ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ ‘ಸಖತ್’ ಟೈಟಲ್ ಟ್ರ್ಯಾಕ್..!
ಅದ್ಧೂರಿ ಸೆಟ್..25 ಜನ ಡ್ಯಾನ್ಸರ್..’ಸಖತ್’ ಟ್ರ್ಯಾಕ್ ಸೂಪರ್ ಹಿಟ್..!
ಸಖತ್ ಬಗ್ಗೆ ಯಾರಿಗೆ ಗೊತ್ತಿಲ್ಲ ಗುರು. ಗೋಲ್ಡನ್ ಸ್ಟಾರ್ ಗಣೇಶ್ ಹೊಸ ರೂಪದಲ್ಲಿ ಕಾಣಿಸಿಕೊಳ್ಳುತ್ತಿರುವ ಸಿನಿಮಾ. ಸ್ಮಾರ್ಟ್ ಆಗಿ ಹೆಂಗಳೆಯರ ಮನಸ್ಸು ಕದ್ದಿದ್ದ ಗೋಲ್ಡನ್ ಸ್ಟಾರ್ ಸಖತ್ ನಲ್ಲಿ ಇದ್ದಕ್ಕಿದ್ದಂತೆ ಅಂಧನಾಗಿ ಕಾಣಿಸಿಕೊಂಡು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಈಗಾಗಲೇ ಸಿನಿಮಾ ಸಾಕಷ್ಟು ಪ್ರಶಂಸೆ ಗಿಟ್ಟಿಸಿಕೊಂಡಿದೆ, ಸಾಕಷ್ಟು ಭರವಸೆ ಹುಟ್ಟಿಸಿದೆ. ಟೀಸರ್ ನಿಂದ ಗಮನ ಸೆಳೆದಿದ್ದ ಸಖತ್ ಹಾಡೊಂದನ್ನ ಬಿಟ್ಟು ಆಶ್ಚರ್ಯ ಉಂಟು ಮಾಡಿತ್ತು. ಇದೀಗ ಟೈಟಲ್ ಟ್ರ್ಯಾಕ್ ಬಿಟ್ಟು ಹುಚ್ಚೆಂದು ಕುಣಿಯುವಂತೆ ಮಾಡಿದೆ.
ಎಸ್ ಸಖತ್ ಸಿನಿಮಾದ ಇಂಟ್ರೂಡಕ್ಷನ್ ಸಾಂಗ್ ಆನಂದ್ ಆಡಿಯೋ ದಲ್ಲಿ ರಿಲೀಸ್ ಆಗಿದೆ. ಈ ಸಾಂಗ್ ನಲ್ಲಿ ಗಣೇಶ್ ಮತ್ತಷ್ಟು ಲವ್ಲಿಯಾಗಿ ಕಾಣಿಸಿಕೊಂಡಿದ್ದಾರೆ. ಪಾರ್ಟಿ ಸಾಂಗ್ ನಂತಿರುವ ಈ ಹಾಡಿನಲ್ಲಿ ಪಾರ್ಟಿ ನಲ್ಲಿ ವೇರ್ ಮಾಡುವಂತ ಕಾಸ್ಟ್ಯೂಮ್ ನಲ್ಲಿ ಗಣೇಶ್ ಮಿಂಚಿದ್ದಾರೆ. ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಸಾವಿರಾರು ಜನ ನೋಡಿದ್ದಾರೆ. ನೂರಾರು ಜನ ಅಭಿಪ್ರಾಯ ತಿಳಿಸಿದ್ದಾರೆ. ನೀವೂ ನೋಡಿಲ್ಲ ಅಂದ್ರೆ ಒಮ್ಮೆ ನೋಡ್ಕೊಂಡ್ ಬಂದ್ಬಿಡಿ. ಹಾಡು ನಿಮ್ಮ ಕಿವಿಗೂ ಇಂಪೆನಿಸದೇ ಇರದು.
