Thursday, September 21, 2023
HomeKannada Literatureಗತವೈಭವ ಸಾರುವ ವಡೋದರ ಅರಮನೆ

ಗತವೈಭವ ಸಾರುವ ವಡೋದರ ಅರಮನೆ

ವಿಶ್ವಮಿತ್ರ ನದಿಯ ಎರಡು ದಂಡೆಗಳ‌ ಮೇಲೆ ಹಬ್ಬಿರುವ ಅಹಮದಾಬಾದ್ ನಿಂದ 105 ಕಿಮೀ ದೂರದಲ್ಲಿರುವ ವಡೋದರದಲ್ಲಿ ಸಯಾಜಿರಾಮ್ ಗಾಯಕವಾಡ್ 1890ರಲ್ಲಿ ಕಟ್ಟಿಸಿದ ಶ್ರೀಮಂತ ಅರಮನೆ ಅಥವಾ ದೂಬಾರಿ ಮನೆ ಲಕ್ಷ್ಮಿ ವಿಲಾಸ ಮೊಗಲರು ಹಾಗು ಮರಾಠರಿಂದ ಗುಜರಾತ್ ನ್ನು ವಶಪಡಿಸಿ‌ಕೊಂಡ ಗಾಯಕವಾಡ ಮನೆತನದ ಅರಸರಿಗೆ ಬರೋಡ ರಾಜಧಾನಿಯಾಗತ್ತು.ಕಲಾವಿದರ ನಿಪುಣತೆಗೆ ಹಿಡಿದ ಕನ್ನಡಿಯಂತೆ ಅದ್ದೂರಿಯ ಲಕ್ಷ್ಮಿ ವಿಲಾಸ ಅರಮನೆ ದೇಶದ ಅಪರೂಪದ ಸೊಗಸಾದ ಹೆಗ್ಗುರುತು. ಗುಜರಾತಿಗೆ ಬೇಟಿ ನೀಡಿದವರು ‌ನೋಡಲೇ‌‌ಬೇಕಾದ ಭವ್ಯ ಅಲಯವಿದು . ಇಂಡೋ- ಸಾರಾನೆನಿಕ್ ಪುನರುಜ್ಜೀವನ ವಾಸ್ತು ಶಿಲ್ಪದ ಆಧಾರದ ಮೇಲೆ ವಿನ್ಯಾಸಗೊಳಿಸಲಾಗಿದೆ. ಪ್ರಜಾ ಪ್ರಭುತ್ವದ ಕಾಲಘಟ್ಟದಲ್ಲು ಪುಳಕಗೊಳಿಸುವ ಈ ಅರಮನೆ ಎಂತಹವರನ್ನು ಆಯಸ್ಕಾಂತದಂತೆ ಸೆಳೆವ ವಾಸ್ತುಶಿಲ್ಪದ ಗಣಿ ದೇಶಿ ವಿದೇಶಿಗರನ್ನು ಆಕರ್ಷಿಸುತ್ತದೆ.
ಭಾರತದಲ್ಲಿರುವ ಅನೇಕ ಅರಮನೆಗಳ ಸಾಲಿನಲ್ಲಿ‌ ಬರುವ ರಾಜಮಹಾರಾಜರ ಜೀವನ ಕ್ರಮವನ್ನು ನೆನಪಿಸುವ ‌ವೈಭವದತಾಣ ವಡೋದರದ ದೊಡ್ಡ ಅರಮನೆ ,ವಿಶಾಲ ಮೈದಾನ, ಇಟೆಲಿಯನ್ ಮರ್ಬಲ್‌ಹಾಸಿದ ಮೂರು ಮಹಡಿಯ ಅರಮನೆ ಅತ್ಯಾಕರ್ಷಕ ಪ್ರವಾಸಿ ಕೇಂದ್ರ ,ಅಪರೂಪದ ವಾಸ್ತು ಶಿಲ್ಪ ಸೂಕ್ಷ್ಮ ಕುಸುರಿಯ ಕೆತ್ತನೆ ಮೈಮನ ರೋಮಾಂಚನ ಗೊಳ್ಳುವ ‌ಕಲಾವೈಭವವನ್ನು ನೋಡಿ ‌ಮೆಲುಕು ಹಾಕಲು ವಡೋದರ ಅರಮನೆ ಬೇಟಿ‌ನೀಡಲೇ ಬೇಕು. ಈ ಅರಮನೆಯನ್ನು ಬೇರಾವ ಅರಮನೆಗೆ ‌ಹೋಲಿಸುವುದಕ್ಕಿಂತ ಈ ಅರಮನೆಗೆ ಈ ಅರಮನೆಯೇ ಸಾಟಿ‌ ಎನ್ನಬಹುದು. ‌ಪೂರ್ವಾಭಿಮುಖವಾಗಿ ನಿಂತ ಅರಮನೆ ಗಗನ ಚುಂಬಿಸುತ್ತಿರುವ ಬೃಹತ್ ಗೋಪುರ ಕಲಾನೈಪುಣ್ಯದ ತನ್ನ ಕಲಾತ್ಮಕ ಚಂದದಿಂದಲೇ ಅರಳಿನಿಂತು ಕೈಬೀಸಿ ಕರೆಯುತ್ತಾ ,ಪ್ರವಾಸಿಗರನ್ನು ಆಕರ್ಷಿಸುತ್ತಿದೆ‌ . ಲಿಫ್ಟ್ ನ ಪರಿಕಲ್ಪನೆಯು ಇಲ್ಲದ ಕಾಲದಲ್ಲಿ ನಿರ್ಮಾಣಗೊಂಡ ಈ ಅರಮನೆಯಲ್ಲಿ ‌ ಆಗಿನ ಕಾಲದಲ್ಲೇ ತಯಾರಿಸಿದ ಲಿಫ್ಟ್ ಇರುವುದು ಇನ್ನೊಂದು ವಿಶೇಷ.

