್ಮಿಕ ಹಾಗೂ ಆಧುನಿಕತೆಗಳ ವಿಶಿಷ್ಟ ಸಂಗಮ. ಐತಿಹಾಸಿಕ ವಿಚಾರಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಇಲ್ಲಿ ಈ ಧಾಮವನ್ನು ರೂಪಿಸಲಾಗಿದೆ.

ಶಾಂತಯುತ ನೈಸರ್ಗಿಕ ವಾತಾವರಣದಲ್ಲಿ ಈ ದೇವಾಲಯ ನಿರ್ಮಿಸಲಾಗಿದ್ದು ವಿಭಿನ್ನ ದೇವರ ವಿಗ್ರಹಗಳಿದ್ದು ಇಲ್ಲಿನ ಪ್ರಮುಖ ದೇವಿ ವಿಶ್ವಂಭರಿ. ಎಲ್ಲಾ ವಾಸ್ತುಶಿಲ್ಪಗಳು ಉತ್ತರ ಭಾರತದ ದೇವಾಲಯದ ಶೈಲಿಯಲ್ಲಿದೆ. ಈ ದೇವಾಲಯವನ್ನು ಸ್ಥಳೀಯರು ಪಾಟ್ ಶಾಲಾ(ಶಾಲೆ) ಎಂದು ಕರೆಯುತ್ತಾರೆ. ಯಾಕೆ ದೇವಾಲಯವನ್ನು ಹೀಗೆ ಕರೆಯುತ್ತಿರಿ ಎಂದು ಕೇಳಿದರೆ ಮುಗುಳು ನಗುತ್ತಾ ನಾವು ಕರೆಯುವುದು ಹೀಗೆ ಎನ್ನುತ್ತಾರೆ.
ದೇವಿ ವಿಶ್ವಂಬರಿಯ ದೊಡ್ಡದಾದ ಮೂರ್ತಿ ಇಲ್ಲಿದ್ದು ನವರಾತ್ರಿಯಲ್ಲಿ ದೇವಾಲಯವನ್ನು ಶೃಂಗರಿಸುವಂತೆ ಸಕಲ ಆಭರಣ ಹಾಗೂ ವಸ್ತ್ರಗಳಿಂದ ಶೃಂಗರಿಸಲಾಗಿದೆ. ಹೆಂಗಸರು ತಲೆಯ ಮೇಲೆ ಸೀರೆ ಸೆರಗು ಅಥವಾ ದುಪ್ಪಟ್ಟಾ ಧರಿಸಿಯೇ ದೇವಾಲಯದ ಒಳಗೆ ಹೋಗಬೇಕು. ದೇವಳದ ಒಳಗೆ ಶಾಂತ ವಾತಾವರಣವಿದ್ದು ಪ್ರಾರ್ಥಿಸುವವರಿಗೆ ಸ್ಥಳಾವಕಾಶವಿದೆ. ರಥಾರೋಹಣದಲ್ಲಿ ದೇವಿಯ ಸುಂದರ ಮೂರ್ತಿಯನ್ನು ಇರಿಸಲಾಗಿದೆ. ಇಲ್ಲಿ ದೇವರ ದರ್ಶನದ ನಂತರ ಒಳಭಾಗದಿಂದ ಮೆಟ್ಟಿಲೇರಿ ಮೇಲೆ ಸಾಗಿದರೆ ಅಚ್ಚಿರಿ ಮೂಡಿಸುವ ಬೆಳ್ಳಿ ಬೆಟ್ಟ ಕಾಣಿಸುತ್ತದೆ. ಅಂದರೆ ಇದು ಹಿಮದ ಮನೆಯಂತೆ.
ಮಂಜಿನ ಹೆಬ್ಬಂಡೆಯ ನೆತ್ತಿಯಲ್ಲಿ ಶೃಂಗರಿಸಿದ ಹಿಮಪಾತಗಳನ್ನು ಕೃತಕವಾಗಿ ಸೃಷ್ಠಿಸಲಾಗಿದೆ. ವರ್ಷ ವಿಡಿ ಹಿಮಾವೃತವಾಗಿರುವಂತ ಪರ್ವತ ಶ್ರೇಣಿಗಳನ್ನು ಕೃತಕವಾಗಿ ನಿರ್ಮಿಸಲಾಗಿದೆ. ಬೆಳ್ಳಿ ಬೆಟ್ಟ ಏರ ಬೇಕೆಂದರೆ ಕೃತಕವಾಗಿ ನಿರ್ಮಿಸಿದ ಗುಹೆ ಒಳಗಿಂದ ಸಾಗಬೇಕು. ಅಗಲ ಕಿರಿದಾದ ಗುಹಾದ್ವಾರವನ್ನು ತಲೆ ತಗ್ಗಿಸಿ ಮೈಬಗ್ಗಿಸಿ ಪ್ರವೇಶಿಸ ಬೇಕಾಗುತ್ತದೆ. ಜಾರಿ ಬೀಳದಂತೆ ಮತ್ತು ನಡೆಯುವವ ರಿಗೆ ಆಧಾರಕ್ಕೆಂದು ಕಟ್ಟಡದ ಹೊರ ಗೊಡೆಯಲ್ಲಿ ರೊಡ್ ನ್ನು ನಿಲ್ಲಿಸಲಾಗಿದೆ. ಗುಹೆಯ ಒಳಗಡೆ ಕತ್ತಲು ಆವರಿಸಲು ವಿದ್ಯುತ್ ದೀಪದ ವ್ಯವಸ್ಥೆ ಇದೆ. ಕೃತಕ ಗುಹೆಯ ಸುತ್ತಾ ಹಲವಾರು ದಂತ ಕತೆಗಳ ಪುರಾಣಗಳನ್ನು ಚಿತ್ರಿಸಲಾಗಿದೆ.

