Home Kannada Article ಪಂಚವಟಿ : Heggaddesamachar

ಪಂಚವಟಿ : Heggaddesamachar

0
39

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ 

ರಾಮಾಯಣ ಮಹಾಗ್ರಂಥದಲ್ಲಿ ಲಂಕೆಯಷ್ಟೆ ಪ್ರಾಮುಖ್ಯತೆ ಪಡೆದಿರುವ ಸ್ಥಳ ನಾಸಿಕದ  ಪಂಚವಟಿ.ರಾವಣನು ಸೀತೆಯನ್ನು ಅಪಹರಿಸಿದ್ದು ಪಂಚವಟಿಯಿಂದಲೆ. ಪಂಚವಟಿ ಎಂದರೆ 5 ಆಲದ‌ಮರಗಳ‌ ಸಮೂಹವಿರುವ ಉದ್ಯಾನ. ರಾಮ, ಸೀತೆ ಮತ್ತು ಲಕ್ಷ್ಮಣರು  ವನವಾಸ ಕಾಲದಲ್ಲಿ ಹೆಚ್ಚು ಸಮಯ ಕಳೆದ ಸ್ಥಳವಿದು. ರಾವಣನ ಸಹೋದರಿ ‌ ಶೂರ್ಪನಖಿಯ  ಮೂಗು  ಲಕ್ಷ್ಮಣ ಕತ್ತರಿಸಿದಾಗ ‌ರಾಕ್ಷಸ ಸಮೂಹವೇ  ರಾಮಲಕ್ಷ್ಮಣರೊಂದಿಗೆ ಯುದ್ದಕ್ಕೆ  ಬಂದಿತ್ತು. ಆ ಸಮಯದಲ್ಲಿ ಸೀತೆಯ ‌ರಕ್ಷಣೆಗೆ  ಈ ಗುಹೆಯನ್ನು ಮಾಡಿದ್ದರು ಎನ್ನುತ್ತಾರೆ. 
          
ಸ್ಥಳ ಪುರಾಣದ ಪ್ರಕಾರ ದಟ್ಟ ಕಾಡಾದ ಕಾರಣ‌ ಸುಲಭದಲ್ಲಿ ರಾಮ ಲಕ್ಷ್ಮಣರಿಗೆ ಈ‌ ಗುಹೆಯ‌ ಪರಿಚಯ ಆಗಲು 5 ಆಲದ ಮರಗಳನ್ನು ನೆಟ್ಟಿದ್ದು. ದಂಡ್ಯಾಕಾರಣ್ಯದ ಒಂದು ಭಾಗದಲ್ಲಿ ‌ಪಂಚವಟಿ‌ ಅತಿ ಸುಂದರ ‌ಸ್ಥಳವೆಂದು ವಾಲ್ಮೀಕಿ ರಾಮಾಯಣದಲ್ಲಿದೆ. 5 ಆಲದ ಮರಗಳ ಗುಂಪಾಗಿ ಒಂದೆಡೆ ಸುತ್ತುವರಿದುದರಿಂದ ಇದಕ್ಕೆ ಪಂಚವಟಿ ಎನ್ನುತ್ತಾರೆ. 
          
ಈ 5 ಸುರಂಗ ಗುಹೆಯೊಳಗೆ‌ ಹೋಗಲು 30 ನಿಮಿಷಗಳು ‌ಬೇಕಾಗುತ್ತದೆ. ಒಳಗಡೆ ಕೆಳಮುಖವಾಗಿ ‌ಬಗ್ಗಿಕೊಂಡೆ‌ ಹೋಗಬೇಕು. ಗುಹೆಯ ಸಂಚಾರಿ ಜಾಗ ಸಣ್ಣದಿದೆ ಕುಳಿತೆ ಸಾಗ‌ಬೇಕಾಗುತ್ತದೆ. ಈ ಗುಹೆಯೊಳಗೆ ಸಣ್ಣ ಮಂದಿರವಿದ್ದು ರಾಮ ಲಕ್ಷ್ಮಣ ಹಾಗೂ ‌ಸೀತಾದೇವಿಯರ ಮೂರ್ತಿಗಳಿವೆ.  ಮತ್ತೊಂದು ಕೋಣೆಯಲ್ಲಿ ಶಿವಾಲಯವಿದೆ.‌ ಸೀತಾಗುಹೆಯ‌ ಎದುರುಗಡೆ ಬಂಗಾರದ ಜಿಂಕೆ ಮಾರೀಚನ ಜಿಂಕೆಯ ರೂಪವಿದೆ. 