ಅರಮನೆ ಎದುರು ಭಾಗದಲ್ಲಿ ಮಗುವನ್ನು ಹೊತ್ತುನಿಂತ ‌ಇಜಿಪ್ತಿನ ‌ಮಹಿಳಾ ಪ್ರತಿಮೆ ಇದೆ. ಇದರ ಹಿಂದೊಂದು ಐತಿಹಾಸಿಕ ಕತೆ ಇದೆಯಂತೆ. ಈ ಅರಮನೆ ಯ ಮುಖ್ಯದ್ವಾರದಲ್ಲಿ ಒಳಗೆ‌ಸಾಗಿದರೆ ಭಾರತೀಯ ಪರಂಪರೆಯೊಂದಿಗೆ ಪಾಶ್ಚಾತ್ಯ ಶೈಲಿಯ ಕಲೆ, ವಿಜ್ಞಾನ, ಶಿಲ್ಪಕ್ಕೆ ಮಹತ್ವಕೊಟ್ಟಿರುವುದು ಎದ್ದು ಕಾಣುತ್ತದೆ. ಹಾಗೆ ಮುಂದೆ ಸಾಗಿದರೆ ಮಹಾರಾಜರು ದರ್ಬಾರ್ ಗೆ ಪ್ರವೇಶಿಸುವ ದ್ವಾರವು ಮರಾಠ ಶೈಲಿಯಲ್ಲಿದ್ದು. ವಿಶಾಲಪ್ರಾಂಗಣ ಹೊಂದಿದ್ದು ಬಾಲ್ಕನಿಯಲ್ಲಿ ಸಣ್ಣ ಕುಸೂರಿ ‌ಕೆಲಸದ ಕಿಟಕಿ ಅಂಚು, ಭಾರತೀಯ ‌ಪರಂಪರಯೊಂದಿಗೆ ‌ಪಾಶ್ಚಾತ್ಯಾ ಶೈಲಿಯು ಕಾಣುತ್ತದೆ. ಅರಮನೆಯ ಒಳಗೆ ಅಡಿ ಇಡುತ್ತಲೇ ಸಕಲ ವೈಭವ ವೂ ಕಣ್ಣೆದುರಿಗೆ ‌ಮೂಡಿ ಬಂದಂತೆ ಆಳರಸರ ‌ನೆನಪಿಗಾಗಿ ಅರಮನೆ ‌ಕೋಟೆ ಕೊತ್ತಲ ಸಿಂಹಾಸನದ ಗತಕಾಲದ ಕುರುಹುಗಳಾಗಿ ಉಳಿದಿದೆ .ಈ ಅರಮನೆ ಅರಸೊತ್ತಿಗೆಯ ಸಾಮ್ರಾಜ್ಯ ಶಾಹಿತ್ವದ ಪ್ರತೀಕ.