ಮನಸ್ಸಲ್ಲೇ ಹೆಜ್ಜೆ ಹಾಕುವಂತ ಸಾಹಿತ್ಯ ಬರೆದವರು ಬೇರಾರು ಅಲ್ಲ ನಿರ್ದೇಶನದ ಹೊಣೆ ಹೊತ್ತಿರೋ ಸಿಂಪಲ್ ಸುನಿ. ಅವರ ಜೊತೆಗೆ ರ್ಯಾಪರ್ ಸಿದ್ ಸಾಹಿತ್ಯ ಕೂಡ ಹದವಾಗಿ ಬರೆತಿದೆ. ಈ ಸಾಹಿತ್ಯಕ್ಕೆ ಜೂಡಾ ಸ್ಯಾಂಡಿ ಒಳ್ಳೆ ಮ್ಯೂಸಿಕ್ ಹಾಕೊಟ್ಟಿದ್ದು ಗಂಡ್ ಹೈಕ್ಳು, ಹೆಣ್ ಹೈಕ್ಳು ಸಾಂಗ್ ಹಾಕೊಂಡು ಕುಣಿಯೋ ಥರ ಮಾಡಿದ್ದಾರೆ. ಪಂಚಮ್ ಜೀವಾ, ಜೂಡಾ ಸ್ಯಾಂಡಿ, ರ್ಯಾಪರ್ ಸಿದ್ ಧ್ವನಿಯಾಗಿದ್ದಾರೆ. ಅದ್ಧೂರಿ ಸೆಟ್ ನಲ್ಲಿ 25 ಜನ ಡ್ಯಾನ್ಸರ್ ನಡುವೆ ಹಾಡು ಚಿತ್ರೀಕರಣವಾಗಿದೆ.
ಸಿಂಪಲ್ ಸುನಿ.. ಗೋಲ್ಡನ್ ಸ್ಟಾರ್ ಗಣೇಶ್ ಕಾಂಬೀನೇಷನ್ ನೋಡೋದಕ್ಕೆ ಸಿನಿ ಪ್ರೇಮಿಗಳು ಕಾಯ್ತಾನೆ ಇದ್ದಾರೆ. ಸಖತ್ ಇದೇ 26 ರಂದು ದೊಡ್ಡ ಪರದೆ ಮೇಲೆ ರಾರಾಜಿಸೋಕೆ, ನಕ್ಕು ನಲಿಸೋಕೆ ರೆಡಿಯಾಗಿ ನಿಂತಿದೆ. ಕಾಮಿಡಿ ಜೊತೆಗೆ ರಿಯಾಲಿಟಿ ಸುತ್ತ ಎಣೆದಿರುವ ಅದ್ಭುತ ಕಥೆ ಇದು. ಈ ಕಥೆಯಲ್ಲಿ ಗಣೇಶ್ ಗೆ ನಿಶ್ವಿಕಾ ನಾಯ್ಡು ಜೋಡಿಯಾಗಿದ್ದಾರೆ.
ಕೆವಿಎನ್ ಪ್ರೊಡಕ್ಷನ್ ನಡಿ ಅದ್ಧೂರಿಯಾಗಿ ತಯಾರಾಗಿರುವ ಸಖತ್ ಸಿನಿಮಾಗೆ ನಿಶಾ ವೆಂಕಟ್ ಕೋನಾಂಕಿ ಹಾಗೂ ಸುಪ್ರಿತ್ ಬಂಡವಾಳ ಹೂಡಿದ್ದಾರೆ. ರಂಗಾಯಣ ರಘು, ಸಾಧುಕೋಕಿಲ, ಧರ್ಮಣ್ಣ ಕಡೂರು ಸೇರಿದಂತೆ ಮುಂತಾದವರು ತಾರಾಗಣದಲ್ಲಿದ್ದಾರೆ.
– ಹೆಗ್ಗದ್ದೆ ಸಮಾಚಾರ್.ಕಾಮ್ / heggadde samachar.com