AP Arjun ನಿರ್ದೇಶನದ ಅದ್ಧೂರಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಟ Dhruva Sarja, ಮತ್ತೊಮ್ಮೆ ಅದೇ ನಿರ್ದೇಶಕರ ಜೊತೆ ಕೆಲಸ ಮಾಡುತ್ತಿರುವ ಚಿತ್ರ ಮಾರ್ಟಿನ್. ವಾಸವಿ ಎಂಟರ್ ಪ್ರೈಸಸ್ ಮೂಲಕ ಉದಯ್ ಕೆ.ಮೆಹ್ತಾ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಕನ್ನಡ, ತೆಲುಗು, ತಮಿಳು ಸೇರಿ ಐದು ಭಾಷೆಗಳಲ್ಲಿ ತೆರೆಗೆ ಬರಲಿರುವ ಈ ಚಿತ್ರದ ಚಿತ್ರೀಕರಣ ಈಗ ಉತ್ತರ ಭಾರತದ ಕಾಶ್ಮೀರದ ಸುಂದರ ತಾಣಗಳಲ್ಲಿ ಒಂದು ವಾರದಿಂದ ನಡೆಯುತ್ತಿದೆ.
ಕಳೆದ 8 ದಿನಗಳಿಂದ ಕಾಶ್ಮೀರದಲ್ಲಿ ಮೈನಸ್ 7 ಡಿಗ್ರೀ ತಾಪಮಾನ ಇರುವ Locationಗಳಲ್ಲಿ ಚಿತ್ರತಂಡ ಶೂಟಿಂಗ್ ನಡೆಸುತ್ತಿದೆ. ಕಾಶ್ಮೀರದ ಐಸ್ ವಾರ್ ಸಾಹಸ ದೃಶ್ಯಗಳ ಜೊತೆಗೆ ರೋಮಾಂಚನಕಾರಿ ಸ್ಕೇಟಿಂಗ್ ಆ್ಯಕ್ಷನ್ ಸೀನ್ ಗಳನ್ನು ಅಲ್ಲಿ ಚಿತ್ರೀಕರಿಸಲಾಗುತ್ತಿದೆ. ಈ ಚಿತ್ರೀಕರಣದಲ್ಲಿ ನಾಯಕ Dhruva Sarja, ನಾಯಕಿ ವೈಭವಿ ಶಾಂಡಿಲ್ಯ, Chikkanna ಹಾಗೂ ಸಹ ಕಲಾವಿದರುಗಳು ಭಾಗವಹಿಸಿದ್ದರು.
ಆಕ್ಷನ್ ಸೀನ್ ಜೊತೆಗೆ ಮಾತಿನಭಾಗ ಸೇರಿದಂತೆ ಚಿತ್ರದ ಪ್ರಮಖವಾದ ದೃಶ್ಯಗಳನ್ನು ಅಲ್ಲಿ ಸೆರೆ ಹಿಡಿಯಲಾಗುವುದು. ಇನ್ನೂ 8 ದಿನಗಳ ಕಾಲ ಅಲ್ಲೇ ಶೂಟಿಂಗ್ ನಡೆಸಲಿರುವ ಮಾರ್ಟಿನ್ ಚಿತ್ರತಂಡ ಒಟ್ಟು 16 ದಿನಗಳ ಶೂಟಿಂಗ್ ಷೆಡ್ಯೂಲ್ ಹಾಕಿಕೊಂಡಿದೆ.

ಆ್ಯಕ್ಷನ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ನಿರ್ದೇಶಕ AP Arjun ಅವರು ಹೊಸ ಮಾದರಿಯ ಮೇಕಿಂಗ್ ಟ್ರೈ ಮಾಡಿದ್ದಾರೆ. ಎಲ್ಲಾ ಭಾಗಕ್ಕೂ ಸಲ್ಲುವ ಕಥೆ ಇದಾಗಿರುವುದರಿಂದ, PAN INDIA ಲೆವೆಲ್ ನಲ್ಲಿ ಮಾರ್ಟಿನ್ ಚಿತ್ರ ನಿರ್ಮಾಣವಾಗುತ್ತಿದೆ. ತೆಲುಗಿನಲ್ಲಿ ದೊಡ್ಡ ಹೆಸರು ಮಾಡಿರುವ MANISHARMA ಅವರು ಈ ಸಿನಿಮಾಗೆ ಸಂಗೀತ ನಿರ್ದೇಶ ಮಾಡುತ್ತಿದ್ದಾರೆ. ಛಾಯಾಗ್ರಹಣವನ್ನು SATHYA HEGDE ನಿರ್ವಹಿಸುತ್ತಿದ್ದಾರೆ. ಮಹೇಶ್ ರೆಡ್ಡಿ ಅವರ ಸಂಕಲನ ಈ ಚಿತ್ರಕ್ಕಿದೆ.

-Heggaddesamachar