ನಾಸಿಕ್

ಮಹಾರಾಷ್ಟ್ರದಲ್ಲಿ  ರಾಮಾಯಣಕ್ಕೆ ಸಂಬಂಧ ಪಟ್ಟ ಪುರಾಣ ಸ್ಥಳಗಳಿದ್ದು ಅವುಗಳಲ್ಲಿ ಮುಖ್ಯವಾಗಿರುವುದು‌ ನಾಸಿಕ್. ನಾಸಿಕ ಎಂದಾಕ್ಷಣ ತಟ್ಟನೆ ನೆನಪಾಗುವುದು ಶೂರ್ಪನಖಿಯ ಕಥೆ. ಲಕ್ಷ್ಮಣನು ಶೂರ್ಪನಖಿಯ (ಮೂಗು)ನಾಸಿಕವನ್ನು ಕತ್ತರಿಸಿದ‌ ಸ್ಥಳವಾದುದರಿಂದ ಈ ಊರಿಗೆ ‌ನಾಸಿಕ ಎಂದು ಹೆಸರು‌ಬಂತು.  ನಾಸಿಕ ಎಂದರೆ ‌ಮೂಗು. ಮೂಗು ಬಿದ್ದ ಸ್ಥಳವಾದ್ದರಿಂದಲೂ ಈ ಹೆಸರು  ಹಾಗೆ ಪಂಚಮಹಾ ಕ್ಷೇತ್ರಗಳಲ್ಲಿ (ಪ್ರಯಾಗ, ಪುಷ್ಕರ, ನೈಮಿಷಾರಣ್ಯ ,ಗಯಾ ). ‌ನಾಸಿಕವು ‌ಒಂದು .ಈ‌ ಕ್ಷೇತ್ರವು ಒಂಬತ್ತು ಶಿಖರಗಳಿಂದ  ಆವೃತ್ತವಾಗಿದ್ದು ನವಶಿಖ ಎಂದು ಕರೆಯುತ್ತಿದ್ದರು ಅದೇ ಮುಂದೆ ನಾಸಿಕವಾಗಿರ ಬಹುದು ಎನ್ನುತ್ತಾರೆ. ನಾಸಿಕ ಧಾರ್ಮಿಕ ಕೇಂದ್ರ ಹಾಗೂ ಋಷಿ ಮುನಿಗಳ ತಪೊಭೂಮಿ. ಇದನ್ನು ಪದ್ಮ ನಗರ ಎಂದು ನಾಸಿಕ್ಕೆ‌  ಹೆಸರಿದೆ. ನಾಸಿಕದ ‌ನೈಋತ್ಯದಲ್ಲಿ ತ್ರಂಬಕೇಶ್ವರ ಕೇತ್ರವಿದ್ದು ಇದು 12 ಜೋತಿರ್ಲಿಂಗಗಳಲ್ಲಿ ಒಂದು.

ಸೀತೆಯ ಬಯಕೆಯಂತೆ ರಾಮನು‌  ಚಿನ್ನದ ಜಿಂಕೆಯನ್ನು ಬೆನ್ನಟ್ಟಿದ್ದು‌ ,ನಂತರ ರಾಮನ ಸಹಾಯಕ್ಕಾಗಿ ಲಕ್ಷ್ಮಣ ಕುಟೀರದಿಂದ  ಹೊರ ಹೋಗುವಾಗ ತನ್ನ‌ ಬಾಣದಿಂದ ಎಳೆದ ಲಕ್ಷ್ಮಣ ರೇಖೆ ಎಳೆದ‌‌ ಸ್ಥಳವಿದು.ಹೀಗೆ ‌ರಾಮಾಯಣದ ಹಲವು ಪ್ರಸಂಗಗಳಿಗೆ‌ ಸಾಕ್ಷಿಯಾದ ಸ್ಥಳವೇ‌  ನಾಸಿಕ.

ಸಮುದ್ರ ಮಂಥನ ಸಮಯದಲ್ಲಿ ರಾಕ್ಷಸರಿಗೆ ಅಮೃತ ದೊರೆಯದಂತೆ ಅದನ್ನು ಬಚ್ಚಿಡಲು ಪ್ರಯತ್ನಿಸಿದಾಗ  ಅಮೃತ ಕುಂಡದಿಂದ ನಾಲ್ಕು ಹನಿಗಳು ತುಳುಕಿವೆ ಅದೇ ಅಲಹಬಾದ್, ಹರಿದ್ವಾರ, ಉಜ್ಜಯಿನಿ ಮತ್ತು ನಾಸಿಕ ಇದರಿಂದಲೂ  ನಾಸಿಕ  ದೈವಿಕ ಅಮೃತದ ಪ್ರಭಾವಳಿ ಕ್ಷೇತ್ರ.