ವಾಸ್ತ ಶಿಲ್ಪ = 2,000 ವರ್ಷಗಳಷ್ಟು ಹಳೆಯ ಇತಿಹಾಸವನ್ನು ಸಾರುವ ಅರಮನೆ ಮೋಘಲ್, ಹಿಂದೂ ಮತ್ತು ಗೋಧಿಕ್ ವಿನ್ಯಾಸದ ಶೈಲಿಗಳ ಅಂಶಗಳನ್ನು ಸೇರಿಸಿ ಮಾಡಿರುವ ಅದ್ಬುತ ವಾಸ್ತು ಶಿಲ್ಪದ ಆಗರ .ಮುಖ್ಯ ವಾಸ್ತು ಶಿಲ್ಪಿ ಚಾರ್ಲ್ಸ್ ವಂತ್. 12 ವರ್ಷಗಳ ನಿರಂತರ ಕೆಲಸದೊಂದಿಗೆ ಈ ಅರಮನೆ ಪೂರ್ಣಗೊಂಡ ದಾಖಲೆಗಳು ಇಲ್ಲಿವೆ. ಅರಮನೆಯ ಹೊರಭಾಗ ಕಣ್ಣು ಅರಳಿಸಿ ನೋಡುವಂತೆ ವಿನ್ಯಾಸ ಹೊಂದಿದೆ.ಮೊಗಲ್ ಶೈಲಿಯ ಮಿನಾರ್ ರಾಜಸ್ಥಾನ ಶೈಲಿಯ ಗುಮ್ಮಟಗಳು ಮತ್ತು ಕಮಾನ್ ಗಳು ಅರಮನೆಯ ವಾಸ್ತು ಶಿಲ್ಪಕ್ಕೆ ವಿಶೇಷ ಮೆರಗು ನೀಡಿದೆ. ಬೆಲ್ಜಿಯಂ ಬಣ್ಣದ ಗಾಜಿನ ‌ಕಿಟಕಿಯ ಬದಿಯಲ್ಲಿ ನೀರನ್ನು ತುಂಬಿಸಿಡಲಾಗಿದೆ. ಅದು ಗಾಳಿಯಲ್ಲಿ ತೇಲಾಡಿ ಅರಮನೆ ತೇವಾಂಶದಿಂದ ತಂಪಾಗಿರುತ್ತದೆ. ಅರಮನೆಯ ಮೂರು ಎಲ್ಲಾ ಮಗ್ಗುಲಲ್ಲಿ ಸಣ್ಣ ಸಣ್ಣ ಕುಸೂರಿಗಳ ವಾಸ್ತು ಶಿಲ್ಪ ಎದ್ದು‌ಕಾಣುವುದಲ್ಲದೆ. ಹೊರಾಂಗಣದ ಕಲಾಗಾರಿಕೆಯ ವಿವರಿಸಲು ಶಬ್ದಗಳು ಸಾಲದು ಎಂಬಂತಿದೆ‌ ಮೋಗಲರ, ರಾಜಪುತರ, ಜೈನ ಶೈಲಿಯಲ್ಲಿ ವಿಸ್ತಾರಗೋಡೆಗಳಲ್ಲಿ ಕಲಾ ವೈಭವ ಅರಳಿನಿಂತಿದೆ. ಅದ್ದೂರಿ ವಿನ್ಯಾಸದ ಅರಮನೆ. ಪಾರಂಪರಿಕ ಮೌಲ್ಯ ಮತ್ತು ಇತಿಹಾಸವನ್ನು ಪರಿಗಣಿಸುವಾಗ ಇದರ ಮೌಲ್ಯವನ್ನು ಹಿಡಿಯಲು ಸಾದ್ಯವಿಲ್ಲದಂತ ವಾಸ್ತುಶಿಲ್ಪದ ಕಲಾಸಂಗಮ ಇಲ್ಲಿದೆ.