ಈ ದೇವಾಲಯದ ಒಳಗಡೆ ಯಾವುದೇ ಪಂಡಿತರ ಕಿರಿ ಕಿರಿ ಇಲ್ಲ. ಪೂಜೆ, ಧಾನ ಧರ್ಮ ವೆಂದು ಪಡಿಸುವುದಿಲ್ಲ. ಸಕಲ ಆಭರಣ ಭೂಷಿತೆಯಾದ ದೇವಿ ಕೀರಿಟಧಾರೆಯಾಗಿ ಕಂಗೊಳಿಸುವುದನ್ನು ನೋಡುತ್ತಾ ಭಕ್ತರು ಭಕ್ತಿಯಿಂದ ಒಬ್ಬೊಬ್ಬ ರಾಗಿ ಸಾಗುತ್ತಾರೆ. ದೇವಸ್ಥಾನದ ತುತ್ತ ತುದಿಯಲ್ಲಿ ದೊಡ್ಡ ಕಳಸ ಸ್ಥಾಪಿಸಲಾಗಿದ್ದು ದೂರಕ್ಕೆ ಗೋಚರಿಸುತ್ತದೆ. ದೇವಳದ ಎದುರಿಗೆ ಇರುವ ಶಿವ ಮೂರ್ತಿಯಂತು ಜನರನ್ನು ಭಕ್ತಿ ಭರಿತರನ್ನಾಗಿಸುತ್ತದೆ ಹೊರಾಂಗಣದಲ್ಲಿ ದೈತಾಕಾರದ ಆನೆ ವಿಗ್ರಹ ವಿದ್ದು ಪಕ್ಕದಲ್ಲಿ ಯಮುನಾ ನದಿ ತೀರದಲ್ಲಿರುವ ಗೋವರ್ಧನ ಗಿರಿಯಂತೆಯೆ ಇಲ್ಲಿ ನಿರ್ಮಿಸಲಾಗಿದೆ. ಗೊಲ್ಲರು ಹಾಗೂ ದನ ಕರುಗಳನ್ನು ರಕ್ಷಿಸಲು ಗೋವರ್ಧನ ಗಿರಿ ಎತ್ತುವ ಚಿತ್ರಣವನ್ನು ಕಾಣ ಬಹುದು. ಇದರಲ್ಲಿ ಮುಖ್ಯವಾಗಿ ಇಂದ್ರನಿಗಾಗಿ ಯಾಗ ಏರ್ಪಡಿಸಿದಾಗ ಶ್ರೀ ಕೃಷ್ಣ ತಡೆದು ನಿಲ್ಲಿಸಿ ಗೋವರ್ಧನ ಗಿರಿಯನ್ನು ಪೂಜಿಸಿ ಎಂದು ಸಾರುತ್ತಾನೆ. ಇದರಿಂದ ಸಿಟ್ಟುಗೊಂಡ ಇಂದ್ರ ವಿಪರಿತ ಮಳೆ ಸುರಿಸುವ ದೃಶ್ಯಾವಳಿ. ಆಗ ಕೃಷ್ಣ ತನ್ನ ಕಿರುಬೆರಳಿನಿಂದ ಆ ಪರ್ವತ ವನ್ನು ಎತ್ತಿ ಹಿಡಿದು ಕೆಳಗೆ ಗೊಲ್ಲರು ಮತ್ತು ದನ ಕರುಗಳ ರಕ್ಷಣೆ ಮಾಡುತ್ತಾನೆ. ಆ ಎಲ್ಲವನ್ನೂ ಬಿಂಬಿಸುವ ಚಿತ್ರಣ ಇಲ್ಲಿದೆ.
ಇಲ್ಲಿ ಸಂಜೆ ತನಕ ಸಮಯ ಸರಿದ್ದದೆ ಗೋತ್ತಾಗಲಿಲ್ಲ ಅಗಲ ರಸ್ತೆ ಎಲ್ಲೆಲ್ಲು ಸ್ವಭಾವಿಕ ಸಸ್ಯ, ವೈವಿಧ್ಯಮಯ ಪರಿಸರ, ಹಕ್ಕಿಗಳ ಚಿಲಿಪಿಲಿ ಕೂಗೂ, ಇಂಪಾಗಿ ಕೇಳಿಬರುವ ವಾತಾವರಣ. ಗುಜರಾತಿಗಳು ಪ್ರವಾಸದ ಎಲ್ಲಾ ಕ್ಷಣವನ್ನು ಆಸ್ವಾದಿಸುತ್ತಾರೆ. ಸೂಕ್ಷ್ಮ ವಾಗಿ ಎಲ್ಲಾ ವಿಚಾರ, ವಿಷಯಗಳಿಗೆ ಪ್ರಾಮುಖ್ಯತೆ ನೀಡುತ್ತಾರೆ. ಎಲ್ಲೆಲ್ಲಿ ಒಳ್ಳೆಯ ವ್ಯೂ, ಪಾಯಿಂಟ್ ಗಳಿವೆಯೊ ಅಲ್ಲೆಲ್ಲ ಸ್ವಲ್ಪ ಕಾಲ ಬಸ್ಸು ನಿಲ್ಲಿಸಿ ನಿಸರ್ಗದ ಚಲುವು ಕಣ್ತುಂಬಿಕೊಳ್ಳುತ್ತಾರೆ.
ಗೆಳತ ಸೀಮಾ ಪಟೇಲ್ ಗುಜಾರಾತಿ ಸಮಾಜದ ಮಹಿಳಾ ವಿಭಾಗ ಗುಜರಾತಿನ ವಿಶ್ವಂಭರಿ ದೇವಾಲಕ್ಕೆ ಹೋಗುತ್ತಿದ್ದೇವೆ ನೀವು ಬರಲೇ ಬೇಕು ಎಂಬ ಒತ್ತಾಯಕ್ಕೆ ಮಣಿದು ಹೋಗಿದ್ದೆ. ನನಗಾಗಿ ಅವರ ಸಮಾಜದ ನಿಯಮ ಮುರಿದು ನನ್ನನ್ನು ಗುಜರಾತಿ ಮಹಿಳಾ ಮಂಡಳಿಯ ಪ್ರವಾಸದಲ್ಲಿ ಸೇರಿಸಿಕೊಂಡು ಬೆಳಿಗ್ಗೆ 5.30 ಕ್ಕೆ ಭಾಯಂಧರ್ ನಿಂದ ಮೊದಲೆ ನಿಗದಿ ಪಡಿಸಿದ ಬಸ್ಸುನಲ್ಲಿ ಹೊರಟೆವು. ಅವರವರ ತಾಣದಲ್ಲಿ ಬಸ್ಸ್ ಎರಿದ ಎಲ್ಲರು ಒಬ್ಬರನ್ನೊಬ್ಬರು ನೋಡುತ್ತಾ ಜೈ ಶ್ರೀ ಕೃಷ್ಣ ಎಂದು ನಮೃವಾಗಿ ಕೈ ಮುಗಿಯುವುದನ್ನು ನೋಡುತ್ತಿದ್ದಂತೆ. ಸೀಮಾ ಮಾತ್ರ ನನ್ನ ಪರಿಚಿತಳು ಆ ಸಂಸ್ಥೆಯ ಮಹಿಳಾ ವಿಭಾಗದ ಕಾರ್ಯಧ್ಯಕ್ಷರವರು. ಬೇರೆಲ್ಲರು ಅಪರಿಚಿತರು ಆದರೆ ಹಾಗೆ ನನಗೆನಿಸಲು ಅವರಾರು ಅವಕಾಶವನ್ನು ಕೊಡಲಿಲ್ಲ. ಲತಾಜಿ… ಜೈ ಶ್ರೀ ಕೃಷ್ಣ ಎನ್ನುತ್ತಾ… ಆಪ್ ಕೊ ಗುಜರಾತಿ ನಹಿ ಆತಿ ಹೈನಾ… ಶ್ಯಾಮ್ ತಕ್ ಸಿಕ್ ಜಾವೊಗೆ ಎನ್ನುತ್ತಾ…ಮಾತನಾಡಿಸುತ್ತಾ ಹಲವು ವರ್ಷ ಗಳ ಪರಿಚಿತರಂತೆ ನನ್ನೊಡನೆ ವ್ಯವಹರಿಸಿದ್ದರು .
ಬಸ್ಸ್ ಹೊರಟು ಕೆಲವು ಕ್ಷಣದಲ್ಲಿ ಭಜನೆ ಸುರುವಾಯಿತು ಮೃದುರವಾದ ಕಂಠದಿಂದ. ನಂತರ ಬೆಳಿಗ್ಗೆಯ ತಿಂಡಿಯನ್ನು ಸರಿಯಾಗಿ ವ್ಯವಸ್ಥೆ ಮಾಡುಕೊಂಡು ಹೋಗಿದ್ದಾರೆ. ತಮಾಷೆಗಾಗಿ ಆಡು ಮಾತೊಂದು ಇದೆ ಗುಜರಾತಿಗಳು ವೀಸಾ ಇಲ್ಲದೆ ಪಯಾಣಿಸ ಬಲ್ಲರು ಆದರೆ ಕಾಕಡ, ಡೊಕ್ಲ ಇಲ್ಲದೆ ಅವರ ಪಯಣಸಾಗದು ಎನ್ನುವುದನ್ನು ಕೇಳಿದ್ದೆ. ನಿಜವಾಗಿಯು ನನಗನಿಸಿತು ನಾನು ಬಾವಿ ಒಳಗಿನ ಕಪ್ಪೆ ಇವರಿಗೆಲ್ಲ ಎಲ್ಲಾ ಬಗೆಯ ಅನುಭವವಿದೆ ಅನಿಸಿತು.
ಅಲ್ಲೆ ಮಗ್ಗುಲಲ್ಲಿದ್ದ ನದಿಯಲ್ಲಿ ಬೋಟಿಂಗ್ ವ್ಯವಸ್ಥೆ ಇತ್ತು ಇಲ್ಲಿಗೆ ನಮ್ಮ ಪಯಣ ಸಾಗಿತು. ದಿನಕ್ಕೆ ಎಷ್ಟು ಜನ ಬಂದು ಹೋಗುತ್ತಿದ್ದರು ಗಲೀಜು ಇಲ್ಲದ ಸ್ವಚ್ಛ ಸ್ಥಳ. ನದಿಯಲ್ಲಿ ಬೊಟೀಂಗ್ ಕುಳಿತು ಹಾಡು ಹಾಡುತ್ತಾ ಸಾಗುವಾಗ ನದಿನೀರಿನಲ್ಲಿ ರಭಸದಿಂದ ಸಾಗುತ್ತಿರುವ ಹಾವುಗಳ ಹಿಂಡು ನೋಡಿ ಎಲ್ಲರಿಗೂ ಭಯ ಹಾಡುಗಾರರೆಲ್ಲ ಒಮ್ಮೆಗೆ ಹಾಡುವುದನ್ನು ನಿಲ್ಲಿಸಿದರು. ಇಲ್ಲಿ ಸ್ವಾಭಾವಿಕ ಸಸ್ಯ, ಪ್ರಾಣಿ ವೈವಿಧ್ಯ ವಿರುವ ಸುತ್ತಲೂ ಉದ್ಯಾನವನಗಳಿಂದ ಆವೃತವಾದ ತಾಣವಿದು. ದೇವಸ್ಥಾನದ ಸುತ್ತಲೂ ಹುಲಿ, ಸಿಂಹ, ಆನೆ, ಜಿರಾಫೆ,ಹಸು ಕರುಗಳ ದೈತ್ಯ ಮೂರ್ತಿಗಳು ಆಕರ್ಷಕ ವಾಗಿವೆ. ಇವುಗಳ ಸುತ್ತ ಪೋಟೋ ಕ್ಲಿಕ್ಕಿಸಿ ಕೊಳ್ಳುವವರ ದಂಡೆ ಇದೆ.
ದೇಶಿ ಗೋವುಗಳ ತಳಿ ಸಂರಕ್ಷಣೆ ನೀಡುವ ಉದ್ದೇಶದಿಂದ ಇಲ್ಲಿ ಬೃಹತ್ ಗೋಶಾಲೆ ನಿರ್ಮಿಸಲಾಗಿದೆ.ಇಲ್ಲಿಗೆ ಬೇಟಿ ನೀಡಿದವರಿಗೆ ಹೊಸದೊಂದು ಅನುಭವ . ಇಲ್ಲಿಯ ವಿಶಾಲವಾದ ಮೈದಾನಿನಲ್ಲಿ ತುಂಬಾ ಜನರಿದ್ದರು. ಎಲ್ಲರಿಗೂ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಚೆನ್ನಾದಿದ್ದು.ಕಡಿಮೆ ದರದಲ್ಲಿ ಊಟ ವಸತಿ ಕೇಂದ್ರವು ಇದೆ. ಇಲ್ಲಿಗೆ ವಲ್ಸಾಡ್ ಹತ್ತಿರದ ರೈಲು ನಿಲ್ದಾಣ. ಸೂರತ್ಹತ್ತಿರದ ವಿಮಾನನಿಲ್ದಾಣ.