ತ್ರಿವೇಣಿ ಸಂಗಮಮ

ತ್ರಿವೇಣಿ ಸಂಗಮ ನಾಸಿಕದ  ಇನ್ನೊಂದು ‌ವಿಶೇಷ. ಅರುಣ, ವರುಣ ಮತ್ತು ಗೋದಾವರಿ ‌ನದಿಗಳ‌  ಸಂಗಮತಾಣವಿದು.  ನಾಸಿಕದಲ್ಲಿ ಅರುಣ ಮತ್ತು ವರುಣ ನದಿಗಳ ಗುಪ್ತಗಾಮಿನಿಗಳು ಗೋದಾವರಿ ಮೈದಳೆದು ಜೀವ ಜಂತುಗಳ ಪೊರೆವ ಮಾಹಾತಾಯಿ ಗೋದಾವರಿ ನದಿ. ಇಲ್ಲಿ ಪಿಂಡದಾನ ಮಾಡಿದರೆ ಅಥವಾ ವಿಸರ್ಜಿಸಿದರೆ ಮೃತರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂಬ ನಂಬಿಕೆ ಇದೆ.  ವನವಾಸದ ಸಮಯದಲ್ಲಿ ದಶರಥ ಅಸ್ಥಿಯನ್ನು ರಾಮನು ಇಲ್ಲಿಯೆ ವಿಸರ್ಜಿಸಿದ್ದನಂತೆ.

ಗೋದಾವರಿ ನದಿಯಲ್ಲಿ ರಾಮಕುಂಡವಿದ್ದು ರಾಮ ಸೀತೆ ಸ್ನಾನ ಮಾಡುತ್ತಿದ್ದ ಪವಿತ್ರ ಸ್ಥಳವಿದು. ಈ ರಾಮ ಕುಂಡದಲ್ಲಿ ಇಂದಿಗೂ ‌ಝರುಗಳಿವೆ. ಇಲ್ಲಿ ಅಸ್ಥಿಗಳು ಕರಗುತ್ತವೆ. ಆದ್ದರಿಂದ ಮೋಕ್ಷಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಬ್ರಹ್ಮ ನ ಐದು ಶಿರಗಳಲ್ಲಿ  ಒಂದನ್ನು ಕತ್ತರಿಸಿದ  ಶಿವ  ಬ್ರಹ್ಮ ಹತ್ಯಾ ದೋಷಕ್ಕೆ ಒಳಗಾಗುತ್ತಾನೆ. ಇಡಿ ಜಗತ್ತನ್ನು  ಸುತ್ತುವರಿದ  ಶಿವ ಪಾಪ ಪರಿಹಾರವಾಗದೆ  ಕೊನೆಗೆ ನದಿಯ  ಸಲಹೆಯಂತೆ ಪವಿತ್ರ ಗೋದಾವರಿ ‌ನದಿಯಲ್ಲಿ ಸ್ನಾನ ಮಾಡಿದಾಗ ಶಿವನ ಪಾಪ‌ನಿವಾರಣೆಯಾಗುತ್ತದೆ. 
 
ಗೌತಮ‌ಮಹರ್ಷಿಗಳು ಇಲ್ಲಿ ತಪಸ್ಸು ಮಾಡಿದ್ದರು.ಅವರ ತಪಸ್ಸಿನ ಫಲವಾಗಿ ಗಂಗೆ ಇಲ್ಲಿ ಹರಿದಳು. ಆದರೆ ಗೌತಮರ ಅವಹೇಳನ ಮಾಡಿದ ಕೆಲವು ಋಷಿಗಳು ಅಲ್ಲಿಗೆ ಸ್ನಾನಕ್ಕೆ ಹೋದಾಗ ಗಂಗೆ ಅದೃಶ್ಯಳಾದಳು. ಬಳಿಕ ಗೌತಮರ ಪ್ರಾರ್ಥನೆಯಂತೆ ಗಂಗೆಯು ಪರ್ವತದ ತಳಭಾಗದಲ್ಲಿ ಪ್ರಕಟಗೊಂಡ‌ ಗೋದಾವರಿ ಎಂಬ  ಹೆಸರಿನಿಂದ  ಹರಿಯುತ್ತಾಳೆ. ನಿತ್ಯಗೋದಾವರಿ ನದಿಗೆ ಪೂಜೆ ಸಲ್ಲಿಸಿ ನದಿಯಲ್ಲಿ  ದೀಪ ತೇಲಿ ಬಿಡಲಾಗುತ್ತದೆ. ಮಾಘಮಾಸದಲ್ಲಿ ಗಂಗಾ-ಗೋದಾವರಿ ಮಹೋತ್ಸವ ಹನ್ನೆರಡು ದಿನಗಳ ವರೆಗೆ ನಡೆಯುತ್ತದೆ.

ಕಪಾಲೇಶ್ವರ = ಇಲ್ಲಿನ ರಾಮಕುಂಡದಲ್ಲಿ ಮುಳುಕು ಹೊಡೆದು ರಾಮ ಸ್ಮರಣೆಯೊಂದಿಗೆ ಈ‌ ಕುಂಡದಿಂದ 43 ಮೆಟ್ಟಿಲುಗಳು  ಮೇಲೆರಿದರೆ ಸಿಗುವುದೆ ಕಪಿಲೇಶ್ವರನ ಸನ್ನಿಧಿ.ಇದು ಉಪ ಜ್ಯೋತಿರ್ಲಿಂಗ ವೆಂದು ಪ್ರಸಿದ್ಧ ವಾಗಿದೆ.  ಭಾರತದ ವಿಶಿಷ್ಟ ಶಿವ ಮಂದಿರಗಳಲ್ಲಿ ಒಂದು  ಇಲ್ಲಿ ನಂದಿಯು ಶಿವನ ಗರ್ಭಗುಡಿಯ ಮುಂದೆ‌ ಇರದೆ ಹಿಂಭಾಗದಲ್ಲಿದೆ. ಹಾಗೂ ‌ಶಿವನ‌ ಮೂರ್ತಿಗಿಂತ‌ ಎತ್ತರ ವಿದೆ.

ಗೋದಾವರಿ ದೇವಿ ದೇಗುಲ= 12 ವರ್ಷ ಗಳಿಗೊಮ್ಮೆ‌ಕುಂಭ ಮೇಳದ  ಸಮಯದಲ್ಲಿ ಈ ದೇಗುಲ ಬಾಗಿಲು ತೆರೆಯುತ್ತಾರೆ.ಗಂಗಾ ಹಾಗೂ ಭಾಗೀರಥಿ ದೇವಿಯರ ‌ಮೂರ್ತಿಗಳನ್ನು ಸ್ಥಾಪಿಸಲಾಗಿದೆ.
ಇನ್ನೂ ಅನೇಕ ಮಂದಿರಗಳ‌ ಸಮೂಹ ಇಲ್ಲಿದೆ. ಕಾರ್ತಿಕಸ್ವಾಮಿ‌ ಮಂದಿರ, ಸೋಮೇಶ್ವರ ‌ಮಂದಿರ,ಲಕ್ಷ್ಮಣ ಮಂದಿರ, ನಾರೋಶಂಕರ ಮಂದಿರ, ಕಾಟ್ಯಾ‌ಮಾರುತಿ ಮಂದಿರ,ಕಾಳಾರಾಮ ಮಂದಿರ ಇನ್ನೂ ಅನೇಕ ‌ಮಂದಿರಗಳ ಬೀಡು ಈ ಪಂಚವಟಿ.

ಕಾಳಾರಾಮ ಮಂದಿರ = ಕಾಳಾರಾಮ ಮಂದಿರ ಪೇಶ್ವೆಗಳು.ನಿರ್ಮಿಸಿದ ಈ ಮಂದಿರಕ್ಕೆ‌  ಸಂಪೂರ್ಣ ಕಪ್ಪು ‌ಕಲ್ಲು ಬಳಸಿದ್ದರಿಂದ‌  ಕಲಾರಾಮ ಎಂದು ‌ಹೆಸರು ಬಂದಿದೆ.‌ಇಲ್ಲಿನ ರಾಮ, ಸೀತೆ ಮತ್ತು ಕಡು‌ಕಪ್ಪು ವರ್ಣದಲ್ಲಿದ್ದು‌ ಒಡವೆಗಳಿಂದ ಅಲಂಕೃತರಾಗಿದ್ದಾರೆ. ಈ ದೇವಾಲಯದ ದ್ವಾರ ತಲುಪಲು ಇರುವ  ಹದಿನಾಲ್ಕು ‌ಮೆಟ್ಟಿಲುಗಳಿದ್ದು‌  ರಾಮನ ಹದಿನಾಲ್ಕು ‌ವರ್ಷದ ವನವಾಸವನ್ನು ಸಂಕೇತಿಸುತ್ತವೆ.

ಪಂಚವಟಿ ಸಮಿಪವೇ ಇರುವ. ನಾಸಿಕದಲ್ಲಿ ವಿಮಾನ ನಿಲ್ದಾಣವೂ  ಇದೆ. ಅಲ್ಲಿಂದ ಪಂಚವಟಿಗೆ‌  ಕೇವಲ 20 ಕಿ. ಮಿ ಅಂತರ‌ ನಾಸಿಕ ರೈಲು ನಿಲ್ದಾಣವೂ ಇದೆ. ಬಸ್ಸಿನ ವ್ಯವಸ್ಥೆಯೂ ಚೆನ್ನಾಗಿದೆ.

NO COMMENTS

LEAVE A REPLY

Please enter your comment!
Please enter your name here