ಲಕ್ಷ್ಮಿ ವಿಲಾಸ ಅರಮನೆಯಲ್ಲಿ 170 ಕೊಠಡಿ ಇದ್ದು ವಿಶಾಲ ‌ಪ್ರವೇಶಕಕ್ಷಾವಿದೆ. ಪ್ರವೇಶ ದ್ವಾರದಲ್ಲಿ ಆನೆ ಮೂರ್ತಿ ಸ್ವಾಗತಿಸುವಂತಿದೆ. ರಾಜ ಮಹಾರಾಜರ ಅನೇಕ ಪ್ರತಿಮೆಗಳು ಈ ಪ್ರವೇಶದ್ವಾರದಲ್ಲಿ ಪ್ರವಾಸಿ ಸುತ್ತಲೇ ಕಾಣಸಿಗುತ್ತದೆ. ಮದ್ಯದಲ್ಲಿ ಒಂದು ವಿಶಾಲ ಕಳಸವಿದ್ದು ಅದು ‌ಮತ್ಸಂಗನೇಯರು ಲವಲವಿಕೆ ಯಿಂದ ಇದ್ದ ಹಾಗೆ ‌ಇದೆ. ಗೋಡೆಗಳಲ್ಲಿ ಇಟಲಿಯಾ ಪ್ರಸಿದ್ಧ ಚಿತ್ರಕಾರ ‌ನಿರ್ಮಿಸಿದ ಅನೇಕ ‌ಚಿತ್ರಗಳು ರಾರಾಜಿಸುತಿದೆ. ಇಲ್ಲಿನ ಸ್ತಂಭಗಳು ಶ್ರೀಮಂತಿಕೆಯನ್ನು ಸಾರುತ್ತದೆ. ಮಹಾರಾಣಿಯರ ಅನೇಕ ಚಿತ್ರಗಳಿದ್ದು ಆ ಚಿತ್ರಗಳಲ್ಲಿನ ಸೀರೆ ಅಂಚಿಗೆ ನಿಜ ಮುತ್ತು ಅಂಟಿಸ ಲಾಗಿದೆ. ದೇವ ಋಷಿಗಳ ಮೂರ್ತಿಗಳನ್ನು ಕಾಣ ಬಹುದು . ಮೆಟ್ಟಲುಗಳ ಕೆಳಗೆ ಎರಡು ದೊಡ್ಡ ಸಂತ‌ ಹಾಗೂ ಸಿಕಾರಿಯ ಪ್ರತಿಮೆಗಳಿದ್ದು ಇದು ಕೂಡ ಯಾವುದೊ ಸಂದೇಶ ಸಾರುವಂತಿದೆ. ಲಂಡನ್ ಡೆಕ್ಕನಿಂದ ಮಾಡಿಸಿದ ಸೀಸೆಯ ಕೆಲಸ ಕಣ್ಣಿಗೆ ಕಿಕ್ಕುವಂತಿದೆ . ಕಿಟಕಿ ಬದಿಯ ಎಲ್ಲಾ ‌ಕೊನಗಳಲ್ಲಿ ಚಿನ್ನದ ಪಟ್ಟಿಯಲ್ಲಿ ಹರಳಿನಿಂದ ತಯಾರಿಸಿದ ಅದ್ಬುತ ಕಲಾಕೃತಿ ಇಲ್ಲಿನ ಸಿರಿತನದ ಪ್ರತಿಬಿಂಬದಂತಿದೆ. ಸ್ವಾಗತ ಕಕ್ಷಿ ಬದಿಗೆ ರೆಡ್ ರೂಮ್ ಎಂಬ ಸ್ಥಳ ವಿದ್ದು ಇಲ್ಲಿನ ಗ್ಯಾಲರಿಯಿಂದ ರಾಜ ‌ಮಹಾರಾಜರು ಇಲ್ಲಿ‌‌ ನಿಂತು ಅರಮನೆಯ ಸುತ್ತಣದ ದೃಶವನ್ನು ವೀಕ್ಷಿಸುತ್ತಿದ್ದರಂತೆ.
700 ಎಕರೆ ವಿಸ್ತಾರದ ಅರಮನೆ ಸಂಕೀರ್ಣವಿದೆ. ದೊಡ್ಡ ಮೂಸಿಂ ಇದ್ದು ಅರಮನೆಯ ಮೈದಾನದಲ್ಲಿ ಗಾಲ್ಫ್ ಕೋರ್ಸ್ ಆಡಲು ದೇಶ ವಿದೇಶದಿಂದ ಇಲ್ಲಿಗೆ ಜನ ಆಗಮಿಸುತ್ತಾರೆ. ಕನ್ನಡ ಚಿತ್ರರಂಗ ಸೇರಿದಂತೆ ಹಾಲಿವುಡ್, ಬಾಲಿವುಡ್ ನ ಹಲವಾರು ಸಿನಿಮಾ ಚೀತ್ರಿಕರಣಗಳ ‌ಮೂಲಕ ತೆರೆಯಲ್ಲೂ ಈ ಅರಮನೆ ‌ಮೇರೆದಿದೆ.

ಗಾಯಕವಾಡರು ಸೂರ್ಯ ವಂಶಿಯರು ಗಾಯಕವಾಡ ಅಂದರೆ ಗೋವುಗಳ ರಕ್ಷಿತರು ಎಂಬ ಕಾರಣ ಸೂರ್ಯ ಹಾಗೂ ದನದ ಆಧಾರದ ‌ಮೇಲೆ ರಚಿತವಾದ ಬಗೆ ಬಗೆಯ ವಿನ್ಯಾಸದಿಂದ ರಚಿಸಿದ ಚಿತ್ರಗಳ ಅನೇಕ ಕಥೆಗಳು ಸಾರುತ್ತಿದೆ. ಗಾಯಕವಾಡ ರಾಜ ವಂಶಸ್ಥರು ಇಂದಿಗೂ ಈ ಅರಮನೆಯ ಮೊದಲ ಮಹಡಿಯಲ್ಲಿ ವಾಸಿಸುತ್ತಾರೆ. ಅಲ್ಲಿಗೆ ಸಾರ್ವಜನಿಕರಿಗೆ ‌ಪ್ರವೇಶ ವಿಲ್ಲ. ಅರಮನೆಯ ಉಳಿದ ಭಾಗವನ್ನು ಟಿಕೇಟ್ ಖರೀದಿಸಿ ಪ್ರವೇಶಿಸಬೇಕು.

  • ಲತಾ‌ಸಂತೊಷ ಶೆಟ್ಟಿ ಮುದ್ದುಮನೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments